'ನಾಚಿಕೆಗೇಡು': ಬಾಂಗ್ಲಾದೇಶ ವಿರುದ್ಧ ಸೋತ ಆಸ್ಟ್ರೇಲಿಯಾ ತಂಡಕ್ಕೆ ಮಾಜಿ ಆಟಗಾರರಿಂದಲೇ 'ಮಂಗಳಾರತಿ'

ಬಾಂಗ್ಲಾದೇಶದ ವಿರುದ್ಧ ಆಸ್ಟ್ರೇಲಿಯಾ ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್.. ಮೂರೂ ವಿಭಾಗಗಳಲ್ಲೂ ಸಂಪೂರ್ಣವಾಗಿ ಹಿನ್ನಡೆ ಅನುಭವಿಸಿತು.
Australia Greats Tear Into Pat Cummins' Side After Bangladesh Loss
ಬಾಂಗ್ಲಾ ವಿರುದ್ಧ ಸೋತ ಆಸ್ಟ್ರೇಲಿಯಾ ತಂಡದ ವಿರುದ್ಧ ಕಿಡಿಕಾರಿದ ದಿಗ್ಗಜರು
Updated on

ಡಾರ್ವಿನ್: ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ 9 ವಿಕೆಟ್‌ಗಳಿಂದ ಹೀನಾಯವಾಗಿ ಸೋತ ಬೆನ್ನಲ್ಲೇ ಆಸ್ಟ್ರೇಲಿಯಾ ತಂಡದ ವಿರುದ್ಧ ದಿಗ್ಗಜ ಆಟಗಾರರು ಕಿಡಿಕಾರಿದ್ದಾರೆ.

ಆಸ್ಟ್ರೇಲಿಯಾದ ಮಾಜಿ ನಾಯಕರಾದ ರಿಕಿ ಪಾಂಟಿಂಗ್, ಮಾರ್ಕ್ ವಾ ಹಾಗೂ ಮಾಜಿ ಆರಂಭಿಕ ಆಟಗಾರ ಮ್ಯಾಥ್ಯೂ ಹೇಡನ್, ಡಾರ್ವಿನ್‌ನಲ್ಲಿ ನಡೆದ ಪಂದ್ಯದಲ್ಲಿ ಕಂಡ ಫಲಿತಾಂಶವನ್ನು ನಂಬಲೂ ಸಾಧ್ಯವಾಗದ ರೀತಿಯದ್ದು ಎಂದು ಹೇಳಿದ್ದಾರೆ.

ಬಾಂಗ್ಲಾದೇಶದ ವಿರುದ್ಧ ಆಸ್ಟ್ರೇಲಿಯಾ ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್—ಮೂರೂ ವಿಭಾಗಗಳಲ್ಲೂ ಸಂಪೂರ್ಣವಾಗಿ ಹಿನ್ನಡೆ ಅನುಭವಿಸಿತು.

ಆದರೆ ನಾಯಕ ಪ್ಯಾಟ್ ಕಮಿನ್ಸ್ ತಂಡದ ಸಿದ್ಧತೆಯನ್ನು ಸೋಲಿಗೆ ಕಾರಣವೆಂದು ಹೇಳದೆ, ಬಾಂಗ್ಲಾದೇಶವೇ ಪಂದ್ಯದಲ್ಲಿ ಮೂರೂ ವಿಭಾಗಗಳಲ್ಲೂ ಉತ್ತಮ ಪ್ರದರ್ಶನ ನೀಡಿದೆ ಎಂದು ಆಸಿಸ್ ಕ್ರಿಕೆಟ್ ದಿಗ್ಗಜರು ಒಪ್ಪಿಕೊಂಡಿದ್ದಾರೆ.

