3rd ODI: 2 ಓವರ್ ನಲ್ಲಿ 3 ವಿಕೆಟ್, 2 ರನೌಟ್: ಕನ್ನಡಿಗನ ಮಾರಕ ಬೌಲಿಂಗ್, ದಿಢೀರ್ ಕುಸಿದ Afghanistan, ಭಾರತಕ್ಕೆ 219 ರನ್ ಟಾರ್ಗೆಟ್

ಪ್ರಸಿದ್ಧ ಕೃಷ್ಣ ಮಾರಕ ಬೌಲಿಂಗ್ ಗೆ ತತ್ತರಿಸಿದ ಆಫ್ಘಾನಿಸ್ತಾನ ಕೇವಲ 36 ರನ್ ಗಳಿಗೇ 4 ಪ್ರಮುಖ ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು.
India Restricts Afghanistan for 218 Runs
ಹಶ್ಮತುಲ್ಲಾ ಮತ್ತು ಪ್ರಸಿದ್ಧ್ ಕೃಷ್ಣ ಭರ್ಜರಿ ಪ್ರದರ್ಶನ
Updated on

ಚೆನ್ನೈ: ಭಾರತದ ವಿರುದ್ಧದ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಅಫ್ಘಾನಿಸ್ತಾನ 218 ರನ್ ಗಳಿಗೇ ಆಲೌಟ್ ಆಗಿದ್ದು, ಟೀಂ ಇಂಡಿಯಾಗೆ ಗೆಲಲ್ಲು 219 ರನ್ ಗಳ ಗುರಿ ನೀಡಿದೆ.

ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 3ನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಫ್ಘಾನಿಸ್ತಾನ 44.2 ಓವರ್ ನಲ್ಲಿ 218 ರನ್ ಗಳಿಸಿ ಆಲೌಟ್ ಆಯಿತು.

ಆಫ್ಘಾನಿಸ್ತಾನ ಇನ್ನಿಂಗ್ಸ್ ನಲ್ಲಿ ನಾಯಕ ಹಶ್ಮತುಲ್ಲಾ (102) ಶತಕ, ಮತ್ತು ಅಜ್ಮತುಲ್ಲಾ ಒಮರ್ಝೈ (50) ಅರ್ಧಶತಕ ನಿರ್ಣಾಯಕ ಪಾತ್ರ ವಹಿಸಿತು.

India Restricts Afghanistan for 218 Runs
India vs Afghanistan 3rd ODI: ರೋಹಿತ್ ಶರ್ಮಾ, ಪ್ರಸಿದ್ಧ್ ಕೃಷ್ಣರಿಂದ ವಿಶಿಷ್ಟ ಹ್ಯಾಟ್ರಿಕ್ ಸಾಧನೆ!

ಕನ್ನಡಿಗ ಪ್ರಸಿದ್ಧ್ ಕೃಷ್ಣ ಮಾರಕ ಬೌಲಿಂಗ್

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಫ್ಘಾನಿಸ್ತಾನಕ್ಕೆ ಕನ್ನಡಿಗ ಪ್ರಸಿದ್ಧ್ ಕೃಷ್ಣ ಬ್ಯಾಕ್ ಟು ಬ್ಯಾಕ್ ಆಘಾತ ನೀಡಿದರು. ಪ್ರಸಿದ್ಧ ಕೃಷ್ಣ ಮಾರಕ ಬೌಲಿಂಗ್ ಗೆ ತತ್ತರಿಸಿದ ಆಫ್ಘಾನಿಸ್ತಾನ ಕೇವಲ 36 ರನ್ ಗಳಿಗೇ 4 ಪ್ರಮುಖ ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು.

ಆರಂಭಿಕರಾದ ಗುರ್ಬಾಜ್ (5), ಇಬ್ರಾಹಿಂ ಜಡ್ರನ್ (11) ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ಅಂತೆಯೇ ಮಧ್ಯಮ ಕ್ರಮಾಂಕದಲ್ಲೂ ರಹಮತ್ ಶಾ (5) ಮತ್ತು ಡಾರ್ವಿಸ್ ರಸೂಲಿ (1) ಕೂಡ ವಿಫಲರಾದರು. ಪ್ರಸಿದ್ಧ್ ಮಾರಕ ಬೌಲಿಂಗ್ ದಾಳಿಗೆ ಇವರ ಬಳಿ ಉತ್ತರವೇ ಇರಲಿಲ್ಲ.

