T20 ವಿಶ್ವಕಪ್ 2026: ಅಮೆರಿಕ ವಿರುದ್ಧ ಗೋಲ್ಡನ್ ಡಕೌಟ್; ಕಳಪೆ ದಾಖಲೆ ಬರೆದ Abhishek Sharma!

ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡಕ್ಕೆ ಅಮೆರಿಕ ಬೌಲರ್ ಗಳು ಆಘಾತ ನೀಡಿದರು. ಕೇವಲ 46 ರನ್ ಗಳಿಗೇ 4 ಪ್ರಮುಖ ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟಕೆ ಸಿಲುಕಿತು.
Abhishek Sharma
ಅಭಿಷೇಕ ಶರ್ಮಾ ಔಟ್
Updated on

ಮುಂಬೈ: ಐಸಿಸಿ ಟಿ20 ವಿಶ್ವಕಪ್ 2026 ಟೂರ್ನಿಯ ತನ್ನ ಮೊದಲ ಪಂದ್ಯದಲ್ಲೇ ಹಾಲಿ ಚಾಂಪಿಯನ್ ಭಾರತ ತಂಡ ಬ್ಯಾಟಿಂಗ್ ನಲ್ಲಿ ಪರದಾಡಿದ್ದು, ಪ್ರಮುಖವಾಗಿ ತಂಡದ ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ಹೀನಾಯ ದಾಖಲೆ ಬರೆದಿದ್ದಾರೆ.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಯುಎಸ್ಎ ನಾಯಕ ಗುಜರಾತ್‌ ಮೂಲದ ಮೋನಾಂಕ್ ಪಟೇಲ್ ಬೌಲಿಂಗ್ ಆಯ್ಕೆ ಮಾಡಿಕೊಂಡರು.

ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡಕ್ಕೆ ಅಮೆರಿಕ ಬೌಲರ್ ಗಳು ಆಘಾತ ನೀಡಿದರು. ಕೇವಲ 46 ರನ್ ಗಳಿಗೇ 4 ಪ್ರಮುಖ ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟಕೆ ಸಿಲುಕಿತು.

ಅಮೆರಿಕದ ಶಾಡ್ಲಿ ವ್ಯಾನ್ ಶಾಲ್ಕ್‌ವಿಕ್ ಅವರು ಎಸೆದ 6ನೇ ಓವರ್ ನಲ್ಲಿ ಭಾರತ ತಂಡ ಒಂದೇ ಓವರ್ ನಲ್ಲಿ 3 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತು. ಆದರೆ ನಾಯಕ ಸೂರ್ಯ ಕುಮಾರ್ ಯಾದವ್ ಅವರ ಏಕಾಂಗಿ ಹೋರಾಟದ ನೆರವಿನಿಂದ 160 ರನ್ ಗಡಿ ದಾಟಿ ಅಮೆರಿಕಕ್ಕೆ ಗೆಲ್ಲಲು 162 ರನ್ ಸವಾಲಿನ ಗುರಿ ನೀಡಿತು.

Abhishek Sharma
T20 ವಿಶ್ವಕಪ್ 2026: USA ಬೌಲರ್ ಗಳ ಎದುರು ಪರದಾಡಿದ ಭಾರತ, ಸೂರ್ಯ ಏಕಾಂಗಿ ಹೋರಾಟ; 161 ರನ್

