IPL 2026: ಕೊಹ್ಲಿ ಜೊತೆಗಿನ ಬ್ಯಾಟಿಂಗ್ ನನ್ನ ಬೆಳವಣಿಗೆಗೆ ಕಾರಣ ಎಂದ ಪಡಿಕಲ್; ಸೂರ್ಯವಂಶಿ ಬಗ್ಗೆ ಹೇಳಿದ್ದೇನು?

2020ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿನೊಂದಿಗೆ ಐಪಿಎಲ್‌ ಜರ್ನಿ ಆರಂಭಿಸಿದ ಪಡಿಕ್ಕಲ್, ಶ್ರೇಷ್ಠಆಟಗಾರ ವಿರಾಟ್ ಕೊಹ್ಲಿ ಅವರೊಂದಿಗೆ ಆಡುವ ಅವಕಾಶ ಸಿಕ್ಕಿದ್ದು, ನನ್ನ ಬೆಳವಣಿಗೆಗೆ ದೊಡ್ಡ ಸಹಾಯ ಮಾಡಿತು ಎಂದು ಹೇಳಿದ್ದಾರೆ.
Batting with Virat Kohli made a big difference in my growth, says RCB batter Devdutt Padikkal
ದೇವದತ್ ಪಡಿಕ್ಕಲ್ - ವಿರಾಟ್ ಕೊಹ್ಲಿ
Updated on

ಬೆಂಗಳೂರು: ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಜೊತೆ ಆರಂಭಿಕನಾಗಿ ಆಡುವುದರಿಂದ ಇನ್ನಿಂಗ್ಸ್ ಕಟ್ಟುವ ಕಲೆಯನ್ನು ಅರ್ಥಮಾಡಿಕೊಳ್ಳಲು ಸಹಾಯವಾಯಿತು ಎಂದು ಬೆಂಗಳೂರು ರಾಯಲ್ ಚಾಲೆಂಜರ್ಸ್(RCB) ಸ್ಫೋಟಕ ಬ್ಯಾಟ್ಸ್‌ಮನ್ ದೇವದತ್ ಪಡಿಕ್ಕಲ್ ಹೇಳಿದ್ದಾರೆ.

2020ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿನೊಂದಿಗೆ ಐಪಿಎಲ್‌ ಜರ್ನಿ ಆರಂಭಿಸಿದ ಪಡಿಕ್ಕಲ್, ಶ್ರೇಷ್ಠಆಟಗಾರ ವಿರಾಟ್ ಕೊಹ್ಲಿ ಅವರೊಂದಿಗೆ ಆಡುವ ಅವಕಾಶ ಸಿಕ್ಕಿದ್ದು, ನನ್ನ ಬೆಳವಣಿಗೆಗೆ ದೊಡ್ಡ ಸಹಾಯ ಮಾಡಿತು ಎಂದು ಹೇಳಿದ್ದಾರೆ.

"ನಾನು 2020 ರ ಋತುವಿನಲ್ಲಿ ಆರ್‌ಸಿಬಿ ಜೊತೆ ಐಪಿಎಲ್‌ಗೆ ಪಾದಾರ್ಪಣೆ ಮಾಡಿದಾಗ, ನಾನು ಆಡಲು ಸಿದ್ಧನಿದ್ದೇನೆ ಎಂದು ಭಾವಿಸಿದೆ. ನನ್ನ ಹಿಂದೆ ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಸ್ಕೋರ್‌ಗಳ ಸರಣಿ ಇತ್ತು" ಎಂದು ಜಿಯೋಸ್ಟಾರ್‌ ಜೊತೆ ನಡೆದ ಸಂವಾದದ ಪಡಿಕ್ಕಲ್ ತಿಳಿಸಿದ್ದಾರೆ.

"ಮತ್ತು ಆಟದ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ ವಿರಾಟ್ ಕೊಹ್ಲಿ ಜೊತೆ ಬ್ಯಾಟಿಂಗ್ ಮಾಡುವುದು ನನ್ನ ಬೆಳವಣಿಗೆಗೆ ದೊಡ್ಡ ಸಹಾಯ ಮಾಡಿತು. ಆ ವಯಸ್ಸಿನಲ್ಲಿ, ಅವರು ಇನ್ನಿಂಗ್ಸ್ ಕಟ್ಟುವುದನ್ನು ನೋಡುವುದರಿಂದ ನಾಕ್ ಅನ್ನು ಹೇಗೆ ನಿರ್ಮಿಸುವುದು ಎಂಬುದರ ಕುರಿತು ನನಗೆ ತುಂಬಾ ಸ್ಪಷ್ಟತೆ ಮತ್ತು ತಿಳುವಳಿಕೆ ಸಿಕ್ಕಿತು. ಅದು ನನ್ನ ಬೆಳವಣಿಗೆಯಲ್ಲಿ ದೊಡ್ಡ ವ್ಯತ್ಯಾಸವನ್ನುಂಟುಮಾಡಿತು" ಎಂದು ಅವರು ಹೇಳಿದ್ದಾರೆ.

Batting with Virat Kohli made a big difference in my growth, says RCB batter Devdutt Padikkal
IPL 2026: ಕನ್ನಡಿಗನ ಆಟಕ್ಕೆ ಮನಸೋತ ಕಿಂಗ್ ಕೊಹ್ಲಿ; ದೇವದತ್ ಪಡಿಕ್ಕಲ್ ಆಟವನ್ನು ಶ್ಲಾಘಿಸಿದ ವಿರಾಟ್!

