

ಫೆಬ್ರುವರಿ 15 ರಂದು ಭಾರತಕ್ಕೆ ಶರಣಾದ ನಂತರ ಸಲ್ಮಾನ್ ಅಲಿ ಅಘಾ ನೇತೃತ್ವದ ತಂಡವನ್ನು ಪಾಕಿಸ್ತಾನದ ಮಾಜಿ ಆಟಗಾರರು ತೀವ್ರವಾಗಿ ಟೀಕಿಸಿದ್ದಾರೆ. 61 ರನ್‌ಗಳ ಸೋಲು - ಪಾಕಿಸ್ತಾನದ ಟಿ20ಐಗಳಲ್ಲಿ ಭಾರತದ ವಿರುದ್ಧದ ಅತಿದೊಡ್ಡ ಸೋಲಾಗಿದ್ದು, ಮಾಜಿ ಆಟಗಾರರಾದ ಶಾಹಿದ್ ಅಫ್ರಿದಿ ಮತ್ತು ಮೊಹಮ್ಮದ್ ಯೂಸುಫ್ ವಿಶೇಷವಾಗಿ ತಂಡದ ವಿರುದ್ಧ ಕಿಡಿಕಾರಿದ್ದಾರೆ. ತಮ್ಮ ಅಳಿಯ ಶಾಹೀನ್ ಅಫ್ರಿದಿ, ಬಾಬರ್ ಅಜಮ್ ಮತ್ತು ಶಾದಾಬ್ ಖಾನ್ ಅವರನ್ನು ಟಿ20ಐ ತಂಡದಿಂದ ಕೈಬಿಡಬೇಕೆಂದು ಅಫ್ರಿದಿ ಹೇಳಿದ್ದಾರೆ. ಇತ್ತ ಮೊಹಮ್ಮದ್ ಯೂಸುಫ್ ಕೂಡ, 'ಶಾಹೀನ್, ಬಾಬರ್ ಮತ್ತು ಶಾದಾಬ್‌ಗೆ ಸಮಯ ಬಂದಿದೆ. ಪಾಕಿಸ್ತಾನದ ಟಿ20 ತಂಡಕ್ಕೆ ಪ್ರದರ್ಶನ ನೀಡುವವರ ಅಗತ್ಯವಿದೆ, ದುರ್ಬಲ ತಂಡಗಳ ವಿರುದ್ಧ ಖಾಲಿ ಗೆಲುವುಗಳಲ್ಲ' ಎಂದು ಎಕ್ಸ್‌ನಲ್ಲಿ ಬರೆದಿದ್ದಾರೆ.
ಶಾದಾಬ್ ಇದೀಗ ಈ ಜೋಡಿಯ ವಿರುದ್ಧ ಟೀಕೆ ಮಾಡಿದ್ದು, ವಿಶ್ವಕಪ್‌ನಲ್ಲಿ ಆಟಗಾರರಾಗಿ ಭಾರತವನ್ನು ಸೋಲಿಸಲು ಅವರಿಗೆ ಎಂದಿಗೂ ಸಾಧ್ಯವಾಗಲಿಲ್ಲ ಎಂಬುದನ್ನು ನೆನಪಿಸಿದ್ದಾರೆ. ಭಾರತ ಮತ್ತು ಪಾಕಿಸ್ತಾನ ವಿಶ್ವಕಪ್‌ನಲ್ಲಿ 9 ಬಾರಿ ಮುಖಾಮುಖಿಯಾಗಿದ್ದು, ಪಾಕಿಸ್ತಾನವು ಭಾರತದ ವಿರುದ್ಧ 2021ರ ಟಿ20 ವಿಶ್ವಕಪ್‌ನಲ್ಲಿ ಏಕೈಕ ಗೆಲುವು ಸಾಧಿಸಿದೆ. ಶದಾಬ್ ಖಾನ್ ಪಾಕಿಸ್ತಾನದ 2021 ಟಿ20 ವಿಶ್ವಕಪ್ ತಂಡದ ಭಾಗವಾಗಿದ್ದರು.