ಗೋಲ್ಡನ್ ಡಕೌಟ್, ಹೀನಾಯ ದಾಖಲೆ ಬರೆದ ಅಭಿಶೇಕ್ ಶರ್ಮಾ

ಇನ್ನು ಈ ಪಂದ್ಯದಲ್ಲಿ ಭಾರತ ತಂಡದ ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ಮೊದಲ ಎಸೆತದಲ್ಲೇ ಡಕೌಟ್ ಆಗಿದ್ದು ಅಭಿಮಾನಿಗಳಿಗೆ ತೀವ್ರ ನಿರಾಶೆ ಮೂಡಿಸಿತು. ಅಭಿಷೇಕ್ ಶರ್ಮಾಗೆ ಇದು ಚೊಚ್ಚಲ ಟಿ20 ವಿಶ್ವಕಪ್ ಟೂರ್ನಿಯಾಗಿದ್ದು, ಚೊಚ್ಚಲ ಟಿ20 ವಿಶ್ವಕಪ್ ಟೂರ್ನಿಯ ಚೊಚ್ಚಲ ಪಂದ್ಯದಲ್ಲೇ ಶೂನ್ಯ ಸುತ್ತಿ ಅಭಿಶೇಕ್ ಶರ್ಮಾ ಹೀನಾಯ ದಾಖಲೆಗೆ ಪಾತ್ರರಾಗಿದ್ದಾರೆ.

ಚೊಚ್ಚಲ ಟಿ20 ವಿಶ್ವಕಪ್ ಟೂರ್ನಿಯ ಚೊಚ್ಚಲ ಪಂದ್ಯದಲ್ಲೇ ಡಕೌಟ್ ಆಗುವ ಮೂಲಕ ಅಭಿಷೇಕ್ ಶರ್ಮಾ ಈ ಕಳಪೆ ದಾಖಲೆಗೆ ಪಾತ್ರರಾದ ಭಾರತದ 5ನೇ ಆಟಗಾರ ಎಂಬ ಕುಖ್ಯಾತಿಗೆ ಪಾತ್ರರಾಗಿದ್ದಾರೆ.

ಈ ಹಿಂದೆ ಕುಖ್ಯಾತಿ ಮಾಜಿ ಕ್ರಿಕೆಟಿಗರಾದ ಗೌತಮ್ ಗಂಭೀರ್, ಆಶಿಶ್ ನೆಹ್ರಾ, ಶಾರ್ದೂಲ್ ಠಾಕೂರ್ ಹೆಸರಲ್ಲಿತ್ತು. ಇವರಲ್ಲದೇ ದೀಪಕ್ ಹೂಡ ಕೂಡ ತಮ್ಮ ಚೊಚ್ಚಲ ಟಿ20 ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲೇ ಶೂನ್ಯ ಸುತ್ತಿ ಈ ಕುಖ್ಯಾತಿಗೆ ಪಾತ್ರರಾಗಿದ್ದಾರೆ.

Indian batters getting dismissed for a duck on T20 WC debut innings

  • G Gambhir

  • A Nehra *

  • S Thakur

  • D Hooda

  • Abhishek Sharma *

* Golden ducks

12ನೇ ಬಾರಿಗೆ ಶೂನ್ಯ ಸಾಧನೆ

ಇನ್ನು ಇಂದಿನ ಪಂದ್ಯವೂ ಸೇರಿದಂತೆ ಟಿ20 ಕ್ರಿಕೆಟ್ ನಲ್ಲಿ ಅಭಿಷೇಕ್ 12ನೇ ಬಾರಿಗೆ ಶೂನ್ಯ ಸಾಧನೆ ಮಾಡಿದಂತಾಗಿದೆ. 174 ಟಿ20 (ಐಪಿಎಲ್ ಸೇರಿದಂತೆ) ಪಂದ್ಯಗಳನ್ನಾಡಿರುವ ಅಭಿಷೇಕ್ ಶರ್ಮಾ 12ನೇ ಬಾರಿಗೆ ಡಕೌಟ್ ಆಗಿದ್ದಾರೆ.

ಅಭಿಷೇಕ್ 33.11 ಸರಾಸರಿಯಲ್ಲಿ 173.52 ಸ್ಟ್ರೈಕ್ ರೇಟ್ ನಲ್ಲಿ 5,100 ರನ್‌ಗಳನ್ನು ಗಳಿಸಿದ್ದಾರೆ. ಅಂತೆಯೇ 39 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಅಭಿಷೇಕ್ ಈಗ 4 ಬಾರಿ ಸೊನ್ನೆಗೆ ಔಟಾಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com