ಜೂನ್ 12 ರಿಂದ ಇಂಗ್ಲೆಂಡ್ ನಲ್ಲಿ ಮಹಿಳಾ T20 ವಿಶ್ವಕಪ್ ಆರಂಭ: ಭಾರತ ತಂಡ ಪ್ರಕಟ!

ಆದಾಗ್ಯೂ, ಜುಲೈ 10 ರಿಂದ 13 ರವರೆಗೆ ಲಾರ್ಡ್ಸ್‌ನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್‌ಗೆ ಪ್ರತೀಕಾ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ. ಹರ್ಲೀನ್ ಏಕದಿನ ಸರಣಿಯಲ್ಲಿ ಭಾರತ ಎ ತಂಡವನ್ನು ಮುನ್ನಡೆಸಲಿದ್ದಾರೆ.
india women's team
ಭಾರತ ಮಹಿಳಾ ಕ್ರಿಕೆಟ್ ತಂಡ
Updated on

ನವದೆಹಲಿ: ಜೂನ್ 12 ರಂದು ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ಆರಂಭವಾಗಲಿರುವ ಮಹಿಳಾ ಟಿ20 ವಿಶ್ವಕಪ್‌ಗಾಗಿ ಭಾರತ ತಂಡವನ್ನು ಶನಿವಾರ ಪ್ರಕಟಿಸಲಾಗಿದೆ. 15 ಆಟಗಾರ್ತಿಯರ ತಂಡದಲ್ಲಿ ನಂದಿನಿ ಶರ್ಮಾ ಮತ್ತು ವಿಕೆಟ್ ಕೀಪರ್ ಯಸ್ತಿಕಾ ಭಾಟಿಯಾ ಅವರನ್ನು ಆಯ್ಕೆ ಮಾಡಿದೆ.

ಸ್ಪೆಷಲಿಸ್ಟ್ ಬ್ಯಾಟ್ಸ್‌ಮನ್‌ಗಳಾದ ಪ್ರತಿಕಾ ರಾವಲ್ ಮತ್ತು ಹರ್ಲೀನ್ ಡಿಯೋಲ್ ಅವರನ್ನು ಹೊರಗಿಡಲಾಗಿದೆ. ಆಲ್‌ರೌಂಡರ್ ಅಮನ್‌ಜೋತ್ ಕೌರ್ ಮತ್ತು ಕಾಶ್ವಿ ಗೌತಮ್ ಗಾಯದ ಸಮಸ್ಯೆಯಿಂದಾಗಿ ಆಯ್ಕೆಯಾಗಿಲ್ಲ. ಹರ್ಮನ್‌ಪ್ರೀತ್ ಕೌರ್ ಎಲ್ಲಾ ತಂಡಗಳನ್ನು ಮುನ್ನಡೆಸಲಿದ್ದಾರೆ, ಸ್ಮೃತಿ ಮಂಧಾನ ಉಪ ನಾಯಕಿಯಾಗಿದ್ದಾರೆ.

ಆದಾಗ್ಯೂ, ಜುಲೈ 10 ರಿಂದ 13 ರವರೆಗೆ ಲಾರ್ಡ್ಸ್‌ನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್‌ಗೆ ಪ್ರತೀಕಾ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ. ಹರ್ಲೀನ್ ಏಕದಿನ ಸರಣಿಯಲ್ಲಿ ಭಾರತ ಎ ತಂಡವನ್ನು ಮುನ್ನಡೆಸಲಿದ್ದಾರೆ.

WPL ನಲ್ಲಿ ಉತ್ತಮ ಪ್ರದರ್ಶನ ನೀಡಿದ ನಂತರ ಮಧ್ಯಮ ವೇಗಿನ ನಂದಿನಿ ಅವರಿಗೆ ಇದೇ ಮೊದಲ ಬಾರಿಗೆ ಅವಕಾಶ ನೀಡಲಾಗಿದೆ. ಮಹಿಳಾ ಪ್ರೀಮಿಯರ್ ಲೀಗ್ ನಲ್ಲಿ ನಂದಿನಿ ದೆಹಲಿ ಕ್ಯಾಪಿಟಲ್ಸ್ ಪರ 10 ಪಂದ್ಯಗಳನ್ನು ಆಡುವ ಮೂಲಕ 17 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಈ ವರ್ಷದ ಫೆಬ್ರವರಿಯಲ್ಲಿ ಬ್ಯಾಂಕಾಕ್‌ನಲ್ಲಿ ನಡೆದ ಮಹಿಳಾ ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ ಟೂರ್ನಮೆಂಟ್‌ನಲ್ಲಿ ಆಡಿದ ಭಾರತ ತಂಡದಲ್ಲಿ ಅವರು ಕೂಡ ಇದ್ದರು.

