

ಚೆನ್ನೈ: ಆಫ್ಘಾನಿಸ್ತಾನ ವಿರುದ್ಧದ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಭಾರತದ ವೇಗಿ ಹಾಗೂ ಕನ್ನಡಿಗ ಪ್ರಸಿದ್ಧ್ ಕೃಷ್ಣ ತಮ್ಮ ಮಾರಕ ಬೌಲಿಂಗ್ ಮೂಲಕ ಅಪರೂದ ದಾಖಲೆಗೆ ಪಾತ್ರರಾಗಿದ್ದಾರೆ.
ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 3ನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಫ್ಘಾನಿಸ್ತಾನ 44.2 ಓವರ್ ನಲ್ಲಿ 218 ರನ್ ಗಳಿಸಿ ಆಲೌಟ್ ಆಯಿತು.
ಆಫ್ಘಾನಿಸ್ತಾನ ಇನ್ನಿಂಗ್ಸ್ ನಲ್ಲಿ ನಾಯಕ ಹಶ್ಮತುಲ್ಲಾ (102) ಶತಕ, ಮತ್ತು ಅಜ್ಮತುಲ್ಲಾ ಒಮರ್ಝೈ (50) ಅರ್ಧಶತಕ ನಿರ್ಣಾಯಕ ಪಾತ್ರ ವಹಿಸಿದರು.
ಈ ನಡುವೆ ಇಡೀ ಆಫ್ಘಾನಿಸ್ತಾನ ತಂಡವನ್ನು ಕಾಡಿದ್ದು ಮಾತ್ರ ಕನ್ನಡಿಗ ವೇಗಿ ಪ್ರಸಿದ್ಧ್ ಕೃಷ್ಣ. ಮೂರನೇ ಪಂದ್ಯದಲ್ಲಿ ಮಾರಕ ಬೌಲಿಂಗ್ ದಾಳಿ ನಡೆಸಿದ ಪ್ರಸಿದ್ಧ್ 8.2 ಓವರ್ ಎಸೆದು, ಕೇವಲ 23 ರನ್ ನೀಡಿ 5 ಪ್ರಮುಖ ವಿಕೆಟ್ ಪಡೆದರು. ಅವರ ಬೌಲಿಂಗ್ ನಲ್ಲಿ 2 ಮೇಡಿನ್ ಕೂಡ ಸೇರಿತ್ತು.
ಕನ್ನಡಿಗ ಪ್ರಸಿದ್ಧ್ ಕೃಷ್ಣ ಮಾರಕ ಬೌಲಿಂಗ್
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಫ್ಘಾನಿಸ್ತಾನಕ್ಕೆ ಕನ್ನಡಿಗ ಪ್ರಸಿದ್ಧ್ ಕೃಷ್ಣ ಬ್ಯಾಕ್ ಟು ಬ್ಯಾಕ್ ಆಘಾತ ನೀಡಿದರು. ಪ್ರಸಿದ್ಧ ಕೃಷ್ಣ ಮಾರಕ ಬೌಲಿಂಗ್ ಗೆ ತತ್ತರಿಸಿದ ಆಫ್ಘಾನಿಸ್ತಾನ ಕೇವಲ 36 ರನ್ ಗಳಿಗೇ 4 ಪ್ರಮುಖ ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು.
ಆರಂಭಿಕರಾದ ಗುರ್ಬಾಜ್ (5), ಇಬ್ರಾಹಿಂ ಜಡ್ರನ್ (11) ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ಅಂತೆಯೇ ಮಧ್ಯಮ ಕ್ರಮಾಂಕದಲ್ಲೂ ರಹಮತ್ ಶಾ (5) ಮತ್ತು ಡಾರ್ವಿಸ್ ರಸೂಲಿ (1) ಕೂಡ ವಿಫಲರಾದರು. ಪ್ರಸಿದ್ಧ್ ಮಾರಕ ಬೌಲಿಂಗ್ ದಾಳಿಗೆ ಇವರ ಬಳಿ ಉತ್ತರವೇ ಇರಲಿಲ್ಲ.
ಅಂತಿಮವಾಗಿ 45ನೇ ಓವರ್ ನಲ್ಲಿ ಶತಕ ಸಿಡಿಸಿ ಆಫ್ಘನ್ ಇನ್ನಿಂಗ್ಸ್ ಆಧಾರ ಸ್ಥಂಬವಾಗಿದ್ದ ಹಷ್ಮತುಲ್ಲಾ ಶಾಹಿದಿ ಅವರನ್ನೂ ಕೂಡ ಪ್ರಸಿದ್ಧ್ ಕೃಷ್ಣ ಔಟ್ ಮಾಡಿದರು.
ಪ್ರಸಿದ್ಧ್ ಗೆ ಏಕದಿನದಲ್ಲಿ ಮೊದಲ ಫೈಫರ್
ಇನ್ನು ಇಂದು ಪ್ರಸಿದ್ಧ್ ಆಫ್ಘಾನಿಸ್ತಾನ ವಿರುದ್ಧ ಗಳಿಸಿದ 5 ವಿಕೆಟ್ ಗಳ ಗೊಂಚಲು ಅವರಿಗೆ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ನಲ್ಲಿ ಸಿಕ್ಕ ಮೊದಲ ಫೈಫರ್ (5 ವಿಕೆಟ್ ಗೊಂಚಲು) ಆಗಿದೆ.
