

2010ರ ದಶಕದ ಕೊನೆಯಲ್ಲಿ ಮತ್ತು 2020ರ ದಶಕದ ಆರಂಭದಲ್ಲಿ, ಬಾಬರ್ ಅಜಮ್ ಮತ್ತು ವಿರಾಟ್ ಕೊಹ್ಲಿಯ ಹೆಸರುಗಳನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗಲಾಗುತ್ತಿತ್ತು. ಇದು ಕೇವಲ ಉತ್ಸಾಹಿ ಪಾಕಿಸ್ತಾನದ ಅಭಿಮಾನಿಗಳು ಮಾತ್ರವಲ್ಲದೆ ಕ್ರಿಕೆಟ್ ದಂತಕಥೆಗಳು ಸಹ ಬಾಬರ್ ಅವರು ಕೊಹ್ಲಿ ಮಾರ್ಗವನ್ನು ಅನುಸರಿಸುತ್ತಿದ್ದಾರೆ ಎಂದು ಭಾವಿಸಿದ್ದರು.
ಹಲವಾರು ಮಾಜಿ ಕ್ರಿಕೆಟಿಗರು ಬಾಬರ್ ಅವರನ್ನು ಫ್ಯಾಬ್ 4 (ಕೊಹ್ಲಿ, ಸ್ಟೀವ್ ಸ್ಮಿತ್, ಜೋ ರೂಟ್ ಮತ್ತು ಕೇನ್ ವಿಲಿಯಮ್ಸನ್) ಗೆ ಸೇರಿಸಬೇಕೆಂದು ಅಭಿಪ್ರಾಯಪಟ್ಟರು. ಕೆಲವು ವರ್ಷಗಳ ನಂತರ, ಈ ಎಲ್ಲ ಮಾತುಕತೆಗಳು ಕಣ್ಮರೆಯಾಯಿತು. ಟೆಸ್ಟ್ ಕ್ರಿಕೆಟ್‌ನಲ್ಲಿ ಕೊಹ್ಲಿಯ ಫಾರ್ಮ್ ಕುಸಿತ ಕಂಡಾಗ, ಬಾಬರ್ ಕೂಡ 2023 ರಿಂದ ಉತ್ತಮ ಫಾರ್ಮ್ ಕಂಡುಕೊಳ್ಳಲು ಹೋರಾಡುತ್ತಿದ್ದಾರೆ. 2016 ರಿಂದ 2022 ರವರೆಗೆ, ಪಾಕಿಸ್ತಾನಿ ಸ್ಟಾರ್ ಬ್ಯಾಟರ್ ಎಲ್ಲ ಸ್ವರೂಪಗಳಲ್ಲಿ 40 ಕ್ಕಿಂತ ಹೆಚ್ಚು ಸರಾಸರಿ ಹೊಂದಿದ್ದರು. ಅಂದಿನಿಂದ, ಅವರ ಫಾರ್ಮ್ ಕುಸಿತ ಕಂಡುಬಂದಿದೆ.
ಕಳೆದೆರಡು ವರ್ಷಗಳಲ್ಲಿ ಬಾಬರ್ ಅವರನ್ನು ಟೆಸ್ಟ್ ಮತ್ತು ಟಿ20ಐ ತಂಡಗಳಿಂದ ಕೈಬಿಡಲಾಗಿದೆ. ಕೊಹ್ಲಿ ವಿಚಾರದಲ್ಲಿ ಹಾಗಾಗಲಿಲ್ಲ. ಅವರು 2024ರ ಟಿ20 ವಿಶ್ವಕಪ್ ಗೆದ್ದ ನಂತರ ಟಿ20 ಕ್ರಿಕೆಟ್‌ನಿಂದ ನಿವೃತ್ತರಾದರು ಮತ್ತು 2025ರ ಮೇನಲ್ಲಿ ಟೆಸ್ಟ್ ಕ್ರಿಕೆಟ್‌ನಿಂದಲೂ ನಿವೃತ್ತರಾದರು.
2026ರ T20 ವಿಶ್ವಕಪ್ ನೋಡುವುದಾದರೆ, ಬಾಬರ್‌ರನ್ನು ಆರಂಭಿಕರಿಂದ ಮಧ್ಯಮ ಕ್ರಮಾಂಕಕ್ಕೆ ಸ್ಥಳಾಂತರಿಸಲಾಯಿತು. ಶ್ರೀಲಂಕಾದಂತಹ ಟ್ರಿಕಿ ಪರಿಸ್ಥಿತಿಯಲ್ಲಿ ಅವರು ಇನಿಂಗ್ಸ್ ಅನ್ನು ಕಟ್ಟುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಅವರು ಭಾರತದ ಎದುರು ವಿಫಲರಾಗಿದ್ದಾರೆ. ಸಾಂಪ್ರದಾಯಿಕ ಎದುರಾಳಿಗಳು ಎಂದೇ ಕರೆಯುವ ಭಾರತ vs ಪಾಕಿಸ್ತಾನ ಪಂದ್ಯದಲ್ಲಿ ಬಾಬರ್ ಒತ್ತಡಕ್ಕೆ ಮಣಿದರು.
