2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

ಬೆಳಕು ಕಡಿಮೆಯಾಗಿದ್ದರಿಂದ ಆಟ ಮುಂದುವರಿಸಲು ಸಾಧ್ಯವಿಲ್ಲ ಎಂದು ಶ್ರೀಲಂಕಾದ ಪ್ರಭಾತ್ ಜಯಸೂರ್ಯ ಮತ್ತು ಕಮಿಲ್ ಮಿಶಾರಾ ಅಂಪೈರ್‌ಗಳ ಬಳಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು.
Sri Lanka Labelled Unprofessional After Late Drama With Umpires
ವಿಕೆಟ್ ಪಡೆದ ಸಂಭ್ರಮದಲ್ಲಿ ಭಾರತದ ಆಟಗಾರರು
Updated on

ಕೊಲಂಬೊ: ಭಾರತ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ಅಂತ್ಯದಲ್ಲಿ ಬ್ಯಾಡ್ ಲೈಟ್ ವಿಚಾರವಾಗಿ ಅಂಪೈರ್‌ಗಳೊಂದಿಗೆ ಶ್ರೀಲಂಕಾ ಆಟಗಾರರು ವಾಗ್ವಾದ ಕುರಿತಂತೆ ಮಾಜಿ ಕ್ರಿಕೆಟಿಗ ಹಾಗೂ ಕಮೆಂಟೇಟರ್ ಸಂಜಯ್ ಮಂಜ್ರೇಕರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೊಲಂಬೊದಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದ 2ನೇ ದಿನದಾಟದ ಅಂತಿಮ ಹಂತದಲ್ಲಿ ಬೆಳಕು ಕಡಿಮೆಯಾಗಿದ್ದರಿಂದ ಆಟ ಮುಂದುವರಿಸಲು ಸಾಧ್ಯವಿಲ್ಲ ಎಂದು ಶ್ರೀಲಂಕಾದ ಪ್ರಭಾತ್ ಜಯಸೂರ್ಯ ಮತ್ತು ಕಮಿಲ್ ಮಿಶಾರಾ ಅಂಪೈರ್‌ಗಳ ಬಳಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ ಆಟ ಮುಂದುವರಿದು, ಜಯಸೂರ್ಯ ಅವರನ್ನು ಮನು ಸುಥಾರ್ ಔಟ್ ಮಾಡಿದರು.

ಈ ಘಟನೆಯನ್ನು ವಿಶ್ಲೇಷಿಸಿದ ಮಂಜ್ರೇಕರ್, ಶ್ರೀಲಂಕಾ ಆಟಗಾರರ ವರ್ತನೆಯನ್ನು ‘ಸ್ವಲ್ಪ ಮಟ್ಟಿಗೆ ವೃತ್ತಿಪರವಲ್ಲದದ್ದು’ ಎಂದು ಟೀಕಿಸಿದರು.

Sri Lanka Labelled Unprofessional After Late Drama With Umpires
‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel

ಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ

“ಅಂಪೈರ್‌ಗೆ ಬ್ಯಾಡ್ ಲೈಟ್ ಎಂದು ಹೇಳಿ ಒತ್ತಡ ಹೇರುವುದು ಅರ್ಥವಾಗುತ್ತದೆ. ಆದರೆ ಅದಕ್ಕಾಗಿ ಚೆಂಡಿನ ಮೇಲಿನ ಗಮನವನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ. ಬ್ಯಾಡ್ ಲೈಟ್ ವಿಚಾರ ಮತ್ತು ಅಂಪೈರ್‌ಗಳೊಂದಿಗಿನ ಅವರ ಅಸಮಾಧಾನವೇ ಅವರ ಮನಸ್ಸನ್ನು ಆವರಿಸಿತ್ತು. ಅವರು ಚೆಂಡಿನತ್ತ ಗಮನಹರಿಸುತ್ತಿರಲಿಲ್ಲ” ಎಂದು ಮಂಜ್ರೇಕರ್ ಅಭಿಪ್ರಾಯಪಟ್ಟಿದ್ದಾರೆ.

