

ಜೈಪುರ: ಇಂಡಿಯನ್ ಪ್ರೀಮಿಯರ್ ಲೀಗ್ನ ಇಂದಿನ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ರಾಜಸ್ತಾನ ರಾಯಲ್ಸ್ ತಂಡ 7 ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿದ್ದು ಇದೇ ಪಂದ್ಯದಲ್ಲಿ ರಾಜಸ್ತಾನ ತಂಡದ 15 ವರ್ಷದ ಉದಯೋನ್ಮುಖ ಆಟಗಾರ ವೈಭವ್ ಸೂರ್ಯವಂಶಿ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಜೈಪುರದ ಸವಾಯ್ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಲಕ್ನೋ ನೀಡಿದ 221 ರನ್ ಗಳ ಬೃಹತ್ ಗುರಿ ಬೆನ್ನು ಹತ್ತಿದ ರಾಜಸ್ತಾನ ರಾಯಲ್ಸ್ ತಂಡ 19.1 ಓವರ್ ನಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು 225 ರನ್ ಗಳಿಸಿ 7 ವಿಕೆಟ್ ಅಂತರದಲ್ಲಿ ಭರ್ಜರಿ ಜಯ ಸಾಧಿಸಿತು.
ರಾಜಸ್ತಾನ ಪರ ಭರ್ಜರಿ ಬ್ಯಾಟಿಂಗ್ ಮಾಡಿದ ವೈಭವ್ ಸೂರ್ಯವಂಶಿ ಕೇವಲ 38 ಎಸೆತಗಳಲ್ಲಿ 10 ಸಿಕ್ಸರ್ ಮತ್ತು 7 ಬೌಂಡರಿ ಸಹಿತ 93 ರನ್ ಚಚ್ಚಿ ಗೆಲುವಿನ ರೂವಾರಿಯಾದರು. ಅಂತೆಯೇ ವೈಭವ್ ಸೂರ್ಯ ವಂಶಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ.
ಈ ಸಾಧನೆ ಮಾಡಿದ ಭಾರತದ ಮೊದಲ ಬ್ಯಾಟರ್!
ವೈಭವ್ ಸೂರ್ಯವಂಶಿ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಒಂದೇ ಸೀಸನ್‌ನಲ್ಲಿ 50 ಸಿಕ್ಸರ್‌ಗಳನ್ನು ಬಾರಿಸಿದ ಮೊದಲ ಭಾರತೀಯ ಬ್ಯಾಟರ್ ಎಂಬ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈ ದಾಖಲೆ ಮೂಲಕ ಅವರು ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಎಂಎಸ್ ಧೋನಿ, ಕೆಎಲ್ ರಾಹುಲ್ ಸೇರಿದಂತೆ ಅನೇಕ ಭಾರತೀಯ ಸ್ಟಾರ್ ಬ್ಯಾಟರ್‌ಗಳನ್ನು ಹಿಂದಿಕ್ಕಿದ್ದಾರೆ.
ಅಂತೆಯೇ ಹಾಲಿ ಐಪಿಎಲ್ ಸೀಸನ್‌ನಲ್ಲಿ ಫಿನ್ ಅಲೆನ್ ನಂತರ ಸೂರ್ಯವಂಶಿ ಒಂದೇ ಐಪಿಎಲ್ ಸೀಸನ್‌ನಲ್ಲಿ ಎರಡು ಬಾರಿ 10ಕ್ಕೂ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಎರಡನೇ ಬ್ಯಾಟ್ಸ್‌ಮನ್ ಎಂಬ ಕೀರ್ತಿಗೂ ಭಾಜನರಾಗಿದ್ದಾರೆ.
ಗರಿಷ್ಠ ಸ್ಟ್ರೈಕ್ ರೇಟ್
ಇನ್ನು ಇಂದಿನ ಅದ್ಭುತ ಬ್ಯಾಟಿಂಗ್ ಮೂಲಕ ವೈಭವ್ ಸೂರ್ಯವಂಶಿ ಮತ್ತೊಂದು ಹಿರಿಮೆಗೂ ಪಾತ್ರರಾಗಿದ್ದು, ಒಂದೇ ಐಪಿಎಲ್ ಸೀಸನ್ ನಲ್ಲಿ 500ಕ್ಕೂ ಅಧಿಕ ರನ್ ಸಿಡಿಸಿದ ಆಟಗಾರರ ಪೈಕಿ ಗರಿಷ್ಟ ಸ್ಟ್ರೈಕ್ ರೇಟ್ ಹೊಂದಿರುವ ಮೊದಲ ಆಟಗಾರ ಎಂಬ ಕೀರ್ತಿಗೂ ಭಾಜನರಾಗಿದ್ದಾರೆ.
ವೈಭವ್ ಹಾಲಿ ಐಪಿಎಲ್ ಸೀಸನ್ ನಲ್ಲಿ ಬರೊಬ್ಬರಿ 236.3 ಸ್ಟ್ರೈಕ್ ರೇಟ್ ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ನಂತರದ ಸ್ಥಾನದಲ್ಲಿ ಆಂಡ್ರೆ ರಸೆಲ್ ಇದ್ದು 2019ರಲ್ಲಿ ರಸೆಲ್ 204.8 ಸ್ಟ್ರೈಕ್ ರೇಟ್ ನಲ್ಲಿ ಬ್ಯಾಟ್ ಬೀಸಿದ್ದರು.