Australia Greats Tear Into Pat Cummins' Side After Bangladesh Loss
1st Test: ಆಸಿಸ್ ನೆಲದಲ್ಲೇ ಕಾಂಗರೂಗಳ ಬಗ್ಗು ಬಡಿದು ಇತಿಹಾಸ ಬರೆದ ಬಾಂಗ್ಲಾದೇಶ

ತುಂಬಾ ಮುಜುಗರದ ಸೋಲು

Channel 7 ವಾಹಿನಿಯಲ್ಲಿ ಪಂದ್ಯದ ಫಲಿತಾಂಶ ವಿಶ್ಲೇಷಣೆ ವೇಳೆ ಮಾತನಾಡಿದ ರಿಕ್ಕಿ ಪಾಂಟಿಂಗ್, 'ಆಸ್ಟ್ರೇಲಿಯಾದ ಸೋಲು “ತುಂಬಾ ಮುಜುಗರದ” ಸಂಗತಿ ಎಂದು ಹೇಳಿದ್ದಾರೆ. ಮತ್ತೊಂದೆಡೆ, ಮಾರ್ಕ್ ವಾ ಇದನ್ನು ಆಸ್ಟ್ರೇಲಿಯಾದ ಕ್ರಿಕೆಟ್ ಇತಿಹಾಸದಲ್ಲೇ ತಾನು ಕಂಡ “ಅತಿದೊಡ್ಡ ಅಪ್‌ಸೆಟ್” ಆಗಿರಬಹುದು. “ಇದಕ್ಕಿಂತ ಕಹಿ ಸೋಲು ನೆನಪಿಲ್ಲ” ಎಂದು ಬಣ್ಣಿಸಿದ್ದಾರೆ.

ಟದೇಶದ ಕ್ರಿಕೆಟ್ ಇತಿಹಾಸದಲ್ಲಿ ಇಷ್ಟು ಕಹಿಯಾದ ಸೋಲನ್ನು ನೆನಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದು ಆಸ್ಟ್ರೇಲಿಯಾದಲ್ಲಿ ನಾನು ನೆನಪಿಸಿಕೊಳ್ಳಬಹುದಾದ ಅತಿದೊಡ್ಡ ಅಪ್‌ಸೆಟ್ ಆಗಿರಬಹುದು. ಕೆಲವು ವರ್ಷಗಳ ಹಿಂದೆ ಗಾಬಾದಲ್ಲಿ ವೆಸ್ಟ್ ಇಂಡೀಸ್ ಆಸ್ಟ್ರೇಲಿಯಾವನ್ನು ಸೋಲಿಸಿದ್ದು ಕೂಡ ಅಪ್‌ಸೆಟ್ ಆಗಿತ್ತು. ಆದರೆ ಈ ಸೋಲು ಇನ್ನೂ ದೊಡ್ಡದು” ಎಂದು ಮಾರ್ಕ್ ವಾ ಹೇಳಿದ್ದಾರೆ.

“ಬಾಂಗ್ಲಾದೇಶದ ಪ್ರಮುಖ ಇಬ್ಬರು ಬೌಲರ್‌ಗಳಾದ ನಹೀದ್ ರಾಣಾ ಮತ್ತು ಶೊರಿಫುಲ್ ಇಸ್ಲಾಂ ಆಡುತ್ತಿರಲಿಲ್ಲ. ಜೊತೆಗೆ ರ‍್ಯಾಂಕಿಂಗ್ ನೋಡಿದರೆ, ಆಸ್ಟ್ರೇಲಿಯಾ ಸಂಪೂರ್ಣ ಬಲಿಷ್ಠ ತಂಡದೊಂದಿಗೆ ಕಣಕ್ಕಿಳಿದಿತ್ತು. ಹೀಗಾಗಿ ಇದು ನಿಜಕ್ಕೂ ದೊಡ್ಡ ಸೋಲು” ಎಂದು ಮಾರ್ಕ್ ವಾ ಹೇಳಿದ್ದಾರೆ.