ಹಶ್ಮತುಲ್ಲಾ-ಓಮರ್ಝೈ ಅದ್ಭುತ ಜೊತೆಯಾಟ

ಆಫ್ಘಾನಿಸ್ತಾನ ಒಂದು ಹಂತದಲ್ಲಿ ಕೇವಲ 36 ರನ್ ಗಳಿಗೆ 4 ವಿಕೆಟ್ ಗಳನ್ನು ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಜೊತೆಗೂಡಿದ ನಾಯಕ ಹಶ್ಮತುಲ್ಲಾ ಮತ್ತು ಒಮರ್ಝೈ ಆಫ್ಘನ್ ಇನ್ನಿಂಗ್ಸ್ ಗೆ ಜೀವ ತುಂಬಿದರು.

5ನೇ ವಿಕೆಟ್ ಗೆ ಈ ಜೋಡಿ 105 ರನ್ ಗಳ ಅಮೋಘ ಜೊತೆಯಾಟವಾಡಿದರು. ಈ ಹಂತದಲ್ಲಿ ಅರ್ಧಶತಕ ಸಿಡಿಸಿದ್ದ ಒಮರ್ಝೈ ಪ್ರಿನ್ಸ್ ಯಾದವ್ ಬೌಲಿಂಗ್ ನಲ್ಲಿ ಔಟಾದರು. ಬಳಿಕ ಆಪ್ಘನ್ ನ ಹಿರಿಯ ಮತ್ತು ಅನುಭವಿ ಆಟಗಾರ ನಬಿ ಕ್ರೀಸ್ ಗೆ ಬಂದು 21 ರನ್ ಗಳಿಸಿ ಗುರ್ನೂರ್ ಬ್ರಾರ್ ಬೌಲಿಂಗ್ ಔಟ್ ಆದರು.

ಕೆಳ ಕ್ರಮಾಂಕದ ಪೆವಿಲಿಯನ್ ಪರೇಡ್

ನಬಿ ಔಟಾಗುತ್ತಲೇ ಆಫ್ಘನ್ ಕೆಳ ಕ್ರಮಾಂಕದ ಪೆವಿಲಿಯನ್ ಪರೇಡ್ ನಡೆಸಿದರು. ರಷೀದ್ ಖಾನ್ 5, ಘಜನ್ಫರ್ 1, ಅಹ್ಮದ್ ಮಲಿಕ್ ಶೂನ್ಯ ಸುತ್ತಿದರು. ಅಂತಿಮವಾಗಿ 102 ರನ್ ಗಳಿಸಿ ಆಫ್ಘನ್ ಬ್ಯಾಟಿಂಗ್ ಗೆ ಆಧಾರಸ್ಥಂಬವಾಗಿದ್ದ ನಾಯಕ ಹಶ್ಮತುಲ್ಲಾ ಶಾಹಿದಿ ಕೂಡ 102 ರನ್ ಗಳಿಸಿ ಪ್ರಸಿದ್ಧ್ ಕೃಷ್ಣಾಗೆ ವಿಕೆಟ್ ಒಪ್ಪಿಸಿದರು. ಇದರೊಂದಿಗೆ ಆಫ್ಗಾನಿಸ್ತಾನ 44.2 ಓವರ್ ನಲ್ಲಿ 218 ರನ್ ಗಳಿಸಿ ಆಲೌಟ್ ಆಯಿತು.

2 ಓವರ್ ನಲ್ಲಿ 3 ವಿಕೆಟ್, 2 ರನೌಟ್

ಆಫ್ಘನ್ ಇನ್ನಿಂಗ್ಸ್ ಗೆ ದಿಢೀರ್ ಆಘಾತ ನೀಡಿದ್ದು ಭಾರತ ತಂಡದ ನಾಯಕ ಶುಭ್ ಮನ್ ಗಿಲ್.. 40 ಮತ್ತು 41ನೇ ಓವರ್ ನಲ್ಲಿ ಗಿಲ್ 2 ರನೌಟ್ ಮಾಡಿ ಆಪ್ಘನ್ ಇನ್ನಿಂಗ್ಸ್ ಹಾದಿ ತಪ್ಪಿಸಿದರು. ನಬಿ ಔಟಾದ ಬಳಿಕ ಕ್ರೀಸ್ ಗೆ ಬಂದಿದ್ದ ಘಜನ್ಫರ್ ಮತ್ತು ಅಹ್ಮದ್ ಮಲಿಕ್ ಶುಭ್ ಮನ್ ಗಿಲ್ ರ ಅದ್ಭುತ ರನೌಟ್ ಗೆ ಬಲಿಯಾದರು.

ಇನ್ನು ಭಾರತದ ಪರ ಪ್ರಸಿದ್ಧ್ ಕೃಷ್ಣ 5 ವಿಕೆಟ್ ಪಡೆದರೆ, ಗುರ್ನೂರ್ ಬ್ರಾರ್, ಪ್ರಿನ್ಸ್ ಯಾದವ್ ಮತ್ತು ಹರ್ಶ್ ದುಬೆ ತಲಾ 1 ವಿಕೆಟ್ ಪಡೆದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com