ಮಹಿಳಾ ಪ್ರೀಮಿಯರ್ ಲೀಗ್ (WPL) ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಮೊದಲ ಭಾರತೀಯ ವೇಗಿ ಎಂಬ ಹೆಗ್ಗಳಿಕೆಗೆ ನಂದನಿ ಶರ್ಮಾ ಪಾತ್ರರಾಗಿದ್ದಾರೆ. ಭಾನುವಾರ ನವಿ ಮುಂಬೈನ ಡಿವೈ ಪಾಟೀಲ ಕ್ರೀಡಾಂಗಣದಲ್ಲಿ ನಡೆದ ಗುಜರಾತ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ 24 ವರ್ಷದ ಡೆಲ್ಲಿ ಕ್ಯಾಪಿಟಲ್ಸ್ ತಾರೆ ಈ ಅದ್ಭುತ ಸಾಧನೆ ಮಾಡಿ ಇತಿಹಾಸ ಬರೆದರು. 33 ರನ್ ನೀಡಿ 5 ವಿಕೆಟ್ ಪಡೆದ ನಂದನಿ, WPL ಹ್ಯಾಟ್ರಿಕ್ ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಇಸ್ಸಿ ವಾಂಗ್ (ಮುಂಬೈ ಇಂಡಿಯನ್ಸ್), ಗ್ರೇಸ್ ಹ್ಯಾರಿಸ್ (UP ವಾರಿಯರ್ಸ್) ಮತ್ತು ದೀಪ್ತಿ ಶರ್ಮಾ (UP ವಾರಿಯರ್ಸ್) ತಮ್ಮ ಹೆಸರನ್ನು ಸೇರಿಸಿಕೊಂಡರು. ಇನಿಂಗ್ಸ್‌ನ 20ನೇ ಓವರ್‌ನಲ್ಲಿ, ನಂದನಿ ಅವರು ಕನಿಕಾ ಅಹುಜಾ, ರಾಜೇಶ್ವರಿ ಗಾಯಕ್ವಾಡ್ ಮತ್ತು ರೇಣುಕಾ ಸಿಂಗ್ ಅವರನ್ನು ಔಟ್ ಮಾಡಿದರು.
ನಂದನಿ ಶರ್ಮಾ ಯಾರು?
ನಂದನಿ ಚಂಡೀಗಢದ ಪ್ರತಿಭಾನ್ವಿತ ಕ್ರಿಕೆಟಿಗರಾಗಿದ್ದು, ವೇಗದ ಬೌಲಿಂಗ್‌ಗೆ ಹೆಸರುವಾಸಿಯಾಗಿದ್ದಾರೆ ಮತ್ತು ದೇಶೀಯ ಟಿ20 ಕ್ರಿಕೆಟ್‌ನಲ್ಲಿ ತೊಡಗಿಕೊಂಡಿದ್ದಾರೆ. 2001ರಲ್ಲಿ ಜನಿಸಿದ ಅವರು ದೇಶೀಯ ಸ್ಪರ್ಧೆಗಳಲ್ಲಿ ಚಂಡೀಗಢವನ್ನು ಪ್ರತಿನಿಧಿಸಿದರು ಮತ್ತು ಉತ್ತರ ವಲಯ ಮಹಿಳಾ ತಂಡದ ಭಾಗವಾಗಿ ಅಂತರ-ವಲಯ ಪಂದ್ಯಗಳಲ್ಲಿ ಸಾಕಷ್ಟು ಪ್ರಭಾವ ಬೀರಿದ್ದಾರೆ. 2026ರ WPL ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಅವರನ್ನು ₹20 ಲಕ್ಷಕ್ಕೆ ಖರೀದಿಸಿದೆ.
ಹ್ಯಾಟ್ರಿಕ್ ಬಗ್ಗೆ ನಂದನಿ ಹೇಳಿದ್ದೇನು?
ನಾಯಕಿ ಜೆಮಿಮಾ ರೊಡ್ರಿಗಸ್ ಮತ್ತು ತಂಡದ ಸಹ ಆಟಗಾರ್ತಿ ಶಫಾಲಿ ವರ್ಮಾ ಅವರ ನಿರಂತರ ಪ್ರೋತ್ಸಾಹಕ್ಕಾಗಿ ನಂದನಿ ಕೃತಜ್ಞತೆ ಸಲ್ಲಿಸಿದರು. ತನ್ನ ಮೊದಲ ಓವರ್ ನಂತರ ತನ್ನ ಲೈನ್ ಮತ್ತು ಲೆಂತ್ ಅನ್ನು ಹೊಂದಿಸಿಕೊಂಡಿದ್ದರಿಂದ ಹ್ಯಾಟ್ರಿಕ್ ಸೇರಿದಂತೆ ಐದು ವಿಕೆಟ್‌ಗಳನ್ನು ಪಡೆಯುವಲ್ಲಿ ನೆರವಾಯಿತು ಎಂದು ಹೇಳಿದರು.
