ವಿರಾಟ್ ಕೊಹ್ಲಿ ಯಾವುದೇ ಒತ್ತಡಕ್ಕೆ ಜೋತುಬಿದ್ದಿಲ್ಲ; ಯುವಕರು ಅವರ ಮನಸ್ಥಿತಿಯನ್ನು ಅನುಕರಿಸಬೇಕು: ಸುನೀಲ್ ಗವಾಸ್ಕರ್

ಇಂದೋರ್‌ನಲ್ಲಿ ನಡೆದ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಭಾರತ 41 ರನ್‌ಗಳಿಂದ ಸೋತಿತು. ನ್ಯೂಜಿಲೆಂಡ್ ವಿರುದ್ಧ ಸರಣಿ ಸೋಲು ಕಂಡಿತು.
Sunil Gavaskar - Virat Kohli
ಸುನೀಲ್ ಗವಾಸ್ಕರ್ - ವಿರಾಟ್ ಕೊಹ್ಲಿ
Updated on

ನವದೆಹಲಿ: ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ ತಂಡ ಉತ್ತಮ ಆರಂಭ ನೀಡುವಲ್ಲಿ ವಿಫಲವಾದ ಕಾರಣದಿಂದಲೇ ಸೋಲು ಕಂಡಿದೆ. ಕಠಿಣ ಗುರಿಗಳನ್ನು ಬೆನ್ನಟ್ಟುವಾಗ ಇನಿಂಗ್ಸ್ ಹೇಗೆ ಕಟ್ಟಬೇಕು ಎಂಬುದನ್ನು ಅರ್ಥಮಾಡಿಕೊಳ್ಳಲು ತಂಡದ ಬ್ಯಾಟ್ಸ್‌ಮನ್‌ಗಳು ವಿರಾಟ್ ಕೊಹ್ಲಿ ಅವರ ಅನುಭವಗಳನ್ನು ತಿಳಿಯಬೇಕು ಎಂದು ಮಾಜಿ ನಾಯಕ ಸುನೀಲ್ ಗವಾಸ್ಕರ್ ಹೇಳಿದ್ದಾರೆ.

ಇಂದೋರ್‌ನಲ್ಲಿ ನಡೆದ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಭಾರತ 41 ರನ್‌ಗಳಿಂದ ಸೋತಿತು. ನ್ಯೂಜಿಲೆಂಡ್ ವಿರುದ್ಧ ಸರಣಿ ಸೋಲು ಕಂಡಿತು. ವಿರಾಟ್ ಕೊಹ್ಲಿ 108 ಎಸೆತಗಳಲ್ಲಿ 124 ರನ್ ಗಳಿಸಿ ಗರಿಷ್ಠ ಸ್ಕೋರರ್ ಆದರೂ, 338 ರನ್‌ಗಳ ಸವಾಲಿನ ಗುರಿ ಬೆನ್ನಟ್ಟಲು ಉತ್ತಮ ಜೊತೆಯಾಟ ಮೂಡಿಬರಲಿಲ್ಲ.

'ವಿರಾಟ್ ಕೊಹ್ಲಿಗೆ ಗಣನೀಯ ಬೆಂಬಲ ಸಿಗದ ಹೊರತು, ಅದು ಯಾವಾಗಲೂ ಕಷ್ಟಕರವಾಗಿರುತ್ತದೆ ಮತ್ತು ಅವರಿಗೆ ಉತ್ತಮ ಜೊತೆಯಾಟ ಆಡುವ ಆಟಗಾರ ಸಿಗಲೇ ಇಲ್ಲ. ಸರಣಿಯ ಉದ್ದಕ್ಕೂ ಭಾರತಕ್ಕೆ ನಿಜವಾದ ಸಮಸ್ಯೆ ಆರಂಭವಾಗಿತ್ತು. ಚೆನ್ನಾಗಿ ಆರಂಭವಾದರೆ ಅರ್ಧ ಮುಗಿದಂತೆ. ಭಾರತ ಎಂದಿಗೂ ಉತ್ತಮವಾಗಿ ಆರಂಭಿಸಲಿಲ್ಲ ಮತ್ತು ಈ ದೊಡ್ಡ ಸ್ಕೋರ್‌ಗಳನ್ನು ಬೆನ್ನಟ್ಟಲು ಅವರಿಗೆ ಸಾಧ್ಯವಾಗದಿರಲು ಅದುವೇ ಒಂದು ಪ್ರಮುಖ ಕಾರಣ' ಎಂದು ಗವಾಸ್ಕರ್ ಜಿಯೋಸ್ಟಾರ್‌ನಲ್ಲಿ ನಡೆದ 'ಅಮುಲ್ ಕ್ರಿಕೆಟ್ ಲೈವ್' ಕಾರ್ಯಕ್ರಮದಲ್ಲಿ ಹೇಳಿದರು.

