ಮುಂದಿನ ವಾರ ಮುಂಬೈ ಇಂಡಿಯನ್ಸ್ ಸೀಸನ್ ರಿವ್ಯೂ: ಹಾರ್ದಿಕ್ ಪಾಂಡ್ಯ ಭವಿಷ್ಯ ನಿರ್ಧಾರ; ನಾಯಕ ಸ್ಥಾನಕ್ಕೆ ಇಬ್ಬರ ನಡುವೆ ಪೈಪೋಟಿ!

ಐಪಿಎಲ್ 2026ರ ಅಂತ್ಯದ ನಂತರ, ಪಾಂಡ್ಯ ಅವರ ಸಂಭಾವ್ಯ ಟ್ರೇಡಿಂಗ್ ಬಗ್ಗೆ ಊಹಾಪೋಹಗಳು ಹರಡಿವೆ. ಕನಿಷ್ಠ ಏಳು ತಂಡಗಳು ಹಾರ್ದಿಕ್ ಪಾಂಡ್ಯ ಅವರನ್ನು ಹೊಂದಲು ಆಸಕ್ತಿ ಹೊಂದಿವೆ ಎಂದು ವರದಿಯಾಗಿದೆ.
Mumbai Indians
ಮುಂಬೈ ಇಂಡಿಯನ್ಸ್ ತಂಡ
Updated on

ಇತ್ತೀಚೆಗೆ ಮುಕ್ತಾಯಗೊಂಡ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ನೇ ಆವೃತ್ತಿಯ ಪರಿಶೀಲನೆ ನಡೆಸಲು ಮುಂಬೈ ಇಂಡಿಯನ್ಸ್ (ಎಂಐ) ತಂಡದ ಆಡಳಿತ ಮಂಡಳಿ ಮುಂದಿನ ವಾರ ಸಭೆ ಸೇರಲಿದೆ. ಹಾರ್ದಿಕ್ ಪಾಂಡ್ಯ ಅವರನ್ನೊಳಗೊಂಡ ಟ್ರೇಡಿಂಗ್ ಮಾತುಕತೆಗಳಿಂದ ಹಿಡಿದು ತಂಡಕ್ಕೆ ಹೊಸ ನಾಯಕನನ್ನು ನೇಮಿಸುವುದು ಸೇರಿದಂತೆ ವಿವಿಧ ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು ಎಂದು ವರದಿಗಳು ತಿಳಿಸಿವೆ. ಮುಂಬೈ ಇಂಡಿಯನ್ಸ್ ತಂಡವು ಐಪಿಎಲ್ 2026ರ ಪ್ಲೇಆಫ್‌ಗೆ ಅರ್ಹತೆ ಪಡೆಯಲು ವಿಫಲವಾಯಿತು ಮತ್ತು ಅಂಕಪಟ್ಟಿಯಲ್ಲಿ 9ನೇ ಸ್ಥಾನ ಪಡೆಯಿತು.

'ಟೈಮ್ಸ್ ಆಫ್ ಇಂಡಿಯಾ' ವರದಿ ಪ್ರಕಾರ, ಐಪಿಎಲ್ 2026ರಲ್ಲಿ ತಂಡದ ಪ್ರದರ್ಶನದ ಕುರಿತು ಕೋಚ್ ಮಹೇಲಾ ಜಯವರ್ಧನೆ ಸಲ್ಲಿಸಿರುವ ವರದಿಯನ್ನು ಪರಿಶೀಲಿಸಲು ಮುಂಬೈ ಇಂಡಿಯನ್ಸ್‌ನ (MI) ಉನ್ನತ ಆಡಳಿತ ಮಂಡಳಿಯು ಮುಂದಿನ ವಾರ ಸಭೆ ಸೇರಲಿದೆ. ಹಾರ್ದಿಕ್ ಪಾಂಡ್ಯ ಅವರ ಸಂಭಾವ್ಯ ಟ್ರೇಡಿಂಗ್ ಕುರಿತು ನಿರ್ಧಾರ ಕೈಗೊಳ್ಳುವುದು, ತಂಡದ ಮುಂದಿನ ನಾಯಕ ಯಾರು ಎಂಬುದನ್ನು ನಿರ್ಧರಿಸುವುದು ಮತ್ತು ತಂಡದ ಕೋಚ್ ಆಗಿ ಶ್ರೀಲಂಕಾದ ಮಾಜಿ ಆಟಗಾರನ ಭವಿಷ್ಯದ ಕುರಿತು ಚರ್ಚಿಸುವುದು ಈ ಸಭೆಯ ಪ್ರಮುಖ ವಿಷಯಗಳಾಗಿವೆ.

