ಭಾರತ ಮತ್ತು ಪಾಕಿಸ್ತಾನ ತಂಡಗಳು ಫೆಬ್ರುವರಿ 15 ರಂದು ಕೊಲಂಬೊದಲ್ಲಿ ನಡೆಯಲಿರುವ ಬಹುನಿರೀಕ್ಷಿತ ಟಿ20 ವಿಶ್ವಕಪ್ 2026ರ ಗ್ರೂಪ್ ಎ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಇದುವರೆಗೆ ಆಡಿದ ಹಲವು ಪಂದ್ಯಗಳಲ್ಲಿ ಎರಡೂ ತಂಡಗಳು ತಲಾ ಎರಡು ಗೆಲುವುಗಳನ್ನು ದಾಖಲಿಸಿದ್ದು, ಗ್ರೂಪ್ ಎ ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನದಲ್ಲಿವೆ.
ಪಾಕಿಸ್ತಾನ ಆರಂಭಿಕ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ಜಯ ಸಾಧಿಸುವ ಮೊದಲು ಯುಎಸ್ಎಯನ್ನು 32 ರನ್‌ಗಳಿಂದ ಸೋಲಿಸಿತು. ಮತ್ತೊಂದೆಡೆ, ಭಾರತವು ಯುಎಸ್ಎ ವಿರುದ್ಧ 29 ರನ್‌ಗಳ ಜಯ ಸಾಧಿಸಿತು. ನಂತರ ಸೂರ್ಯಕುಮಾರ್ ಯಾದವ್ ಮತ್ತು ತಂಡವು ನಮೀಬಿಯಾವನ್ನು 93 ರನ್‌ಗಳಿಂದ ಸೋಲಿಸಿತು. ಉತ್ತಮ ನೆಟ್ ರನ್ ರೇಟ್‌ನೊಂದಿಗೆ ಭಾರತ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ.
ಭಾರತ ಮತ್ತು ಪಾಕಿಸ್ತಾನ ಸೆಣಸಾಟಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಪಾಕಿಸ್ತಾನದ ಮಾಜಿ ಆಟಗಾರ ಬಸಿತ್ ಅಲಿ, ಸೂರ್ಯಕುಮಾರ್ ನೇತೃತ್ವದ ತಂಡದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ್ದಾರೆ. 'ಭಾರತ ಮಾತ್ರ ಭಾರತವನ್ನು ಸೋಲಿಸಲು ಸಾಧ್ಯ' ಎಂದು ಅವರು ತಮ್ಮ ಯೂಟ್ಯೂಬ್ ಚಾನೆಲ್ 'ಕ್ರಿಕೆಟ್ ಇನ್ಸೈಟ್ ವಿತ್ ಬಸಿತ್ ಅಲಿ' ನಲ್ಲಿನ ವಿಡಿಯೋದಲ್ಲಿ ಹೇಳಿದ್ದಾರೆ. ನಮೀಬಿಯಾ ವಿರುದ್ಧ ತಂಡದ ಭರ್ಜರಿ ಗೆಲುವನ್ನು ಶ್ಲಾಘಿಸಿದ್ದಾರೆ.
ನಮೀಬಿಯಾ ವಿರುದ್ಧ ಸಂಜು ಸ್ಯಾಮ್ಸನ್ ಮತ್ತೊಮ್ಮೆ ನಿರಾಸೆ ಮೂಡಿಸಿದರು. ಇಶಾನ್ ಕಿಶನ್ ಮತ್ತೊಮ್ಮೆ ಭರ್ಜರಿ ಪ್ರದರ್ಶನ ನೀಡಿದರು. ನಂತರ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಆಲ್‌ರೌಂಡ್ ಪ್ರದರ್ಶನ ನೀಡಿ ತಂಡಕ್ಕೆ ನೆರವಾದರು. ಗುರುವಾರ ದೆಹಲಿಯಲ್ಲಿ ನಡೆದ ಪಂದ್ಯದಲ್ಲಿ ನಮೀಬಿಯಾ ವಿರುದ್ಧ ಭಾರತ 93 ರನ್‌ಗಳ ಗೆಲುವು ಸಾಧಿಸಿತು.
ಭಾರತವು ತಮ್ಮ ಅತಿದೊಡ್ಡ T20 ವಿಶ್ವಕಪ್ ಗೆಲುವನ್ನು ದಾಖಲಿಸಿದ್ದರೂ, ಈ ಗೆಲುವು ಸಂಪೂರ್ಣ ಪ್ರಾಬಲ್ಯಕ್ಕಿಂತ ಹೆಚ್ಚಾಗಿ ಪಾಕಿಸ್ತಾನದೊಂದಿಗೆ ಮುಂದಿನ ಬಿರುಗಾಳಿಗೂ ಮುನ್ನ ತಾತ್ಕಾಲಿಕ ಶಾಂತತೆಯಂತೆ ಭಾಸವಾಯಿತು. ಇಶಾನ್ ಕಿಶನ್ (24 ಎಸೆತಗಳಲ್ಲಿ 61) ಮತ್ತು ಹಾರ್ದಿಕ್ ಪಾಂಡ್ಯ (28 ಎಸೆತಗಳಲ್ಲಿ 52) ಅವರ ಸ್ಫೋಟಕ ಇನಿಂಗ್ಸ್ ಹೊರತಾಗಿಯೂ, ನಮೀಬಿಯಾದ ನಾಯಕ ಗೆರ್ಹಾರ್ಡ್ ಎರಾಸ್ಮಸ್ 20 ರನ್ ನೀಡಿ 4 ವಿಕೆಟ್‌ಗಳನ್ನು ಪಡೆಯುವ ಮೂಲಕ ಪ್ರಭಾವ ಬೀರಿದರು.
ಇದಕ್ಕೆ ಉತ್ತರವಾಗಿ, ನಮೀಬಿಯಾದ ಬ್ಯಾಟಿಂಗ್ ಘಟಕವು ಆರಂಭದಲ್ಲೇ ಕುಸಿತ ಕಂಡಿತು. ಇನಿಂಗ್ಸ್ 18.2 ಓವರ್‌ಗಳಲ್ಲಿ 116 ರನ್‌ಗಳಿಗೆ ಕೊನೆಗೊಂಡಿತು. ವರುಣ್ ಚಕ್ರವರ್ತಿ (2 ಓವರ್‌ಗಳಲ್ಲಿ 3/7) ಮತ್ತು ಪಾಂಡ್ಯ (4 ಓವರ್‌ಗಳಲ್ಲಿ 2/21) ತಂಡಕ್ಕೆ ಉತ್ತಮ ಪ್ರದರ್ಶನ ನೀಡಿದರು. ಭಾರತವು ಸೂಪರ್ ಎಂಟಕ್ಕೆ ಅರ್ಹತೆ ಪಡೆಯಲು ಮುಂದಿನ ಎರಡು ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಗೆಲುವು ಮಾತ್ರ ಅಗತ್ಯವಿದೆ.
Advertisement