ಸನ್‌ರೈಸರ್ಸ್ ಲೀಡ್ಸ್ (ಹಿಂದೆ ನಾರ್ಥನ್ ಸೂಪರ್‌ಚಾರ್ಜರ್ಸ್) ಪಾಕಿಸ್ತಾನದ ಲೆಗ್-ಸ್ಪಿನ್ನರ್ ಅಬ್ರಾರ್ ಅಹ್ಮದ್ ಅವರನ್ನು ದಿ ಹಂಡ್ರೆಡ್ 2026 ಹರಾಜಿನಲ್ಲಿ ಖರೀದಿಸಿದೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)-ಸಂಯೋಜಿತ ಫ್ರಾಂಚೈಸಿಗಳು ಪಾಕಿಸ್ತಾನದ ಯಾವುದೇ ಕ್ರಿಕೆಟಿಗರಿಗೆ ಬಿಡ್ ಮಾಡುವುದಿಲ್ಲ ಎಂದು ಈ ಹಿಂದೆ ಸಾಕಷ್ಟು ವರದಿಗಳು ಸೂಚಿಸಿದ್ದವ್ು. ಆದರೆ, ಅದರ ಹೊರತಾಗಿಯೂ, ಸನ್‌ರೈಸರ್ಸ್ ಅಬ್ರಾರ್ ಅವರನ್ನು ಖರೀದಿಸಿದೆ.
ಟ್ರೆಂಟ್ ರಾಕೆಟ್ಸ್ ಆರಂಭದಲ್ಲಿ £100,000 ಬಿಡ್ ಅನ್ನು ಪ್ರಾರಂಭಿಸಿತು. ಆದರೆ, ಸನ್ ರೈಸರ್ಸ್ ಕೂಡ ಬಿಡ್ಡಿಂಗ್ ಮಾಡಲು ಮುಂದಾಯಿತು. ಈ ಅಂಕಿ-ಅಂಶವು £190,000 (ಸುಮಾರು ₹2.34 ಕೋಟಿ) ತಲುಪುವವರೆಗೆ ಎರಡೂ ಫ್ರಾಂಚೈಸಿಗಳು ಬಿಡ್ ಮಾಡಿದವು. ಬಳಿಕ ಅಬ್ರಾರ್ ಅವರನ್ನು ದಿ ಹಂಡ್ರೆಡ್ 2026ರ ಹರಾಜಿನಲ್ಲಿ ಸನ್‌ರೈಸರ್ಸ್ ಫ್ರಾಂಚೈಸಿ ತನ್ನದಾಗಿಸಿಕೊಂಡಿತು. ಈ ಹಿಂದೆ ಪಾಕಿಸ್ತಾನದ ಉಸ್ಮಾನ್ ತಾರಿಫ್ ಅನ್ನು ಬರ್ಮಿಂಗ್‌ಹ್ಯಾಮ್ ಫೀನಿಕ್ಸ್ ಫ್ರಾಂಚೈಸಿಯು ಖರೀದಿಸಿತು.
ಪಾಕಿಸ್ತಾನದ ಶಾದಾಬ್ ಖಾನ್, ಸೈಮ್ ಅಯೂಬ್ ಮತ್ತು ಹ್ಯಾರಿಸ್ ರೌಫ್ ಯಾವುದೇ ಬಿಡ್‌ಗಳನ್ನು ಪಡೆಯಲಿಲ್ಲ. ಈಮಧ್ಯೆ, ಶಾಹೀನ್ ಶಾ ಅಫ್ರಿದಿ ಕೆಲವೇ ಕ್ಷಣಗಳ ಮೊದಲು ದಿ ಹಂಡ್ರೆಡ್ 2026 ಹರಾಜಿನಿಂದ ಹಿಂದೆ ಸರಿದರು.
2009 ರಿಂದ ಐಪಿಎಲ್‌ನಿಂದ ಪಾಕಿಸ್ತಾನಿ ಕ್ರಿಕೆಟಿಗರನ್ನು ನಿಷೇಧಿಸಿದ ನಂತರ ಬಹುಶಃ ಮೊದಲ ಬಾರಿಗೆ ಭಾರತದೊಂದಿಗೆ ಸಂಪರ್ಕ ಹೊಂದಿರುವ ಫ್ರಾಂಚೈಸಿಯೊಂದು ಪಾಕಿಸ್ತಾನದ ಕ್ರಿಕೆಟಿಗನನ್ನು ಖರೀದಿ ಮಾಡಿದೆ. ಎಲ್ಲ ತಂಡಗಳು IPL-ಬೆಂಬಲಿತವಾಗಿರುವ SA20 ನಲ್ಲಿ, ಇದುವರೆಗೂ ಯಾವುದೇ ಪಾಕಿಸ್ತಾನಿ ಆಟಗಾರನನ್ನು ಖರೀದಿಸಿಯೇ ಇಲ್ಲ.
ಅಬ್ರಾರ್ ಅವರನ್ನು ಖರೀದಿಸುವ ಸನ್‌ರೈಸರ್ಸ್ ಲೀಡ್ಸ್ ನಿರ್ಧಾರವು ಭಾರತದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ಬಳಕೆದಾರರ ಅತೃಪ್ತಿಗೆ ಕಾರಣವಾಗಿದೆ. ಅಬ್ರಾರ್ ಮೇನಲ್ಲಿ ಆಪರೇಷನ್ ಸಿಂಧೂರ ನಂತರ ಭಾರತೀಯ ಸಶಸ್ತ್ರ ಪಡೆಗಳನ್ನು ಲೇವಡಿ ಮಾಡಿದ್ದರು. ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಪಾಕಿಸ್ತಾನದ ವಾಯುಪಡೆಯಿಂದ ಸೆರೆ ಸಿಕ್ಕ ಘಟನೆಯನ್ನು ಅವರು ಬಳಸಿಕೊಂಡಿದ್ದರು. ಅಭಿನಂದನ್ ಟೀ ಕುಡಿಯುವ ಚಿತ್ರಗಳನ್ನು ಹಲವಾರು ಪಾಕಿಸ್ತಾನಿಗಳು ಭಾರತದ ಮೇಲೆ ಗುರಿ ಇಡಲು ಬಳಸಿದ್ದಾರೆ. ಅಬ್ರಾರ್ ಕೂಡ ಭಾಗವಹಿಸಿದ್ದರು.
Advertisement