T20 ವಿಶ್ವಕಪ್ 2026: 6, 6, 6, 6, 4.. ಒಂದೇ ಓವರ್ ನಲ್ಲಿ 28 ರನ್; ದಾಖಲೆಗಳ ಮಳೆ; ಎಲೈಟ್ ಗ್ರೂಪ್ ಸೇರಿದ Ishan Kishan!
ನವದೆಹಲಿ: ಐಸಿಸಿ ಟಿ20 ವಿಶ್ವಕಪ್ 2026 ಟೂರ್ನಿಯ ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಭಾರತದ ಸ್ಫೋಟಕ ಬ್ಯಾಟರ್ ಇಶಾನ್ ಕಿಶನ್ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಅಪರೂಪದ ದಾಖಲೆ ನಿರ್ಮಿಸಿ ಎಲೈಟ್ ಗ್ರೂಪ್ ಸೇರಿದ್ದಾರೆ.
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುತ್ತಿರುವ ಭಾರತ ಇಶಾನ್ ಕಿಶನ್ ರ ಅರ್ಧಶತಕದ ನೆರವಿನಿಂದ ಬೃಹತ್ ಮೊತ್ತದತ್ತ ದಾಪುಗಾಲಿರಿಸಿದೆ.
ನಮೀಬಿಯಾ ವಿರುದ್ಧ ಆರಂಭಿಕರಾಗಿ ಕಣಕ್ಕಿಳಿದ ಇಶಾನ್ ಕಿಶನ್ ಕೇವಲ 24 ಎಸೆತಗಳಲ್ಲಿ 5 ಸಿಕ್ಸರ್ ಮತ್ತು 6 ಬೌಂಡರಿ ಸಹಿತ 61ರನ್ ಚಚ್ಚಿದರು.
6, 6, 6, 6, 4.. ಒಂದೇ ಓವರ್ ನಲ್ಲಿ 28 ರನ್
ಇನ್ನು ಈ ಪಂದ್ಯದ ಪವರ್ ಪ್ಲೇದ ಅಂತಿಮ ಅಂದರೆ ಭಾರತದ ಇನ್ನಿಂಗ್ಸ್ ನ 6ನೇ ಓವರ್ ನಲ್ಲಿ ಇಶಾನ್ ಕಿಶನ್ ರನ್ ಮಳೆಯನ್ನೇ ಹರಿಸಿ ಸ್ಫೋಟಕ ದಾಖಲೆ ನಿರ್ಮಿಸಿದರು. 6ನೇ ಓವರ್ ನಲ್ಲಿ ಇಶಾನ್ ಕಿಶನ್ 1 ಬೌಂಡರಿ ಮತ್ತು 4 ಸಿಕ್ಸರ್ ಗಳ ಮೂಲಕ ಒಂದೇ ಓವರ್ ನಲ್ಲಿ ಬರೊಬ್ಬರಿ 28 ರನ್ ಸಿಡಿಸಿದರು.
2ನೇ ಜಂಟಿ ಗರಿಷ್ಠ ರನ್
ಇದು ಟಿ20 ವಿಶ್ವಕಪ್ ನಲ್ಲಿ ಭಾರತದ ಬ್ಯಾಟ್ಸ್‌ಮನ್ ಒಂದು ಓವರ್ ನಲ್ಲಿ ಗಳಿಸಿದ 2ನೇ ಜಂಟಿ ಗರಿಷ್ಠ ರನ್ ಗಳ ದಾಖಲೆಯಾಗಿದೆ. ಈ ಹಿಂದೆ 2024 ರಲ್ಲಿ ಮಿಚೆಲ್ ಸ್ಟಾರ್ಕ್ ಬೌಲಿಂಗ್‌ನಲ್ಲಿ ರೋಹಿತ್ ಶರ್ಮಾ ಕೂಡ ಒಂದು ಓವರ್ ನಲ್ಲಿ 28 ರನ್ ಪೇರಿಸಿದ್ದರು.
