Ro'hit' Sharma ಮತ್ತೊಂದು ಐತಿಹಾಸಿಕ ಮೈಲಿಗಲ್ಲು; ಆರಂಭಿಕನಾಗಿ 16,000 ರನ್‌, ಸಚಿನ್‌ಗೂ ಸಾಧ್ಯವಾಗದ ಸಾಧನೆ!

ಮೊದಲ ಏಕದಿನ ಪಂದ್ಯದಲ್ಲಿ ಆಫ್ಘನ್ ನೀಡಿರುವ 195 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿರುವ ಭಾರತ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಈ ಸಾಧನೆ ಮಾಡಿದ್ದಾರೆ.
Rohit Sharma as an opener in international cricket
ರೋಹಿತ್ ಶರ್ಮಾ ಐತಿಹಾಸಿಕ ದಾಖಲೆ
Updated on

ಧರ್ಮಶಾಲಾ: ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ರೋಹಿತ್ ಶರ್ಮಾ ಆಫ್ಘಾನಿಸ್ತಾನ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದು, ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ನಲ್ಲಿ 16,000 ರನ್‌ಗಳ ಗಳಿಸಿ ದಾಖಲೆಗೆ ಪಾತ್ರರಾಗಿದ್ದಾರೆ.

ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ​​ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಆಫ್ಘನ್ ನೀಡಿರುವ 195 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿರುವ ಭಾರತ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಈ ಸಾಧನೆ ಮಾಡಿದ್ದಾರೆ.

16 ಎಸೆತಗಳಲ್ಲಿ 1 ಸಿಕ್ಸರ್ ಮತ್ತು 2 ಬೌಂಡರಿಗಳ ನೆರವಿನಿಂದ 16 ರನ್ ಗಳಿಸಿದ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ನಲ್ಲಿ ಆರಂಭಿಕರಾಗಿ ತಮ್ಮ ರನ್ ಗಳಿಕೆಯನ್ನು 16026ಕ್ಕೆ ಏರಿಸಿಕೊಂಡಿದ್ದಾರೆ.

ಈ ಪಂದ್ಯಕ್ಕೂ ಮುನ್ನ ಈ ಸಾಧನೆಗೆ ಅವರಿಗೆ ಕೇವಲ ಆರು ರನ್‌ಗಳ ಅಗತ್ಯವಿತ್ತು. ಪಂದ್ಯ ಆರಂಭಕ್ಕೂ ಮುನ್ನ ಆರಂಭಿಕ ಬ್ಯಾಟರ್ ಆಗಿ 15,994 ರನ್‌ಗಳನ್ನು ಗಳಿಸಿದ್ದ ರೋಹಿತ್, ತಮ್ಮ 384ನೇ ಇನ್ನಿಂಗ್ಸ್‌ನಲ್ಲಿ 16,000 ರನ್‌ಗಳ ಸಾಧನೆ ಪೂರ್ಣಗೊಳಿಸಿದರು.

Rohit Sharma as an opener in international cricket
1st ODI: Shubman Gill ಎಡವಟ್ಟು, ಆಫ್ಘನ್ ಬ್ಯಾಟರ್ ಗೆ ಜೀವದಾನ, Rahmanullah Gurbaz ಐತಿಹಾಸಿಕ ದಾಖಲೆ