ತಂಡದಲ್ಲಿ ಬದಲಾವಣೆ ಅಗತ್ಯ: ಪಾಂಟಿಂಗ್

ಎರಡನೇ ಟೆಸ್ಟ್‌ಗಾಗಿ ಆಡುವ ಬಳಗದಲ್ಲಿ ಬದಲಾವಣೆ ಮಾಡಲು ಸಿದ್ಧವಿರುವುದಾಗಿ ಪ್ಯಾಟ್ ಕಮಿನ್ಸ್ ಹೇಳಿರುವ ಬೆನ್ನಲ್ಲೇ, ರಿಕಿ ಪಾಂಟಿಂಗ್ ಕೂಡ ಆಸ್ಟ್ರೇಲಿಯಾ ತಂಡದಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಪಂದ್ಯ ಮುಗಿಯುವ ಮುನ್ನವೇ ಈ ಕುರಿತು ಮಾತನಾಡಿದ್ದ ಪಾಂಟಿಂಗ್, ಆಸ್ಟ್ರೇಲಿಯಾ ಆರಂಭಿಕ ಸ್ಥಾನ ಹಾಗೂ ಮೂರನೇ ಕ್ರಮಾಂಕದಲ್ಲಿ ಹೊಸ ಆಟಗಾರರನ್ನು ಪ್ರಯೋಗಿಸುವ ಸಮಯ ಬಂದಿದೆ ಎಂದು ಸೂಚಿಸಿದ್ದರು.

“ನಾನು ತಂಡದಲ್ಲಿ ಬದಲಾವಣೆ ಮಾಡಲು ಬಯಸುವ ಕೊನೆಯ ವ್ಯಕ್ತಿ. ನಾಯಕನಾಗಿದ್ದಾಗಲೂ, ಆಟಗಾರನಾಗಿದ್ದಾಗಲೂ ಒಂದೇ ತಂಡವನ್ನು ಮುಂದುವರಿಸಿಕೊಂಡು ಹೋಗಲು ನಾನು ಬಯಸುತ್ತಿದ್ದೆ. ಯಾರನ್ನಾದರೂ ತಂಡದಿಂದ ಕೈಬಿಡಬೇಕು ಎಂದು ಹೇಳುವ ಹಂತಕ್ಕೆ ಪರಿಸ್ಥಿತಿ ತಲುಪುವವರೆಗೂ ನಾನು ಅಂತಹ ಮಾತು ಹೇಳುವುದಿಲ್ಲ” ಎಂದು ಪಾಂಟಿಂಗ್ ಹೇಳಿದ್ದಾರೆ.

“ಆದರೆ ಇಲ್ಲಿಗೆ ಬರುವ ಮುನ್ನವೇ ತಂಡದಲ್ಲಿ ಬದಲಾವಣೆ ಆರಂಭಿಸುವುದರಿಂದ ಆಸ್ಟ್ರೇಲಿಯಾ ಹೆಚ್ಚು ಏನನ್ನೂ ಕಳೆದುಕೊಳ್ಳುವುದಿಲ್ಲ ಎಂಬುದಕ್ಕೆ ಸಾಕಷ್ಟು ಸಾಕ್ಷ್ಯಗಳಿದ್ದವು. ಮತ್ತೊಬ್ಬ ಆರಂಭಿಕ ಆಟಗಾರನನ್ನು ಅಥವಾ ಮೂರನೇ ಕ್ರಮಾಂಕದಲ್ಲಿ ಹೊಸ ಆಟಗಾರನನ್ನು ಸೇರಿಸಬಹುದಿತ್ತು. ಈಗ ಇಲ್ಲಿ ಸೋತಿರುವುದರಿಂದ ಆ ಬದಲಾವಣೆಗಳು ನಡೆಯಲೇಬೇಕು” ಎಂದು ಪಾಂಟಿಂಗ್ ಚಾನೆಲ್ 7ರಲ್ಲಿ ಹೇಳಿದ್ದಾರೆ.

Australia Greats Tear Into Pat Cummins' Side After Bangladesh Loss
ಆಸಿಸ್ ವಿರುದ್ಧ ಭರ್ಜರಿ ಜಯ, WTC Final Raceನಲ್ಲಿ 4ನೇ ಸ್ಥಾನಕ್ಕೆ ಜಿಗಿದ ಬಾಂಗ್ಲಾದೇಶ, ಭಾರತದ ಪರಿಸ್ಥಿತಿ ಏನು?