ಇದಕ್ಕೂ ಮೊದಲು 2007 ರಲ್ಲಿ ಸ್ಟುವರ್ಟ್ ಬ್ರಾಡ್ ಬೌಲಿಂಗ್‌ನಲ್ಲಿ ಭಾರತದ ಯುವರಾಜ್ ಸಿಂಗ್ ಆರು ಎಸೆತದಲ್ಲಿ ಆರು ಸಿಕ್ಸರ್ ಗಳಿಸಿದ್ದರು. ಅಂದಿನ ಆ ಒಂದೇ ಓವರ್ ನಲ್ಲಿ ಬರೊಬ್ಬರಿ 36 ರನ್‌ಗಳು ಹರಿದು ಬಂದಿತ್ತು.
ಅಂತೆಯೇ ಭಾನುವಾರ ನಡೆದ ಅಮೆರಿಕ ತಂಡದ ವಿರುದ್ಧದ ಪಂದ್ಯದಲ್ಲಿ 20 ನೇ ಓವರ್‌ನಲ್ಲಿ ಸೌರಭ್ ನೇತ್ರವಲ್ಕರ್ ಬೌಲಿಂಗ್‌ನಲ್ಲಿ ಭಾರತದ ಸೂರ್ಯಕುಮಾರ್ ಯಾದವ್ ಗಳಿಸಿದ 21 ರನ್‌ಗಳು ಈ ಪಟ್ಟಿಯಲ್ಲಿ ನಂತರದ ಸ್ಥಾನದಲ್ಲಿವೆ.
ಜಂಟಿ 4ನೇ ವೇಗದ ಅರ್ಧಶತಕ
ಇನ್ನು ಈ ಪಂದ್ಯದಲ್ಲಿ ಇಶಾನ್ ಕಿಶನ್ ಕೇವಲ 20 ಎಸೆಗಳಲ್ಲಿ ಅರ್ಧಶತ ಸಿಡಿಸಿದರು. ಇದೂ ಕೂಡ ದಾಖಲೆಯಾಗಿದ್ದು, ಟಿ20 ವಿಶ್ವಕಪ್ ನಲ್ಲಿ ಭಾರತದ ಪರ ದಾಖಲಾದ ಜಂಟಿ 4ನೇ ವೇಗದ ಅರ್ಧಶತಕ ಇದಾಗಿದೆ. ಇದಕ್ಕೂ ಮೊದಲು 2007ರಲ್ಲಿ ಡರ್ಬನ್ ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತದ ಯುವರಾಜ್ ಸಿಂಗ್ ಕೇವಲ 12 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದರು.
ಅಂದು ಸ್ಟುವರ್ಟ್ ಬ್ರಾಡ್ ಅವರ ಒಂದೇ ಓವರ್ ನಲ್ಲಿ ಆರು ಸಿಕ್ಸರ್ ಸಿಡಿಸಿ 36 ರನ್ ಚಚ್ಚಿದ್ದರು. 2ನೇ ಸ್ಥಾನದಲ್ಲಿ ಕೆಎಲ್ ರಾಹುಲ್ ಇದ್ದು, 2021ರಲ್ಲಿ ದುಬೈನಲ್ಲಿ ಸ್ಕಾಟ್ಲೆಂಡ್ ವಿರುದ್ಧ ಕೆಎಲ್ ರಾಹುಲ್ 18 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದರು. ರೋಹಿತ್ ಶರ್ಮಾ 2024ರಲ್ಲಿ ಆಸ್ಟ್ರೇಲಿಯಾ ವಿರುದ್ಧ 19ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದರು.
