T20 ವಿಶ್ವಕಪ್ 2026: USA ವಿರುದ್ಧ ಸೂರ್ಯ ಭರ್ಜರಿ ಬ್ಯಾಟಿಂಗ್; Babar Azam ದಾಖಲೆ ಧ್ವಂಸ

ಅಮೆರಿಕ ವಿರುದ್ಧದ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ಸೂರ್ಯ ಕುಮಾರ್ ಯಾದವ್ ಕೇವಲ 49 ಎಸೆತಗಳನ್ನು ಎದುರಿಸಿ 4 ಸಿಕ್ಸರ್ ಮತ್ತು 10 ಬೌಂಡರಿಗಳ ನೆರವಿನಿಂದ ಬರೊಬ್ಬರಿ 84 ರನ್ ಪೇರಿಸಿದರು.
Surya Kumar Yadav
ಸೂರ್ಯ ಕುಮಾರ್ ಯಾದವ್
Updated on

ಮುಂಬೈ: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಆರಂಭಿಕ ಪಂದ್ಯದಲ್ಲೇ ಭಾರತ ತಂಡ ಭರ್ಜರಿ ಜಯದತ್ತ ಮುನ್ನಡೆಸಿದ ನಾಯಕ ಸೂರ್ಯ ಕುಮಾರ್ ಯಾದವ್ ಪಾಕಿಸ್ತಾನದ ಸ್ಟಾರ್ ಬ್ಯಾಟರ್ ಬಾಬರ್ ಆಜಂ ದಾಖಲೆ ಮುರಿದಿದ್ದಾರೆ.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಅಮೆರಿಕ ವಿರುದ್ಧದ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ಸೂರ್ಯ ಕುಮಾರ್ ಯಾದವ್ ಕೇವಲ 49 ಎಸೆತಗಳನ್ನು ಎದುರಿಸಿ 4 ಸಿಕ್ಸರ್ ಮತ್ತು 10 ಬೌಂಡರಿಗಳ ನೆರವಿನಿಂದ ಬರೊಬ್ಬರಿ 84 ರನ್ ಪೇರಿಸಿದರು. ಮಾತ್ರವಲ್ಲದೇ ತಮ್ಮ ಸಮಯೋಚಿತ ಬ್ಯಾಟಿಂಗ್ ಮೂಲಕ ಭಾರತದ ಸವಾಲಿನ ಗುರಿಗೆ ಕಾರಣಕರ್ತರಾದರು.

ಈ ಪಂದ್ಯದಲ್ಲಿ ಭಾರತ ತಂಡದ ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ಮೊದಲ ಎಸೆತದಲ್ಲೇ ಡಕೌಟ್ ಆಗಿದ್ದು ಅಭಿಮಾನಿಗಳಿಗೆ ತೀವ್ರ ನಿರಾಶೆ ಮೂಡಿಸಿತು. ಅಭಿಷೇಕ್ ಶರ್ಮಾಗೆ ಇದು ಚೊಚ್ಚಲ ಟಿ20 ವಿಶ್ವಕಪ್ ಟೂರ್ನಿಯಾಗಿದ್ದು, ಚೊಚ್ಚಲ ಟಿ20 ವಿಶ್ವಕಪ್ ಟೂರ್ನಿಯ ಚೊಚ್ಚಲ ಪಂದ್ಯದಲ್ಲೇ ಶೂನ್ಯ ಸುತ್ತಿ ಅಭಿಶೇಕ್ ಶರ್ಮಾ ಹೀನಾಯ ದಾಖಲೆಗೆ ಪಾತ್ರರಾಗಿದ್ದಾರೆ.

ಒಂದೆಡೆ ವಿಕೆಟ್ ಗಳು ಬೀಳುತ್ತಿದ್ದರೆ ಮತ್ತೊಂದೆಡೆ 2ನೇ ಕ್ರಮಾಂಕದಲ್ಲಿ ಕ್ರೀಸ್ ಗೆ ಬಿದ್ದಿದ್ದ ನಾಯಕ ಸೂರ್ಯ ಕುಮಾರ್ ಯಾದವ್ ಸಮಯೋಚಿತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ನಿಧಾನಗತಿಯಲ್ಲಿ ಬ್ಯಾಟಿಂಗ್ ಆರಂಭಿಸಿದ ಸೂರ್ಯ ಬಳಿಕ ಲಯಕಂಡುಕೊಂಡು ಅಮೆರಿಕ ಬೌಲರ್ ಗಳ ಬೆವರಿಳಿಸಿದರು.

Surya Kumar Yadav
T20 ವಿಶ್ವಕಪ್ 2026: ಮಕಾಡೆ ಮಲಗಿದ USA ಬ್ಯಾಟಿಂಗ್; ಭಾರತಕ್ಕೆ ಭರ್ಜರಿ ಜಯ, ಶುಭಾರಂಭ!

