IPL 2026: ವೈಭವ್ ಸೂರ್ಯವಂಶಿ ಆರ್ಭಟಕ್ಕೆ ಮಕಾಡೆ ಮಲಗಿದ LSG, ಗೆದ್ದ RR ಪ್ಲೇ ಆಫ್ ಕನಸು ಜೀವಂತ!

ಲಕ್ನೋ ನೀಡಿದ 221 ರನ್ ಗಳ ಬೃಹತ್ ಗುರಿ ಬೆನ್ನು ಹತ್ತಿದ ರಾಜಸ್ತಾನ ರಾಯಲ್ಸ್ ತಂಡ 19.1 ಓವರ್ ನಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು 225 ರನ್ ಗಳಿಸಿ 7 ವಿಕೆಟ್ ಅಂತರದಲ್ಲಿ ಭರ್ಜರಿ ಜಯ ಸಾಧಿಸಿತು.
Vaibhav Sooryavanshi Slams 93 As RR Beat LSG
ಲಕ್ನೋ ವಿರುದ್ದ ರಾಜಸ್ತಾನಕ್ಕೆ ಭರ್ಜರಿ ಜಯ
Updated on

ಜೈಪುರ: ಇಂಡಿಯನ್ ಪ್ರೀಮಿಯರ್ ಲೀಗ್​ನ ಇಂದಿನ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ರಾಜಸ್ತಾನ ರಾಯಲ್ಸ್ ತಂಡ 7 ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿ ತನ್ನ ಪ್ಲೇಆಫ್ ಆಸೆ ಜೀವಂತವಾಗಿರಿಸಿಕೊಂಡಿದೆ.

ಜೈಪುರದ ಸವಾಯ್ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಲಕ್ನೋ ನೀಡಿದ 221 ರನ್ ಗಳ ಬೃಹತ್ ಗುರಿ ಬೆನ್ನು ಹತ್ತಿದ ರಾಜಸ್ತಾನ ರಾಯಲ್ಸ್ ತಂಡ 19.1 ಓವರ್ ನಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು 225 ರನ್ ಗಳಿಸಿ 7 ವಿಕೆಟ್ ಅಂತರದಲ್ಲಿ ಭರ್ಜರಿ ಜಯ ಸಾಧಿಸಿತು.

ರಾಜಸ್ತಾನ ಪರ ಭರ್ಜರಿ ಬ್ಯಾಟಿಂಗ್ ಮಾಡಿದ ವೈಭವ್ ಸೂರ್ಯವಂಶಿ ಕೇವಲ 38 ಎಸೆತಗಳಲ್ಲಿ 10 ಸಿಕ್ಸರ್ ಮತ್ತು 7 ಬೌಂಡರಿ ಸಹಿತ 93 ರನ್ ಚಚ್ಚಿ ಗೆಲುವಿನ ರೂವಾರಿಯಾದರು. ವೈಭವ್ ಗೆ ಯಶಸ್ವಿ ಜೈಸ್ವಾಲ್ (43) ಮತ್ತು ಧ್ರುವ್ ಜುರೆಲ್ (ಅಜೇಯ 53) ಉತ್ತಮ ಸಾಥ್ ನೀಡಿದರು. ಅಂತಿಮ ಹಂತದಲ್ಲಿ ಡೊನೊವನ್ ಫೆರೀರಾ 116 ರನ್ ಗಳಿಸಿ ತಂಡದ ಗೆಲುವಿನ ಔಪಚಾರಿಕತೆ ಮುಗಿಸಿದರು.

Vaibhav Sooryavanshi Slams 93 As RR Beat LSG
IPL 2026 Playoffs Scenarios: ಅಗ್ರಸ್ಥಾನದಲ್ಲಿ RCB; 4ನೇ ಸ್ಥಾನಕ್ಕಾಗಿ 5 ತಂಡಗಳ ನಡುವೆ ಪೈಪೋಟಿ!

