ಕೋಚ್ ಆಗಿ ವಿವಿಎಸ್ ಲಕ್ಷ್ಮಣ್ ಯಶಸ್ಸು ಗೌತಮ್ ಗಂಭೀರ್ ಮೇಲೆ ಒತ್ತಡ ಹೇರಲಿದೆ: RCB ಮಾಜಿ ಬ್ಯಾಟರ್ ಡಿವಿಲಿಯರ್ಸ್

ಐರ್ಲೆಂಡ್, ಇಂಗ್ಲೆಂಡ್ ವಿರುದ್ಧದ ಸರಣಿ ಸೋಲುಗಳು ಕೋಚ್ ಗೌತಮ್ ಗಂಭೀರ್ ಕುರಿತಂತೆ ತೀವ್ರ ಟೀಕೆಗಳು ಎದುರಾಗಿವೆ. ಮತ್ತೊಂದೆಡೆ, ಕೋಚ್ ವಿವಿಎಸ್ ಲಕ್ಷ್ಮಣ್ ನೇತೃತ್ವದ ತಂಡ ಜಿಂಬಾಬ್ವೆ ವಿರುದ್ಧ ನಡೆದ ಟಿ20 ಸರಣಿಯನ್ನು ಗೆದ್ದಿರುವುದು ತಂಡಕ್ಕೆ ಹೊಸ ಚೈತನ್ಯ ನೀಡಿದೆ.
Gautam Gambhir - VVS Laxman
ಗೌತಮ್ ಗಂಭೀರ್, ವಿವಿಎಸ್ ಲಕ್ಷ್ಮಣ್
Updated on

ಐರ್ಲೆಂಡ್, ಇಂಗ್ಲೆಂಡ್ ವಿರುದ್ಧದ ಸರಣಿ ಸೋಲುಗಳು ಕೋಚ್ ಗೌತಮ್ ಗಂಭೀರ್ ಕುರಿತಂತೆ ತೀವ್ರ ಟೀಕೆಗಳು ಎದುರಾಗಿವೆ. ಮತ್ತೊಂದೆಡೆ, ಕೋಚ್ ವಿವಿಎಸ್ ಲಕ್ಷ್ಮಣ್ ನೇತೃತ್ವದ ತಂಡ ಜಿಂಬಾಬ್ವೆ ವಿರುದ್ಧ ನಡೆದ ಟಿ20 ಸರಣಿಯನ್ನು ಗೆದ್ದಿರುವುದು ತಂಡಕ್ಕೆ ಹೊಸ ಚೈತನ್ಯ ನೀಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ RCB ಮಾಜಿ ಬ್ಯಾಟರ್ ಎಬಿ ಡಿವಿಲಿಯರ್ಸ್ ವಿವಿಎಸ್ ಲಕ್ಷ್ಮಣ್ ಯಶಸ್ಸು ಗೌತಮ್ ಗಂಭೀರ್ ಮೇಲೆ ಒತ್ತಡ ಹೇರಿದೆ ಎಂದರು.

ಕೆಲವೊಮ್ಮೆ ವಿರಾಮ ತೆಗೆದುಕೊಂಡು ವಿಶ್ರಾಂತಿ ಪಡೆಯುವುದು ಒಳ್ಳೆಯದು. ಇದು ನಿಮ್ಮನ್ನು ಪುನರ್ ಆಗಮನ ಮಾಡಲು ಅನುವು ಮಾಡಿಕೊಡುತ್ತದೆ. ಇನ್ನು ಲಕ್ಷ್ಮಣ್ ನೇತೃತ್ವದಲ್ಲಿ ಆಟಗಾರರು ಆಟವನ್ನು ಆನಂದಿಸುತ್ತಿದ್ದಾರೆ. ಒಳ್ಳೆಯ ಫಲಿತಾಂಶಗಳು ಬಂದಿದೆ ಎಂದು ಎಬಿ ಡಿವಿಲಿಯರ್ಸ್ ಹೇಳಿದರು. ಇದೇ ವೇಳೆ, ಮುಂಬರುವ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡವನ್ನು ಪ್ರಕಟಿಸಿದ್ದು ಐಪಿಎಲ್‌ನಲ್ಲಿ ಆತ್ಮವಿಶ್ವಾಸ ಮತ್ತು ಕಳಪೆ ಪ್ರದರ್ಶನ ಇದ್ದರೂ ರಿಷಭ್ ಪಂತ್ ಹೆಸರನ್ನು ನೋಡಿ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಆಶ್ಚರ್ಯ ವ್ಯಕ್ತಪಡಿಸಿದರು. ಆಗಸ್ಟ್ 15ರಿಂದ ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಯನ್ನು ಆಡಲಿದೆ. ಜಡೇಜಾ, ಸಿರಾಜ್‌ರಂತಹ ಆಟಗಾರರು ತಂಡಕ್ಕೆ ಮರಳಿದ್ದಾರೆ.