ಚೆನ್ನ ಕ್ರೀಡಾಂಗಣದಲ್ಲಿ ದಾಖಲೆ
ಅಂತೆಯೇ ಪ್ರಸಿದ್ಧ್ ಗಳಿಸಿದ 5 ವಿಕೆಟ್ ಗೊಂಚಲು ಚೆನ್ನೈ ಕ್ರೀಡಾಂಗಣದಲ್ಲಿ ದಾಖಲಾದ ಬೌಲರ್ ಒಬ್ಬರ ಉತ್ತಮ ಪ್ರದರ್ಶನ ಕೂಡ ಆಗಿದೆ. ಇಂದು ಪ್ರಸಿದ್ಧ್ ಕೇವಲ 23 ರನ್ ನೀಡಿ 5 ವಿಕೆಟ್ ಪಡೆದಿದ್ದಾರೆ.
ಇದಕ್ಕೂ ಮೊದಲು ಇದೇ ಮೈದಾನದಲ್ಲಿ ವೆಸ್ಟ್ ಇಂಡೀಸ್ ನ ರವಿ ರಾಂಪಾಲ್ 2011ರಲ್ಲಿ ಭಾರತದ ವಿರುದ್ಧ 51 ರನ್ ನೀಡಿ 5 ವಿಕೆಟ್ ಕಬಳಿಸಿದ್ದು ಇಷ್ಟು ದಿನ ಈ ಮೈದಾನದ ಉತ್ತಮ ಬೌಲಿಂಗ್ ಫಿಗರ್ ಆಗಿತ್ತು. ಅದಕ್ಕೂ ಮೊದಲು 1997ರಲ್ಲಿ ಪಾಕಿಸ್ತಾನದ ಆಕೀಬ್ ಜಾವೆದ್ ಭಾರತದ ವಿರುದ್ಧ 61 ರನ್ ನೀಡಿ 5 ವಿಕೆಟ್ ಪಡೆದಿದ್ದರು.
Best bowling figures in ODIs in Chennai
5/23 Prasidh Krishna vs Afg Chennai 2026
5/51 Ravi Rampaul vs Ind 2011
5/61 Aaqib Javed vs Ind 1997
ಇಷ್ಟು ದಿನ ಚೆನ್ನೈನಲ್ಲಿ 4 ವಿಕೆಟ್ ಕಬಳಿಸಿದ್ದ ಭಾರತದ ಏಕೈಕ ಬೌಲರ್ ಎಂದರೆ ಅದು ಅಜಿತ್ ಅಗರ್ಕರ್ ಆಗಿದ್ದರು. ಅವರು 2002ರಲ್ಲಿ ಇಂಗ್ಲೆಂಡ್ ವಿರುದ್ಧ 34 ರನ್ ನೀಡಿ 4 ವಿಕೆಟ್ ಪಡೆದಿದ್ದರು. ಪ್ರಸಿದ್ಧ್ ಇದೀಗ ಈ ದಾಖಲೆ ಮುರಿದು ಚೆನ್ನೈನಲ್ಲಿ 5 ವಿಕೆಟ್ ಕಬಳಿಸಿದ ಭಾರತದ ಏಕೈಕ ಬೌಲರ್ ಆಗಿದ್ದಾರೆ.
The only other instance of an Indian bowler picking a 4-fer in Chennai ODIs was Ajit Agarkar’s 4/34 vs England in 2002.
ಎದುರಾಳಿ ತಂಡದ ಟಾಪ್ 5 ಬ್ಯಾಟರ್ ಗಳ ವಿಕೆಟ್ ಕಬಳಿಕೆ, ಎಲೈಟ್ ಗ್ರೂಪ್ ಗೆ ಪ್ರಸಿದ್ಧ್
ಅಂತೆಯೇ ಪ್ರಸಿದ್ಧ್ ಈ ಪಂದ್ಯದಲ್ಲಿ ಮತ್ತೊಂದು ಅಪರೂಪದ ದಾಖಲೆ ನಿರ್ಮಿಸಿದ್ದು, ಎದುರಾಳಿ ತಂಡದ ಟಾಪ್ 5 ಬ್ಯಾಟರ್ ಗಳ ವಿಕೆಟ್ ಕಬಳಿಸಿದ ಬೌಲರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಇಂದು ಪ್ರಸಿದ್ಧ್ ಆಪ್ಘಾನಿಸ್ತಾನದ ಟಾಪ್ 5 ಬ್ಯಾಟರ್ ಗಳಾದ ಗುರ್ಬಾಜ್, ಇಬ್ರಾಹಿಂ ಜಡ್ರಾನ್, ರಹಮತ್ ಶಾ, ಹಶ್ಮುತುಲ್ಲಾ ಶಾಹಿದಿ ಮತ್ತು ಡಾರ್ವಿಶ್ ರಸೂಲಿ ಅವರ ವಿಕೆಟ್ ಗಳನ್ನು ಪಡೆದು ಈ ಅಪರೂಪದ ದಾಖಲೆಗೆ ಪಾತ್ರರಾದರು.
ಇದಕ್ಕೂ ಮೊದಲು 1994ರಲ್ಲಿ ಶ್ರೀಲಂಕಾ ವಿರುದ್ಧ ಮನೋಜ್ ಪ್ರಭಾಕರ್, 2023ರಲ್ಲಿ ನ್ಯೂಜಿಲೆಂಡ್ ವಿರುದ್ಧ ಮಹಮದ್ ಶಮಿ ಈ ದಾಖಲೆ ನಿರ್ಮಿಸಿದ್ದರು. ಇದೀಗ ಈ ಎಲೈಟ್ ಗ್ರೂಪ್ ಗೆ ಕನ್ನಡಿಗ ಪ್ರಸಿದ್ಧ್ ಕೃಷ್ಣ ಸೇರ್ಪಡೆಯಾಗಿದ್ದಾರೆ.
Indian bowlers dismissing each of the top 5 batters of opposition in an ODI
Manoj Prabhakar vs SL Hyderabad 1994
Mohd Shami vs NZ Mumbai WS 2023
Prasidh Krishna vs Afg Chennai 2026
Advertisement