ಸೆಹ್ವಾಗ್ ನಂತರ ಈ ಸಾಧನೆ ಮಾಡಿದ 2ನೇ ಭಾರತೀಯ

ಈ ಸಾಧನೆಯ ಮೂಲಕ ರೋಹಿತ್ ಶರ್ಮಾ, ಭಾರತದ ಮಾಜಿ ಸ್ಫೋಟಕ ಆರಂಭಿಕ ಬ್ಯಾಟರ್ ವೀರೇಂದ್ರ ಸೆಹ್ವಾಗ್ ಅವರ ನಂತರ ಈ ಮೈಲಿಗಲ್ಲು ತಲುಪಿದ ಎರಡನೇ ಭಾರತೀಯರಾಗಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆರಂಭಿಕ ಬ್ಯಾಟರ್ ಆಗಿ 16,000ಕ್ಕೂ ಹೆಚ್ಚು ರನ್ ಗಳಿಸಿದ ವಿಶ್ವದ ಕೇವಲ ಏಳನೇ ಆಟಗಾರ ಎಂಬ ಗೌರವವೂ ರೋಹಿತ್ ಅವರಿಗೆ ಲಭಿಸಿದೆ. ಸೆಹ್ವಾಗ್ 332 ಪಂದ್ಯಗಳ 400 ಇನ್ನಿಂಗ್ಸ್‌ಗಳಲ್ಲಿ 16,119 ರನ್ ಗಳಿಸಿದ್ದರು.

ಕ್ರಿಕೆಟ್ ದಿಗ್ಗಜರ ಸಾಲಿನಲ್ಲಿ ರೋಹಿತ್

ಈ ಸಾಧನೆಯೊಂದಿಗೆ ರೋಹಿತ್, ಕ್ರಿಕೆಟ್ ಇತಿಹಾಸದ ಶ್ರೇಷ್ಠ ಆರಂಭಿಕ ಬ್ಯಾಟರ್‌ಗಳಾದ ಸನತ್ ಜಯಸೂರ್ಯ, ಕ್ರಿಸ್ ಗೇಲ್, ಡೇವಿಡ್ ವಾರ್ನರ್, ಗ್ರೇಮ್ ಸ್ಮಿತ್, ಡೆಸ್ಮಂಡ್ ಹೇನ್ಸ್ ಮತ್ತು ವೀರೇಂದ್ರ ಸೆಹ್ವಾಗ್ ಅವರ ಸಾಲಿಗೆ ಸೇರ್ಪಡೆಯಾಗಿದ್ದಾರೆ.

ಆರಂಭಿಕ ಬ್ಯಾಟರ್ ಆಗಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿ

  • ಸನತ್ ಜಯಸೂರ್ಯ – 19,298 ರನ್

  • ಕ್ರಿಸ್ ಗೇಲ್ – 18,867 ರನ್

  • ಡೇವಿಡ್ ವಾರ್ನರ್ – 18,744 ರನ್

  • ವೀರೇಂದ್ರ ಸೆಹ್ವಾಗ್ – 16,119 ರನ್

  • ರೋಹಿತ್ ಶರ್ಮಾ – 16,000+ ರನ್

ಸಚಿನ್‌ಗೂ ಸಾಧ್ಯವಾಗದ ಸಾಧನೆ

ರೋಹಿತ್ ಅವರ ಈ ಸಾಧನೆಯ ವಿಶೇಷತೆ ಎಂದರೆ, ಭಾರತದ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಸಹ ಈ ಪಟ್ಟಿಯಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಿರಲಿಲ್ಲ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 34,000ಕ್ಕೂ ಹೆಚ್ಚು ರನ್ ಗಳಿಸಿದ್ದ ಸಚಿನ್, ಆರಂಭಿಕ ಬ್ಯಾಟರ್ ಆಗಿ 15,335 ರನ್ ಗಳಿಸಿ 16,000 ರನ್‌ಗಳ ಗಡಿಯನ್ನು ಸ್ವಲ್ಪ ಅಂತರದಲ್ಲಿ ತಪ್ಪಿಸಿಕೊಂಡಿದ್ದರು.

ಜಾಕ್ ಕಾಲಿಸ್ ದಾಖಲೆಯೂ ಧೂಳಿಪಟ

ಧರ್ಮಶಾಲಾದ ಪಂದ್ಯದಲ್ಲಿ ರೋಹಿತ್ ಮತ್ತೊಂದು ಮಹತ್ವದ ಸಾಧನೆಯನ್ನೂ ಮಾಡಿದರು. ಅವರು ಇನ್ನಿಂಗ್ಸ್‌ನಲ್ಲಿ ಮೂರು ರನ್ ಗಳಿಸುತ್ತಿದ್ದಂತೆಯೇ ದಕ್ಷಿಣ ಆಫ್ರಿಕಾದ ದಿಗ್ಗಜ ಆಲ್‌ರೌಂಡರ್ ಜಾಕ್ ಕಾಲಿಸ್ ಅವರ ಏಕದಿನ ರನ್‌ಗಳ ದಾಖಲೆಯನ್ನು ಹಿಂದಿಕ್ಕಿದರು.