Gautam Gambhir - VVS Laxman
ICC T20 Ranking: ಜಿಂಬಾಬ್ವೆ ಸರಣಿ ನಂತರ ಬರೋಬ್ಬರಿ 230 ಸ್ಥಾನ ಮೇಲೇರಿದ ವೈಭವ್ ಸೂರ್ಯವಂಶಿ

ಮತ್ತೊಂದೆಡೆ ಆಫ್-ಸ್ಪಿನ್ ಆಲ್‌ರೌಂಡರ್ ಸರಾಂಶ್ ಜೈನ್ ಅವರನ್ನು ಮೊದಲ ಬಾರಿಗೆ ಭಾರತೀಯ ಟೆಸ್ಟ್ ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ. ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಅವರಿಗೆ ಅವಕಾಶ ನೀಡಲಾಗಿದೆ. ರವೀಂದ್ರ ಜಡೇಜಾ ಮತ್ತು ಜಸ್ಪ್ರಿತ್ ಬುಮ್ರಾ ಕೂಡ ಭಾರತೀಯ ಟೆಸ್ಟ್ ತಂಡಕ್ಕೆ ಮರಳಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದ ನಂತರ 33ನೇ ವಯಸ್ಸಿನಲ್ಲಿ ಸರಾಂಶ್‌ಗೆ ಅವಕಾಶ ಸಿಕ್ಕಿರುವುದು ಅದ್ಭುತವಾಗಿದೆ ಎಂದು ಎಬಿ ಡಿವಿಲಿಯರ್ಸ್ ಹೇಳಿದ್ದಾರೆ.

ದಕ್ಷಿಣ ಆಫ್ರಿಕಾದ ಮಾಜಿ ನಾಯಕ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ, ರಿಷಭ್ ಪಂತ್ ಅವರನ್ನು ಸೇರಿಸಲಾಗಿದೆ. ಇದು ಸ್ವಲ್ಪ ಆಶ್ಚರ್ಯಕರವಾಗಿದೆ ಎಂದು ನಾನು ಭಾವಿಸುತ್ತೇನೆ. ಐಪಿಎಲ್ ಸಮಯದಲ್ಲಿ ಅವರು ಸ್ವಲ್ಪ ಕಡಿಮೆ ಆತ್ಮವಿಶ್ವಾಸ ಮತ್ತು ಶಕ್ತಿಯಿಂದ ಕಡಿಮೆ ಇದ್ದಂತೆ ಕಾಣುತ್ತಿದ್ದರಿಂದ ಅವರ ಫಿಟ್ನೆಸ್ ಹೇಗಿದೆ. ಅವರ ಪ್ರದರ್ಶನ ನೀಡುವ ಹಸಿವು ಹೇಗಿದೆ ಎಂಬುದನ್ನು ನಾವು ನೋಡಬೇಕಾಗಿದೆ ಎಂದರು.

ಸರಣಿಯ ಮೊದಲ ಟೆಸ್ಟ್ ಆಗಸ್ಟ್ 15 ರಿಂದ ಗಾಲೆಯಲ್ಲಿ ನಡೆಯಲಿದ್ದು, ಎರಡನೇ ಟೆಸ್ಟ್ ಆಗಸ್ಟ್ 23 ರಿಂದ ಕೊಲಂಬೊದ ಎಸ್‌ಎಸ್‌ಸಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಸರಣಿಯ ಮೊದಲು, ಭಾರತ ತಂಡವು ಆಗಸ್ಟ್ 7 ರಿಂದ ಕೊಲಂಬೊದಲ್ಲಿ ನಾಲ್ಕು ದಿನಗಳ ಅಭ್ಯಾಸ ಪಂದ್ಯವನ್ನು ಆಡಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com