

ಮುಂಬೈ: ಗೌತಮ್ ಗಂಭೀರ್ ಭಾರತದ ಮುಖ್ಯ ಕೋಚ್ ಹುದ್ದೆಯನ್ನು ವಹಿಸಿಕೊಂಡಾಗಿನಿಂದಲೂ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಜೊತೆಗಿನ ಅವರ ಸಂಬಂಧ ಅಷ್ಟಕಷ್ಟೇ ಎಂಬಂತಹ ಮಾತುಗಳು ಕೇಳಿಬರುತ್ತಲೇ ಇವೆ.
ಐಪಿಎಲ್ ವೇಳೆ ಗಂಭೀರ್ ಮತ್ತು ಕೊಹ್ಲಿ ನಡುವೆ ಜಗಳವಾದ ನಂತರ ಇವರಿಬ್ಬರ ನಡುವೆ ಈಗಲೂ ಉತ್ತಮ ಸಂಬಂಧ ಇಲ್ಲ ಎನ್ನಲಾಗುತ್ತಿದೆ. ಈ ವಿಚಾರದ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ದೇವಜಿತ್ ಸೈಕಿಯಾ ಮಾತನಾಡಿದ್ದಾರೆ.
ಗಂಭೀರ್ ಮತ್ತು ಕೊಹ್ಲಿ ನಡುವೆ ಗಲಾಟೆ ನಡೆಯುತ್ತಿರುತ್ತದೆ ಎಂಬ ವದಂತಿಗಳನ್ನು ಸೈಕಿಯಾ ನಿರಾಕರಿಸಿದ್ದಾರೆ. ಕೊಹ್ಲಿ- ಗಂಭೀರ್ ನಡುವಿನ ಗಲಾಟೆಗಳನ್ನು ನಾನು ನೋಡಿಲ್ಲ. ಅವರಿಬ್ಬರೂ ಉತ್ತಮ ಸೌಹಾರ್ದಯುತ ಸಂಬಂಧದಲ್ಲಿದ್ದಾರೆ" ಎಂದು ಇಂಡಿಯಾ ಟುಡೇ ಪಾಡ್‌ಕಾಸ್ಟ್‌ನಲ್ಲಿ ಸೈಕಿಯಾ ಮಾತನಾಡಿದ್ದಾರೆ.
ಗಂಭೀರ್ ಮುಖ್ಯ ಕೋಚ್ ಆಗಿರುವಾಗಲೇ 2025 ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಕೊಹ್ಲಿ ನಿವೃತ್ತಿ ಘೋಷಿಸಿದರು. 2027 ರ ವಿಶ್ವಕಪ್‌ನಲ್ಲಿ ಕೊಹ್ಲಿ ಇರ್ತಾರಾ? ಎಂಬುದು ಅಭಿಮಾನಿಗಳ ನಡುವೆ ಅನುಮಾನಕ್ಕೂ ಕಾರಣವಾಗಿದೆ.
37 ವರ್ಷದ ಕೊಹ್ಲಿ ಈಗಲೂ ODI ವೃತ್ತಿಜೀವನದ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಕೊನೆಯ ಆರು ODIಗಳಲ್ಲಿ ಮೂರು ಶತಕಗಳನ್ನು ಮತ್ತು 93 ರನ್ ಗಳಿಸಿದ್ದಾರೆ.
ಅಂತಾರಾಷ್ಟ್ರೀಯ ಪಂದ್ಯಗಳು ಇಲ್ಲದಿದ್ದಾಗ ಹಿರಿಯ ಆಟಗಾರರು ದೇಶಿಯ ಕ್ರಿಕೆಟ್ ನಲ್ಲಿ ಆಡಬೇಕು ಎಂಬ ಬಿಸಿಸಿಐ ಕಠಿಣ ನಿಲುವಿನ ಹಿಂದೆಯೂ ಕೊಹ್ಲಿ ಹಾಗೂ ಗಂಭೀರ್ ನಡುವಿನ ಹಳಸಿದ ಸಂಬಂಧವೇ ಕಾರಣ ಎನ್ನಲಾಗುತ್ತಿದೆ.
ಹಲವು ವರ್ಷಗಳ ಬಳಿಕ ಕೊಹ್ಲಿ ಕಳೆದ ವರ್ಷ ಕೊಹ್ಲಿ. ರಣಜಿ ಟ್ರೋಫಿ ಮತ್ತು ವಿಜಯ್ ಹಜಾರೆ ಟ್ರೋಫಿ ಎರಡರಲ್ಲೂ ಕಾಣಿಸಿಕೊಂಡಿದ್ದರು. ಇಬ್ಬರ ನಡುವಿನ ಸಂಘರ್ಷದ ವರದಿಗಳ ಹೊರತಾಗಿಯೂ, ಗಂಭೀರ್ ಮತ್ತು ಕೊಹ್ಲಿ ಈಗಾಗಲೇ ಚಾಂಪಿಯನ್ಸ್ ಟ್ರೋಫಿ 2025 ರ ರೂಪದಲ್ಲಿ ಭಾರತಕ್ಕೆ ಐಸಿಸಿ ಟ್ರೋಫಿಯನ್ನು ತಲುಪಿಸುವಲ್ಲಿ ಒಟ್ಟಿಗೆ ಶ್ರಮಿಸಿದ್ದಾರೆ.
Advertisement