ಕಾಲಿಸ್ 1996ರಿಂದ 2014ರ ಅವಧಿಯಲ್ಲಿ 328 ಏಕದಿನ ಪಂದ್ಯಗಳಲ್ಲಿ 11,579 ರನ್ ಗಳಿಸಿದ್ದರು. ರೋಹಿತ್ ತಮ್ಮ 283ನೇ ಏಕದಿನ ಪಂದ್ಯದಲ್ಲೇ ಆ ದಾಖಲೆಯನ್ನು ಮೀರಿದರು. ಈ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ರೋಹಿತ್ ಎಂಟನೇ ಸ್ಥಾನಕ್ಕೆ ಏರಿದ್ದಾರೆ. ಈ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ 18,246 ರನ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.

Rohit Sharma as an opener in international cricket
1st ODI: 48 ಎಸೆತಗಳಲ್ಲಿ ಶತಕ ಚಚ್ಚಿದ Gurbaz, ಭಾರತಕ್ಕೆ 195 ರನ್ ಟಾರ್ಗೆಟ್ ಕೊಟ್ಟ ಅಫ್ಘಾನಿಸ್ತಾನ!

ದಾಖಲೆಗಳ ಬೆನ್ನಟ್ಟುತ್ತಿರುವ 'ಹಿಟ್‌ಮ್ಯಾನ್'

ವೈಟ್‌ಬಾಲ್ ಕ್ರಿಕೆಟ್‌ನ ಅತ್ಯಂತ ಅಪಾಯಕಾರಿ ಬ್ಯಾಟರ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಡುವ ರೋಹಿತ್ ಶರ್ಮಾ, ತಮ್ಮ ಇತ್ತೀಚಿನ ಸಾಧನೆಯ ಮೂಲಕ ಮತ್ತೊಮ್ಮೆ ವಿಶ್ವ ಕ್ರಿಕೆಟ್‌ನಲ್ಲಿ ತಮ್ಮ ಮಹತ್ವವನ್ನು ಸಾಬೀತುಪಡಿಸಿದ್ದಾರೆ.

39ನೇ ವಯಸ್ಸಿನಲ್ಲಿಯೂ ಅವರು ನಿರಂತರವಾಗಿ ಹೊಸ ಮೈಲಿಗಲ್ಲುಗಳನ್ನು ನಿರ್ಮಿಸುತ್ತಿದ್ದು, ಅವರ ಸ್ಥಿರ ಪ್ರದರ್ಶನ, ಅನುಭವ ಹಾಗೂ ದೀರ್ಘಕಾಲದ ಸೇವೆ ಭಾರತೀಯ ಕ್ರಿಕೆಟ್‌ಗೆ ಅಮೂಲ್ಯವಾಗಿದೆ. ದಾಖಲೆಗಳ ಮೇಲೆ ದಾಖಲೆಗಳನ್ನು ನಿರ್ಮಿಸುತ್ತಿರುವ ರೋಹಿತ್ ಶರ್ಮಾ, ಕ್ರಿಕೆಟ್ ಇತಿಹಾಸದ ಶ್ರೇಷ್ಠ ಆರಂಭಿಕ ಬ್ಯಾಟರ್‌ಗಳಲ್ಲಿ ಒಬ್ಬರಾಗಿ ತಮ್ಮ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡಿದ್ದಾರೆ.

ರೋಹಿತ್ ಈಗಾಗಲೇ ಟೆಸ್ಟ್ ಮತ್ತು ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದು, ಪ್ರಸ್ತುತ ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಮುಂದುವರಿದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com