ವೇಗದ ಬೌಲರ್ ಗಳಲ್ಲಿ ಪೂಜಾ ವಸ್ತ್ರಕರ್ ಕೂಡ ಇಲ್ಲ. ರೇಣುಕಾ ಸಿಂಗ್ ಠಾಕೂರ್, ಅರುಂಧತಿ ರೆಡ್ಡಿ ಮತ್ತು ಕ್ರಾಂತಿ ಗೌಡ್ ಸ್ಥಾನ ಪಡೆದಿರುವ ವೇಗದ ಬೌಲರ್ ಗಳಾಗಿದ್ದಾರೆ. ದಕ್ಷಿಣ ಆಫ್ರಿಕಾ ಪ್ರವಾಸ ಮಾಡಿದ್ದ ಅನುಷ್ಕಾ ಶರ್ಮಾ ಮತ್ತು ಉಮಾ ಚೆಟ್ರಿ ಅವರನ್ನು ಆಯ್ಕೆ ಮಾಡಿಲ್ಲ. ಕಳೆದ ವರ್ಷ ನವೆಂಬರ್‌ನಲ್ಲಿ ಏಕದಿನ ಮಹಿಳಾ ವಿಶ್ವಕಪ್ ಗೆದ್ದ ತಂಡವನ್ನು ಹೋಲುವ ತಂಡ ಇದಾಗಿದೆ.

ಇನ್ನೂ ಬ್ಯಾಟಿಂಗ್ ನಲ್ಲಿ ಮಂಧಾನ, ಶಫಾಲಿ ವರ್ಮಾ ಮತ್ತು ಜೆಮಿಮಾ ರೊಡ್ರಿಗಸ್ ಅವರು ಮೊದಲ ಮೂರು ಕ್ರಮಾಂಕಗಳಲ್ಲಿ ಆಡುವ ನಿರೀಕ್ಷೆಯಿದ್ದು, ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಕೆಳ ಕ್ರಮಾಂಕದಲ್ಲಿ ಅದ್ಭುತ ಪ್ರದರ್ಶನ ನೀಡಿದ ಭಾರ್ತಿ ಫುಲ್ಮಾಲಿ ಜೊತೆಗೆ ರಿಚಾ ಘೋಷ್ ಮತ್ತು ದೀಪ್ತಿ ಶರ್ಮಾ ಅವರ ಸೇರ್ಪಡೆಯೊಂದಿಗೆ ಬ್ಯಾಟಿಂಗ್ ಲೈನ್‌ಅಪ್ ಪೂರ್ಣಗೊಳ್ಳುತ್ತದೆ.

ಸ್ಪೀನ್ ಬೌಲಿಂಗ್ ನಲ್ಲಿ ದೀಪ್ತಿ ಸ್ಪಿನ್, ಶ್ರೇಯಾಂಕ ಪಾಟೀಲ್, ಶ್ರೀ ಚರಣಿ ಮತ್ತು ಕಳೆದ ವರ್ಷ ಇಂಗ್ಲೆಂಡ್ ಪ್ರವಾಸದ ನಂತರ ಭಾರತಕ್ಕಾಗಿ ಆಡದ ರಾಧಾ ಯಾದವ್ ಕೂಡ ಇದ್ದಾರೆ.

india women's team
IPL 2026: ರಾಹುಲ್ ಭರ್ಜರಿ ಬ್ಯಾಟಿಂಗ್; ರಾಜಸ್ಥಾನ ವಿರುದ್ಧ ಡೆಲ್ಲಿ 7 ವಿಕೆಟ್ ಗೆಲುವು!

ಆದಾಗ್ಯೂ, ಬೆನ್ನುನೋವಿನಿಂದಾಗಿ ಅಮನ್‌ಜೋತ್ 4-5 ತಿಂಗಳುಗಳ ಕಾಲ ಆಟದಿಂದ ಹೊರಗುಳಿದಿದ್ದು, ಅವರ ಸ್ಥಾನವನ್ನು ಯಾರು ತುಂಬಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ. ವಿಶ್ವಕಪ್‌ಗಾಗಿ ಆಯ್ಕೆ ಮಾಡಲಾದ ತಂಡವು ಮೇ 28 ರಿಂದ ಆತಿಥೇಯ ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಟಿ20ಐ ಸರಣಿಯಲ್ಲೂ ಆಡಲಿದೆ.

ಜೂನ್ 14 ರಂದು ಬರ್ಮಿಂಗ್ಹ್ಯಾಮ್‌ನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದೊಂದಿಗೆ ಭಾರತ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ಜುಲೈ 5 ರಂದು ಲಾರ್ಡ್ಸ್‌ನಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಭಾರತ ಇದುವರೆಗೆ ಟಿ20 ವಿಶ್ವ ಪ್ರಶಸ್ತಿಯನ್ನು ಗೆದ್ದಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com