'ಜಸ್ಪ್ರೀತ್ ಬುಮ್ರಾ ನನ್ನಿಂದ ನಿಧಾನಗತಿಯ ಬೌಲಿಂಗ್ ಕಲಿತರು': ಚರ್ಚೆಗೆ ಗ್ರಾಸವಾದ ಪಾಕ್ ಮೂಲದ ವೇಗಿಯ ಹೇಳಿಕೆ!

2019 ರ IPL ವೇಳೆಯಲ್ಲಿ ಬೌಲಿಂಗ್ ಆಕ್ಷನ್‌ನಲ್ಲಿ ಯಾವುದೇ ಬದಲಾವಣೆಗಳಿಲ್ಲದೆ ನಿಧಾನಗತಿಯ ಬೌಲ್ ಮಾಡುವುದು ಹೇಗೆ ಎಂದು ಬೂಮ್ರಾಗೆ ಕಲಿಸಿರುವುದಾಗಿ ಹೇಳಿದ್ದಾರೆ. ಇದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೂ ಗ್ರಾಸವಾಗಿದೆ.
Jasprit Bumrah
ಜಸ್ಪ್ರೀತ್ ಬುಮ್ರಾ
Updated on

ಜಸ್ಪ್ರೀತ್ ಬುಮ್ರಾ ಅವರ ನಿಧಾನಗತಿಯ ಬೌಲಿಂಗ್ ಗೆ ಸಹಾಯ ಮಾಡಿರುವುದಾಗಿ ಪಾಕ್ ಮೂಲದ ಯುಎಇ ಬೌಲರ್ ಜಹೂರ್ ಖಾನ್ ಅಚ್ಚರಿ ರೀತಿಯ ಹೇಳಿಕೆ ನೀಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ.

2019 ರ IPL ವೇಳೆಯಲ್ಲಿ ಬೌಲಿಂಗ್ ಆಕ್ಷನ್‌ನಲ್ಲಿ ಯಾವುದೇ ಬದಲಾವಣೆಗಳಿಲ್ಲದೆ ನಿಧಾನಗತಿಯ ಬೌಲ್ ಮಾಡುವುದು ಹೇಗೆ ಎಂದು ಬೂಮ್ರಾಗೆ ಕಲಿಸಿರುವುದಾಗಿ ಹೇಳಿದ್ದಾರೆ. ಇದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೂ ಗ್ರಾಸವಾಗಿದೆ.

ಯುಎಇ ನಲ್ಲಿ ನಡೆದ ಐಪಿಎಲ್ ವೇಳೆಯಲ್ಲಿ ತಾನು ಮುಂಬೈ ಇಂಡಿಯನ್ಸ್‌ನೊಂದಿಗೆ ನೆಟ್ ಬೌಲರ್ ಆಗಿದ್ದೆ. ಆಗ ಬೂಮ್ರಾ ಜೊತೆಯಲ್ಲಿ ಬೌಲಿಂಗ್ ತಂತ್ರ ಕುರಿತು ಚರ್ಚಿಸುತ್ತಿದ್ದೆ. ಆ ಸಮಯದಲ್ಲಿ ಬುಮ್ರಾ ನಿಧಾನಗತಿಯ ಬೌಲಿಂಗ್ ಮಾಡುತ್ತಿದ್ದರು. ಆದರೆ, ನಾನು ಅವರ ಬೌಲಿಂಗ್ ತಂತ್ರವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ನೆರವಾಗಿರುವುದಾಗಿ ಜಹೂರ್ ತಿಳಿಸಿದ್ದಾರೆ.

