'ಪಾಕ್ ಆಟಗಾರರಿಗೆ ನೀಡುವ ಹಣ ಸೈನಿಕರ ಸಾವಿಗೆ ಕಾರಣವಾಗುತ್ತೆ': ಸನ್‌ರೈಸರ್ಸ್‌ಗೆ 'ಬಹಿಷ್ಕಾರ'ದ ಎಚ್ಚರಿಕೆ ನೀಡಿದ ಸುನೀಲ್ ಗವಾಸ್ಕರ್

ಭಾರತೀಯ ಕ್ರಿಕೆಟ್ ದಿಗ್ಗಜ ಸುನೀಲ್ ಗವಾಸ್ಕರ್, ಭಾರತೀಯ ತಂಡಗಳು ಪಾಕಿಸ್ತಾನಿ ಆಟಗಾರರನ್ನು ತಮ್ಮ ತಂಡದಲ್ಲಿ ಸೇರಿಸಿಕೊಳ್ಳುವುದನ್ನು ಏಕೆ ತಡೆಯಬೇಕು ಎಂಬುದನ್ನು ವಿವರಿಸಿದ್ದಾರೆ.
Sunil Gavaskar
ಸುನೀಲ್ ಗವಾಸ್ಕರ್
Updated on

ಭಾರತೀಯ ಒಡೆತನದ (ಕಾವ್ಯ ಮಾರನ್) ಸನ್‌ರೈಸರ್ಸ್ ಲೀಡ್ಸ್ ಇತ್ತೀಚೆಗೆ ಪುರುಷರ ದಿ ಹಂಡ್ರೆಡ್ ಹರಾಜು ಪ್ರಕ್ರಿಯೆಯಲ್ಲಿ ಪಾಕಿಸ್ತಾನದ ಕ್ರಿಕೆಟಿಗ ಅಬ್ರಾರ್ ಅಹ್ಮದ್ ಅವರನ್ನು ಖರೀದಿಸಿರುವುದು ಇದೀಗ ದೇಶದಾದ್ಯಂತ ಕೋಲಾಹಲಕ್ಕೆ ಕಾರಣವಾಗಿದೆ. ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಟೀಕೆಗಳು ಕೇಳಿಬಂದ ನಂತರ ಸನ್‌ರೈಸರ್ಸ್ ಲೀಡ್ಸ್‌ನ ಅಧಿಕೃತ X ಖಾತೆಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ. ಸನ್‌ರೈಸರ್ಸ್ ಮಾಲೀಕರು ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು SA20 ರಲ್ಲಿ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ಅನ್ನು ಸಹ ಹೊಂದಿದ್ದಾರೆ.

ಪಾಕಿಸ್ತಾನಿ ಆಟಗಾರರನ್ನು ಐಪಿಎಲ್‌ನಿಂದ ನಿಷೇಧಿಸಲಾಗಿದೆ. ಅವರು 2008ರ ಉದ್ಘಾಟನಾ ಆವೃತ್ತಿಯಲ್ಲಿ ಮಾತ್ರ ಆಡಿದ್ದರು. ಅದರ ನಂತರ, ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿಯಿಂದಾಗಿ ಐಪಿಎಲ್‌ನಲ್ಲಿ ಪಾಕಿಸ್ತಾನಿಗಳ ಉಪಸ್ಥಿತಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕಾರಣವಾಯಿತು. ಸಾಮಾನ್ಯವಾಗಿ, ವಿದೇಶಿ ಲೀಗ್‌ಗಳಲ್ಲಿ ತಂಡಗಳನ್ನು ಹೊಂದಿರುವ ಭಾರತೀಯ ಫ್ರಾಂಚೈಸಿಗಳು ಪಾಕಿಸ್ತಾನಿ ಆಟಗಾರರನ್ನು ಆಯ್ಕೆ ಮಾಡುವುದನ್ನು ತಪ್ಪಿಸುತ್ತವೆ. ಆದರೆ, ಸನ್‌ರೈಸರ್ಸ್ ಈ ಬಾರಿ ಪಾಕ್ ಆಟಗಾರನನ್ನು ಖರೀದಿಸಿ ಟೀಕೆಗೆ ಗುರಿಯಾಗಿದೆ.

