T20 ಶ್ರೇಷ್ಠ ಆಟಗಾರ: ABD ಆಯ್ಕೆ ಕೊಹ್ಲಿ, ಕ್ರಿಸ್ ಗೇಲ್ ಅಲ್ಲವೇ ಅಲ್ಲ; ಮತ್ಯಾರು ಗೊತ್ತಾ?

ABD ಕ್ರಿಸ್ ಗೇಲ್ ಮತ್ತು ವಿರಾಟ್ ಕೊಹ್ಲಿ ಜೊತೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಭಾಗವಾಗಿದ್ದರು. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ನಂತಹ ತಂಡಗಳನ್ನು ಎದುರಿಸಿದ್ದರು
AB De Villiers With RCB team
ಆರ್ ಸಿಬಿ ಟ್ರೋಫಿ ಗೆದ್ದಾಗ ಎಬಿ ಡಿವಿಲ್ಲಿಯರ್ಸ್ ಭಾಗವಹಿಸಿದ ಕ್ಷಣ
Updated on

ಸಾರ್ವಕಾಲಿಕ ಟಿ-20 ಶ್ರೇಷ್ಠ ಆಟಗಾರ ಯಾರು? ಎಂಬ ಪ್ರಶ್ನೆಗೆ RCB ಮಾಜಿ ಆಟಗಾರ ಡಿವಿಲ್ಲಿಯರ್ಸ್ ಉತ್ತರಿಸಿದ್ದಾರೆ. ಈ ಟೈಟಲ್ ಗೆ ಇವರು ಕೂಡಾ ಸ್ಪರ್ಧಿಯೇ. ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕಿಟಗ ಎಲ್ಲಾ ಮಾದರಿಯ ಪಂದ್ಯಗಳನ್ನಾಡಿದ್ದಾರೆ.

ಕ್ರಿಸ್ ಗೇಲ್ ಮತ್ತು ವಿರಾಟ್ ಕೊಹ್ಲಿ ಜೊತೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಭಾಗವಾಗಿದ್ದರು. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ನಂತಹ ತಂಡಗಳನ್ನು ಎದುರಿಸಿದ್ದರು. ಆದರೂ, ಸಾರ್ವಕಾಲಿಕ ಶ್ರೇಷ್ಠ T20 ಆಟಗಾರನನ್ನು ಆಯ್ಕೆ ಮಾಡುವ ವಿಚಾರ ಬಂದಾಗ ಬೌಲರ್ ಅನ್ನು ಡಿವಿಲಿಯರ್ಸ್ ಆಯ್ಕೆ ಮಾಡಿದ್ದಾರೆ.

ಹೌದು. ಸಾರ್ವಕಾಲಿಕ T20 ಶ್ರೇಷ್ಠ ಆಟಗಾರ ಯಾರು ಎಂಬ ಪ್ರಶ್ನೆಗೆ ಉತ್ತರಿಸಿದ ಡಿವಿಲಿಯರ್ಸ್, ಇದು ವಿವಾದಾತ್ಮಕವಾಗುತ್ತದೆ. ವಿವಾದಾತ್ಮಕವಲ್ಲ, ವ್ಯಂಗ್ಯಾತ್ಮಕ ಉತ್ತರ. ಏಕೆಂದರೆ ಅದು ಜಸ್ಪ್ರೀತ್ ಬುಮ್ರಾ ಎಂದು ನಾನು ಭಾವಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ಕೇವಲ ಅವರ ಸ್ಥಿರತೆ. 20 ಓವರ್‌ಗಳ ಯಾವುದೇ ಹಂತದಲ್ಲಿ ಬೌಲ್ ಮಾಡುವ ಮತ್ತು ಒತ್ತಡದಲ್ಲಿ ವಿಕೆಟ್ ಪಡೆಯುವ ಅವರ ಸಾಮರ್ಥ್ಯ. ಹೊಸ ಚೆಂಡು, ಹಳೆಯ ಬಾಲ್, ಯಾವುದೇ ತೆಗೆದುಕೊಳ್ಳಿ. ಸೂಪರ್ ಓವರ್ ನಲ್ಲಿ ಅವರಿಗೆ ಬಾಲ್ ಹಾಕಿ, ಪಂದ್ಯವನ್ನು ಗೆಲ್ಲಿಸಿಕೊಡುತ್ತಾರೆ. ಅದು ನಿಮ್ಮ ಜಸ್ಪ್ರೀತ್ ಬೂಮ್ರಾ ಎಂದಿದ್ದಾರೆ.

ಈ ಮಧ್ಯೆ ಪಾಕಿಸ್ತಾನ ಕ್ರಿಕೆಟ್‌ನ ಹಿರಿಯ ಆಯ್ಕೆಗಾರ ಮತ್ತು ಮಾಜಿ ವೇಗಿ ಆಕಿಬ್ ಜಾವೇದ್ ಕೂಡಾ ಜಸ್ಪ್ರೀತ್ ಬೂಮ್ರಾ ಬೌಲಿಂಗ್ ನ್ನು ಕೊಂಡಾಡಿದ್ದಾರೆ. ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ವಿಶಿಷ್ಟವಾದ ಬೌಲಿಂಗ್ ಕ್ರಮ ಹೊಂದಿದ್ದಾರೆ. ಅದು ಬ್ಯಾಟರ್‌ಗಳು ಲಯದಲ್ಲಿರಲು ಅವಕಾಶ ನೀಡಲ್ಲ ಎಂದಿದ್ದಾರೆ.

ಆಕಿಬ್ ಜಾವೇದ್ ವಿಚಿತ್ರವಾದ ಹೋಲಿಕೆಗೆ ನೆಟ್ಟಿಗರ ಕಿಡಿ!

ಆದರೆ ಅವರು ವಿಚಿತ್ರವಾಗಿ ಭಾರತೀಯ ವೇಗಿಯನ್ನು ಪಾಕ್ ನ ವಿವಾದಾತ್ಮಕ ಬೌಲರ್ ಉಸ್ಮಾನ್ ತಾರಿಕ್ ಜೊತೆ ಹೋಲಿಸಿದ್ದಾರೆ. ಆಕಿಬ್ ಅವರ ಹೇಳಿಕೆಗೆ ಸಾಮಾಜಿಕ ಮಾಧ್ಯಮದಲ್ಲಿ ಕ್ರಿಕೆಟ್ ಅಭಿಮಾನಿಗಳು ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ. ಬುಮ್ರಾ ಮತ್ತು ಉಸ್ಮಾನ್ ನಡುವಿನ ಹೋಲಿಕೆಯನ್ನು ಹಲವರು ಲೇವಡಿ ಮಾಡಿದ್ದಾರೆ.

AB De Villiers With RCB team
IPL 2026: 'ರುತುರಾಜ್ ಗಾಯಕ್ವಾಡ್ ಸರಿಯಾದ ಆಯ್ಕೆ, ಸಂಜು ಸ್ಯಾಮ್ಸನ್ ಅವರತ್ತ ನೋಡಲೇಬೇಡಿ...'; CSKಗೆ ಎಬಿ ಡಿವಿಲಿಯರ್ಸ್ ಸಲಹೆ!

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com