Ranji Trophy Final: ಕರ್ನಾಟಕದ ಆಟಗಾರನಿಗೆ 'ಡಿಚ್ಚಿ' ಹೊಡೆದ ಜಮ್ಮು ಮತ್ತು ಕಾಶ್ಮೀರ ನಾಯಕನ ವಿರುದ್ಧ BCCI ಕಠಿಣ ಕ್ರಮ; ಭಾರಿ ದಂಡ!

ಡೋಗ್ರಾ ಅವರು 70 ರನ್ ಗಳಿಸಿದರು. ರಣಜಿ ಟ್ರೋಫಿ ಫೈನಲ್‌ನ ಎರಡನೇ ದಿನದಾಟದ ಅಂತ್ಯಕ್ಕೆ ಜಮ್ಮು ಮತ್ತು ಕಾಶ್ಮೀರ ತಂಡವು 6 ವಿಕೆಟ್‌ ನಷ್ಟಕ್ಕೆ 527 ರನ್ ಗಳಿಸಿ ಉತ್ತಮ ಪ್ರದರ್ಶನ ನೀಡಿತು.
Jammu and Kashmir skipper Paras Dogra headbutts Karnataka's KV Aneesh
ಕರ್ನಾಟಕದ ಕೆವಿ ಅನೀಶ್‌ ತಲೆಗೆ ಗುದ್ದಿದ ಜಮ್ಮು ಮತ್ತು ಕಾಶ್ಮೀರದ ನಾಯಕ ಪರಾಸ್ ಡೋಗ್ರಾ
Updated on

ಬುಧವಾರ ನಡೆದ ರಣಜಿ ಟ್ರೋಫಿ ಫೈನಲ್ ಪಂದ್ಯದ 2ನೇ ದಿನದಂದು ಕರ್ನಾಟಕದ ಬದಲಿ ಆಟಗಾರ ಕೆವಿ ಅನೀಶ್ ಅವರ ತಲೆಗೆ ಡಿಚ್ಚಿ ಹೊಡೆದಿದ್ದಕ್ಕಾಗಿ ಜಮ್ಮು ಮತ್ತು ಕಾಶ್ಮೀರದ ನಾಯಕ ಪರಾಸ್ ಡೋಗ್ರಾ ಅವರಿಗೆ ಬಿಸಿಸಿಐ ದಂಡ ವಿಧಿಸಿದೆ ಎಂದು ವರದಿಯಾಗಿದೆ. ಪ್ರಸಿದ್ಧ್ ಕೃಷ್ಣ ಅವರ ಎಸೆತವನ್ನು ಬೌಂಡರಿಗೆ ಅಟ್ಟದ ಬಳಿಕ ಸಿಲ್ಲಿ ಪಾಯಿಂಟ್ ಫೀಲ್ಡರ್ ಅನೀಶ್ ಅವರಿಗೆ ಡೋಗ್ರಾ ತೆಲೆಗೆ ಗುದ್ದಿದ್ದರು. ಡೋಗ್ರಾ ಅವರ ವಿಚಿತ್ರ ವರ್ತನೆ ಎಲ್ಲರನ್ನೂ ಅಚ್ಚರಿಗೊಳಿಸಿತು. ಇದರಿಂದಾಗಿ ಕರ್ನಾಟಕದ ಹಿರಿಯ ಆಟಗಾರ ಮಯಾಂಕ್ ಅಗರ್ವಾಲ್ ಸೇರಿದಂತೆ ಇತರೆ ಆಟಗಾರರು ಮತ್ತು ಅಂಪೈರ್‌ಗಳು ಮಧ್ಯೆ ಪ್ರವೇಶಿಸಿ ಪರಿಸ್ಥಿತಿಯನ್ನು ತಣ್ಣಗಾಗಿಸಿದರು.

ಅಂಪೈರ್‌ಗಳಾದ ರೋಹನ್ ಪಂಡಿತ್ ಮತ್ತು ಉಲ್ಲಾಸ್ ಗಂಧೆ ಮಧ್ಯಪ್ರವೇಶಿಸಿದಾಗ, ಅಗರ್ವಾಲ್ ಡೋಗ್ರಾ ಜೊತೆ ಮಾತಿನ ಚಕಮಕಿ ನಡೆಸುತ್ತಿರುವುದು ಕಂಡುಬಂತು. ಸ್ವಲ್ಪ ಸಮಯದ ನಂತರ, ಕರ್ನಾಟಕದ ನಾಯಕ ದೇವದತ್ ಪಡಿಕ್ಕಲ್ ಕೂಡ ಡೋಗ್ರಾ ಬಗ್ಗೆ ದೂರು ನೀಡುತ್ತಾ ಅಂಪೈರ್‌ಗಳೊಂದಿಗೆ ಮಾತನಾಡುತ್ತಿರುವುದು ಕಂಡುಬಂತು.