ಎಲ್ಲ ವಿಭಾಗಗಳಲ್ಲೂ ಬಾಂಗ್ಲಾದೇಶದ ಮೇಲುಗೈ

ಪಂದ್ಯದಲ್ಲಿ ಬಾಂಗ್ಲಾದೇಶ ಆಸ್ಟ್ರೇಲಿಯಾವನ್ನು ಎಲ್ಲಾ ವಿಭಾಗಗಳಲ್ಲೂ ಮೀರಿಸಿತು. ಪ್ರವಾಸಿ ತಂಡದ ಬೌಲರ್‌ಗಳು ಅದ್ಭುತ ಪ್ರದರ್ಶನ ನೀಡಿ ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಿ 200ಕ್ಕೂ ಹೆಚ್ಚು ರನ್‌ಗಳ ಮುನ್ನಡೆ ಪಡೆಯುವಲ್ಲಿ ಯಶಸ್ವಿಯಾದರು. ಎರಡನೇ ಇನ್ನಿಂಗ್ಸ್‌ನಲ್ಲಿ ಕ್ಯಾಮೆರಾನ್ ಗ್ರೀನ್ ಶತಕ ಬಾರಿಸಿ ಆಸ್ಟ್ರೇಲಿಯಾವನ್ನು ಹೋರಾಟಕ್ಕೆ ಮರಳಿಸಲು ಪ್ರಯತ್ನಿಸಿದರೂ, ಬಾಂಗ್ಲಾದೇಶದ ಬೌಲರ್‌ಗಳ ಮುಂದೆ ಆತಿಥೇಯ ತಂಡ 284 ರನ್‌ಗಳಿಗೆ ಆಲೌಟ್ ಆಯಿತು.

ಗೆಲುವಿಗೆ ಕೇವಲ 57 ರನ್‌ಗಳ ಗುರಿ ಪಡೆದ ಬಾಂಗ್ಲಾದೇಶ, ಒಂದು ವಿಕೆಟ್ ಮಾತ್ರ ಕಳೆದುಕೊಂಡು ಸುಲಭವಾಗಿ ಗುರಿ ಬೆನ್ನಟ್ಟಿ ಐತಿಹಾಸಿಕ 9 ವಿಕೆಟ್‌ಗಳ ಗೆಲುವು ದಾಖಲಿಸಿತು. ಈ ಸೋಲಿನೊಂದಿಗೆ ಆಸ್ಟ್ರೇಲಿಯಾ ತಂಡದ ಸಿದ್ಧತೆ, ಆಯ್ಕೆ ಹಾಗೂ ಹಿರಿಯ ಆಟಗಾರರ ಪ್ರದರ್ಶನದ ಕುರಿತು ಪ್ರಶ್ನೆಗಳು ಎದ್ದಿದ್ದು, ಎರಡನೇ ಟೆಸ್ಟ್‌ನಲ್ಲಿ ಕಮಿನ್ಸ್ ಪಡೆ ಯಾವ ರೀತಿಯ ಬದಲಾವಣೆಗಳೊಂದಿಗೆ ಕಣಕ್ಕಿಳಿಯಲಿದೆ ಎಂಬ ಕುತೂಹಲ ಹೆಚ್ಚಾಗಿದೆ.

Australia Greats Tear Into Pat Cummins' Side After Bangladesh Loss
ಆಸಿಸ್ ವಿರುದ್ಧ ಟೆಸ್ಟ್ ಕ್ರಿಕೆಟ್ ಜರ್ನಿ ಆರಂಭಿಸಿದ ನೆಲದಲ್ಲೇ 23 ವರ್ಷಗಳ ಬಳಿಕ ಬಾಂಗ್ಲಾದೇಶ ಐತಿಹಾಸಿಕ ವಿಜಯ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com