IPL 2026: 'ಬ್ಯಾಟಲ್ಲಿ AI Chip ಇದೆ' ಎಂದ ಪಾಕಿಸ್ತಾನದ Nouman Niaz ಗೆ ಬಟ್ಟೆ ಸುತ್ತಿ ಹೊಡೆದ ವೈಭವ್ ಸೂರ್ಯವಂಶಿ

ಐಪಿಎಲ್ ನಲ್ಲಿ ಸತತ ಉತ್ತಮ ಪ್ರದರ್ಶನ ನೀಡುತ್ತಿರುವ ವೈಭವ್ ಸೂರ್ಯವಂಶಿ ಇದೀಗ ಜಾಗತಿಕ ಕ್ರಿಕೆಟ್ ನ ಕೇಂದ್ರ ಬಿಂದುವಾಗಿದ್ದು, ವೈಭವ್ ಸೂರ್ಯವಂಶಿ ಅವರ ಸ್ಫೋಟಕ ಬ್ಯಾಟಿಂಗ್ ಎಲ್ಲರನ್ನೂ ಸಂಪೂರ್ಣವಾಗಿ ದಿಗ್ಭ್ರಮೆಗೊಳಿಸಿದೆ.
Vaibhav Sooryavanshi
ವೈಭವ್ ಸೂರ್ಯವಂಶಿ
Updated on

ನವದೆಹಲಿ: ಐಪಿಎಲ್ ನಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡುತ್ತಿರುವ ರಾಜಸ್ತಾನ ತಂಡದ ಬ್ಯಾಟರ್ ವೈಭವ್ ಸೂರ್ಯವಂಶಿ ಬ್ಯಾಟ್ ನಲ್ಲಿ AI ಚಿಪ್ ಎಂದು ತಮಾಷೆ ಮಾಡಿದ್ದ ಪಾಕಿಸ್ತಾನದ ಕ್ರಿಕೆಟ್ ವಿಶ್ಲೇಷಕ ಡಾ. ನೌಮನ್ ನಿಯಾಜ್ ಗೆ ಭಾರತದ ಯುವ ಬ್ಯಾಟರ್ ಬಟ್ಟೆ ಸುತ್ತಿ ಹೊಡೆದಂತೆ ಉತ್ತರ ನೀಡಿದ್ದಾರೆ.

ಐಪಿಎಲ್ ನಲ್ಲಿ ಸತತ ಉತ್ತಮ ಪ್ರದರ್ಶನ ನೀಡುತ್ತಿರುವ ವೈಭವ್ ಸೂರ್ಯವಂಶಿ ಇದೀಗ ಜಾಗತಿಕ ಕ್ರಿಕೆಟ್ ನ ಕೇಂದ್ರ ಬಿಂದುವಾಗಿದ್ದು, ವೈಭವ್ ಸೂರ್ಯವಂಶಿ ಅವರ ಸ್ಫೋಟಕ ಬ್ಯಾಟಿಂಗ್ ಎಲ್ಲರನ್ನೂ ಸಂಪೂರ್ಣವಾಗಿ ದಿಗ್ಭ್ರಮೆಗೊಳಿಸಿದೆ.

ರಾಜಸ್ಥಾನ್ ರಾಯಲ್ಸ್‌ನ ಪರ ಆಡುತ್ತಿರುವ ಈ ಯುವ ಆಟಗಾರ ಪ್ರಸ್ತುತ 9 ಪಂದ್ಯಗಳಿಂದ 238.09 ರ ಅದ್ಭುತ ಸ್ಟ್ರೈಕ್ ರೇಟ್‌ನಲ್ಲಿ 400 ರನ್‌ಗಳೊಂದಿಗೆ ಆರೆಂಜ್ ಕ್ಯಾಪ್ ಹೊಂದಿದ್ದಾರೆ.

ಜಸ್ಪ್ರೀತ್ ಬುಮ್ರಾ ಮತ್ತು ಜೋಶ್ ಹ್ಯಾಜಲ್‌ವುಡ್‌ರಂತಹ ಸ್ಟಾರ್ ಬೌಲರ್‌ಗಳ ವಿರುದ್ಧವೂ ಕೂಡ ಅವರ ಪ್ರದರ್ಶನ ಅದ್ಭುತವಾಗಿತ್ತು. ಅವರ ಈ ಆಟವೇ ಇದೀಗ ಅವರನ್ನು ಜಾಗತಿಕ ಮಟ್ಟದಲ್ಲಿ ಸುದ್ದಿಯಾಗುವಂತೆ ಮಾಡಿದೆ.

