'ಎಂಎಸ್ ಧೋನಿ ನಾಯಕ'; ಐಪಿಎಲ್ ಪ್ಲೇಯಿಂಗ್ ಇಲೆವೆನ್‌ನಿಂದ ವಿರಾಟ್ ಕೊಹ್ಲಿಯನ್ನೇ ಕೈಬಿಟ್ಟ RCB ಆಟಗಾರ ಜಿತೇಶ್ ಶರ್ಮಾ!

ಅತ್ಯುತ್ತಮ ಆಲ್‌ರೌಂಡರ್‌ಗಳಲ್ಲಿ ಒಬ್ಬರಾದ ಕಾಲಿಸ್ ಅವರನ್ನು 4ನೇ ಸ್ಥಾನದಲ್ಲಿ ಆಯ್ಕೆ ಮಾಡಿದ್ದಾರೆ. ನಂತರ ಮಾಜಿ ಆರ್‌ಸಿಬಿ ತಾರೆ ಡಿವಿಲಿಯರ್ಸ್ ಅವರನ್ನು ಆಯ್ಕೆ ಮಾಡಿದ್ದಾರೆ.
Jitesh Sharma
ಜಿತೇಶ್ ಶರ್ಮಾ
Updated on

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ವಿಕೆಟ್ ಕೀಪರ್-ಬ್ಯಾಟರ್ ಜಿತೇಶ್ ಶರ್ಮಾ ತಮ್ಮ ತಂಡದ ಸಹ ಆಟಗಾರ ವಿರಾಟ್ ಕೊಹ್ಲಿಯನ್ನು ತಮ್ಮ ಸಾರ್ವಕಾಲಿಕ ಐಪಿಎಲ್ ಪ್ಲೇಯಿಂಗ್ XI ನಿಂದ ಕೈಬಿಟ್ಟಿದ್ದಾರೆ. 2025ರ ಐಪಿಎಲ್‌ ಆವೃತ್ತಿಯಲ್ಲಿ ಆರ್‌ಸಿಬಿ ಪರ ಉತ್ತಮ ಪ್ರದರ್ಶನ ನೀಡಿದ್ದ ಜಿತೇಶ್, ಇತ್ತೀಚೆಗೆ ಟಿ20 ವಿಶ್ವಕಪ್ 2026ಕ್ಕೆ ಭಾರತದ ತಂಡದಿಂದ ಹೊರಗುಳಿದಿದ್ದರು. ಜಿತೇಶ್ ತಮ್ಮ ಸಾರ್ವಕಾಲಿಕ ಐಪಿಎಲ್‌ ಪ್ಲೇಯಿಂಗ್ ಇಲೆವೆನ್‌ಗೆ ದಂತಕಥೆ ಎಂಎಸ್ ಧೋನಿ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿದ್ದಾರೆ ಮತ್ತು ಆರ್‌ಸಿಬಿಯಿಂದ ಇಬ್ಬರು ಮಾಜಿ ಮತ್ತು ಒಬ್ಬರು ಹಾಲಿ ಆಟಗಾರರನ್ನು ಹೆಸರಿಸಿದ್ದಾರೆ.

ಜಿತೇಶ್ ಶರ್ಮಾ ಅವರ ಸಾರ್ವಕಾಲಿಕ IPL ಪ್ಲೇಯಿಂಗ್ XI

ರೋಹಿತ್ ಶರ್ಮಾ, ಆಡಮ್ ಗಿಲ್‌ಕ್ರಿಸ್ಟ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಜಾಕ್ವೆಸ್ ಕಾಲಿಸ್, ಎಬಿ ಡಿವಿಲಿಯರ್ಸ್, ಹಾರ್ದಿಕ್ ಪಾಂಡ್ಯ, ಎಂಎಸ್ ಧೋನಿ (ನಾಯಕ), ಅಕ್ಷರ್ ಪಟೇಲ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ, ಜಾಶ್ ಹೇಜಲ್‌ವುಡ್.

