

ಸಿಡ್ನಿ: ಆಸ್ಟ್ರೇಲಿಯಾ ಪರ ಆಡಿದ ಅತ್ಯುತ್ತಮ ಕ್ರಿಕೆಟಿಗರಲ್ಲಿ ಒಬ್ಬರಾದ ಅಲಿಸಾ ಹೀಲಿ, ಮಾರ್ಚ್‌ನಲ್ಲಿ ಭಾರತ ವಿರುದ್ಧದ ತವರಿನಲ್ಲಿ ನಡೆಯಲಿರುವ ಸರಣಿಯ ನಂತರ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲಿದ್ದಾರೆ.
35 ವರ್ಷದ ಅವರು ಮೂರು ಏಕದಿನ ಪಂದ್ಯಗಳು ಮತ್ತು ಪರ್ತ್‌ನಲ್ಲಿ ನಡೆಯುವ ಮಹಿಳಾ ಟೆಸ್ಟ್‌ನಲ್ಲಿ ಕೊನೆಯ ಬಾರಿಗೆ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಲಿದ್ದಾರೆ.
ಈ ವರ್ಷದ ಕೊನೆಯಲ್ಲಿ ಯುಕೆಯಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಹೀಲಿ ಲಭ್ಯವಿರುವುದಿಲ್ಲವಾದ್ದರಿಂದ ಭಾರತದ ವಿರುದ್ಧದ ಟಿ20 ಪಂದ್ಯಗಳಿಂದ ಅವರನ್ನು ಹೊರಗಿಡಲಾಗುತ್ತಿದೆ.
'ಮುಂಬರುವ ಭಾರತ ವಿರುದ್ಧದ ಸರಣಿ ಆಸ್ಟ್ರೇಲಿಯಾ ಪರ ನನ್ನ ಕೊನೆಯ ಸರಣಿಯಾಗಲಿದೆ ಎಂಬುದು ಮಿಶ್ರ ಭಾವನೆಗಳಿಂದ ಕೂಡಿದೆ' ಎಂದು ಮಹಿಳಾ ಕ್ರಿಕೆಟ್‌ನಲ್ಲಿ ಅತ್ಯಂತ ವಿನಾಶಕಾರಿ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ಹೀಲಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
'ಆಸ್ಟ್ರೇಲಿಯಾ ಪರ ಆಡುವ ಬಗ್ಗೆ ನನಗೆ ಇನ್ನೂ ಉತ್ಸಾಹವಿದೆ. ಆದರೆ, ಆರಂಭದಿಂದಲೂ ನನ್ನನ್ನು ಮುನ್ನಡೆಸುತ್ತಿದ್ದ ಸ್ಪರ್ಧಾತ್ಮಕ ಅಂಚನ್ನು ನಾನು ಸ್ವಲ್ಪಮಟ್ಟಿಗೆ ಕಳೆದುಕೊಂಡಿದ್ದೇನೆ. ಆದ್ದರಿಂದ ಈ ನಿರ್ಧಾರ ತೆಗೆದುಕೊಳ್ಳಲು ಇದು ಸರಿಯಾದ ಸಮಯವಾಗಿದೆ. ಈ ವರ್ಷ ನಾನು ಟಿ20 ವಿಶ್ವಕಪ್ ಆಡುತ್ತಿಲ್ಲ. ತಯಾರಿಗೆ ತಂಡಕ್ಕೆ ಸೀಮಿತ ಸಮಯವಿದ್ದು, ನಾನು ಭಾರತದ ವಿರುದ್ಧದ ಟಿ20ಗಳ ಭಾಗವಾಗುವುದಿಲ್ಲ. ಆದರೆ, ನನ್ನ ವೃತ್ತಿಜೀವನದ ಕೊನೆಯ ಭಾಗದಲ್ಲಿ ತವರಿನಲ್ಲಿ ಭಾರತ ವಿರುದ್ಧದ ಏಕದಿನ ಮತ್ತು ಟೆಸ್ಟ್ ತಂಡವನ್ನು ಮುನ್ನಡೆಸಲು ಅವಕಾಶ ಸಿಕ್ಕಿದ್ದಕ್ಕೆ ನಾನು ಉತ್ಸುಕಳಾಗಿದ್ದೇನೆ. ಇದು ನಮ್ಮ ಕ್ಯಾಲೆಂಡರ್‌ನಲ್ಲಿ ಅತಿದೊಡ್ಡ ಸರಣಿಗಳಲ್ಲಿ ಒಂದಾಗಿದೆ' ಎಂದರು.
