ಬಿಸಿಲಿನಿಂದ ಬಳಲಿದ ಅಭಿಮಾನಿಗಳಿಗೆ 'ಕೂಲ್ ಡ್ರಿಂಕ್ಸ್' ಕೊಟ್ಟ ಗೌತಮ್ ಗಂಭೀರ್! ಹೃದಯಸ್ಪರ್ಶಿ Video

ಮುಲ್ಲಾನ್ ಪುರದಲ್ಲಿ ನಡೆಯುತ್ತಿರುವ ಅಪ್ಘಾನಿಸ್ತಾನ- ಭಾರತ ವಿರುದ್ಧದ ಟೆಸ್ಟ್ ಪಂದ್ಯದ ವೇಳೆಯಲ್ಲಿ ಈ ಘಟನೆ ನಡೆದಿದೆ.
 Gautam Gambhir
ಗೌತಮ್ ಗಂಭೀರ್
Updated on: 

ಭಾರತ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರ ಗೌತಮ್ ಗಂಭೀರ್ ಅವರ ಹೃದಯ ಸ್ಪರ್ಶಿ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಅಭಿಮಾನಿಗಳು ವ್ಯಾಪಕ ಮೆಚ್ಚುಗೆ

ವ್ಯಕ್ತಪಡಿಸುತ್ತಿದ್ದಾರೆ. ಬಿಸಿಲಿನಿಂದ ಬಳಲುತ್ತಿದ್ದ ಅಭಿಮಾನಿಗಳಿಗೆ ಗೌತಮ್ ಗಂಭೀರ್ ಕೂಲ್ ಡ್ರಿಂಕ್ಸ್ ಹಂಚಿರುವ ವಿಡಿಯೋ ವೈರಲ್ ಆಗುತ್ತಿದ್ದು, ಅವರ ಮಾನವೀಯತೆ ಗುಣವನ್ನು ಅಭಿಮಾನಿಗಳು ಹೊಗಳುತ್ತಿದ್ದಾರೆ.

ಮುಲ್ಲಾನ್ ಪುರದಲ್ಲಿ ನಡೆಯುತ್ತಿರುವ ಅಪ್ಘಾನಿಸ್ತಾನ- ಭಾರತ ವಿರುದ್ಧದ ಟೆಸ್ಟ್ ಪಂದ್ಯದ ವೇಳೆಯಲ್ಲಿ ಈ ಘಟನೆ ನಡೆದಿದೆ.

ವಿವಿಐಪಿ ಸ್ಯ್ಟಾಂಡ್ ನ ತಡೆಗೋಡೆಗೆ ಬಂದು ಅಲ್ಲಿ ನೆರೆದಿದ್ದ ಕ್ರಿಕೆಟ್ ಅಭಿಮಾನಿಗಳನ್ನು ಮಾತನಾಡಿಸಿ, ಕೂಲ್ ಡ್ರಿಂಕ್ಸ್ ನ್ನು ಗೌತಮ್ ಗಂಭೀರ್ ಹಂಚಿದ್ದಾರೆ. ಬಳಿಕ ಅಭಿಮಾನಿಗಳು ಘೋಷಣೆ ಕೂಗಿ ಹರ್ಷೋದ್ಘಾರಗಳೊಂದಿಗೆ ಸಂಭ್ರಮಿಸಿದ್ದಾರೆ. ಕೆಲವರು ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

 Gautam Gambhir
ವೈಭವ್ ಸೂರ್ಯವಂಶಿಯನ್ನು ಸಚಿನ್ ತೆಂಡೊಲ್ಕರ್ ಗೆ ಹೋಲಿಸಿದ ಕಂಗನಾ ರಣಾವತ್! Video

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com