IPL 2026: ಅಭ್ಯಾಸ ಆರಂಭಿಸಿದ ಎಂಎಸ್ ಧೋನಿ; ಈ ಬಾರಿ ಐಪಿಎಲ್ ಅಂಕಪಟ್ಟಿಯಲ್ಲಿ ಮೇಲೇರುತ್ತಾ CSK?

ಕೆಲವು ದಿನಗಳ ಹಿಂದೆ, ಜಾರ್ಖಂಡ್ ರಾಜ್ಯ ಕ್ರಿಕೆಟ್ ಸಂಸ್ಥೆ (ಜೆಎಸ್‌ಸಿಎ) ಧೋನಿ ಅವರ ತರಬೇತಿ ಅವಧಿಯ ಒಂದು ಗ್ಲಿಂಪ್ಸ್ ಅನ್ನು ಹಂಚಿಕೊಂಡಿತು.
MS Dhoni
ಎಂಎಸ್ ಧೋನಿ
Updated on

ಕಳೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ನೀಡಿದ ನಂತರ, ಎಂಎಸ್ ಧೋನಿ ಇದೀಗ ತಮ್ಮ ತರಬೇತಿ ವಿಧಾನಗಳನ್ನು ಪರಿಷ್ಕರಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ಮಾಜಿ ನಾಯಕ 2025ರ ಸೆಪ್ಟೆಂಬರ್‌ನಿಂದಲೇ ತರಬೇತಿ ಪಡೆಯುತ್ತಿದ್ದಾರೆ. ಐಪಿಎಲ್ 2026ರ ಆವೃತ್ತಿಗೆ ಎರಡು ತಿಂಗಳು ಬಾಕಿ ಇರುವಾಗ ಈಗಿನಿಂದಲೇ ಪೂರ್ಣ ಪ್ರಮಾಣದಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ಕೆಲವು ದಿನಗಳ ಹಿಂದೆ, ಜಾರ್ಖಂಡ್ ರಾಜ್ಯ ಕ್ರಿಕೆಟ್ ಸಂಸ್ಥೆ (ಜೆಎಸ್‌ಸಿಎ) ಧೋನಿ ಅವರ ತರಬೇತಿ ಅವಧಿಯ ಒಂದು ಗ್ಲಿಂಪ್ಸ್ ಅನ್ನು ಹಂಚಿಕೊಂಡಿತು. ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಬ್ಯಾಟಿಂಗ್ ಸೆಷನ್‌ಗೆ ಸಿದ್ಧರಾಗುತ್ತಿದ್ದರು, ಭಾರತೀಯ ಮಾಜಿ ಕ್ರಿಕೆಟಿಗ ಮತ್ತು ಜೆಎಸ್‌ಸಿಎ ಕಾರ್ಯದರ್ಶಿ ಸೌರಭ್ ತಿವಾರಿ ಅವರಿಗೆ ಸಹಾಯ ಮಾಡುತ್ತಿದ್ದರು.

ಮೊದಲು ಸ್ಪಿನ್ನರ್‌ಗಳು, ನಂತರ ವೇಗಿಗಳು

ಧೋನಿ ಮೊದಲು ಸ್ಪಿನ್ನರ್‌ಗಳ ವಿರುದ್ಧ ತರಬೇತಿಯನ್ನು ಪ್ರಾರಂಭಿಸಿದರು ಮತ್ತು ಕ್ರಮೇಣ ವೇಗದ ಬೌಲರ್‌ಗಳನ್ನು ಎದುರಿಸಲು ತೆರಳಿದರು ಎಂದು ಭಾರತದ ಮಾಜಿ ಸ್ಪಿನ್ನರ್ ಮತ್ತು ಜೆಎಸ್‌ಸಿಎ ಜಂಟಿ ಕಾರ್ಯದರ್ಶಿ ಶಹಬಾಜ್ ನದೀಮ್ ಬಹಿರಂಗಪಡಿಸಿದ್ದಾರೆ. ವಿಕೆಟ್‌ಕೀಪರ್ ಸಾಮಾನ್ಯವಾಗಿ ಮಧ್ಯಾಹ್ನ 12 ರಿಂದ 3 ರವರೆಗೆ ತರಬೇತಿ ಪಡೆಯುತ್ತಿದ್ದಾರೆ. ಬಹುಶಃ ಇದು ಎಂಎ ಚಿದಂಬರಂ ಕ್ರೀಡಾಂಗಣದಲ್ಲಿನ ಶಾಖ ಮತ್ತು ಹುಮಿಡಿಟಿಯನ್ನು ನಿಭಾಯಿಸಲು ಇರಬೇಕು. ಅಲ್ಲಿ ಅವರು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಪರ 7 ಪಂದ್ಯಗಳನ್ನು ಆಡುವ ನಿರೀಕ್ಷೆಯಿದೆ.