ರಾಜಸ್ಥಾನ್ ರಾಯಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಜೊತೆಗಿನ ತಮ್ಮ ನಂತರದ ಅನುಭವಗಳು ನನ್ನ ಕ್ರಿಕೆಟ್ ಜೀವನವನ್ನು ರೂಪಿಸಿವೆ. ವಿಶೇಷವಾಗಿ ವಿಭಿನ್ನ ಪರಿಸ್ಥಿತಿ ಮತ್ತು ಒತ್ತಡದ ಸನ್ನಿವೇಶದಲ್ಲಿ ಹೇಗೆ ಬ್ಯಾಟಿಂಗ್ ಮಾಡಬೇಕು ಎಂಬುದನ್ನು ಆ ತಂಡದಿಂದ ಕಲಿತೆ ಎಂದು ಕರ್ನಾಟಕದ ಬ್ಯಾಟ್ಸ್‌ಮನ್ ಹೇಳಿದ್ದಾರೆ.

2024ರ ಐಪಿಎಲ್ ಆವೃತ್ತಿಯು ನನಗೆ ಕಠಿಣವಾಗಿತ್ತು.ನನ್ನನ್ನು ಮಾನಸಿಕವಾಗಿ ಪರೀಕ್ಷಿಸಿತು ಎಂದು ಒಪ್ಪಿಕೊಂಡ ಪಡಿಕ್ಕಲ್, ಆದರೆ ಕಠಿಣ ಹಂತವು ಅಂತಿಮವಾಗಿ ನನ್ನ ವೃತ್ತಿಜೀವನದಲ್ಲಿ ಒಂದು ಮಹತ್ವದ ತಿರುವು ಪಡೆಯಿತು ಎಂದು ಹೇಳಿದ್ದಾರೆ.

ಆರ್‌ಸಿಬಿಗೆ ಮರಳಿದ ನಂತರ ತನ್ನ ತಂತ್ರ ಮತ್ತು ಮನಸ್ಥಿತಿ ಎರಡನ್ನೂ ಬದಲಾಯಿಸಲು ಸಹಾಯ ಮಾಡಿದ್ದಕ್ಕಾಗಿ ದಿನೇಶ್ ಕಾರ್ತಿಕ್ ಮತ್ತು ಕೋಚ್ ಆಂಡಿ ಫ್ಲವರ್‌ಗೆ ಪಡಿಕ್ಕಲ್ ಕೃತಜ್ಞತೆ ಸಲ್ಲಿಸಿದರು.

"ದಿನೇಶ್ ಕಾರ್ತಿಕ್ ಮತ್ತು ಆಂಡಿ ಫ್ಲವರ್ ಸಹಾಯದಿಂದ ನಾನು ನನ್ನ ಬ್ಯಾಟಿಂಗ್ ತಂತ್ರದಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿಕೊಂಡಿದ್ದೇನೆ. ಕೆಂಪು ಚೆಂಡಿನಿಂದ ಬಿಳಿ ಚೆಂಡಿನ ಕ್ರಿಕೆಟ್‌ಗೆ ಬದಲಾಯಿಸಲು ನಾನು ಕೆಲವು ಹೊಸ ತಂತ್ರಗಳನ್ನು ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿತ್ತು" ಎಂದಿದ್ದಾರೆ.

Batting with Virat Kohli made a big difference in my growth, says RCB batter Devdutt Padikkal
ವೈಭವ್ ಸೂರ್ಯವಂಶಿಗೆ, ಕ್ರಿಸ್ ಗೇಲ್ ಸಿಕ್ಸರ್ ದಾಖಲೆ ಮುರಿಯುವ ಸಾಮರ್ಥ್ಯ ಇದೆ: ಅನಿಲ್ ಕುಂಬ್ಳೆ ಹೀಗೆ ಹೇಳಿದ್ಯಾಕೆ?

ವೈಭವ್ ಸೂರ್ಯವಂಶಿ ಪಡಿಕಲ್ ಹೇಳಿದ್ದೇನು?

ಹದಿಹರೆಯದ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ ಅವರ ಅಸಾಧಾರಣ ಬಾಲ್-ಸ್ಟ್ರೈಕಿಂಗ್ ಸಾಮರ್ಥ್ಯವನ್ನು ಆರ್ ಸಿಬಿ ಆಟಗಾರ ದೇವದತ್ ಪಡಿಕ್ಕಲ್ ಶ್ಲಾಘಿಸಿದ್ದಾರೆ.

"ವೈಭವ್ ಸೂರ್ಯವಂಶಿ ಮಾಡುತ್ತಿರುವುದು ನಿಜಕ್ಕೂ ವಿಶಿಷ್ಟವಾಗಿದೆ. ಅವರ ವಯಸ್ಸಿನಲ್ಲಿ, ಅವರ ಬ್ಯಾಟಿಂಗ್‌ನಲ್ಲಿ ಆ ರೀತಿಯ ಶಕ್ತಿ ಮತ್ತು ಸ್ಫೋಟಕತೆಯನ್ನು ಹೊಂದಿರುವುದು ವಿಶೇಷವಾಗಿದೆ" ಎಂದು ಅವರು ಹೇಳಿದರು.

ವೈಭವ್ ಅಪರೂಪದ ಪ್ರತಿಭೆ. ಆದರೆ ಅವರನ್ನು ಅನುಕರಿಸಲು ಪ್ರಯತ್ನಿಸುವುದು ಮುರ್ಖತನ ಎಂದು ಪಡಿಕಲ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com