'ಭಾರತ ತಂಡವು 159 ರನ್‌ಗಳಿಗೆ ತನ್ನ ಅರ್ಧ ವಿಕೆಟ್ ಕಳೆದುಕೊಂಡಿತ್ತು. ಕೆಎಲ್ ರಾಹುಲ್ ಅವರಂತಹ ಉತ್ತಮ ಫಾರ್ಮ್‌ನಲ್ಲಿರುವ ವ್ಯಕ್ತಿಯನ್ನು ನೀವು ಕಳೆದುಕೊಂಡಾಗ ಮತ್ತು ನಿತೀಶ್ ಕುಮಾರ್ ರೆಡ್ಡಿ ಅವರು 53 ರನ್‌ ಗಳಿಸಿದರೂ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ನ್ಯಾಯ ಒದಗಿಸಲಿಲ್ಲ ಮತ್ತು ನಂತರ ಬಂದ ಹರ್ಷಿತ್ ರಾಣಾ ಅವರಿಂದ ಏನನ್ನು ಪಡೆಯಲಿದ್ದೀರಿ ಎಂಬುದೇ ನಿಮಗೆ ಎಂದಿಗೂ ಖಚಿತವಿರಲಿಲ್ಲ. ಹೀಗಾಗಿಯೇ ಭಾರತಕ್ಕೆ ಸೋಲುಂಟಾಯಿತು' ಎಂದು ಗವಾಸ್ಕರ್ ವಿವರಿಸಿದರು.

Sunil Gavaskar - Virat Kohli
ಹರ್ಷಿತ್ ರಾಣಾ ಬ್ಯಾಟಿಂಗ್ ಮೋಡಿಗೆ ಮೆಚ್ಚುಗೆ; ವಿರಾಟ್ ಕೊಹ್ಲಿ ಜೊತೆಗೆ ನಿಂತು ನಿತೀಶ್ ಕುಮಾರ್ ರೆಡ್ಡಿ ಆಡಬೇಕಿತ್ತು ಎಂದ ಕ್ರಿಸ್ ಶ್ರೀಕಾಂತ್!

ಕೊಹ್ಲಿ ಕೊನೆಯವರೆಗೂ ಪ್ರಯತ್ನಿಸಿದ್ದಕ್ಕಾಗಿ ಮಾಜಿ ದಂತಕತೆ ಬ್ಯಾಟ್ಸ್‌ಮನ್ ಅವರನ್ನು ಶ್ಲಾಘಿಸಿದರು ಮತ್ತು ಇತರರು ಅವರ ಮನಸ್ಥಿತಿ ಮತ್ತು ಸ್ಥಿರತೆಯನ್ನು ಅನುಕರಿಸುವಂತೆ ಒತ್ತಾಯಿಸಿದರು.

'ಅಭಿಮಾನಿಗಳು ಮತ್ತು ವಿಮರ್ಶಕರು ತಮ್ಮನ್ನು ಹೇಗೆ ನೋಡುತ್ತಾರೆ ಎಂಬ ಕಾರಣದಿಂದಾಗಿ ಅನೇಕ ಆಟಗಾರರು ಒಂದು ನಿರ್ದಿಷ್ಟ ರೀತಿಯಲ್ಲಿ ಒತ್ತಡ ಅನುಭವಿಸುತ್ತಾರೆ. ಅವರು ಆ ಇಮೇಜ್ ಅನ್ನು ರಕ್ಷಿಸಲು ಅಥವಾ ಹೊಂದಿಸಲು ಪ್ರಯತ್ನಿಸುತ್ತಾರೆ. ಇದು ಅವರ ನೈಸರ್ಗಿಕ ಆಟವನ್ನು ನಿರ್ಬಂಧಿಸಬಹುದು. ಆದರೆ, ವಿರಾಟ್ ಕೊಹ್ಲಿ ಹಾಗಲ್ಲ, ಮುಕ್ತವಾಗಿ ಆಡುತ್ತಾರೆ' ಎಂದು ಅವರು ಹೇಳಿದರು.