ನಿಮಗೆ ಕಥೆಯೊಂದನ್ನು ಹೇಳುತ್ತೇನೆ. ಬುಮ್ರಾ ಮೊದಲು ನಿಧಾನಗತಿಯ ಬೌಲ್ ಮಾಡುತ್ತಿದ್ದರು. ಅಬುಧಾಬಿಯಲ್ಲಿ ನಡೆದ ಪಂದ್ಯವೊಂದರಲ್ಲಿ ಅವರು, ಟ್ರೆಂಟ್ ಬೌಲ್ಟ್ ಮತ್ತು ನಾಥನ್ ಕೌಲ್ಟರ್-ನೈಲ್ ಸಾಕಷ್ಟು ರನ್ ಬಿಟ್ಟುಕೊಟ್ಟರು. ಆ ವರ್ಷದ ಸೆಪ್ಟೆಂಬರ್‌ನಲ್ಲಿ ಐಪಿಎಲ್ ನಡೆಯುತ್ತಿತ್ತು. ಸೆಪ್ಟೆಂಬರ್‌ನಲ್ಲಿ ಯುಎಇಯಲ್ಲಿ ರಾತ್ರಿ ವೇಳೆಯಲ್ಲಿ ಬಾಲ್ ಸಾಕಷ್ಟು ಒದ್ದೆಯಾಗುತ್ತಿದ್ದರಿಂದ ಸರಿಯಾಗಿ ಬೌಲಿಂಗ್ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗೀ ಮುಂಬೈ ಇಂಡಿಯನ್ಸ್ ನನ್ನನ್ನು ಕರೆದರು. 6 ದಿನ ಕ್ವಾರೆಂಟೈನ್ ನಲ್ಲಿದ್ದು, ಏಳನೇ ದಿನ ಅಭ್ಯಾಸಕ್ಕೆ ತರಳಿದೆ. ಆ ರಾತ್ರಿ ತಂಡದ ಜೊತೆಯಲ್ಲಿದೆ. ನಾನು T10 ಲೀಗ್‌ನಲ್ಲಿ ಮೇಡನ್ ಓವರ್ ಮಾಡಿದ್ದರಿಂದ ಜಹೀರ್ ಖಾನ್ ಮತ್ತು ರಾಬಿನ್ ಸಿಂಗ್ ನನಗೆ ತಿಳಿದಿದ್ದರು. ಮೊದಲಿಗೆ ನಾನು ಯಾರ್ಕರ್ ಬೌಲ್ ಮಾಡಿದ್ದೆ ಮತ್ತು ನಂತರದ ಐದು ಎಸೆತಗಳು ನಿಧಾನವಾದವು. ಆದ್ದರಿಂದ ನಾವು ಒಟ್ಟಿಗೆ ಕುಳಿತಿದ್ದೇವೆ, ಬುಮ್ರಾ, ರೋಹಿತ್ ಶರ್ಮಾ ಎಲ್ಲರೂ ಕುಳಿತು ಚರ್ಚಿಸಿದ್ದೇವು ಎಂದು ಜಹೂರ್ ವೀಡಿಯೊದಲ್ಲಿ ಹೇಳಿದ್ದಾರೆ.

T10 ನಲ್ಲಿನ ಅವರ ಪ್ರದರ್ಶನದಿಂದಾಗಿ ಮುಂಬೈ ಇಂಡಿಯನ್ಸ್ ತಂಡದ ಮ್ಯಾನೇಜ್‌ಮೆಂಟ್ ಅವರ ನಿಧಾನಗತಿಯ ಎಸೆತಗಳ ಬಗ್ಗೆ ತಿಳಿದಿತ್ತು ಬುಮ್ರಾ ಜೊತೆಗೆ ಸುದೀರ್ಘ ಮಾತುಕತೆ ನಡೆಸಿ, ಭಾರತದ ಸ್ಟಾರ್ ವೇಗಿಯೊಂದಿಗೆ ನೆಟ್ಸ್‌ನಲ್ಲಿ ಬೌಲಿಂಗ್ ಅಭ್ಯಾಸ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ.

Jasprit Bumrah
Watch | "ಪ್ರತಿ ಆಟಗಾರನೂ ಮುಖ್ಯ, ಆದರೆ..." ಬುಮ್ರಾ ಕುರಿತು ಕಪಿಲ್ ದೇವ್ ಹೇಳಿದ್ದು...

ಶೇನ್ ಬಾಂಡ್ ಮುಂಬೈ ಇಂಡಿಯನ್ಸ್ ಬೌಲಿಂಗ್ ಕೋಚ್ ಆಗಿದ್ದರು. ಮತ್ತು ಮಹೇಲ ಜಯವರ್ಧನೆ ಬೌಲಿಂಗ್ ಹಿಂದೆ ನಿಂತಿದ್ದರು. ಹಾಗಾಗಿ ನಾನು ನಿಧಾನವಾಗಿ ಬೌನ್ಸರ್ ಹಾಕಿದೆ. ಅದು ಬ್ಯಾಟ್ಸ್ ಮನ್ ಗೆ ತಾಗಿತು. ಏನು ಹಿಡಿತ ನಿಮ್ಮದು ಎಂದು ಶೇನ್ ಬಾಂಡ್ ಕೇಳಿದರು. ಇದನ್ನು ಬೂಮ್ರಾ ಅವರಿಗೂ ತೋರಿಸಿದೆ. ಎರಡು ಅಥವಾ ಮೂರು ನಿಧಾನಗತಿಯ ಎಸೆತ ಹಾಕಿದೆ. ಇದು ಕ್ರಿಕೆಟ್ ನಲ್ಲಿ ಹೊಸ ತಂತ್ರ ಬೂಮ್ರಾ ಜಯವರ್ಧನೆಗೆ ಹೇಳಿದರು. ಈಗ ನಾನು ಯುಎಇ ಬೌಲರ್ ಆಗಿದ್ದೇನೆ. ಬೂಮ್ರಾ ವಿಶ್ವ ದರ್ಜೆ ಮಟ್ಟದ ಬೌಲರ್ ಆಗಿದ್ದಾರೆ. ಅಂತಹ ಬಿಗ್ ಸ್ಟಾರ್ ನನ್ನು ನಿಜವಾಗಿಯೂ ಇಷ್ಟಪಡುತ್ತೇನೆ ಎಂದು ಜಹೂರ್ ಖಾನ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com