Vaibhav Sooryavanshi
IPL 2026: ವೈಭವ್ ಸೂರ್ಯವಂಶಿ ಸಿಕ್ಸರ್​ಗಳ ಸುರಿಮಳೆ; ವೇಗದ ಶತಕ ಸಿಡಿಸಿ ದಾಖಲೆ ಬರೆದ 15ರ ಪೋರ!

ಏನದು "AI ಚಿಪ್" ಹೇಳಿಕೆ?

ಪಾಕಿಸ್ತಾನದ ಕ್ರಿಕೆಟ್ ವಿಶ್ಲೇಷಕ ಡಾ. ನೌಮನ್ ನಿಯಾಜ್ ಭಾರತದ ಯುವ ಬ್ಯಾಟರ್ ಆಟ ನೋಡಿ ಅಚ್ಚರಿಗೊಂಡಿದ್ದರು. ಟಿವಿ ಕಾರ್ಯಕ್ರಮದಲ್ಲಿ ಈ ಬಗ್ಗೆ ಹಾಸ್ಯ ಮಾಡುತ್ತಾ, "ಈ ಹುಡುಗನ ಬ್ಯಾಟ್ ಅಥವಾ ದೇಹದಲ್ಲಿ ಯಾವುದೋ AI ಚಿಪ್ ಇರಬೇಕು. ಅವನು ಸಂಪೂರ್ಣವಾಗಿ ಅವಾಸ್ತವಿಕ, ಮನುಷ್ಯ. WADA ಡೋಪಿಂಗ್ ತಪಾಸಣೆ ಮಾಡುವಂತೆ, ಅವನನ್ನು ಯಾವುದಾದರೂ ಪ್ರಯೋಗಾಲಯಕ್ಕೆ ಕಳುಹಿಸಬೇಕು' ಎಂದು ಹೇಳಿದ್ದರು.

'ವೈದ್ಯಕೀಯವಾಗಿ, ನೀವು 18 ವರ್ಷ ವಯಸ್ಸಿನವರಾದಾಗ, ನಿಮ್ಮ ಇಡೀ ದೇಹವು ಆಕಾರ ಪಡೆಯಲು ಪ್ರಾರಂಭಿಸುತ್ತದೆ. ನಿಮ್ಮ ಭುಜಗಳು ದುಂಡಾಗುತ್ತವೆ, ಸ್ನಾಯುಗಳು ರೂಪುಗೊಳ್ಳುತ್ತವೆ, ಟ್ರೈಸ್ಪ್ಸ್, ಬೈಸೆಪ್ಸ್ ಮತ್ತು ನಿಮ್ಮ ಕೋರ್ ಬಲವಾಗಿರುತ್ತದೆ. ಏಕೆಂದರೆ ನಿಮಗೆ ಪೀಕ್ ಸರ್ಜ್, ಹಾರ್ಮೋನ್, ಟೆಸ್ಟೋಸ್ಟೆರಾನ್ ಇರುತ್ತದೆ" ಎಂದು ಅವರು ಹೇಳಿದರು.

ಅಂತೆಯೇ ಮುಂಬರುವ ವರ್ಷಗಳಲ್ಲಿ ಸೂರ್ಯವಂಶಿ ಎಷ್ಟು ಹೆಚ್ಚು ಅಭಿವೃದ್ಧಿ ಹೊಂದಬಹುದು. ದೈತ್ಯನಾಗಿ ಬೆಳೆಯಬಹುದು ಎಂದು ಹೇಳಿದ್ದರು. ಅವರ ಹೇಳಿಕೆ ಭಾರತದಲ್ಲಿ ವ್ಯಾಪಕ ಚರ್ಚೆ ಮತ್ತು ಆಕ್ರೋಶಕ್ಕೆ ಕಾರಣವಾಗಿತ್ತು.

ವೈಭವ್ ಸೂರ್ಯವಂಶಿ ತಿರುಗೇಟು

ನೌಮನ್ ನಿಯಾಜ್ ಅವರ ಈ ಹೇಳಿಕೆಗೆ ವೈಭವ್ ಸೂರ್ಯವಂಶಿ ಬಟ್ಟೆ ಸುತ್ತಿ ಹೊಡೆದಂತೆ ತಿರುಗೇಟು ನೀಡಿದ್ದು, "ಭಗವಂತನೇ ಇದನ್ನು ಅಳವಡಿಸಿಕೊಟ್ಟಿದ್ದಾನೆ. ದೇವರು ಮೊದಲೇ ಹೇಳಿದ್ದ - ನಿನ್ನ ಬ್ಯಾಟ್‌ನಲ್ಲಿ ಏನನ್ನೋ ಹಾಕಿಕೊಡುತ್ತಿದ್ದೇನೆ ಎಂದು. ನಾನು ಕೇವಲ ಅದನ್ನು ಬಳಸುತ್ತಿದ್ದೇನೆ ಅಷ್ಟೆ." ಎಂದು ಹೇಳಿದ್ದಾರೆ.

