ಭಾರತ vs ಅಫ್ಘಾನಿಸ್ತಾನ ಟೆಸ್ಟ್: ಜೂನ್ 6 ರಿಂದ ಆರಂಭ, ಸಂಪೂರ್ಣ ಮಾಹಿತಿ ಇಲ್ಲಿದೆ...

ಐಪಿಎಲ್ ಸೀಸನ್ ಮುಗಿದ ಒಂದು ವಾರದೊಳಗೆ ಇದು ಆರಂಭವಾಗುತ್ತಿದ್ದು, ಸುಮಾರು ಎಂಟು ವರ್ಷಗಳ ನಂತರ ಎರಡೂ ತಂಡಗಳ ನಡುವಿನ ಮೊದಲ ಟೆಸ್ಟ್ ಇದಾಗಿದೆ.
Afghanistan players
ಅಫ್ಘಾನಿಸ್ತಾನ ತಂಡದ ಆಟಗಾರರು
Updated on

ಚಂಡೀಗಢ: ಐಪಿಲ್ 2026 ಮುಗಿಯುತ್ತಿದ್ದಂತೆಯೇ ಈಗ ಜೂನ್ 6 ರಿಂದ ಪ್ರಾರಂಭವಾಗುವ ಭಾರತ vs ಅಫ್ಘಾನಿಸ್ತಾನ ನಡುವಿನ ಏಕೈಕ ಟೆಸ್ಟ್ ಪಂದ್ಯಾವಳಿಗೆ ಮುಲ್ಲನ್‌ಪುರದಲ್ಲಿರುವ ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ಸಜ್ಜಾಗುತ್ತಿದೆ.

ಐಪಿಎಲ್ ಸೀಸನ್ ಮುಗಿದ ಒಂದು ವಾರದೊಳಗೆ ಇದು ಆರಂಭವಾಗುತ್ತಿದ್ದು, ಸುಮಾರು ಎಂಟು ವರ್ಷಗಳ ನಂತರ ಎರಡೂ ತಂಡಗಳ ನಡುವಿನ ಮೊದಲ ಟೆಸ್ಟ್ ಇದಾಗಿದೆ.

ಅಪ್ಘಾನಿಸ್ತಾನ ಈಗಾಗಲೇ ಭಾರತ ಪ್ರವಾಸದಲ್ಲಿದೆ. ಒಂದು ಟೆಸ್ಟ್ ನಂತರ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಎರಡೂ ತಂಡಗಳು ಐಪಿಎಲ್ ನಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಕಡೆಗೆ ತಮ್ಮ ಗಮನವನ್ನು ಬದಲಾಯಿಸುವುದರಿಂದ ಕೆಂಪು ಚೆಂಡಿನ ಪಂದ್ಯವು ಗಮನಾರ್ಹ ಗಮನ ಸೆಳೆಯುವ ನಿರೀಕ್ಷೆಯಿದೆ.

ಟೆಸ್ಟ್ ದಿನಾಂಕ: ಜೂನ್ 6 ರಂದು ಆರಂಭ

ಸ್ಥಳ: ಮುಲ್ಲನ್‌ಪುರದಲ್ಲಿರುವ ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ.

ಯಾವ ಚಾನೆಲ್ ನಲ್ಲಿ ನೇರ ಪ್ರಸಾರ: ಭಾರತ vs ಅಫ್ಘಾನಿಸ್ತಾನ ಟೆಸ್ಟ್ ಪಂದ್ಯದ ನೇರ ಪ್ರಸಾರವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ , JioCinema ನಲ್ಲಿ ಲೈವ್ ಸ್ಟ್ರೀಮ್ ವೀಕ್ಷಿಸಬಹುದು.

ಭಾರತ ತಂಡ ಇಂತಿದೆ: ಶುಭಮನ್ ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್ (ಉಪ ನಾಯಕ), ಸಾಯಿ ಸುದರ್ಶನ್, ರಿಷಭ್ ಪಂತ್ (ವಿಕೆಟ್ ಕೀಪರ್), ದೇವದತ್ ಪಡಿಕ್ಕಲ್, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಮಾನವ್ ಸುತಾರ್, ಗುರ್ನೂರ್ ಬ್ರಾರ್, ಧ್ರುವ್ ಜುರೆಲ್

Afghanistan players
IPL 2026: 'ಮೆಗಾ ಹರಾಜಿನಲ್ಲಿ ಗೆಲ್ಲಲು ಸಾಧ್ಯವಿಲ್ಲ, ಆದರೆ ಅಲ್ಲಿ ಸೋಲಬಹುದು'; ಪ್ರಶಸ್ತಿ ಗೆಲುವಿನ ನಂತರ RCB ಕ್ರಿಕೆಟ್ ನಿರ್ದೇಶಕ ಮೊ ಬೊಬಾಟ್

ಅಫ್ಘಾನಿಸ್ತಾನ ತಂಡ ಇಂತಿದೆ: ಹಶ್ಮತುಲ್ಲಾ ಶಾಹಿದಿ (ನಾಯಕ), ಅಬ್ದುಲ್ ಮಲಿಕ್, ಸೇದಿಕುಲ್ಲಾ ಅಟಲ್, ರಹಮತ್ ಷಾ, ರಹಮಾನುಲ್ಲಾ ಗುರ್ಬಾಜ್, ರಹಮಾನುಲ್ಲಾ ಝದ್ರಾನ್, ಅಫ್ಸರ್ ಝಜೈ (ವಿಕೆಟ್ ಕೀಪರ್), ಇಕ್ರಮ್ ಅಲಿಖಿಲ್ (ವಿಕೆಟ್ ಕೀಪರ್), ಅಜ್ಮತುಲ್ಲಾ ಒಮರ್ಜಾಯ್, ಶರಫುದ್ದೀನ್ ಅಶ್ರಫ್, ಬಿ ಖುದ್ದೀನ್ ಅಶ್ರಫ್ ಸಮಿ, ಜಿಯಾ ಶರೀಫಿ ಮತ್ತು ಸಲೀಂ ಸಫಿ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com