'ಟೀಕೆಗೆ ಸಂಬಂಧಿಸಿದಂತೆ, ನೀವು ಅದನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಪ್ರತಿಯೊಬ್ಬರೂ ತಮ್ಮದೇ ಆದ ಅಭಿಪ್ರಾಯಗಳನ್ನು ಹೊಂದಿರುತ್ತಾರೆ. ನಾನು ಹಿಂತಿರುಗಿದಾಗಿನಿಂದ, ಕೇವಲ ಒಂದು ಓವರ್‌ನಲ್ಲಿ ನಾನು ಉತ್ತಮವಾಗಿ ಕಾರ್ಯನಿರ್ವಹಿಸಲಿಲ್ಲ. ಆದರೆ, ಅದರಿಂದಾಗಿ ನಾನು ಬಹಳಷ್ಟು ಟೀಕೆಗಳನ್ನು ಎದುರಿಸಿ. ಆದರೆ, ನಾನು ಅದನ್ನು ಸಮರ್ಥಿಸಿಕೊಳ್ಳುವ ಅಗತ್ಯವಿಲ್ಲ. ನಾನು ಏನನ್ನು ನಿಯಂತ್ರಿಸಬಹುದು ಎಂಬುದರ ಮೇಲೆ ನನ್ನ ಗಮನ ಕೇಂದ್ರೀಕರಿಸುತ್ತೇನೆ. ಕೆಟ್ಟ ದಿನ ಅಥವಾ ಕೆಟ್ಟ ಓವರ್ ಸಂಭವಿಸಬಹುದು. ಇದು ಟಿ20 ಕ್ರಿಕೆಟ್ - ನೀವು ರನ್ ನೀಡಬಹುದು ಅಥವಾ ನೀವು ವಿಕೆಟ್ ಪಡೆಯಬಹುದು. ನಾನು ಅದರ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ' ಎಂದರು.
'ಟೀಕೆ ನಮ್ಮ ಕೈಯಲ್ಲಿಲ್ಲ. ಮಾಜಿ ಕ್ರಿಕೆಟಿಗರಿಗೆ ತಮ್ಮದೇ ಆದ ಅಭಿಪ್ರಾಯಗಳಿವೆ. ಅವರು ದಂತಕಥೆಗಳು, ಆದರೆ ನಾವು ಮಾಡಿದ್ದನ್ನು ಅವರಿಗೂ ಮಾಡಲು ಸಾಧ್ಯವಾಗಲಿಲ್ಲ. ನಾವು ವಿಶ್ವಕಪ್‌ನಲ್ಲಿ ಭಾರತವನ್ನು ಸೋಲಿಸಿದ್ದೇವೆ. ಟೀಕೆ ಕ್ರಿಕೆಟ್ ಇತಿಹಾಸದ ಭಾಗವಾಗಿದೆ" ಎಂದು ಶಾದಾಬ್ ಹೇಳಿರುವುದಾಗಿ ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿವೆ.
ಪಾಕಿಸ್ತಾನ ತಂಡವು ಟಿ20 ವಿಶ್ವಕಪ್ ಸೂಪರ್ 8 ರಲ್ಲಿ ಗ್ರೂಪ್ 2 ರಲ್ಲಿ ಸ್ಥಾನ ಪಡೆದಿದೆ. ಅವರು ಶ್ರೀಲಂಕಾ (ಫೆಬ್ರುವರಿ 28), ಇಂಗ್ಲೆಂಡ್ (ಫೆಬ್ರುವರಿ 24) ಮತ್ತು ನ್ಯೂಜಿಲೆಂಡ್ (ಫೆಬ್ರುವರಿ 21) ವಿರುದ್ಧ ಸೆಣಸಲಿದ್ದಾರೆ.
Advertisement