Highest strike-rate in an IPL season (min 500+ runs)
236.3 - Vaibhav Sooryavanshi (2026)*
204.8 - Andre Russell (2019)
202.0 - Abhishek Sharma (2026)
196.2 - Nicholas Pooran (2025)
191.5 - Travis Head (2024)
187.7 - Glenn Maxwell (2014)
183.1 - Chris Gayle (2011)
ಒಂದೇ ಐಪಿಎಲ್ ನಲ್ಲಿ ಸೀಸನ್ ಗರಿಷ್ಠ ಸಿಕ್ಸರ್
ಇನ್ನು ಒಂದು ಐಪಿಎಲ್ ಸೀಸನ್ ನಲ್ಲಿ ಗರಿಷ್ಛ ಸಿಕ್ಸರ್ ಸಿಡಿಸಿದ ಆಟಗಾರರ ಪೈಕಿ ಪ್ರಸ್ತುತ ಸೂರ್ಯವಂಶಿ 2ನೇ ಸ್ಥಾನದಲ್ಲಿದ್ದಾರೆ. ಇಂದು ಲಕ್ನೋ ವಿರುದ್ಧ ಸೂರ್ಯವಂಶಿ ಸಿಡಿಸಿದ ಸಿಕ್ಸರ್ ಗಳೂ ಸೇರಿದಂತೆ ಹಾಲಿ ಸೀಸನ್ ನಲ್ಲಿನ ಅವರ ಸಿಕ್ಸರ್ ಗಳ ಸಂಖ್ಯೆ 53ಕ್ಕೇರಿಕೆಯಾಗಿದೆ. 2012ರಲ್ಲಿ ಕ್ರಿಸ್ ಗೇಯ್ಲ್ 59 ಸಿಕ್ಸರ್ ಗಳನ್ನು ಸಿಡಿಸಿ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
Most sixes in an IPL season
59 - Chris Gayle (2012)
53* - Vaibhav Sooryavanshi (2026)
52 - Andre Russell (2019)
51 - Chris Gayle (2013)
45 - Jos Buttler (2022)
44 - Chris Gayle (2011)
42 - Abhishek Sharma (2024)
ಹೆಚ್ಚು ಬಾರಿ ಐಪಿಎಲ್ ಇನ್ನಿಂಗ್ಸ್ ನಲ್ಲಿ 10ಕ್ಕೂ ಹೆಚ್ಚು ಸಿಕ್ಸರ್
ಇದೇ ವೇಳೆ ವೈಭವ್ ಸೂರ್ಯವಂಶಿ ಹೆಚ್ಚು ಬಾರಿ ಐಪಿಎಲ್ ಇನ್ನಿಂಗ್ಸ್ ನಲ್ಲಿ 10ಕ್ಕೂ ಹೆಚ್ಚು ಸಿಕ್ಸರ್ ಗಳನ್ನು ಸಡಿಸಿದ 2ನೇ ಆಟಗಾರ ಎಂಬ ಕೀರ್ತಿಗೂ ಭಾಜನರಾಗಿದ್ದಾರೆ.
ಈ ಹಿಂದೆ ವಿಂಡೀಸ್ ದೈತ್ಯ ಕ್ರಿಸ್ ಗೇಯ್ಲ್ ನಾಲ್ಕು ಬಾರಿ ಈ ಸಾಧನೆ ಮಾಡಿದ್ದರು. ವೈಭವ್ ಸೂರ್ಯವಂಶಿ 3 ಬಾರಿ ಈ ಸಾಧನೆ ಮಾಡಿದ್ದು, ಅಭಿಷೇಕ್ ಶರ್ಮಾ ಮತ್ತು ಫಿನ್ ಅಲೆನ್ ತಲಾ 2 ಬಾರಿ ಈ ಸಾಧನೆ ಮಾಡಿದ್ದಾರೆ.
Hitting 10+ sixes in an IPL innings most times
4 - Chris Gayle
3 - Vaibhav Sooryavanshi*
2 - Abhishek Sharma
2 - Finn Allen
T20 ಕ್ರಿಕೆಟ್‌ನಲ್ಲಿ ಸಿಕ್ಸರ್ ಹೊಡೆಯುವ ಸಾಮರ್ಥ್ಯಕ್ಕೆ ಹೆಸರಾಗಿರುವ ಸೂರ್ಯವಂಶಿ, ಈ ಸೀಸನ್‌ನಲ್ಲಿ ನಿರಂತರ ಸ್ಫೋಟಕ ಬ್ಯಾಟಿಂಗ್ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಅವರ ಆಕ್ರಮಣಕಾರಿ ಆಟವು ತಂಡದ ಯಶಸ್ಸಿನಲ್ಲೂ ಪ್ರಮುಖ ಪಾತ್ರ ವಹಿಸಿದೆ.
ಒಂದೇ IPL ಸೀಸನ್‌ನಲ್ಲಿ 50ಕ್ಕೂ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸುವ ಸಾಧನೆ ಸಾಮಾನ್ಯವಾಗಿ ವಿಶ್ವದ ಅಗ್ರ ಪವರ್ ಹಿಟ್ಟರ್‌ಗಳಿಗೆ ಮಾತ್ರ ಸಾಧ್ಯವಾಗಿದ್ದು, ಈಗ Vaibhav Suryavanshi ಭಾರತೀಯ ಆಟಗಾರರ ಪರವಾಗಿ ಹೊಸ ಮಾನದಂಡ ನಿರ್ಮಿಸಿದ್ದಾರೆ. ಈ ಸಾಧನೆ IPLನಲ್ಲಿ ಭಾರತೀಯ ಬ್ಯಾಟರ್‌ಗಳ ಆಕ್ರಮಣಕಾರಿ ಆಟದ ಹೊಸ ಯುಗದ ಸಂಕೇತವೆಂದು ಕ್ರಿಕೆಟ್ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
Advertisement