

ಐಸಿಸಿ ಮಹಿಳಾ ಟಿ20 ವಿಶ್ವಕಪ್ 2026ರ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಭಾರತ ತಂಡದ ಮತ್ತೆ ಫೀಲ್ಡಿಂಗ್ ಮುಂದುವರೆಸಿದೆ. ಕಳಪೆ ಫೀಲ್ಡಿಂಗ್‌ನಿಂದಾಗಿ ಈ ಹಿಂದೆ ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಸೋಲು ಅನುಭವಿಸಿತ್ತು. ಇದೀಗ ಬಾಂಗ್ಲಾದೇಶ ವಿರುದ್ಧದ ನಿರ್ಣಾಯಕ ಪಂದ್ಯದಲ್ಲೂ ಭಾರತ ಪ್ರಮುಖ ಕ್ಯಾಚ್ ಗಳನ್ನೇ ಕೈಚೆಲ್ಲುತ್ತಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಬಾಂಗ್ಲಾದೇಶ ನಿಗದಿತ ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 136 ರನ್ ಪೇರಿಸಿದೆ. ಬ್ಯಾಕ್ ಟು ಬ್ಯಾಕ್ ಕ್ಯಾಚ್ ಗಳನ್ನು ಕೈಚೆಲ್ಲಿದ್ದರಿಂದ ಬಾಂಗ್ಲಾದೇಶ ನೂರರ ಗಡಿ ದಾಟಲು ಸಾಧ್ಯವಾಯಿತು.
ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದ ಬಾಂಗ್ಲಾ ಮತ್ತು ಭಾರತ ನಡುವಿನ ಪಂದ್ಯದಲ್ಲಿ ಕೇವಲ 10 ಎಸೆತಗಳ ಅಂತರದಲ್ಲಿ ಭಾರತೀಯ ಆಟಗಾರ್ತಿಯರು 4 ಕ್ಯಾಚ್‌ಗಳನ್ನು ಕೈಬಿಟ್ಟರು. ಅದರಲ್ಲೂ ಬಾಂಗ್ಲಾದೇಶದ ಆರಂಭಿಕ ಆಟಗಾರ್ತಿ ಫಿರ್ದೌಸ್‌ಗೆ ಮೂರು ಜೀವದಾನಗಳನ್ನು ನೀಡಲಾಯಿತು. ಹೀಗಾಗಿ 33 ರನ್ ಪೇರಿಸಿದರು. ಈ ಟೂರ್ನಿಯಲ್ಲಿ ಭಾರತ ಕ್ರಿಕೆಟ್ ತಂಡ ಇದುವರೆಗೆ 10 ಕ್ಯಾಚ್‌ಗಳನ್ನು ಕೈಬಿಟ್ಟಿದೆ. ನೆದರ್ಲ್ಯಾಂಡ್ಸ್ ವಿರುದ್ಧ ಒಂದು ಕ್ಯಾಚ್, ಪಾಕಿಸ್ತಾನ ವಿರುದ್ಧ ಎರಡು, ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಮತ್ತು ಬಾಂಗ್ಲಾದೇಶ ವಿರುದ್ಧ ಭಾರತ ನಾಲ್ಕು ಕ್ಯಾಚ್ ಗಳನ್ನು ಕೈಬಿಟ್ಟಿದೆ.
ಬಾಂಗ್ಲಾ ಪರ ಶೋಭನಾ 22, ನಿಗರ್ ಸುಲ್ತಾನಾ 32, ಶರ್ಮಿನ್ ಅಖ್ತರ್ 10 ರನ್ ಗಳಿಸಿ ಔಟಾದರು. ಭಾರತ ಪರ ರಾಧಾ ಯಾದವ್ 3, ಶ್ರೀ ಚರಣಿ 2, ರೇಣುಕಾ ಶರ್ಮಾ ಮತ್ತು ನಂದನಿ ಶರ್ಮಾ ತಲಾ 1 ವಿಕೆಟ್ ಪಡೆದಿದ್ದಾರೆ.