'ಧೋನಿ ರಾಂಚಿಯಲ್ಲಿದ್ದಾಗಲೆಲ್ಲ ಜೆಎಸ್‌ಸಿಎಯಲ್ಲಿ ಜಿಮ್ ಮಾಡುತ್ತಾರೆ. ಈಗ, ಅವರು ಕಳೆದ ವಾರದಿಂದ ನೆಟ್ಸ್‌ನಲ್ಲಿ ಬ್ಯಾಟಿಂಗ್ ಮಾಡಲು ಪ್ರಾರಂಭಿಸಿದ್ದಾರೆ. ಸಂಕೀರ್ಣದಲ್ಲಿರುವ ಓವಲ್ ಬಿ ಮೈದಾನದ ಪಕ್ಕದಲ್ಲಿ ನಾವು ಪಾರದರ್ಶಕ ಒಳಾಂಗಣ ನೆಟ್ ಸೌಲಭ್ಯವನ್ನು ನಿರ್ಮಿಸಿದ್ದೇವೆ. ಇದು ಮೂರು ಟರ್ಫ್ ವಿಕೆಟ್‌ಗಳನ್ನು ಹೊಂದಿದೆ - ಒಂದು ಕಪ್ಪು ಮಣ್ಣಿನಿಂದ ಮಾಡಲ್ಪಟ್ಟಿದೆ, ಉಳಿದ ಎರಡು ಮಿಶ್ರ ಮಣ್ಣಿನಿಂದ ಮಾಡಲ್ಪಟ್ಟಿದೆ. ಧೋನಿ ಮಧ್ಯಾಹ್ನ 12-12.30 ರಿಂದ 2-2.30ರವರೆಗೆ ಅಲ್ಲಿ ತರಬೇತಿ ಪಡೆಯುತ್ತಾರೆ' ಎಂದು ಶಹಬಾಜ್ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು.

MS Dhoni
'ಎಂಎಸ್ ಧೋನಿ ನಾಯಕ': ಐಪಿಎಲ್ ಪ್ಲೇಯಿಂಗ್ ಇಲೆವೆನ್‌ನಿಂದ ವಿರಾಟ್ ಕೊಹ್ಲಿಯನ್ನೇ ಕೈಬಿಟ್ಟ RCB ಆಟಗಾರ ಜಿತೇಶ್ ಶರ್ಮಾ!

ಐಪಿಎಲ್ 2026ಕ್ಕಾಗಿ ಹಗುರವಾದ ಬ್ಯಾಟ್

ಕಳೆದ ಆವೃತ್ತಿಯಲ್ಲಿ, ಧೋನಿ ಹಗುರವಾದ ಬ್ಯಾಟ್‌ ಅನ್ನು ಪಡೆದಿದ್ದರು. 1250-1300 ಗ್ರಾಂನಿಂದ 1230 ಗ್ರಾಂ ಬ್ಯಾಟ್ ಪಡೆದಿದ್ದರು. ಈ ಕ್ರಮವು ಅವರು ಅಂದುಕೊಂಡಂತೆ ಕೆಲಸ ಮಾಡಲಿಲ್ಲ. ಅವರು ಕೇವಲ 135.17 ಸ್ಟ್ರೈಕ್ ರೇಟ್ ಗಳಿಸಿದರು. ಇದು ಐಪಿಎಲ್ 2022ರ ನಂತರದ ಅವರ ಅತ್ಯಂತ ಕಡಿಮೆ ಸ್ಟ್ರೈಕ್ ರೇಟ್ ಆಗಿದೆ. ಆದರೆ, ಧೋನಿ ಈ ಬಾರಿಯು ಅದೇ ತೂಕದೊಂದಿಗೆ ಮುಂದುವರಿಯಲು ನಿರ್ಧರಿಸಿದ್ದಾರೆ. ಅವರ ಬ್ಯಾಟ್ ಪ್ರಾಯೋಜಕರಾದ ಸರೀನ್ ಸ್ಪೋರ್ಟ್ಸ್ ಇಂಡಸ್ಟ್ರೀಸ್ (SS) ರಾಂಚಿಗೆ ಕಸ್ಟಮೈಸ್ ಮಾಡಿದ ಬ್ಯಾಟ್‌ಗಳನ್ನು ಕಳುಹಿಸಿದೆ.

'ಹೌದು, ಅವರು ಹೇಳಿದ ಪ್ರಕಾರವೇ ಕೆಲವು ಬ್ಯಾಟ್‌ಗಳನ್ನು ಧೋನಿಗೆ ಕಳುಹಿಸಲಾಗಿದೆ. ಅದೇ ಬ್ಯಾಟ್‌ಗಳನ್ನು (1230 ಗ್ರಾಂ ತೂಕ) ಆರ್ಡರ್ ಮಾಡಲಾಗಿದೆ' ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜತಿನ್ ಸರೀನ್ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com