ರಣಜಿ ಅನುಭವಿ ಆಟಗಾರನಿಗೆ 'ಅವರ ಪಂದ್ಯ ಶುಲ್ಕದ ಶೇ 50ರಷ್ಟು ದಂಡ ವಿಧಿಸಲಾಗಿದೆ' ಎಂದು ಕ್ರಿಕ್‌ಬಜ್ ವರದಿ ಮಾಡಿದೆ. ಬಿಸಿಸಿಐ ಮ್ಯಾಚ್ ರೆಫರಿ ನಾರಾಯಣನ್ ಕುಟ್ಟಿ ಅವರಿಂದ ಅಧಿಕೃತ ಪ್ರಕಟಣೆ ಪಂದ್ಯ ಮುಗಿದ ನಂತರವೇ ಬರಲಿದೆಯಾದರೂ, ಎದುರಾಳಿ ಆಟಗಾರನಿಗೆ ದೈಹಿಕವಾಗಿ ತೊಂದರೆ ನೀಡುವುದು ನಿರ್ಬಂಧಗಳು ಮತ್ತು ಪಂದ್ಯ ನಿಷೇಧಗಳಿಗೆ ಕಾರಣವಾಗುತ್ತದೆ.

ಡೋಗ್ರಾ ಅವರು 70 ರನ್ ಗಳಿಸಿದರು. ರಣಜಿ ಟ್ರೋಫಿ ಫೈನಲ್‌ನ ಎರಡನೇ ದಿನದಾಟದ ಅಂತ್ಯಕ್ಕೆ ಜಮ್ಮು ಮತ್ತು ಕಾಶ್ಮೀರ ತಂಡವು 6 ವಿಕೆಟ್‌ ನಷ್ಟಕ್ಕೆ 527 ರನ್ ಗಳಿಸಿ ಉತ್ತಮ ಪ್ರದರ್ಶನ ನೀಡಿತು.

Jammu and Kashmir skipper Paras Dogra headbutts Karnataka's KV Aneesh
Ranji Trophy final: ಕರ್ನಾಟಕದ ಕೆ.ವಿ ಅನೀಶ್‌ಗೆ ಡಿಚ್ಚಿ ಹೊಡೆದ ಜಮ್ಮು ಮತ್ತು ಕಾಶ್ಮೀರ ತಂಡದ ನಾಯಕ, Video

ಡೋಗ್ರಾ, ಕೀಪರ್-ಬ್ಯಾಟರ್ ಕನ್ಹಯ್ಯ ವಾಧವನ್ (70) ಮತ್ತು ಸಾಹಿಲ್ ಲೋತ್ರಾ (57 ಬ್ಯಾಟಿಂಗ್) ಅವರೊಂದಿಗೆ ಉತ್ತಮ ಜೊತೆಯಾಟವಾಡಿದರು. ಪ್ರಸಿದ್ಧ್ ಕೃಷ್ಣ (29 ಓವರ್‌ಗಳಲ್ಲಿ 3/90) ಅವರನ್ನು ಹೊರತುಪಡಿಸಿ, ಇತರೆ ಬೌಲರ್‌ಗಳು ಹೆಚ್ಚಿನ ಪರಿಣಾಮ ಬೀರಲಿಲ್ಲ.

ಸಂಕ್ಷಿಪ್ತ ಸ್ಕೋರ್‌ಗಳು: ಜಮ್ಮು ಮತ್ತು ಕಾಶ್ಮೀರ 156 ಓವರ್‌ಗಳಲ್ಲಿ 527/6 (ಶುಭಮ್ ಪುಂಡೀರ್ 121, ಯಾರ್ ಹಸನ್ 88, ಪಾರಸ್ ಡೋಗ್ರಾ 70, ಕನ್ಹಯ್ಯಾ ವಾಧವನ್ 70, ಸಾಹಿಲ್ ಲೋತ್ರಾ 54.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com