ಸುನೀಲ್ ಗವಾಸ್ಕರ್ ಸ್ಪಷ್ಟ ನಿಲುವು

ಭಾರತೀಯ ಕ್ರಿಕೆಟ್ ದಿಗ್ಗಜ ಸುನೀಲ್ ಗವಾಸ್ಕರ್, ಭಾರತೀಯ ತಂಡಗಳು ಪಾಕಿಸ್ತಾನಿ ಆಟಗಾರರನ್ನು ತಮ್ಮ ತಂಡದಲ್ಲಿ ಸೇರಿಸಿಕೊಳ್ಳುವುದನ್ನು ಏಕೆ ತಡೆಯಬೇಕು ಎಂಬುದನ್ನು ವಿವರಿಸಿದ್ದಾರೆ.

Sunil Gavaskar
ಪಾಕ್ ಸ್ಪಿನ್ನರ್ ಅಬ್ರಾರ್ ಅಹ್ಮದ್ ಖರೀದಿಸಿದ SRH ಮಾಲೀಕತ್ವದ ತಂಡ; ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಪ್ರತಿಕ್ರಿಯೆ

'ದಿ ಹಂಡ್ರೆಡ್‌ನಲ್ಲಿನ ಫ್ರಾಂಚೈಸಿಯ ಭಾರತೀಯ ಮಾಲೀಕರು ಪಾಕಿಸ್ತಾನಿ ಆಟಗಾರನನ್ನು ಖರೀದಿಸಿದ್ದರಿಂದ ಉಂಟಾದ ಕೋಲಾಹಲವು ಅಚ್ಚರಿಯೇನಲ್ಲ. 2008ರ ನವೆಂಬರ್‌ನಲ್ಲಿ ಮುಂಬೈ ದಾಳಿಯ ನಂತರ, ಭಾರತೀಯ ಫ್ರಾಂಚೈಸಿ ಮಾಲೀಕರು ಐಪಿಎಲ್‌ಗಾಗಿ ಪಾಕಿಸ್ತಾನಿ ಆಟಗಾರರನ್ನು ನಿರ್ಲಕ್ಷ್ಯಿಸಿದ್ದಾರೆ. ಶಸ್ತ್ರಾಸ್ತ್ರಗಳನ್ನು ಖರೀದಿಸುವ ತನ್ನ ಸರ್ಕಾರಕ್ಕೆ ಆದಾಯ ತೆರಿಗೆ ಪಾವತಿಸುವ ಪಾಕಿಸ್ತಾನಿ ಆಟಗಾರನಿಗೆ ಪಾವತಿಸುವ ಶುಲ್ಕವು ಭಾರತೀಯ ಸೈನಿಕರು ಮತ್ತು ನಾಗರಿಕರ ಸಾವಿಗೆ ಪರೋಕ್ಷವಾಗಿ ಕೊಡುಗೆ ನೀಡುತ್ತದೆ ಎಂಬುದನ್ನು ಭಾರತೀಯ ಸಂಸ್ಥೆಗಳು ಪಾಕಿಸ್ತಾನಿ ಕಲಾವಿದರು ಮತ್ತು ಕ್ರೀಡಾಪಟುಗಳನ್ನು ಹೊಂದುವಾಗ ಪರಿಗಣಿಸಬೇಕು' ಎಂದು ಮಿಡ್-ಡೇಗೆ ಬರೆದ ಅಂಕಣದಲ್ಲಿ ಬರೆದಿದ್ದಾರೆ.

