T20 World Cup 2026: 'ಇದರಿಂದ ಟಿ20 ವಿಶ್ವಕಪ್ ಗೆಲ್ಲಲು ಸಾಧ್ಯವಿಲ್ಲ'; ಪಾಕ್ ಅಭಿಮಾನಿಗಳಿಗೆ ತಿರುಗೇಟು ನೀಡಿದ ನಾಯಕ ಸಲ್ಮಾನ್ ಅಲಿ ಅಘಾ ಪತ್ನಿ

ಪಾಕಿಸ್ತಾನ ನೀಡಿದ 165 ರನ್ ಗುರಿ ಬೆನ್ನತ್ತಿದ ಇಂಗ್ಲೆಂಡ್ ಹ್ಯಾರಿ ಬ್ರೂಕ್ ಅವರ ಆಕರ್ಷಕ ಶತಕದ ನೆರವಿನಿಂದ 8 ವಿಕೆಷ್ಟ ನಷ್ಟಕ್ಕೆ 166 ರನ್ ಗಳಿಸಿ ಗೆಲುವು ಸಾಧಿಸಿತು.
Salman Ali Agha and his wife Sabba Manzer
ಪತ್ನಿ ಸಬ್ಬಾ ಮಂಝರ್ ಜೊತೆಗೆ ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಅಘಾ
Updated on

ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಸಲ್ಮಾನ್ ಅಲಿ ಅಘಾ ಅವರ ಪತ್ನಿ ಸಬ್ಬಾ ಮಂಝರ್ ಗುರುವಾರ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಮತ್ತು ತಮ್ಮ ಮಗನನ್ನು ಗುರಿಯಾಗಿಸಿಕೊಂಡು ನಡೆಸಲಾದ ಆನ್‌ಲೈನ್ ನಿಂದನೆಯನ್ನು ಖಂಡಿಸಿದ್ದಾರೆ. ಟಿ20 ವಿಶ್ವಕಪ್ 2026ರ ಸೂಪರ್ 8 ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸೋಲು ಕಂಡಿದ್ದು, ಇದರ ಪರಿಣಾಮವಾಗಿ ಪಂದ್ಯಾವಳಿಯ ಸೆಮಿಫೈನಲ್‌ಗೆ ಅರ್ಹತೆ ಪಡೆಯುವ ಪಾಕಿಸ್ತಾನದ ಸಾಧ್ಯತೆಗಳು ತೀವ್ರವಾಗಿ ಅಪಾಯಕ್ಕೆ ಸಿಲುಕಿವೆ. ಪಾಕಿಸ್ತಾನ ಸೋಲು ಕಂಡ ನಂತರ ಅಭಿಮಾನಿಗಳು ಸಲ್ಮಾನ್ ಅಲಿ ಅಘಾ ಅವರ ಕುಟುಂಬವನ್ನು ಗುರಿಯಾಗಿಸಿಕೊಂಡು ಟೀಕೆ ನಡೆಸಿದ್ದಾರೆ.

'ನನ್ನನ್ನು ಅಥವಾ ನನ್ನ ಮುಗ್ಧ ಮಗನನ್ನು ನಿಂದಿಸುವುದರಿಂದ ನಿಮಗೆ ವಿಶ್ವಕಪ್ ಗೆಲ್ಲಲು ಸಾಧ್ಯವಿಲ್ಲ, ಪಾಕಿಸ್ತಾನಿ ಅಭಿಮಾನಿಗಳೇ' ಎಂದು ಮಂಝರ್ ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದಾರೆ. ಆದಾಗ್ಯೂ, ಮಂಝರ್ ಶೀಘ್ರದಲ್ಲೇ ಈ ಪೋಸ್ಟ್ ಅನ್ನು ಅಳಿಸಿ ತಮ್ಮ ಖಾತೆಯನ್ನು ಖಾಸಗಿಯನ್ನಾಗಿ ಮಾಡಿಕೊಂಡಿದ್ದಾರೆ.

