ಮತ್ತೊಂದು ಕೆಟ್ಟ ನಡವಳಿಕೆಯಿಂದ ವಿಶ್ವಮಟ್ಟದಲ್ಲಿ ಪಾಕ್ ಸುದ್ದಿ! PSL ನಲ್ಲಿ 'ಬಾಲ್ ಟ್ಯಾಂಪರಿಂಗ್': ಕ್ಯಾಮರಾದಲ್ಲಿ ಸೆರೆ! ನೆಟ್ಟಿಗರ ಲೇವಡಿ

ಭಾನುವಾರ ನಡೆದ ಕರಾಚಿ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಲಾಹೋರ್ ಖಲಂದರ್ಸ್ ವಿರುದ್ಧ ಈ ಆರೋಪ ಕೇಳಿಬಂದಿದೆ. ಕ್ರಿಕೆಟಿಗ ಫಖರ್ ಜಮಾನ್ ವಿರುದ್ಧ ಚೆಂಡು ವಿರೂಪಗೊಳಿಸಿದ ಆರೋಪ ಮಾಡಲಾಗಿದೆ.
Ball-tampering row hits PSL 2026
ಕ್ರಿಕೆಟಿಗ ಫಖರ್ ಜಮಾನ್ ವಿರುದ್ಧ ಚೆಂಡು ವಿರೂಪ ಆರೋಪ
Updated on

ಕರಾಚಿ: ಮತ್ತೊಂದು ನಾಚಿಕೆಗೇಡಿನ ನಡವಳಿಕೆಯಿಂದ ಪಾಕಿಸ್ತಾನ ವಿಶ್ವಮಟ್ಟದಲ್ಲಿ ಸುದ್ದಿಯಾಗಿದೆ. ಪಾಕಿಸ್ತಾನ ಸೂಪರ್ ಲೀಗ್ ನಲ್ಲಿ 'ಬಾಲ್ ಟ್ಯಾಪರಿಂಗ್' ವಿವಾದ ಭುಗಿಲೆದ್ದಿದೆ.

ಭಾನುವಾರ ನಡೆದ ಕರಾಚಿ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಲಾಹೋರ್ ಖಲಂದರ್ಸ್ ವಿರುದ್ಧ ಈ ಆರೋಪ ಕೇಳಿಬಂದಿದೆ. ಕ್ರಿಕೆಟಿಗ ಫಖರ್ ಜಮಾನ್ ವಿರುದ್ಧ ಚೆಂಡು ವಿರೂಪಗೊಳಿಸಿದ ಆರೋಪ ಮಾಡಲಾಗಿದೆ.

"ಮ್ಯಾಚ್ ರೆಫರಿ ರೋಶನ್ ಮಹಾನಾಮ ನೇತೃತ್ವದಲ್ಲಿ ನಡೆದ ವಿಚಾರಣೆಯ ಸಂದರ್ಭದಲ್ಲಿ ಫಖರ್ ತನ್ನ ವಿರುದ್ಧದ ಆರೋಪವನ್ನು ನಿರಾಕರಿಸಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹೇಳಿಕೆಯಲ್ಲಿ ತಿಳಿಸಿದೆ. "ಮುಂದಿನ 48 ಗಂಟೆಗಳ ಒಳಗೆ ಮತ್ತೊಂದು ವಿಚಾರಣೆ ನಡೆಯಲಿದೆ. ತದನಂತರ ಮ್ಯಾಚ್ ರೆಫರಿ ತಮ್ಮ ತೀರ್ಪನ್ನು ನೀಡಲಿದ್ದಾರೆ. ತಪ್ಪಿತಸ್ಥರೆಂದು ಕಂಡುಬಂದರೆ ಒಂದು ಪಂದ್ಯದಿಂದ ಅವರನ್ನು ನಿಷೇಧಿಸಲಾಗುವುದು ಎಂದು ಮಾಹಿತಿ ನೀಡಿದೆ.

ಕರಾಚಿ ಕಿಂಗ್ಸ್ ಗೆಲುವಿಗೆ ಇನ್ನೂ 14 ರನ್‌ಗಳ ಅಗತ್ಯವಿದ್ದು, ಅಂತಿಮ ಓವರ್ ಅನ್ನು ವೇಗದ ಬೌಲರ್ ಹ್ಯಾರಿಸ್ ರೌಫ್ ಬೌಲ್ ಮಾಡಬೇಕಾಗಿದ್ದಾಗ ವಿವಾದ ಸ್ಫೋಟಗೊಂಡಿದೆ. ಲಾಹೋರ್ ನಾಯಕ ಶಾಹೀನ್ ಶಾ ಅಫ್ರಿದಿ, ಬ್ಯಾಟರ್ ಜಮಾನ್ ಮತ್ತು ರೌಫ್ ಮೂವರು ಪರಸ್ಪರ ಚರ್ಚೆಯ ನಂತರ ಇದು ನಡೆದಿದೆ.

ಬಳಿಕ ಅಂಪೈರ್ ಫೈಸಲ್ ಅಫ್ರಿದಿ ಅವರು ಚೆಂಡನ್ನು ಪರಿಶೀಲಿಸಿದ್ದಾರೆ. ಎರಡನೇ ಆನ್-ಫೀಲ್ಡ್ ಅಂಪೈರ್ ಬಾಂಗ್ಲಾದೇಶದ ಶರ್ಫುದ್ದೌಲಾ ಅವರೊಂದಿಗೆ ಸುದೀರ್ಘ ಚರ್ಚೆ ಬಳಿಕ ಚೆಂಡನ್ನೂ ವಿರೂಪಗೊಳಿಸಲಾಗಿದೆ ಎಂದು ನಿರ್ಧರಿಸಿದ್ದಾರೆ. ಕರಾಚಿಗೆ ಐದು ಪೆನಾಲ್ಟಿ ರನ್‌ಗಳನ್ನು ನೀಡಿದ್ದಾರೆ. ಕೊನೆಯ ಆರು ಎಸೆತಗಳಲ್ಲಿ ಒಂಬತ್ತು ರನ್‌ಗಳ ಅಗತ್ಯವಿತ್ತು. ಆಗ ಅಂಪೈರ್‌ಗಳೂ ಚೆಂಡನ್ನು ಬದಲಾಯಿಸಿದ್ದಾರೆ.

Ball-tampering row hits PSL 2026
ಪಾಕಿಸ್ತಾನ ಸೂಪರ್ ಲೀಗ್ ತೊರೆಯುವಂತೆ ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್, ಡೆರಿಲ್ ಮಿಚೆಲ್‌ ಸೇರಿದಂತೆ ವಿದೇಶಿ ಆಟಗಾರರಿಗೆ ಎಚ್ಚರಿಕೆ!

ಪಂದ್ಯದ ಬಳಿಕ ಮಾಜಿ ಕ್ರಿಕೆಟಿಗ ರಮೀಜಾ ರಾಜಾ ಕೇಳಿದ ಪ್ರಶ್ನೆಗೆ ಶಾಹೀನ್ ಶಾ ಉತ್ತರಿಸದೆ ತಡಬಡಾಯಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com