ಅಲ್ಲಿಗೆ ವಿರಾಟ್ ಕೊಹ್ಲಿಯೊಂದಿಗೆ ಅವರನ್ನು ಹೋಲಿಸುವ ಆಟ ಮುಗಿಯುತ್ತದೆ. ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ಕೊಹ್ಲಿ ಸಂಕಷ್ಟದ ಸಮಯದಲ್ಲಿ ಯಾವಾಗಲೂ ಒಬ್ಬರೇ ನಿಂತು ತಂಡವನ್ನು ಗೆಲ್ಲಿಸಿದ್ದಾರೆ. ಪಾಕಿಸ್ತಾನ ವಿರುದ್ಧ ಕೊಹ್ಲಿ 70.28 ಸರಾಸರಿ ಹೊಂದಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ, ಬಾಬರ್ ಅವರು ಕೇವಲ 22 ಸರಾಸರಿಯನ್ನು ಹೊಂದಿದ್ದಾರೆ. ಇದು ಅವರ ವೃತ್ತಿಜೀವನದ ಸರಾಸರಿ ಅರ್ಧಕ್ಕಿಂತ ಕಡಿಮೆ.
ಒತ್ತಡದ ಸಂದರ್ಭಗಳಲ್ಲಿ ಗುರಿಯನ್ನು ಬೆನ್ನಟ್ಟುವಾಗ ವಿರಾಟ್ ಕೊಹ್ಲಿ ಬಾಬರ್ ಅಜಮ್‌ಗಿಂತಲೂ ಅತ್ಯುತ್ತಮವಾಗಿದ್ದಾರೆ. ಚೇಸ್‌ಗಳಲ್ಲಿ ಬ್ಯಾಟಿಂಗ್ ಮಾಡುವಾಗ ಅವರ ಸರಾಸರಿಯಲ್ಲಿನ ವ್ಯತ್ಯಾಸವು 104 ಆಗಿದೆ. ಇದು ಅತ್ಯಂತ ಹೆಚ್ಚಿನ ವ್ಯತ್ಯಾಸವಾಗಿದ್ದು, ಇದನ್ನು ವಿವರಿಸಲು ಸಹ ಸಾಧ್ಯವಿಲ್ಲ.
ಟಿ20 ವಿಶ್ವಕಪ್‌ನಲ್ಲಿ ಚೇಸಿಂಗ್ ಮಾಡುವಾಗ ದಾಖಲೆ
ವಿರಾಟ್ ಕೊಹ್ಲಿ: ಸರಾಸರಿ 135.50 ಮತ್ತು ಸ್ಟ್ರೈಕ್ ರೇಟ್ 134.15
ಬಾಬರ್ ಅಜಮ್: ಸರಾಸರಿ 31.20 ಮತ್ತು ಸ್ಟ್ರೈಕ್ ರೇಟ್ 103.65
2021ರಲ್ಲಿ ಪಾಕಿಸ್ತಾನವು ಟಿ20 ವಿಶ್ವಕಪ್‌ನಲ್ಲಿ ಭಾರತವನ್ನು 10 ವಿಕೆಟ್‌ಗಳಿಂದ ಸೋಲಿಸಿದಾಗ, ಬಾಬರ್ ಮತ್ತು ವಿರಾಟ್ ಕೊಹ್ಲಿಯ ಹೋಲಿಕೆಗಳು ಸಮರ್ಥನೀಯ ಎಂದು ಹೇಳಲಾಗಿತ್ತು. ಆದರೆ, ಆ ಪಂದ್ಯದ ನಂತರ ಬಾಬರ್ 5 ಪಂದ್ಯಗಳಲ್ಲಿ ಭಾರತದ ವಿರುದ್ಧ 8.40 ರ ಸರಾಸರಿಯಲ್ಲಿ 42 ರನ್ ಗಳಿಸಿದ್ದಾರೆ. ಒಮ್ಮೆಯೂ ಅವರು 15 ರನ್‌ಗಳ ಗಡಿ ದಾಟಿಲ್ಲ. ಅವರ ಸ್ಟ್ರೈಕ್ ರೇಟ್ ಕೇವಲ 113.51 ಆಗಿದೆ.
Advertisement