ಕ್ರಿಕ್‌ಟ್ರಾಕರ್‌ಗೆ ನೀಡಿದ ಸಂದರ್ಶನದಲ್ಲಿ, ಜಿತೇಶ್ ತಮ್ಮ ಸಾರ್ವಕಾಲಿಕ ಪ್ಲೇಯಿಂಗ್ XI ನಲ್ಲಿ ರೋಹಿತ್ ಮತ್ತು ಗಿಲ್‌ಕ್ರಿಸ್ಟ್ ಅವರನ್ನು ಆರಂಭಿಕ ಆಟಗಾರರನ್ನಾಗಿ ಆಯ್ಕೆ ಮಾಡಿದ್ದಾರೆ. 2011 ರಲ್ಲಿ ಡೆಕ್ಕನ್ ಚಾರ್ಜರ್ಸ್‌ನಿಂದ ಹೊರನಡೆದ ನಂತರ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್‌ನ ಭಾಗವಾಗಿದ್ದಾರೆ. ಆಸ್ಟ್ರೇಲಿಯಾದ ಮಾಜಿ ವಿಕೆಟ್ ಕೀಪರ್ ಡೆಕ್ಕನ್ ಚಾರ್ಜಸ್ ತಂಡದಲ್ಲಿದ್ದರು. 3 ನೇ ಸ್ಥಾನದಲ್ಲಿ, ಭಾರತದ T20I ನಾಯಕ ಸೂರ್ಯಕುಮಾರ್ ಯಾದವ್ ಅವರನ್ನು ಆಯ್ಕೆ ಮಾಡಿದ್ದಾರೆ.

Jitesh Sharma
Asia Cup Rising Stars 2025: ಸೂಪರ್ ಓವರ್‌ಗೆ ವೈಭವ್ ಸೂರ್ಯವಂಶಿ ಕಳುಹಿಸದಿರಲು ನಾಯಕ ಜಿತೇಶ್ ಶರ್ಮಾ ಕಾರಣ!

ಜಿತೇಶ್ ಅವರು ಅತ್ಯುತ್ತಮ ಆಲ್‌ರೌಂಡರ್‌ಗಳಲ್ಲಿ ಒಬ್ಬರಾದ ಕಾಲಿಸ್ ಅವರನ್ನು 4ನೇ ಸ್ಥಾನದಲ್ಲಿ ಆಯ್ಕೆ ಮಾಡಿದ್ದಾರೆ. ನಂತರ ಮಾಜಿ ಆರ್‌ಸಿಬಿ ತಾರೆ ಡಿವಿಲಿಯರ್ಸ್ ಅವರನ್ನು ಆಯ್ಕೆ ಮಾಡಿದ್ದಾರೆ. ಹಾರ್ದಿಕ್ ಮತ್ತು ಅಕ್ಷರ್ ಪಟೇಲ್ ಅವರ ಪ್ಲೇಯಿಂಗ್ XI ನ ಭಾಗವಾಗಿರುವ ಮತ್ತಿಬ್ಬರು ಆಲ್‌ರೌಂಡರ್‌ಗಳು. ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾದ ಎಂಎಸ್‌ಡಿ ಅವರ ತಂಡದ ನಾಯಕರಾಗಿದ್ದಾರೆ. ಬೌಲರ್‌ಗಳಲ್ಲಿ ಮುಂಬೈ ತಂಡದ ಜಸ್ಪ್ರೀತ್ ಬುಮ್ರಾ, ಕೆಕೆಆರ್‌ನ ವರುಣ್ ಚಕ್ರವರ್ತಿ ಮತ್ತು ಆರ್‌ಸಿಬಿಯ ಹೇಜಲ್‌ವುಡ್ ಸೇರಿದ್ದಾರೆ.

ಐಪಿಎಲ್‌ನಲ್ಲಿ ಜಿತೇಶ್ 15 ಇನಿಂಗ್ಸ್‌ಗಳಿಂದ 261 ರನ್‌ಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಫ್ರಾಂಚೈಸಿಗೆ ಫಿನಿಷರ್ ಆಗಿ ತಮ್ಮ ಪಾತ್ರವನ್ನು ನಿರ್ವಹಿಸಿದರು. ಟಿ20 ವಿಶ್ವಕಪ್ ತಂಡದಿಂದ ಹೊರಗುಳಿದ ನಂತರ, ಜಿತೇಶ್ 2026ರ ಐಪಿಎಲ್‌ನಲ್ಲಿ ಬಲವಾದ ಪುನರಾಗಮನ ಮಾಡುವ ಭರವಸೆಯಲ್ಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com