Lanka Premier League: ಆಟಗಾರನಿಗೆ ಲಂಚ; U-19 ವಿಶ್ವಕಪ್ ವಿಜೇತ ಭಾರತದ ಮಾಜಿ ಆಟಗಾರನ ಬಂಧನ!

'ಜಾಫ್ನಾ ಕಿಂಗ್ಸ್' ಫ್ರಾಂಚೈಸಿಯ ಸಹ-ಮಾಲೀಕರಾಗಿರುವ ಕಲ್ರಾ ಅವರನ್ನು, ಜುಲೈ 17 ರಂದು LPL ಸೀಸನ್ ಆರಂಭಕ್ಕೂ ಮುನ್ನ ವಶಕ್ಕೆ ಪಡೆಯಲಾಯಿತು.
Manjot Kalra
ಮಂಜೋತ್ ಕಲ್ರಾ
Updated on

ಕೊಲ್ಕತ್ತಾ: ಲಂಕಾ ಪ್ರೀಮಿಯರ್ ಲೀಗ್‌ಗೆ (LPL)ನಲ್ಲಿ ಲಂಚದ ಪ್ರಯತ್ನದ ಆರೋಪದ ಮೇಲೆ, ಭಾರತದ ಮಾಜಿ ಅಂಡರ್-19 ಕ್ರಿಕೆಟಿಗ ಮಂಜೋತ್ ಕಲ್ರಾ ಅವರನ್ನು ಶ್ರೀಲಂಕಾದ ಕ್ರೀಡಾ ಭ್ರಷ್ಟಾಚಾರ ವಿರೋಧಿ ಘಟಕವು ಬಂಧಿಸಿದೆ.

'ಜಾಫ್ನಾ ಕಿಂಗ್ಸ್' ಫ್ರಾಂಚೈಸಿಯ ಸಹ-ಮಾಲೀಕರಾಗಿರುವ ಕಲ್ರಾ ಅವರನ್ನು, ಜುಲೈ 17 ರಂದು LPL ಸೀಸನ್ ಆರಂಭಕ್ಕೂ ಮುನ್ನ ವಶಕ್ಕೆ ಪಡೆಯಲಾಯಿತು.

ಶ್ರೀಲಂಕಾ ಪೊಲೀಸರ ಪ್ರಕಾರ, ಟೂರ್ನಿ ಆರಂಭಕ್ಕೂ ಸುಮಾರು 10 ದಿನಗಳ ಮುನ್ನ 27 ವರ್ಷದ ಕಲ್ರಾ ಆಟಗಾರನೊಬ್ಬನಿಗೆ ಲಂಚ ನೀಡಲು ಪ್ರಯತ್ನಿಸಿದ್ದರು ಎಂದು ಆರೋಪಿಸಲಾಗಿದೆ. ಆ ಆಟಗಾರನು ಈ ವಿಷಯವನ್ನು ಅಧಿಕಾರಿಗಳಿಗೆ ತಿಳಿಸಿದ ನಂತರ ತನಿಖೆ ನಡೆಸಲಾಗಿದ್ದು, ಕಲ್ರಾ ಅವರನ್ನು ಬಂಧಿಸಲಾಗಿದೆ.

ಕ್ರೀಡೆಗೆ ಸಂಬಂಧಿಸಿದ ಭ್ರಷ್ಟಾಚಾರದ ತನಿಖೆಗಾಗಿ ಸ್ಥಾಪಿಸಲಾದ 'ಕ್ರೀಡೆಗೆ ಸಂಬಂಧಿಸಿದ ಅಪರಾಧಗಳ ತಡೆಗಟ್ಟುವಿಕೆಗಾಗಿನ ವಿಶೇಷ ತನಿಖಾ ಘಟಕ'ವು ಈ ಕಾರ್ಯಾಚರಣೆಯನ್ನು ನಡೆಸಿತು. ಬಂಧನದ ನಂತರ ಕಲ್ರಾ ಅವರನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು.

