ಭಾನುವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಮುಂಬೈ ಇಂಡಿಯನ್ಸ್ (MI) ವಿರುದ್ಧದ ಪಂದ್ಯದ ವೇಳೆ ನೀತಿ ಸಂಹಿತೆ ಉಲ್ಲಂಘಿಸಿದ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮುಖ್ಯ ಕೋಚ್ ಆಂಡಿ ಫ್ಲವರ್ ಅವರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ದಂಡ ವಿಧಿಸಿದೆ.
ಪಂದ್ಯದ ವೇಳೆ ಮೈದಾನದಲ್ಲಿ ತೆಗೆದುಕೊಂಡ ನಿರ್ಧಾರವನ್ನು ಪ್ರಶ್ನಿಸಿ, ನಾಲ್ಕನೇ ಅಂಪೈರ್ ಜೊತೆ ಆಕ್ರಮಣಕಾರಿಯಾಗಿ ವರ್ತಿಸಿದ ನಂತರ ಫ್ಲವರ್ ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.3 ಅನ್ನು ಉಲ್ಲಂಘಿಸಿದ್ದು, ತಪ್ಪಿತಸ್ಥರೆಂದು ಕಂಡುಬಂದಿದೆ. ನಂತರ ಐಪಿಎಲ್ ಆಡಳಿತ ಮಂಡಳಿಯು ಈ ಅಪರಾಧಕ್ಕಾಗಿ ಕೋಚ್‌ಗೆ ಅವರ ಪಂದ್ಯ ಶುಲ್ಕದ ಶೇ 15 ರಷ್ಟು ದಂಡ ವಿಧಿಸಿದೆ.
18ನೇ ಓವರ್‌ನಲ್ಲಿ ಮೂರನೇ ಅಂಪೈರ್ ಆರ್‌ಸಿಬಿಗೆ ಬೌಂಡರಿ ನಿರಾಕರಿಸಿದ ನಿರ್ಧಾರದ ನಂತರ ಉದ್ವಿಗ್ನತೆ ಹೆಚ್ಚಾಯಿತು. ದಿನೇಶ್ ಕಾರ್ತಿಕ್ ಅವರೊಂದಿಗೆ ಆಂಡಿ ಫ್ಲವರ್ ನಾಲ್ಕನೇ ಅಂಪೈರ್ ಅನ್ನು ಸಂಪರ್ಕಿಸಿ ತೀರ್ಪು ತಪ್ಪಾಗಿದೆ ಎಂದು ವಾದಿಸಿದರು. ದಿನೇಶ್ ಕಾರ್ತಿಕ್ ಅವರಿಗಿ ಯಾವುದೇ ದಂಡ ವಿಧಿಸಲಿದ್ದರೂ, ಈ ವೇಳೆ ಗಡಿ ಮೀರಿ ವರ್ತಿಸಿದ್ದಾರೆ ಎಂದು ತೀರ್ಮಾನಿಸಲಾಗಿದೆ.
ಐಪಿಎಲ್ ಅಧಿಕೃತ ಪ್ರಕಟಣೆಯಲ್ಲಿ, 'ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮುಖ್ಯ ತರಬೇತುದಾರ ಆಂಡಿ ಫ್ಲವರ್, ಆಟಗಾರರು ಮತ್ತು ತಂಡದ ಅಧಿಕಾರಿಗಳಿಗೆ ಅನ್ವಯವಾಗುವ ಐಪಿಎಲ್ ನೀತಿ ಸಂಹಿತೆಯ ಹಂತ 1 ಅನ್ನು ಉಲ್ಲಂಘಿಸಿದ್ದಕ್ಕಾಗಿ ಅವರ ಪಂದ್ಯ ಶುಲ್ಕದ ಶೇ 15ರಷ್ಟು ದಂಡ ವಿಧಿಸಲಾಗಿದೆ. ಆಂಡಿ ಆರ್ಟಿಕಲ್ 2.3 ಅನ್ನು ಉಲ್ಲಂಘಿಸಿರುವುದು ಕಂಡುಬಂದಿದೆ... ಇದು 'ಪಂದ್ಯದ ಸಮಯದಲ್ಲಿ ಅಶ್ಲೀಲ ಪದ ಬಳಕೆಗೆ' ಸಂಬಂಧಿಸಿದೆ. 17.2ನೇ ಓವರ್‌ನಲ್ಲಿ ಆಂಡಿ ನಾಲ್ಕನೇ ಅಂಪೈರ್ ಜೊತೆ ಆಕ್ರಮಣಕಾರಿಯಾಗಿ ಮಾತನಾಡಿದಾಗ ಈ ಘಟನೆ ಸಂಭವಿಸಿದೆ' ಎಂದಿದೆ.
'ಫ್ಲವರ್ ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಮತ್ತು ಪಂದ್ಯದ ರೆಫರಿ ಅಮಿತ್ ಶರ್ಮಾ ವಿಧಿಸಿದ ಶಿಕ್ಷೆಯನ್ನು ಸ್ವೀಕರಿಸಿದ್ದಾರೆ' ಎಂದು ತಿಳಿಸಿದೆ.
ಡಗೌಟ್ ನಾಟಕದ ಹೊರತಾಗಿಯೂ, ಮುಂಬೈ ವಿರುದ್ಧದ ಪಂದ್ಯವನ್ನು ಆರ್‌ಸಿಬಿ ಗೆದ್ದುಕೊಂಡಿತು. ಫ್ರಾಂಚೈಸಿ ಪಂದ್ಯದ ಕೊನೆಯ ಎಸೆತದಲ್ಲಿ ಎರಡು ವಿಕೆಟ್‌ಗಳ ರೋಮಾಂಚಕ ಗೆಲುವು ಸಾಧಿಸಿತು ಮತ್ತು ಈ ಆವೃತ್ತಿಯ ಏಳನೇ ಗೆಲುವಿನೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.
Advertisement