ಬಾಬರ್ ಆಜಂ ದಾಖಲೆ ಧ್ವಂಸ

ಇನ್ನು ಐಸಿಸಿ ಟಿ20 ವಿಶ್ವಕಪ್ ನಲ್ಲಿ ನಾಯಕರಾಗಿ ಸೂರ್ಯ ಕುಮಾರ್ ಯಾದವ್ ಗೆ ಇದು ಚೊಚ್ಚಲ ಪಂದ್ಯವಾಗಿದ್ದು ತಮ್ಮ ನಾಯಕತ್ವದ ಚೊಚ್ಚಲ ಪಂದ್ಯದಲ್ಲೇ ಸೂರ್ಯ ಕುಮಾರ್ ಯಾದವ್ ಅಪರೂಪದ ದಾಖಲೆ ನಿರ್ಮಿಸಿದ್ದಾರೆ.

ಈ ಪಂದ್ಯದಲ್ಲಿ ಅಜೇಯ 84 ರನ್ ಪೇರಿಸಿದ ಸೂರ್ಯ ಚೊಚ್ಚಲ ಟಿ20 ವಿಶ್ವಕಪ್ ಟೂರ್ನಿಯ ಚೊಚ್ಚಲ ಪಂದ್ಯದಲ್ಲೇ ವೈಯುಕ್ತಿಕ ಗರಿಷ್ಟ ರನ್ ಪೇರಿಸಿದ ಜಗತ್ತಿನ 2ನೇ ಬ್ಯಾಟರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಈ ಹಿಂದೆ 2009ರಲ್ಲಿ ದಿ ಓವಲ್ ಕ್ರೀಡಾಂಗಣದಲ್ಲಿ ವೆಸ್ಟ್ ಇಂಡೀಸ್ ನ ಕ್ರಿಸ್ ಗೇಯ್ಲ್ ಆಸ್ಟ್ರೇಲಿಯಾ ವಿರುದ್ದ 88 ರನ್ ಕಲೆ ಹಾಕಿದ್ದರು.

ಗೇಯ್ಲ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಇಷ್ಟು ದಿನ ಈ ಪಟ್ಟಿಯಲ್ಲಿ ಪಾಕಿಸ್ತಾನದ ಬಾಬರ್ ಆಜಂ 2ನೇ ಸ್ಥಾನದಲ್ಲಿದ್ದರು.

2021ರಲ್ಲಿ ದುಬೈನಲ್ಲಿ ಇದೇ ಭಾರತದ ವಿರುದ್ಧ ಬಾಬರ್ ಆಜಂ ಅಜೇಯ 68ರನ್ ಗಳಿಸಿದ್ದರು. ನಾಯಕರಾಗಿ ಚೊಚ್ಚಲ ಪಂದ್ಯದಲ್ಲೇ ಅವರು ಗಳಿಸಿದ ಈ 68ರನ್ ಗಳಿಕೆ ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿತ್ತು. ಇದೀಗ ಸೂರ್ಯ ಕುಮಾರ್ ಯಾದವ್ ಅಜೇಯ 84 ರನ್ ಗಳಿಸಿ ಈ ದಾಖಲೆಯನ್ನು ಹಿಂದಿಕ್ಕಿದ್ದಾರೆ.

Highest score in debut innings as captain (T20 WC)

  • 88 Chris Gayle vs Aus The Oval 2009

  • 84*Suryakumar Yadav vs USA Wankhede 2026

  • 68*Babar Azam vs Ind Dubai 2021

  • 65 Mahela Jayawardene vs Ken Joburg 2007

  • 61 Mohd Ashraful vs WO Joburg 2007

Surya Kumar Yadav
T20 ವಿಶ್ವಕಪ್ 2026: ಅಮೆರಿಕ ವಿರುದ್ಧ ಗೋಲ್ಡನ್ ಡಕೌಟ್; ಕಳಪೆ ದಾಖಲೆ ಬರೆದ Abhishek Sharma!

ನಾಯಕನಾಗಿ ಸಾವಿರ ರನ್ ಗಳಿಕೆ

ಅಂತೆಯೇ ಈ ಅದ್ಭುತ ಇನ್ನಿಂಗ್ಸ್ ಮೂಲಕ ಸೂರ್ಯ ಕುಮಾರ್ ಯಾದವ್ ಮತ್ತೊಂದು ದಾಖಲೆಗೂ ಪಾತ್ರರಾಗಿದ್ದು, ನಾಯಕರಾಗಿ ಸಾವಿರ ರನ್ ಕಲೆಹಾಕಿದ ಆಟಗಾರ ಎಂಬ ಕೀರ್ತಿಗೂ ಭಾಜನರಾಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com