'ಅವರು ತಮ್ಮ ಕೈಯಲ್ಲಿರುವ ಕೆಲಸಕ್ಕೆ ಬದ್ಧರಾಗಿದ್ದಾರೆ ಮತ್ತು ಆ ಕೆಲಸ ರನ್ ಗಳಿಸುವುದು. ಕೆಲವೊಮ್ಮೆ, ಅಂದರೆ ಎಚ್ಚರಿಕೆಯಿಂದ ಪ್ರಾರಂಭಿಸುವುದು ಮತ್ತು ನಂತರ ಆಕ್ರಮಣಕಾರಿ ಬ್ಯಾಟಿಂಗ್ ಮಾಡುವುದು. ಕೆಲವೊಮ್ಮೆ, ಬೇಗನೆ ಆಕ್ರಮಣಕಾರಿಯಾಗಿ ಆಡಬೇಕು ಮತ್ತು ನೋಡಿಕೊಂಡು ಆಡಬೇಕು ಎಂಬ ನಿರೀಕ್ಷೆಗಳಿಂದ ಅವರನ್ನು ನಿಯಂತ್ರಿಸಲು ಆಗುವುದಿಲ್ಲ' ಎಂದು ಅವರು ಹೇಳಿದರು.

'ಆ ಮನೋಧರ್ಮವೇ ಮುಖ್ಯ. 'ನಾನು ಸಿಕ್ಸ್ ಹೊಡೆಯಬೇಕೆಂದು ನಿರೀಕ್ಷಿಸಲಾಗಿದೆ' ಎಂದು ಅವರು ಭಾವಿಸುವುದಿಲ್ಲ. ಅವರು ಪರಿಸ್ಥಿತಿಗೆ ಅನುಗುಣವಾಗಿ ಆಡುತ್ತಾರೆ. ಅವರು ಎಂದಿಗೂ ಬಿಟ್ಟುಕೊಡುವುದಿಲ್ಲ. ಕೊನೆಯವರೆಗೂ ಅವರು ಪ್ರಯತ್ನಿಸುತ್ತಲೇ ಇರುತ್ತಾರೆ. ಯುವಕರಿಗೆ, ಅದು ದೊಡ್ಡ ಪಾಠ, ಒಂದು ಇಮೇಜ್‌ಗೆ ತಕ್ಕಂತೆ ಬದುಕಬೇಡಿ. ಪರಿಸ್ಥಿತಿಗೆ ತಕ್ಕಂತೆ ಆಟವಾಡಿ ಮತ್ತು ಆಗ ನೀವು ಊಹಿಸಿದ್ದಕ್ಕಿಂತ ಹೆಚ್ಚು ಸ್ಥಿರವಾಗಿರುತ್ತೀರಿ' ಎಂದರು.

'ಹರ್ಷಿತ್ ರಾಣಾ ಅವರ ಅರ್ಧಶತಕದ ಬಗ್ಗೆ ಮಾತನಾಡಿದ ಗವಾಸ್ಕರ್, ಹಿಂದಿನ ವೈಫಲ್ಯಗಳು ಮಾನಸಿಕವಾಗಿ ತಮ್ಮ ಮೇಲೆ ಪ್ರಭಾವ ಬೀರದಂತೆ ಆ ಕ್ಷಣದಲ್ಲಿ ಉಳಿಯುವ ಮೂಲಕ ತಮ್ಮ ಸಾಮರ್ಥ್ಯ ಏನೆಂದು ತೋರಿಸಿ ಅವರು ತನ್ನನ್ನು ಪ್ರಭಾವಿಸಿದ್ದಾರೆ" ಎಂದು ಹೇಳಿದರು.

'ಹರ್ಷಿತ್ ರಾಣಾ ಅವರದು ಉತ್ತಮ ಇನಿಂಗ್ಸ್ ಆಗಿತ್ತು. ಅವರು ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್ ಮಾಡಬೇಕಾದಂತೆಯೇ, ಚಿಂತೆಯಿಲ್ಲದೆ ಮತ್ತು ನಿರೀಕ್ಷೆಗಳಿಲ್ಲದೆ ಬ್ಯಾಟಿಂಗ್ ಮಾಡಿದರು. ವಿಶೇಷವಾಗಿ ವಿರಾಟ್ ಕೊಹ್ಲಿಯಂತಹವರು ಇನ್ನೊಂದು ತುದಿಯಲ್ಲಿದ್ದರೂ, ಅದನ್ನು ಗಣನೆಗೆ ತೆಗೆದುಕೊಳ್ಳದೆ ಹರ್ಷಿತ್ ಹಿಂದಿನ ವೈಫಲ್ಯಗಳಿಂದ ಪ್ರಭಾವಿತರಾಗದೆ ಬ್ಯಾಟಿಂಗ್ ಮಾಡಿದ್ದು ನನ್ನನ್ನು ಪ್ರಭಾವಿತಗೊಳಿಸಿತು' ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com