IPL 2026: ನಿರ್ಣಾಯಕ ಹಂತದಲ್ಲಿ RCB ತಂಡ ಸೇರಿದ ಮತ್ತೊಬ್ಬ ಮಾರಕ ವೇಗಿ; ಬೆಂಗಳೂರು ತಂಡಕ್ಕೆ ಆನೆಬಲ

ಶ್ರೀಲಂಕಾ ಕ್ರಿಕೆಟ್‌ನಿಂದ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ಪಡೆಯಲು ವಿಫಲವಾದ ವೇಗದ ಬೌಲರ್ ನುವಾನ್ ತುಷಾರ ಅವರ ಬದಲಿ ಮತ್ತೊಬ್ಬ ವೇಗಿಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಧಿಕೃತವಾಗಿ ಹೆಸರಿಸಿದೆ.
RCB finally announce Nuwan Thushara's replacement for IPL 2026
ರಿಚರ್ಡ್ ಗ್ಲೀಸನ್
Updated on

ಬೆಂಗಳೂರು: ಐಪಿಎಲ್ 2026ರ ಭರ್ಜರಿ ಪ್ರದರ್ಶನ ನೀಡುವ ಮೂಲಕ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಕೊನೆಗೂ ನುವಾನ್ ತುಷಾರ ಬದಲಿಗೆ ಮಾರಕ ವೇಗಿ ರಿಚರ್ಡ್ ಗ್ಲೀಸನ್ ಅವರನ್ನು ತಂಡಕ್ಕೆ ಆಯ್ಕೆ ಮಾಡಿರುವುದಾಗಿ ಶುಕ್ರವಾರ ಘೋಷಿಸಿದೆ.

ಶ್ರೀಲಂಕಾ ಕ್ರಿಕೆಟ್‌ನಿಂದ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ಪಡೆಯಲು ವಿಫಲವಾದ ವೇಗದ ಬೌಲರ್ ನುವಾನ್ ತುಷಾರ ಅವರ ಬದಲಿ ಮತ್ತೊಬ್ಬ ವೇಗಿಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಧಿಕೃತವಾಗಿ ಹೆಸರಿಸಿದೆ.

ಐಪಿಎಲ್‌ನಲ್ಲಿ ಭಾಗವಹಿಸಲು ಅನುಮತಿ ಪಡೆಯುವ ಪ್ರಯತ್ನದಲ್ಲಿ ತುಷಾರ ಆರಂಭದಲ್ಲಿ ಮಂಡಳಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಪರಿಗಣಿಸಿದ್ದರು, ಆದರೆ ಪಂದ್ಯಾವಳಿಯ ಗಣನೀಯ ಭಾಗವನ್ನು ತಪ್ಪಿಸಿಕೊಂಡ ನಂತರ ಅಂತಿಮವಾಗಿ ಈ ಆಲೋಚನೆಯಿಂದ ಹಿಂದೆ ಸರಿದರು.

RCB finally announce Nuwan Thushara's replacement for IPL 2026
IPL 2026: ಪ್ರಕರಣ ಹಿಂಪಡೆದ ನುವಾನ್ ತುಷಾರ; ಶ್ರೀಲಂಕಾ ಕ್ರಿಕೆಟ್‌ಗೆ ಕ್ಷಮೆಯಾಚಿಸಿದ RCB ಆಟಗಾರ!

ನಿರ್ಣಾಯಕ ಹಂತದಲ್ಲಿ ಆರ್‌ಸಿಬಿಗೆ ಸೇರ್ಪಡೆಯಾಗಿರುವ 38 ವರ್ಷದ ಗ್ಲೀಸನ್ ಇಂಗ್ಲೆಂಡ್ ಪರ 6 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, ಒಟ್ಟು 9 ವಿಕೆಟ್ ಪಡೆದುಕೊಂಡಿದ್ದಾರೆ.

ಈ ಕುರಿತು ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿರುವ ಆರ್‌ಸಿಬಿ, ಪ್ಲೇಆಫ್‌ಗೂ ಮುನ್ನ ಆರ್‌ಸಿಬಿ ಇಂಗ್ಲೆಂಡ್‌ನ ವೇಗಿ ರಿಚರ್ಡ್ ಗ್ಲೀಸನ್ ಅವರನ್ನು 1.6 ಕೋಟಿ ರೂ. ಮೊತ್ತಕ್ಕೆ ಖರೀದಿಸಿ, ಒಪ್ಪಂದ ಮಾಡಿಕೊಂಡಿದೆ.

ಕಳೆದ ಮೂರು ಐಪಿಎಲ್ ಸೀಸನ್‌ಗಳಲ್ಲಿ ಗ್ಲೀಸನ್ ಅವರು ಸೇರ್ಪಡೆಯಾಗುತ್ತಿರುವ ಮೂರನೇ ತಂಡ ಇದಾಗಿದೆ. 2024ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು 2025ರಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ್ದರು. ಸದ್ಯ ಬೆಂಗಳೂರು ತಂಡವು ಗ್ಲೀಸನ್ ಅವರು ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಲಿದ್ದಾರೆ ಎಂಬ ವಿಶ್ವಾಸ ಹೊಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com