

ಮುಂಬೈ: ನಿನ್ನೆಯಿಂದ ಆರಂಭವಾಗಿರುವ ಮಹಿಳಾ ಪ್ರೀಮಿಯರ್ ಲೀಗ್ ಗೆ ಪ್ರೇಕ್ಷಕರಿಂದ ಅಭೂತಪೂರ್ವ ಬೆಂಬಲ ದೊರೆತಿದ್ದು, ಉದ್ಘಾಟನಾ ಪಂದ್ಯಕ್ಕೆ ದಾಖಲೆಯ ಪ್ರೇಕ್ಷಕರು ಸೇರಿದ್ದರು ಎನ್ನಲಾಗಿದೆ.
ನವೀ ಮುಂಬೈನ ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿ ಕ್ರೀಡಾಂಗಣದಲ್ಲಿ ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್ 2026ನ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ ಮುಖಾಮುಖಿಯಾಗಿದ್ದವು.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಮುಂಬೈ ತಂಡ 20 ಓವರ್ಗಳಲ್ಲಿ 154 ರನ್ ಕಲೆಹಾಕಿದರೆ, ಆರ್ಸಿಬಿ 20 ಓವರ್ಗಳಲ್ಲಿ 157 ರನ್ ಬಾರಿಸಿ 3 ವಿಕೆಟ್ಗಳ ರೋಚಕ ಜಯ ಸಾಧಿಸಿತು.
ಟಾಸ್ ಗೆದ್ದ ಆರ್ಸಿಬಿ ತಂಡದ ನಾಯಕಿ ಸ್ಮೃತಿ ಮಂಧಾನ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 154 ರನ್ ಕಲೆಹಾಕಿತು. 155 ರನ್ಗಳ ಗುರಿ ಬೆನ್ನತ್ತಿದ ಆರ್ಸಿಬಿ 20 ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿ ವಿರೋಚಿತ ಗೆಲುವು ಸಾಧಿಸಿತು.
ವಿರೋಚಿತ ಅಂತ್ಯ
ಇನ್ನು ಈ ಪಂದ್ಯದಲ್ಲಿ ಆರ್ ಸಿಬಿಗೆ ಗೆಲ್ಲಲು ಅಂತಿಮ 4 ಎಸೆತಗಳಲ್ಲಿ 18 ರನ್ ಗಳ ಅವಶ್ಯಕತೆ ಇತ್ತು. ಈ ವೇಳೆ ಕ್ರೀಸ್ ನಲ್ಲಿದ್ದ ನಡಿನ್ ಡಿ ಕ್ಲರ್ಕ್ 2 ಸಿಕ್ಸರ್ ಮತ್ತು 2 ಬೌಂಡರಿ ಸಿಡಿಸಿ ಆರ್ ಸಿಬಿಗೆ ವಿರೋಚಿತ ಜಯ ತಂದಿತ್ತರು.
ಕ್ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರು
ಇನ್ನು ಈ ವಿರೋಚಿತ ಅಂತ್ಯಕಂಡ ಪಂದ್ಯ ವೀಕ್ಷಿಸಲು ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿ ಕ್ರೀಡಾಂಗಣದಲ್ಲಿ ಪ್ರೇಕ್ಷಕರು ಕಿಕ್ಕಿರಿದು ತಂಬಿದ್ದರು. ಮೂಲಗಳ ಪ್ರಕಾರ ನಿನ್ನೆ ಬರೊಬ್ಬರಿ 45,300 ಪ್ರೇಕ್ಷಕು ಕ್ರೀಡಾಂಗಣದಲ್ಲಿದ್ದರು ಎಂದು ತಿಳಿದುಬಂದಿದೆ. ಇದು ಮಹಿಳಾ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಉದ್ಘಾಟನಾ ಪಂದ್ಯಕ್ಕೆ ಸೇರಿದ್ದ ಗರಿಷ್ಛ ಪ್ರೇಕ್ಷಕರು ಎಂದು ಹೇಳಲಾಗಿದೆ.
ಜಯ್ ಶಾ ಕನಸು ನನಸು
ಇನ್ನು ಮಹಿಳಾ ಕ್ರಿಕೆಟ್ ಗೆ ಉತ್ತೇಜನ ನೀಡಿ ಪುರುಷರ ಕ್ರಿಕೆಟ್ ಗೆ ಸರಿಸಮಾನಾಗಿ ಬೆಳಯಬೇಕು ಎಂದು ಈ ಹಿಂದೆ ಬಿಸಿಸಿಐನ ಮುಖ್ಯಸ್ಥರಾಗಿದ್ದ ಜಯ್ ಶಾ ಆಶಿಸಿದ್ದರು. ಅದರಂತೆ ಮಹಿಳಾ ಪ್ರೀಮಿಯರ್ ಲೀಗ್ ಗೂ ಉತ್ತೇಜನ ನೀಡಿದ್ದರು. ಅವರ ಕನಸು ಇದೀಗ ನನಸಾಗಿದ್ದು, ಮಹಿಳಾ ಪ್ರೀಮಿಯರ್ ಲೀಗ್ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ.
Advertisement