Fastest fifties for India in T20 WC (by balls taken)
12 - Yuvraj Singh vs ENG, Durban, 2007
18 - KL Rahul vs SCOT, Dubai, 2021
19 - Rohit Sharma vs AUS, Gros Islet, 2024
20 - Yuvraj Singh vs AUS, Durban, 2007
20 - Ishan Kishan vs NAM, Delhi, 2026
ಪವರ್ ಪ್ಲೇ ನಲ್ಲಿ ಅರ್ಧಶತಕ, 3ನೇ ಆಟಗಾರ
ಅಂತೆಯೇ ಇಂದಿನ ಸ್ಫೋಟಕ ಇನ್ನಿಂಗ್ಸ್ ಮೂಲಕ ಇಶಾನ್ ಕಿಶನ್ ಮತ್ತೊಂದು ಅಪರೂಪದ ದಾಖಲೆ ನಿರ್ಮಿಸಿದ್ದು ಪವರ್ ಪ್ಲೇನಲ್ಲೇ ಅರ್ಧಶತಕ ಗಳಿಸಿದ ಭಾರತದ ಮೂರನೇ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಇದಕ್ಕೂ ಮೊದಲು 2021ರಲ್ಲಿ ಸ್ಕಾಟ್ಲೆಂಡ್ ವಿರುದ್ಧ ಕೆಎಲ್ ರಾಹುಲ್ 19 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದರು. ಬಳಿಕ 2021ರಲ್ಲಿ ರೋಹಿತ್ ಶರ್ಮಾ 21 ಎಸೆತಗಳಲ್ಲಿ ಅಜೇಯ ಅರ್ಧಶತಕ ಸಿಡಿಸಿದ್ದರು. ಇಂದು ನಮೀಬಿಯಾ ವಿರುದ್ಧ 20 ಎಸೆತಗಳಲ್ಲಿ ಇಶಾನ್ ಕಿಶನ್ ಅರ್ಧಶತಕ ಸಿಡಿಸಿ ಈ ಅಪರೂಪದ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.
Scoring 50 within the powerplay in T20 WC for India
51*(21) - Rohit Sharma vs AUS, Gros Islet, 2024
50(19) - KL Rahul vs SCOT, Dubai, 2021
50(20) - Ishan Kishan vs NAM, Delhi, 2026
6 ಓವರ್ ನಲ್ಲಿ ಅರ್ಧಶತಕ, 2ನೇ ಬಾರಿ ಇಶಾನ್ ಕಿಶನ್ ಸಾಧನೆ
ಇನ್ನು ಪವರ್ ಪ್ಲೇ ಅಥವಾ ಮೊದಲ ಆರು ಓವರ್ ನಲ್ಲೇ ಅರ್ಧಶತಕ ಸಿಡಿಸಿದ ಇಶಾನ್ ಕಿಶನ್ ಗೆ ಈ ಸಾಧನೆ ಇದೇ ಮೊದಲೇನಲ್ಲ. ಈ ಹಿಂದೆಯೂ ಅವರು ಈ ಸಾಧನೆ ಮಾಡಿದ್ದಾರೆ. ಈ ಪೈಕಿ ಮೊದಲ ಆರು ಓವರ್ ನಲ್ಲಿ ಅತೀ ಹೆಚ್ಚು ಬಾರಿ ಅರ್ಧಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಇಶಾನ್ ಕಿಶನ್ ಜಂಟಿ 2ನೇ ಸ್ಥಾನದಲ್ಲಿದ್ದಾರೆ.
ಈ ಪಟ್ಟಿಯಲ್ಲಿ 3 ಬಾರಿ ಈ ಸಾಧನೆ ಮಾಡಿರುವ ಅಭಿಷೇಕ್ ಶರ್ಮಾ ಅಗ್ರಸ್ಥಾನದಲ್ಲಿದ್ದು, ಎರಡು ಬಾರಿ ಈ ಸಾಧನೆ ಮಾಡಿದ ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ಜಂಟಿ 2ನೇ ಸ್ಥಾನದಲ್ಲಿದ್ದಾರೆ. ಉಳಿದಂತೆ ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ತಲಾ 1 ಬಾರಿ ಈ ಸಾಧನೆ ಮಾಡಿದ್ದಾರೆ.
Reaching 50 within Overs 1-6 for India in T20Is
Abhishek Sharma (thrice)
Rohit Sharma (twice)
Ishan Kishan (twice)
KL Rahul (once)
Yashasvi Jaiswal (once)