ಜಾಫ್ನಾ ಕಿಂಗ್ಸ್ ತಂಡದ ಆಟಗಾರರಾದ ಭನುಕ ರಾಜಪಕ್ಸೆ, ಅವಿಷ್ಕ ಫೆರ್ನಾಂಡೊ ಮತ್ತು ದುನಿತ್ ವೆಲ್ಲಲಾಗೆ ಅವರು ಈ ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಈ ಕುರಿತು ತನಿಖೆ ನಡೆಯುತ್ತಿದೆ.

ಲಂಕಾ ಪ್ರೀಮಿಯರ್ ಲೀಗ್‌ಗೆ (LPL) ಸಂಬಂಧಿಸಿದ ಭ್ರಷ್ಟಾಚಾರದ ವಿವಾದಗಳ ಪಟ್ಟಿಗೆ ಈ ಘಟನೆಯೂ ಸೇರ್ಪಡೆಗೊಂಡಿದೆ. ಇದಕ್ಕೂ ಮುನ್ನ, ಈ ವರ್ಷದ ಆರಂಭದಲ್ಲಿ, ಮತ್ತೊಂದು LPL ಫ್ರಾಂಚೈಸ್‌ನ ಮಾಲೀಕರೊಬ್ಬರು ಆಟಗಾರನೊಬ್ಬನನ್ನು ಮ್ಯಾಚ್-ಫಿಕ್ಸಿಂಗ್‌ನಲ್ಲಿ ತೊಡಗಿಸಿಕೊಳ್ಳಲು ಪ್ರಯತ್ನಿಸಿದ ಆರೋಪ ಸಾಬೀತಾದ ನಂತರ ನಾಲ್ಕು ವರ್ಷಗಳ ನಿಷೇಧಕ್ಕೆ ಒಳಗಾಗಿದ್ದರು.

Manjot Kalra
ಯುವ ಎಡಗೈ ಬ್ಯಾಟ್ಸ್‌‌ಮನ್ ಮಂಜೋತ್ ಕಲ್ರಾ ಒಂದು ವರ್ಷ ಅಮಾನತು!

2018ರ ಐಸಿಸಿ ಅಂಡರ್-19 ವಿಶ್ವಕಪ್‌ನಲ್ಲಿ ಕಲ್ರಾ ಖ್ಯಾತಿ: ಆ ಟೂರ್ನಿಯ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಜೇಯ 101 ರನ್ ಗಳಿಸುವ ಮೂಲಕ ಭಾರತ ಪ್ರಶಸ್ತಿ ಗೆಲ್ಲಲು ಅವರು ನೆರವಾಗಿದ್ದರು. ಶುಭಮನ್ ಗಿಲ್ ಮತ್ತು ನಾಯಕ ಪೃಥ್ವಿ ಶಾ ಅವರಿದ್ದ ಅದೇ ಚಾಂಪಿಯನ್ ತಂಡದ ಭಾಗವಾಗಿಯೂ ಅವರು ಗುರುತಿಸಿಕೊಂಡಿದ್ದರು. ಈ ಮಾಜಿ ಆರಂಭಿಕ ಆಟಗಾರ ದೇಶೀಯ ಕ್ರಿಕೆಟ್‌ನಲ್ಲಿ ಆಡಿದ ನಂತರ, ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಫ್ರಾಂಚೈಸಿ ಸಹ-ಮಾಲೀಕರಾಗಿ ಗುರುತಿಸಿಕೊಂಡರು. ಅವರ ಮೇಲಿನ ಆರೋಪಗಳು ಇನ್ನೂ ನ್ಯಾಯಾಲಯದಲ್ಲಿ ಸಾಬೀತಾಗಿಲ್ಲ ಮತ್ತು ತನಿಖೆ ಪ್ರಗತಿಯಲ್ಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com