ಲಕ್ನೋ ಭರ್ಜರಿ ಬ್ಯಾಟಿಂಗ್

ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ಪರ ಮಿಚೆಲ್ ಮಾರ್ಚ್ (96) ಅಬ್ಬರಿಸಿದರು. ಈ ಅಬ್ಬರದೊಂದಿಗೆ ಲಕ್ನೋ ಸೂಪರ್ ಜೈಂಟ್ಸ್ 20 ಓವರ್​ಗಳಲ್ಲಿ ಬರೋಬ್ಬರಿ 220 ರನ್ ಕಲೆಹಾಕಿತು. ಈ ಕಠಿಣ ಗುರಿ ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ವೈಭವ್ ಸೂರ್ಯವಂಶಿ ಹಾಗೂ ಯಶಸ್ವಿ ಜೈಸ್ವಾಲ್ ಸ್ಫೋಟಕ ಆರಂಭ ಒದಗಿಸಿದ್ದರು. ಇಬ್ಬರು ಯುವ ದಾಂಡಿಗರ ಅಬ್ಬರದೊಂದಿಗೆ ಆರ್​ಆರ್ ಪಡೆ ಪವರ್​ಪ್ಲೇನಲ್ಲಿ 71 ರನ್ ಕಲೆಹಾಕಿತು.

ಈ ಹಂತದಲ್ಲಿ43ರನ್ ಗಳಿಸಿದ್ದ ಯಶಸ್ವಿ ಜೈಸ್ವಾಲ್ ಔಟಾದರು. ಜೈಸ್ವಾಲ್ ನಿರ್ಗಮನದ ಬೆನ್ನಲ್ಲೇ ವೈಭವ್ ಸೂರ್ಯವಂಶಿ ಆರ್ಭಟ ಶುರು ಮಾಡಿದರು. ಈ ಮೂಲಕ ವೈಭವ್ ಕೇವಲ 23 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ವೈಭವ್ 38 ಎಸೆತಗಳಲ್ಲಿ 10 ಭರ್ಜರಿ ಸಿಕ್ಸರ್ ಹಾಗೂ 7 ಬೌಂಡರಿ​ ಸಹಿತ 93 ರನ್ ಕಲೆಹಾಕಿ ಮೊಹ್ಸಿನ್ ಖಾನ್ ಬೌಲಿಂಗ್ ನಲ್ಲಿ ಔಟಾದರು.

ಆದರೆ ಅಷ್ಟರಲ್ಲಾಗಲೇ ರಾಜಸ್ಥಾನ್ ರಾಯಲ್ಸ್ ತಂಡದ ಸ್ಕೋರ್ 14 ಓವರ್​ಗಳಲ್ಲಿ 180 ರನ್ ಗಳಿಸಿ ಬಹುತೇಕ ಗೆಲುವು ಖಚಿತಪಡಿಸಿಕೊಂಡಿತ್ತು. ಬಳಿಕ ಕ್ರೀಸ್ ಗೆ ಬಂದ ಧ್ರುವ್ ಜುರೆಲ್ 38 ಎಸೆತಗಳಲ್ಲಿ ಅಜೇಯ 53 ರನ್ ಬಾರಿಸಿದರು. ಈ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡವು 19.1 ಓವರ್​ಗಳಲ್ಲಿ 225 ರನ್ ಬಾರಿಸಿ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು.

ಪ್ಲೇ ಆಫ್ ಕನಸು ಜೀವಂತ

ಈ ಗೆಲುವಿನೊಂದಿಗೆ ರಾಜಸ್ಥಾನ್ ರಾಯಲ್ಸ್ ತಂಡದ ಪ್ಲೇಆಫ್ ಕನಸು ಜೀವಂತವಾಗಿದ್ದು, ಮುಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿದರೆ 16 ಅಂಕಗಳೊಂದಿಗೆ ನೇರವಾಗಿ ಪ್ಲೇಆಫ್​ಗೇರಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com