

31 ವರ್ಷದ ಆಟಗಾರನೊಬ್ಬ 15 ವರ್ಷದ ಆಟಗಾರನನ್ನು ಔಟ್ ಮಾಡಿದ ನಂತರ ಆಕ್ರಮಣಕಾರಿಯಾಗಿ ಸಂಭ್ರಮಾಚರಣೆ ಮಾಡಿದ್ದಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಕಿಡಿಕಾರಿದೆ. ಡೆಲ್ಲಿ ಕ್ಯಾಪಿಟಲ್ಸ್‌ನ (ಡಿಸಿ) ವೇಗಿ ಕೈಲ್ ಜೇಮಿಸನ್ ರಾಜಸ್ಥಾನ್ ರಾಯಲ್ಸ್‌ನ (ಆರ್‌ಆರ್) ವೈಭವ್ ಸೂರ್ಯವಂಶಿ ಎದುರು 'ಅತಿಯಾಗಿ ಆಚರಿಸಿದ' ಕಾರಣಕ್ಕಾಗಿ ಎಚ್ಚರಿಕೆ ಮತ್ತು ಒಂದು ಡಿಮೆರಿಟ್ ಪಾಯಿಂಟ್ ಪಡೆದಿದ್ದಾರೆ. ಜೇಮಿಸನ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಮ್ಯಾಚ್ ರೆಫರಿ ರಾಜೀವ್ ಸೇಠ್ ನೀಡಿದ ಪೆನಾಲ್ಟಿ ಸ್ವೀಕರಿಸಿದ್ದಾರೆ.
ಶುಕ್ರವಾರ ರಾತ್ರಿ ಜೈಪುರದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ರಾಜಸ್ಥಾನ್ ರಾಯಲ್ಸ್ ತಂಡದ ಆತಿಥ್ಯ ವಹಿಸಿತ್ತು. ಈ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಮೊದಲ ಬಾರಿಗೆ ಮೈಕೆಲ್ ಸ್ಟಾರ್ಕ್ ವಿರುದ್ಧ ಸೆಣಸಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಕೈಲ್ ಜೇಮಿಸನ್ ಎರಡನೇ ಓವರ್‌ನಲ್ಲಿಯೇ ಬ್ಯಾಟಿಂಗ್ ಸೆನ್ಸೇಷನ್ ಯುವ ಆಟಗಾರನ ವಿಕೆಟ್ ಪಡೆಯುವ ಮೂಲಕ ತಂಡಕ್ಕೆ ನೆರವಾದರು.
ವೈಭವ್ ಸೂರ್ಯವಂಶಿ ಎರಡು ಎಸೆತಗಳನ್ನು ಎದುರಿಸಿ ನಾಲ್ಕು ರನ್ ಗಳಿಸಿದ ಬಳಿಕ ಜೇಮೀಸನ್ ಅವರಿಗೆ ವಿಕೆಟ್ ಒಪ್ಪಿಸಿದರು.
ನಂತರ ಜೇಮಿಸನ್ ವೈಭವ್ ಸೂರ್ಯವಂಶಿ ಅವರ ಮುಂದೆ ಹೋಗಿ ಅತ್ಯಂತ ಉತ್ಸಾಹದಿಂದ ವಿಕೆಟ್ ಆಚರಿಸಿದರು. ಐಪಿಎಲ್ 2026ನೇ ಆವೃತ್ತಿಯ ಅತ್ಯಂತ ಅಪಾಯಕಾರಿ ಬ್ಯಾಟ್ಸ್‌ಮನ್ ಅನ್ನು ಕೇವಲ ಎರಡು ಎಸೆತಗಳಲ್ಲಿಯೇ ಔಟ್ ಮಾಡಿದ್ದಕ್ಕಾಗಿ ಜೇಮಿಸನ್ ಸಾಕಷ್ಟು ಉತ್ಸಾಹದಿಂದ ಬ್ಯಾಟರ್ ಮುಂದೆಯೇ ಸಂಭ್ರಮಾಚರಣೆ ಮಾಡಿದರು. ಇದರಿಂದ ಬಿಸಿಸಿಐ ಅವರಿಗೆ ಶಿಕ್ಷೆ ವಿಧಿಸಿದೆ.
'ಪಂದ್ಯದಲ್ಲಿ ಮತ್ತೊಬ್ಬ ಆಟಗಾರನ ವಿರುದ್ಧ ಅವಹೇಳನಕಾರಿಯಾಗಿ ವರ್ತಿಸುವ ಅಥವಾ ಆಕ್ರಮಣಕಾರಿ ಪ್ರತಿಕ್ರಿಯೆಯನ್ನು ಉಂಟುಮಾಡುವ ಭಾಷೆ, ಕ್ರಿಯೆಗಳು ಅಥವಾ ಸನ್ನೆಗಳನ್ನು ಬಳಸುವುದಕ್ಕೆ ಸಂಬಂಧಿಸಿದ ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.5 ಅನ್ನು ಜೇಮೀಸನ್ ಉಲ್ಲಂಘಿಸಿದ್ದಾರೆ ಎಂದು ಕಂಡುಬಂದಿದೆ' ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.
'ಮೊದಲ ಇನಿಂಗ್ಸ್‌ನ ಎರಡನೇ ಓವರ್‌ನಲ್ಲಿ ಈ ಘಟನೆ ಸಂಭವಿಸಿದೆ. ವೈಭವ್ ಸೂರ್ಯವಂಶಿ ಅವರನ್ನು ಔಟ್ ಮಾಡಿದ ನಂತರ, ಜೇಮಿಸನ್ ಆಕ್ರಮಣಕಾರಿ ರೀತಿಯಲ್ಲಿ ಅವರಿಗೆ ಹತ್ತಿರವಾಗಿದ್ದರು. ಇದು ಬ್ಯಾಟ್ಸ್‌ಮನ್‌ನಿಂದ ಆಕ್ರಮಣಕಾರಿ ಪ್ರತಿಕ್ರಿಯೆಯನ್ನು ಉಂಟುಮಾಡಬಹುದಿತ್ತು' ಎಂದು ಅದು ಹೇಳಿದೆ.
Advertisement