ಧೋನಿ ಇಲ್ಲದೆ ಮುಗ್ಗರಿಸಿದ CSK ಯುವಪಡೆ: RR ವಿರುದ್ಧ 127 ರನ್‌ಗಳಿಗೆ ಆಲೌಟ್

ಟಾಟಾ ಐಪಿಎಲ್ 2026ರ ಮೂರನೇ ಪಂದ್ಯ ಇಂದು ಬರ್ಸಪರ ಕ್ರಿಕೆಟ್ ಕ್ರೀಡಾಂಗಣದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವೆ ನಡೆಯಿತು. ಆರ್‌ಆರ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.
CSK Vs RR
ಸಿಎಸ್ ಕೆ ವರ್ಸಸ್ ಆರ್ ಆರ್
Updated on

ಟಾಟಾ ಐಪಿಎಲ್ 2026ರ ಮೂರನೇ ಪಂದ್ಯ ಇಂದು ಬರ್ಸಪರ ಕ್ರಿಕೆಟ್ ಕ್ರೀಡಾಂಗಣದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವೆ ನಡೆಯಿತು. ಆರ್‌ಆರ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮಳೆಯಿಂದಾಗಿ ಪಂದ್ಯ ತಡವಾಗಿ ಆರಂಭವಾಯಿತು. ನಿಗದಿತ ಓವರ್ ನಲ್ಲಿ ಚೆನ್ನೈ 127 ರನ್ ಗಳಿಗೆ ಆಲೌಟ್ ಆಯಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಸಿಎಸ್​ಕೆ ಪವರ್‌ಪ್ಲೇನಲ್ಲಿಯೇ 41 ರನ್ ಗಳಿಗೆ ಪ್ರಮುಖ 4 ವಿಕೆಟ್‌ಗಳನ್ನು ಕಳೆದುಕೊಂಡು ಆರಂಭದಲ್ಲೇ ಒತ್ತಡಕ್ಕೆ ಸಿಲುಕಿತು. ಆರಂಭಿಕ ಬ್ಯಾಟರ್ ಸಂಜು ಸ್ಯಾಮ್ಸನ್ 6 ರನ್ ಗೆ ಔಟಾಗಿ ಪೆವಿಲಿಯನ್​ತ್ತ ಹೆಜ್ಜೆ ಹಾಕಿದರು. ನಿಧಾನಗತಿಯ ಆರಂಭ ಮಾಡಿದ ರುತುರಾಜ್ ಗಾಯಕ್ವಾಡ್ ಸಹ 6 ರನ್ ಗಳಿಗೆ ಔಟಾಗಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು.

CSK Vs RR
ಕೊನೆಗೂ ಗೊಂದಲ ಪರಿಹಾರ: 3 IPL, 2 ಅಂತಾರಾಷ್ಟ್ರೀಯ ಪಂದ್ಯದ ಟಿಕೆಟ್ ನೀಡಲು KSCA ಒಪ್ಪಿಗೆ; DCM ಡಿ.ಕೆ ಶಿವಕುಮಾರ್ ಹೇಳಿಕೆ

ನಂತರ ಬಂದ ಟೀಂ ಇಂಡಿಯಾದ ಅಂಡರ್ 19 ತಂಡ ನಾಯಕ ಆಯೂಷ್ ಮಾತ್ರೆ ಡಕೌಟ್ ಆದರು. ಇನ್ನು ಶಾರ್ಟ್ ಸಹ 2 ರನ್ ಗಳಿಸಿ ಪೆವಿಲಿಯನ್ ಸೇರಿದರು. ಸರ್ಫರಾಜ್ ಖಾನ್ ಸ್ಫೋಟಕ ಬ್ಯಾಟಿಂಗ್ ಮೂಲಕ ಭರವಸೆ ಮೂಡಿಸಿದರು. ಆದರೆ 17 ರನ್ ಗಳಿಗೆ ಔಟಾದರು. ಜೆ ಓವರ್ಟನ್ ತಾಳ್ಮೆಯ ಆಟವಾಡಿ ತಂಡ ನೂರು ರನ್ ಗಡಿ ದಾಟಲು ನೆರವಾದರು. ಓವರ್ಟನ್ 43 ರನ್ ಗಳಿಗೆ ಔಟಾದರು.

ರಾಜಸ್ಥಾನ ರಾಯಲ್ಸ್ ಪರ ಜೋಫ್ರಾ ಆರ್ಚರ್, ನಾಂಡ್ರೆ ಬರ್ಗರ್, ರವೀಂದ್ರ ಜಡೇಜಾ ತಲಾ 2 ವಿಕೆಟ್ ಪಡೆದರು. ಇನ್ನು ಬ್ರಿಜೇಶ್ ಶರ್ಮಾ, ಸಂದೀಪ್ ಶರ್ಮಾ ಮತ್ತು ರವಿ ಬಿಷ್ಣೋಯ್ ತಲಾ 1 ವಿಕೆಟ್ ಪಡೆದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com