'ನಾನು ಉತ್ತಮವಾಗಿ ಬೌಲಿಂಗ್ ಮಾಡುವುದರತ್ತ ಮಾತ್ರ ಗಮನಹರಿಸಿದ್ದೆ. ಶಫಾಲಿ ಮತ್ತು ಜೆಮಿಮಾ ಪ್ರತಿ ಎಸೆತಕ್ಕೂ ಮೊದಲು ನನ್ನೊಂದಿಗೆ ಮಾತನಾಡುತ್ತಿದ್ದರು ಮತ್ತು ಯೋಜನೆ ಸರಳವಾಗಿತ್ತು. ಅದು ಸ್ಟಂಪ್‌ಗಳ ಮೇಲೆ ದಾಳಿ ಮಾಡುವುದು. ನಾನು ಹ್ಯಾಟ್ರಿಕ್ ನಿರೀಕ್ಷಿಸಿರಲಿಲ್ಲ. ಆದರೆ, ತಂಡವು ವಿಕೆಟ್‌ಗಳು ಬರುತ್ತವೆ ಎಂದು ಹೇಳುತ್ತಲೇ ಇತ್ತು' ಎಂದು ನಂದನಿ ಹೇಳಿದರು.
'ನನ್ನ ಮೊದಲ ಓವರ್ ನಂತರ, ಬ್ಯಾಟ್ಸ್‌ಮನ್‌ಗಳು ನನ್ನ ಸ್ಟಾಕ್ ಬಾಲ್ ಅನ್ನು ಚೆನ್ನಾಗಿ ಆರಿಸುತ್ತಿದ್ದಾರೆಂದು ನಾನು ಅರಿತುಕೊಂಡೆ. ಆದ್ದರಿಂದ, ನಾನು ನನ್ನ ವೇರಿಯೇಷನ್ಸ್‌ಗಳನ್ನು ಬಳಸಲು ನಿರ್ಧರಿಸಿದೆ ಮತ್ತು ಅದೃಷ್ಟವಶಾತ್ ಅದು ಕೆಲಸ ಮಾಡಿತು. ನನ್ನ ಸಹೋದರ, ತಾಯಿ ಮತ್ತು ಆಪ್ತ ಸ್ನೇಹಿತ ಮೈದಾನದಲ್ಲಿದ್ದಾರೆ. ನನ್ನ ಕುಟುಂಬದ ಉಳಿದವರು ಮನೆಯಿಂದಲೇ ವೀಕ್ಷಿಸುತ್ತಿದ್ದಾರೆ. ಅವರೆಲ್ಲರೂ ನಂಬಲಾಗದಷ್ಟು ಬೆಂಬಲ ನೀಡಿದ್ದಾರೆ' ಎಂದರು.
ನಂದನಿ ಶರ್ಮಾ ಅವರ ಚೊಚ್ಚಲ ಹ್ಯಾಟ್ರಿಕ್ ವ್ಯರ್ಥವಾಯಿತು. ಸೋಫಿ ಡಿವೈನ್ 95 ರನ್ ಗಳಿಸಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವುದರೊಂದಿಗೆ, ಒತ್ತಡದ ನಡುವೆಯೂ ಅತ್ಯುತ್ತಮ ಅಂತಿಮ ಓವರ್ ಎಸೆದು ಗುಜರಾತ್ ಜೈಂಟ್ಸ್ ತಂಡವು ನಾಲ್ಕು ರನ್‌ಗಳ ರೋಮಾಂಚಕ ಗೆಲುವು ಸಾಧಿಸುವಂತೆ ಮಾಡಿದರು.
ಗುಜರಾತ್ ಜೈಂಟ್ಸ್ ತಂಡಕ್ಕೆ ಇದು ಸತತ ಎರಡನೇ ಗೆಲುವು. ಆದರೆ, ಡಿಸಿ ತಂಡವು ಎರಡನೇ ಸೋಲಿಗೆ ಶರಣಾಯಿತು.
Advertisement