ಈಮಧ್ಯೆ, ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಅಘಾ ಅವರು ಭರವಸೆಯ ಆರಂಭದ ಹೊರತಾಗಿಯೂ ತಮ್ಮ ತಂಡವು ವಿಫಲವಾಯಿತು ಎಂದು ಒಪ್ಪಿಕೊಂಡರು. ಹ್ಯಾರಿ ಬ್ರೂಕ್ ಅವರ ಅದ್ಭುತ ಪ್ರದರ್ಶನವು ಮಂಗಳವಾರ ಕ್ಯಾಂಡಿಯಲ್ಲಿ ನಡೆದ ಟಿ20 ವಿಶ್ವಕಪ್ 2026ರ ಸೂಪರ್ 8 ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಪಾಕ್ ವಿರುದ್ಧ ಗೆಲುವು ಸಾಧಿಸಲು ನೆರವಾಯಿತು.

Salman Ali Agha and his wife Sabba Manzer
T20 World Cup 2026: ಪಾಕ್ ವಿರುದ್ಧ ಇಂಗ್ಲೆಂಡ್‌ಗೆ ಗೆಲುವು; ಸೆಮಿಫೈನಲ್‌ನಲ್ಲಿ ಭಾರತ-ಪಾಕಿಸ್ತಾನ ಮುಖಾಮುಖಿ ಅಸಾಧ್ಯ

'ಬ್ಯಾಟಿಂಗ್‌ನಲ್ಲಿ ಉತ್ತಮವಾಗಿ ಆರಂಭಿಸಿದೆವು. ಆದರೆ, ನಾವು ಬಯಸಿದ ರೀತಿಯಲ್ಲಿ ಮುಗಿಸಲು ಸಾಧ್ಯವಾಗಲಿಲ್ಲ. ಆದರೂ, ಕೆಲವು ಬ್ಯಾಟ್ಸ್‌ಮನ್‌ಗಳಿಗೆ ಕ್ರೆಡಿಟ್ ನೀಡಬೇಕು. ಹ್ಯಾರಿ ಅದ್ಭುತವಾಗಿ ಬ್ಯಾಟಿಂಗ್ ಮಾಡಿದರು ಎಂದು ನಾನು ಭಾವಿಸುತ್ತೇನೆ. ನಮ್ಮ ಸ್ಕೋರ್ ಸ್ವಲ್ಪ ಕಡಿಮೆಯಾಗಿತ್ತು. ಮತ್ತು ನಂತರ ಬ್ರೂಕ್ ನಮ್ಮಿಂದ ಪಂದ್ಯವನ್ನು ಕಸಿದುಕೊಂಡರು' ಎಂದು ಆಘಾ ಪಂದ್ಯದ ನಂತರ ಹೇಳಿದರು.

ಟಾಸ್ ಗೆದ್ದ ಪಾಕಿಸ್ತಾನ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಇಂಗ್ಲೆಂಡ್ ಬೌಲರ್‌ಗಳು ಪ್ರಾಬಲ್ಯ ಸಾಧಿಸಿದರು. ಹೀಗಾಗಿ, 9 ವಿಕೆಟ್‌ ನಷ್ಟಕ್ಕೆ ಪಾಕಿಸ್ತಾನ ಕೇವಲ 164 ಗಳಿಸಲು ಸಾಧ್ಯವಾಯಿತು. ಸಾಹಿಬ್‌ಜಾದಾ ಫರ್ಹಾನ್ 63 ರನ್ ಗಳಿಸಿದರು, ಬಾಬರ್ ಅಜಮ್ (25), ಫಖರ್ ಜಮಾನ್ (25), ಮತ್ತು ಶದಾಬ್ ಖಾನ್ (23*) ಅವರ ರನ್ ನೆರವಿನಿಂದ ಪಾಕ್ ಅಷ್ಟು ಮೊತ್ತ ಕಲೆಹಾಕುವಲ್ಲಿ ಯಶಸ್ವಿಯಾಯಿತು.

ಪಾಕಿಸ್ತಾನ ನೀಡಿದ 165 ರನ್ ಗುರಿ ಬೆನ್ನತ್ತಿದ ಇಂಗ್ಲೆಂಡ್ ಹ್ಯಾರಿ ಬ್ರೂಕ್ ಅವರ ಆಕರ್ಷಕ ಶತಕದ ನೆರವಿನಿಂದ 8 ವಿಕೆಷ್ಟ ನಷ್ಟಕ್ಕೆ 166 ರನ್ ಗಳಿಸಿ ಗೆಲುವು ಸಾಧಿಸಿತು. ಈ ಮೂಲಕ ಇಂಗ್ಲೆಂಡ್ ಸೆಮಿಫೈನಲ್‌ಗೆ ಅರ್ಹತೆ ಪಡೆಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com