ಕಳೆದ ದಶಕದಲ್ಲಿ ಆಸ್ಟ್ರೇಲಿಯಾದ ಪ್ರಾಬಲ್ಯದಲ್ಲಿ ಹೀಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಆರು ಟಿ20 ಸ್ವರೂಪ ಮತ್ತು ಎರಡು ಏಕದಿನ ಕ್ರಿಕೆಟ್‌ನಲ್ಲಿ ಅವರು ಎಂಟು ವಿಶ್ವ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್‌ನಲ್ಲಿ ಅಂತಿಮವಾಗಿ ಸೆಮಿಫೈನಲ್‌ನಲ್ಲಿ ಸೋತಿದ್ದು, ಹೀಲಿ ಮತ್ತು ಅವರ ತಂಡಕ್ಕೆ ನಿರಾಶಾದಾಯಕ ಫಲಿತಾಂಶವಾಗಿತ್ತು.
ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿರುವ ಅವರು ಆಸ್ಟ್ರೇಲಿಯಾವನ್ನು 10 ಟೆಸ್ಟ್‌ಗಳು, 123 ಏಕದಿನ ಪಂದ್ಯಗಳು ಮತ್ತು 162 ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ.
ಅವರು ಇಲ್ಲಿಯವರೆಗೆ 30.56 ಸರಾಸರಿಯಲ್ಲಿ 489 ಟೆಸ್ಟ್ ರನ್‌ಗಳನ್ನು, ಏಳು ಶತಕಗಳೊಂದಿಗೆ, 35.98 ಸರಾಸರಿಯಲ್ಲಿ 3563 ಏಕದಿನ ರನ್‌ಗಳನ್ನು ಮತ್ತು ಒಂದು ಶತಕದೊಂದಿಗೆ, 25.45 ಸರಾಸರಿಯಲ್ಲಿ ಟಿ20ಐಗಳಲ್ಲಿ 3054 ರನ್ ಗಳಿಸಿದ್ದಾರೆ.
'ಆಸ್ಟ್ರೇಲಿಯಾ ಪರ ಆರಂಭಿಕ ಆಟಗಾರ್ತಿಯಾಗಿ ಬ್ಯಾಟಿಂಗ್ ಮಾಡಲು ನಡೆಯುವುದು ಸೇರಿದಂತೆ ತಂಡದ ಸಹ ಆಟಗಾರ್ತಿಯರನ್ನು ಮಿಸ್ ಮಾಡಿಕೊಳ್ಳುತ್ತೇನೆ. ಆಸ್ಟ್ರೇಲಿಯಾ ಪರ ಆಡುವುದು ಒಂದು ದೊಡ್ಡ ಗೌರವವಾಗಿದೆ ಮತ್ತು ಆ ಅವಕಾಶ ನೀಡಿದ್ದಕ್ಕಾಗಿ ನಾನು ಕೃತಜ್ಞಳಾಗಿದ್ದೇನೆ. ಕೊನೆಯದಾಗಿ ಹಸಿರು ಮತ್ತು ಗೋಲ್ಡನ್ ಬಣ್ಣದಲ್ಲಿ ಕಾಣಿಸಿಕೊಳ್ಳುವುದು ಉತ್ತಮವಾಗಿದೆ' ಎಂದು ಹೀಲಿ ಹೇಳಿದರು.
ಮಂಗಳವಾರ ಪಾಡ್‌ಕಾಸ್ಟ್‌ನಲ್ಲಿ, ಕಳೆದ ಕೆಲವು ವರ್ಷಗಳಿಂದ ಗಾಯಗಳಿಂದ ಬಳಲುತ್ತಿರುವುದು ತನ್ನ ಮೇಲೆ ಮಾನಸಿಕವಾಗಿ ಪರಿಣಾಮ ಉಂಟು ಮಾಡಿದೆ ಎಂದು ಹೀಲಿ ಹೇಳಿದರು.
Advertisement