ಫ್ರಾಂಚೈಸಿಗೆ ಮರಳಿದ ಮೂರು ವರ್ಷಗಳಲ್ಲಿ ಎರಡನೇ ಬಾರಿಗೆ ಮುಂಬೈ ತಂಡವನ್ನು ಐಪಿಎಲ್ ಪ್ಲೇಆಫ್‌ಗೆ ಕರೆದೊಯ್ಯಲು ವಿಫಲವಾದ ನಂತರ, ಹಾರ್ದಿಕ್ ಪಾಂಡ್ಯ ಫ್ರಾಂಚೈಸಿಯಿಂದ ಹೊರಬರುವ ಇಚ್ಛೆಯನ್ನು ತಂಡಕ್ಕೆ ತಿಳಿಸಿದ್ದಾರೆ. ಆಲ್‌ರೌಂಡರ್ ತಾನು ಮಾನಸಿಕ ಒತ್ತಡಕ್ಕೊಳಗಾಗಿದ್ದೇನೆ. ಆದ್ದರಿಂದ ಬೇರೆ ತಂಡಕ್ಕೆ ಹೋಗಲು ಬಯಸುತ್ತೇನೆ ಎಂದು ಹೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಐಪಿಎಲ್ 2026ರ ಅಂತ್ಯದ ನಂತರ, ಪಾಂಡ್ಯ ಅವರ ಸಂಭಾವ್ಯ ಟ್ರೇಡಿಂಗ್ ಬಗ್ಗೆ ಊಹಾಪೋಹಗಳು ಹರಡಿವೆ. ಕನಿಷ್ಠ ಏಳು ತಂಡಗಳು ಹಾರ್ದಿಕ್ ಪಾಂಡ್ಯ ಅವರನ್ನು ಹೊಂದಲು ಆಸಕ್ತಿ ಹೊಂದಿವೆ. ಆಸಕ್ತಿ ವ್ಯಕ್ತಪಡಿಸಿರುವ ತಂಡಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ), ಕೋಲ್ಕತ್ತಾ ನೈಟ್ ರೈಡರ್ಸ್ (KKR) ಮತ್ತು ರಾಜಸ್ಥಾನ್ ರಾಯಲ್ಸ್ (RR) ಸೇರಿವೆ. ಸನ್‌ರೈಸರ್ಸ್ ಹೈದರಾಬಾದ್ (SRH) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮಾತ್ರ ಪಾಂಡ್ಯ ಅವರಿಗಾಗಿ ಆಸಕ್ತಿ ತೋರಿಸಿಲ್ಲ ಎಂದು ವರದಿಯಾಗಿದೆ.

Mumbai Indians
MIಗೆ ನೀಡುವಂತದ್ದು GT ಬಳಿ ಏನೂ ಇಲ್ಲ, ಹಾರ್ದಿಕ್ ಪಾಂಡ್ಯ ಗುಜರಾತ್ ಟೈಟಾನ್ಸ್‌ಗೆ ಹೋಗಲ್ಲ; ಭಾರತದ ಮಾಜಿ ಆಟಗಾರ

ಹಾರ್ದಿಕ್ ಅವರಲ್ಲದೆ, 2026ರ ಸೀಸನ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಕಳಪೆ ಪ್ರದರ್ಶನ ನೀಡಿದ ಸೂರ್ಯಕುಮಾರ್ ಯಾದವ್ ಅಥವಾ ರೋಹಿತ್ ಶರ್ಮಾ ಕೂಡ ಆಟಗಾರರ ವಿನಿಮಯ ಮಾತುಕತೆಗಳಲ್ಲಿ ಇತರ ಫ್ರಾಂಚೈಸಿಗಳ ಆಸಕ್ತಿ ಕೆರಳಿಸಿದೆ ಎಂದು ವರದಿ ತಿಳಿಸಿದೆ.