'ಭಾರತೀಯ ಸಂಸ್ಥೆಯಾಗಿರಲಿ ಅಥವಾ ವಿದೇಶಿ ಅಂಗಸಂಸ್ಥೆಯಾಗಿರಲಿ, ಅವುಗಳ ಮಾಲೀಕರು ಭಾರತೀಯರಾಗಿದ್ದರೆ, ಅವರು ಭಾರತೀಯರ ಸಾವುನೋವುಗಳಿಗೆ ಕೊಡುಗೆ ನೀಡುತ್ತಿದ್ದಾರೆ ಎಂದರ್ಥ. ಅದು ಅಷ್ಟೇ ಸರಳವಾಗಿದೆ. ದಿ ಹಂಡ್ರೆಡ್ ತಂಡದ ಕೋಚ್ ನ್ಯೂಜಿಲೆಂಡ್‌ನ ಡೇನಿಯಲ್ ವೆಟ್ಟೋರಿ ಈ ಸರಳ ಕ್ರಿಯಾತ್ಮಕತೆಯನ್ನು ಅರ್ಥಮಾಡಿಕೊಳ್ಳದಿರಬಹುದು ಮತ್ತು ಆದ್ದರಿಂದ ತಂಡದಲ್ಲಿ ಕೆಲವು ಪಾಕಿಸ್ತಾನಿ ಆಟಗಾರರನ್ನು ಬಯಸಿರಬಹುದು. ಆದರೆ, ಖಂಡಿತವಾಗಿಯೂ ಮಾಲೀಕರು ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕಾಗಿತ್ತು ಮತ್ತು ಖರೀದಿಯನ್ನು ತಡೆಯಬೇಕಿತ್ತು. ಬೇರೆ ದೇಶದಲ್ಲಿ ಆಡಿ ಪಂದ್ಯಾವಳಿಯನ್ನು ಗೆಲ್ಲುವುದು ಭಾರತೀಯರ ಜೀವನಕ್ಕಿಂತ ಹೆಚ್ಚು ಮುಖ್ಯವೇ?' ಎಂದು ಗವಾಸ್ಕರ್ ಪ್ರಶ್ನಿಸಿದ್ದಾರೆ.

Sunil Gavaskar
ಭಾರತೀಯ ಸಶಸ್ತ್ರ ಪಡೆಗಳ ಲೇವಡಿ: ಪಾಕ್ ಸ್ಪಿನ್ನರ್ ಅಬ್ರಾರ್ ಅಹ್ಮದ್‌ರನ್ನು ಖರೀದಿಸಿದ ಕಾವ್ಯಾ ಮಾರನ್ ಒಡೆತನದ ಫ್ರಾಂಚೈಸಿ!

ಬಹಿಷ್ಕಾರ ಎಚ್ಚರಿಕೆ

'ಈ ತಂಡವು ಆಡುವ ಪ್ರತಿಯೊಂದು ಪಂದ್ಯಕ್ಕೂ, ಅದು ತವರಿನಲ್ಲಿರಲಿ ಅಥವಾ ವಿದೇಶದಲ್ಲಿರಲಿ, ಪಾಕ್ ಆಟಗಾರನ ಖರೀದಿಯನ್ನು ವಿರೋಧಿಸಿ ಭಾರತೀಯ ಅಭಿಮಾನಿಗಳು ಬೃಹತ್ ಪ್ರತಿಭಟನೆ ನಡೆಸುವುದು ಆಶ್ಚರ್ಯವೇನಿಲ್ಲ. ಅಭಿಮಾನಿಗಳು ತಂಡವನ್ನು ಬಹಿಷ್ಕರಿಸಬಹುದು. ವಾಸ್ತವವಾಗಿ, ತಮ್ಮ ತಂಡದಲ್ಲಿ ಕೆಲವು ಆಕರ್ಷಕ ಸ್ಟ್ರೋಕ್ ಮೇಕರ್ಸ್ ಇದ್ದರೂ ಸಹ ಪ್ರೇಕ್ಷಕರು ದೂರ ಉಳಿದು ಆ ನಿರ್ಧಾರಕ್ಕೆ ತಮ್ಮ ಅಸಮ್ಮತಿಯನ್ನು ತೋರಿಸಬಹುದು' ಎಂದು ಹೇಳಿದರು.

'ಈ ತಪ್ಪನ್ನು ಸರಿಪಡಿಸಲು ಇನ್ನೂ ಸಮಯವಿದೆ ಮತ್ತು ಬುದ್ಧಿವಂತ ಸಲಹೆಗಳು ಮೇಲುಗೈ ಸಾಧಿಸುತ್ತವೆ ಎಂದು ಆಶಿಸುತ್ತೇವೆ' ಎಂದಿದ್ದಾರೆ.

ಈಮಧ್ಯೆ, ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಶುಕ್ರವಾರ, ಇದು ವಿದೇಶಿ ಲೀಗ್‌ಗೆ ಸಂಬಂಧಿಸಿರುವುದರಿಂದ ಮಂಡಳಿಯು ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಮತ್ತು ಫ್ರಾಂಚೈಸಿ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com