

ಮುಂಬೈ: ಮಹಿಳಾ ಪ್ರೀಮಿಯರ್ ಲೀಗ್ 2026ರ ಮುಂಬೈ ಮತ್ತು ಆರ್ ಸಿಬಿ ನಡುವಿನ ಉದ್ಘಾಟನಾ ಪಂದ್ಯದಲ್ಲಿ ಬೆಂಗಳೂರು ತಂಡದ ನಾಯಕಿ ಸ್ಮೃತಿ ಮಂಧಾನ ಕ್ಯಾಮೆರಾಮನ್ ವಿರುದ್ಧ ಅಸಮಾಧಾನಗೊಂಡ ಘಟನೆ ನಡೆಯಿತು.
ನವೀ ಮುಂಬೈನ ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿ ಕ್ರೀಡಾಂಗಣದಲ್ಲಿ ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್ 2026ನ ಮೊದಲ ಪಂದ್ಯದ ಆರಂಭಕ್ಕೂ ಮುನ್ನ ಆರ್ ಸಿಬಿ ನಾಯಕಿ ಸ್ಮೃತಿ ಮಂಧಾನ ಕಸಿವಿಸಿಗೊಂಡರು.
ಪಂದ್ಯ ಆರಂಭಕ್ಕೂ ಮುನ್ನ ಸ್ಮೃತಿ ಮೈದಾನದಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡುತ್ತಿದ್ದಾಗ ಅಲ್ಲಿಗೆ ಬಂದ ಕ್ಯಾಮೆರಾಮನ್ ಸ್ಮೃತಿ ಅವರತ್ತ ಕ್ಯಾಮೆರಾ ತಿರುಗಿಸಿದ್ದ.
ಇದರಿಂದ ಕಸಿವಿಸಿಗೊಂಡ ಸ್ಮೃತಿ ಮಂಧಾನ ಮೈದಾನದಲ್ಲೇ ಅವರಿಗೆ ಅಡ್ಡಿಪಡಿಸಿದರು. ಅಲ್ಲದೆ ಅಭ್ಯಾಸ ಮಾಡಲು ಬಿಡಿ ಎಂದಾಗ ಕ್ಯಾಮೆರಾಮನ್ ದೂರ ಸರಿದ. ಈ ಕುರಿತ ವಿಡಿಯೋವನ್ನು ಆರ್ ಸಿಬಿ ತನ್ನ ಖಾತೆಯಲ್ಲಿ ಹಂಚಿಕೊಂಡಿದೆ.
ಇನ್ನು ನಿನ್ನೆ ನಡೆದ ಮೊದಲ ಪಂದ್ಯದಲ್ಲಿ ಮಂಧಾನ 13 ಎಸೆತಗಳಲ್ಲಿ ಕೇವಲ 18 ರನ್ ಗಳಿಸಿದರು. ಆದರೆ ನಾಡಿನ್ ಡಿ ಕ್ಲರ್ಕ್ ಅವರ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಆರ್ ಸಿಬಿ ತಂಡವು ಮೂರು ವಿಕೆಟ್‌ಗಳ ಅದ್ಭುತ ಜಯ ಸಾಧಿಸಿತು.
Advertisement