ನಾಯಕ ಸ್ಥಾನಕ್ಕೆ ಜಸ್ಪ್ರೀತ್ ಬುಮ್ರಾ-ತಿಲಕ್ ವರ್ಮಾ ಪೈಪೋಟಿ

ಪಾಂಡ್ಯ ಅವರ ನಂತರ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವಕ್ಕಾಗಿ ಇಬ್ಬರು ಆಟಗಾರರಾದ ಜಸ್ಪ್ರೀತ್ ಬುಮ್ರಾ ಮತ್ತು ತಿಲಕ್ ವರ್ಮಾ ಮುಂಚೂಣಿಯಲ್ಲಿದ್ದಾರೆ ಎಂದು ವರದಿ ಹೇಳುತ್ತದೆ. ಈ ಇಬ್ಬರೂ ಆಟಗಾರರು ಐಪಿಎಲ್‌ಗೆ ಪದಾರ್ಪಣೆ ಮಾಡಿದಾಗಿನಿಂದ ಮುಂಬೈ ತಂಡದ ಭಾಗವಾಗಿದ್ದಾರೆ ಮತ್ತು ಕೆಲವು ಸಂದರ್ಭಗಳಲ್ಲಿ ಫ್ರಾಂಚೈಸಿಯ ನಾಯಕತ್ವವನ್ನೂ ವಹಿಸಿದ್ದಾರೆ. ಹಿರಿತನದ ದೃಷ್ಟಿಯಿಂದ, ಬುಮ್ರಾ ಮುಂಬೈ ತಂಡಕ್ಕೆ ಅತ್ಯುತ್ತಮ ಆಯ್ಕೆಯಾಗಿರುತ್ತಾರೆ. ಐದು ಬಾರಿ ಚಾಂಪಿಯನ್‌ ತಂಡಕ್ಕೆ ಅವರು ಅತ್ಯಂತ ಸ್ಥಿರವಾದ ವಿಕೆಟ್ ಟೇಕಿಂಗ್ ಬೌಲರ್‌ಗಳಲ್ಲಿ ಒಬ್ಬರಾಗಿದ್ದಾರೆ.

ಮತ್ತೊಂದೆಡೆ, ತಿಲಕ್ ವರ್ಮಾ ಐಪಿಎಲ್ 2022ರಲ್ಲಿ ಮುಂಬೈ ಪರ ಪದಾರ್ಪಣೆ ಮಾಡಿದರು. ಅವರು ಇಲ್ಲಿಯವರೆಗೆ ಆಡಿದ ಪ್ರತಿ ಆವೃತ್ತಿಯಲ್ಲಿ 300+ ರನ್‌ಗಳನ್ನು ಗಳಿಸಿದ್ದರೂ, ಇತ್ತೀಚಿನ ದಿನಗಳಲ್ಲಿ ಅವರ ಬ್ಯಾಟಿಂಗ್ ಪ್ರದರ್ಶನ ಕುಸಿದಿದೆ. ಇದು ಫ್ರಾಂಚೈಸಿ ಅವರನ್ನು ಆಯ್ಕೆಯಾಗಿ ಪರಿಗಣಿಸುವ ನಿರ್ಧಾರವನ್ನು ಪುನರ್ವಿಮರ್ಶಿಸುವಂತೆ ಮಾಡುತ್ತದೆ. ಆದಾಗ್ಯೂ, ಮುಂಬೈ ದೀರ್ಘಕಾಲ ಈ ಸ್ಥಾನದಲ್ಲಿ ಉಳಿಯುವ ನಾಯಕನನ್ನು ಹೊಂದಲು ಬಯಸುತ್ತದೆ. ಆದ್ದರಿಂದ, ಬುಮ್ರಾ ಮತ್ತು ತಿಲಕ್ ನಡುವೆ ಮುಂಬೈ ಯಾರನ್ನು ಆಯ್ಕೆ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಮಹೇಲ ಜಯವರ್ಧನೆ ತಂಡದಿಂದ ಹೊರಗೆ?

ಮುಂಬೈ ಇಂಡಿಯನ್ಸ್ ತಂಡದ ಪ್ರದರ್ಶನ ಕಳೆದ ಮೂರು ಆವೃತ್ತಿಗಳಲ್ಲಿ ಅಷ್ಟೇನು ಉತ್ತಮವಾಗಿಲ್ಲ. ಜಯವರ್ಧನೆ ಮುಂಬೈ ತಂಡದ ತರಬೇತುದಾರರಾಗಿ ಮರಳಿದಾಗಿನಿಂದ, ತಂಡವು ಐಪಿಎಲ್ 2025ರಲ್ಲಿ ನಾಲ್ಕನೇ ಸ್ಥಾನ ಮತ್ತು ಐಪಿಎಲ್ 2026 ರಲ್ಲಿ ಒಂಬತ್ತನೇ ಸ್ಥಾನದಲ್ಲಿತ್ತು. ಸಿಎಸ್‌ಕೆಯಿಂದ ಈಗಾಗಲೇ ಸ್ಟೀಫನ್ ಫ್ಲೆಮಿಂಗ್ ಅವರನ್ನು ಹೊರಗೆ ಕಳುಸಲಾಗಿದ್ದು, ಮುಂಬೈ ಕೂಡ ಅದೇ ಮಾದರಿಯನ್ನು ಅನುಸರಿಸಿದರೆ ಆಶ್ಚರ್ಯವೇನಿಲ್ಲ.

Mumbai Indians
MI ನಾಯಕ ಹಾರ್ದಿಕ್ ಪಾಂಡ್ಯ ಪಡೆಯಲು 7 ಫ್ರಾಂಚೈಸಿಗಳ ಪೈಪೋಟಿ; ಸ್ಪರ್ಧೆಯಿಂದ ಹೊರಗುಳಿದ ಎರಡು ತಂಡಗಳು!

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com