ವೈಭವ್ ಸೂರ್ಯವಂಶಿ ರಾಜಸ್ಥಾನ್ ರಾಯಲ್ಸ್ ಹಂಚಿಕೊಂಡಿರುವ ವಿಡಿಯೋದಲ್ಲಿ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ಏತನ್ಮಧ್ಯೆ, ಸೂರ್ಯವಂಶಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026 ರಲ್ಲಿ ಒಂದೇ ಋತುವಿನಲ್ಲಿ 400 ರನ್ (ಎಸೆತಗಳ ಲೆಕ್ಕಾಚಾರದಲ್ಲಿ) ತಲುಪುವ ಮೂಲಕ ಇತಿಹಾಸ ಬರೆದಿದ್ದಾರೆ. ಕೇವಲ 167 ಎಸೆತಗಳಲ್ಲಿ ವೈಭವ್ ಈ ಮೈಲಿಗಲ್ಲು ಸಾಧಿಸಿದ್ದಾರೆ. ಈ ಸಾಧನೆಯು ಸೂರ್ಯವಂಶಿಯನ್ನು ಪಂದ್ಯಾವಳಿಯ ಇತಿಹಾಸದಲ್ಲಿ ಅತ್ಯಂತ ಸ್ಫೋಟಕ ಬ್ಯಾಟ್ಸ್‌ಮನ್‌ಗಳ ಪಟ್ಟಿಗೆ ಸೇರಿಸಿದೆ.

ಈ ಹಿಂದೆ ಈ ಪಟ್ಟಿಯಲ್ಲಿ ಆಂಡ್ರೆ ರಸೆಲ್ 2019 ರ ಋತುವಿನಲ್ಲಿ 188 ಎಸೆತಗಳಲ್ಲಿ (400 ರನ್) ಈ ಮೈಲಿಗಲ್ಲು ತಲುಪಿದ್ದರು. ಭಾರತದ ಅಭಿಷೇಕ್ ಶರ್ಮಾ 2024 ರ ಆವೃತ್ತಿಯಲ್ಲಿ 195 ಎಸೆತಗಳನ್ನು ತೆಗೆದುಕೊಂಡು ಮೂರನೇ ಸ್ಥಾನದಲ್ಲಿದ್ದರೆ, ನಿಕೋಲಸ್ ಪೂರನ್ (2025 ರಲ್ಲಿ 197 ಎಸೆತಗಳು) 4 ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ (2014 ರಲ್ಲಿ 200 ಎಸೆತಗಳು) ಐದನೇ ಸ್ಥಾನದಲ್ಲಿದ್ದಾರೆ.

IPL 2026 ರಲ್ಲಿ ವೈಭವ್ ಸಾಧನೆ

  • ವೇಗದ 400 ರನ್: ಕೇವಲ 167 ಎಸೆತಗಳಲ್ಲಿ 400 ರನ್ ಪೂರೈಸಿ ಆಂಡ್ರೆ ರಸೆಲ್ ಅವರ ದಾಖಲೆಯನ್ನು ಮುರಿದಿದ್ದಾರೆ.

  • ವೇಗದ ಶತಕ: ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಕೇವಲ 37 ಎಸೆತಗಳಲ್ಲಿ ಶತಕ ಸಿಡಿಸಿದ್ದಾರೆ.

  • ಗರಿಷ್ಠ ಸ್ಟೈಕ್ ರೇಟ್: ಪ್ರಸ್ತುತ 238.09 ರ ಭರ್ಜರಿ ಸ್ಟ್ರೈಕ್ ರೇಟ್ ಹೊಂದಿದ್ದಾರೆ.

Vaibhav Sooryavanshi
'ಲ್ಯಾಬ್ ನಲ್ಲಿ ವೈಭವ್ ಸೂರ್ಯವಂಶಿ ಟೆಸ್ಟ್ ಮಾಡಿಸಬೇಕು': 15 ವರ್ಷದ ಬ್ಯಾಟಿಂಗ್ ಸೆನ್ಸೇಷನ್ ಬಗ್ಗೆ ಪಾಕ್ ಕ್ರಿಕೆಟ್ ತಜ್ಞ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com