“ಬೆಳಕು ಕಡಿಮೆಯಾಗಿತ್ತು ಎಂಬ ವಿಚಾರದಲ್ಲಿ ಶ್ರೀಲಂಕಾಗೆ ತಮ್ಮದೇ ಆದ ವಾದ ಇರಬಹುದು. ಆದರೆ ಅದರಿಂದ ಅವರು ಮಾಡಿದ ತಪ್ಪನ್ನು ಸಮರ್ಥಿಸಲು ಸಾಧ್ಯವಿಲ್ಲ. ನೈಟ್‌ವಾಚ್‌ಮನ್ ಔಟಾಗಿದ್ದಕ್ಕೆ ಅಂಪೈರ್ ಅಥವಾ ಬ್ಯಾಡ್ ಲೈಟ್‌ ಅನ್ನು ದೂಷಿಸಲು ಸಾಧ್ಯವಿಲ್ಲ. ಸುಥಾರ್ ಉತ್ತಮ ಎಸೆತ ಹಾಕಿದ್ದರು. ಪ್ರಸಿದ್ಧ್ ಕೃಷ್ಣ ಕೂಡ ದಿನದ ಅಂತ್ಯದಲ್ಲಿ ಅದ್ಭುತ ಬೌಲಿಂಗ್ ಮಾಡಿದರು” ಎಂದು ಹೇಳಿದರು.

ಭಾರತದ ಆಟಗಾರರಿಗೆ ಮಂಜ್ರೇಕರ್ ಶ್ಲಾಘನೆ

ಇದೇ ವೇಳೆ ಮಳೆಯಿಂದಾಗಿ ಪಂದ್ಯಕ್ಕೆ ಅಡ್ಡಿಯಾಗಿದ್ದರೂ ಶ್ರೀಲಂಕಾದ ಎರಡು ವಿಕೆಟ್‌ಗಳನ್ನು ಕಬಳಿಸಿದ ಭಾರತದ ಆಟಗಾರರನ್ನು ಮಂಜ್ರೇಕರ್ ಶ್ಲಾಘಿಸಿದರು. “ಇದು ಭಾರತಕ್ಕೆ ಸಲ್ಲಬೇಕಾದ ಶ್ರೇಯಸ್ಸು. ಮಳೆಯಿಂದ ಪಂದ್ಯಕ್ಕೆ ಅಡ್ಡಿಯಾದ ದಿನದಲ್ಲೂ ಭಾರತ ಶ್ರೀಲಂಕಾದ ಎರಡು ವಿಕೆಟ್‌ಗಳನ್ನು ಪಡೆದಿದೆ. ಅದು ಭಾರತದ ಉತ್ತಮ ಪ್ರದರ್ಶನ” ಎಂದು ಅವರು ಹೇಳಿದರು.

ಮಳೆ ಆರಂಭವಾದಾಗ ಮೈದಾನಕ್ಕೆ ಕವರ್‌ಗಳನ್ನು ತರಲಾಗುತ್ತಿದ್ದ ಸಂದರ್ಭದಲ್ಲೂ ಭಾರತೀಯ ಆಟಗಾರರು ಮೈದಾನದಲ್ಲೇ ನಿಂತು ಆಟ ಮುಂದುವರಿಸಬಹುದೆಂಬ ವಿಶ್ವಾಸವನ್ನು ಅಂಪೈರ್‌ಗಳಿಗೆ ತೋರಿಸಿದ್ದರು ಎಂದು ಮಂಜ್ರೇಕರ್ ಹೇಳಿದರು.

“ಆಟ ಮುಂದುವರಿಯಬಹುದು, ಬೆಳಕು ಸಾಕಷ್ಟಿದೆ ಎಂದು ಭಾರತ ತಂಡ ಮೈದಾನದಲ್ಲಿ ನಿಂತು ಅಂಪೈರ್‌ಗಳ ಮೇಲೆ ಒಂದು ರೀತಿಯ ಒತ್ತಡ ಸೃಷ್ಟಿಸಿತು. ಭಾರತ ಈಗ ವಿಶ್ವ ಕ್ರಿಕೆಟ್‌ನ ಪ್ರಮುಖ ತಂಡವಾಗಿದೆ. ಭಾರತೀಯ ತಂಡ ಆಟ ಮುಂದುವರಿಯಬೇಕು ಎಂದು ನಿಂತಿದ್ದರೆ, ಅದು ಅಂಪೈರ್‌ಗಳ ಮೇಲೆ ಒಂದು ನಿರ್ದಿಷ್ಟ ರೀತಿಯ ಒತ್ತಡವನ್ನು ಉಂಟುಮಾಡುತ್ತದೆ” ಎಂದು ಮಂಜ್ರೇಕರ್ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com