IPL 2026: ವೈರಲ್ ವಿಡಿಯೋ ಬಗ್ಗೆ ಟ್ರೋಲ್‌ಗಳಿಗೆ ತಿರುಗೇಟು ನೀಡಿದ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಸಹೋದರಿ!

ಕೆಕೆಆರ್ ಮತ್ತು ಪಿಬಿಕೆಸ್ ನಡುವಿನ ಪಂದ್ಯ ಮಳೆಯಿಂದ ರದ್ದಾದಾಗ ಹಂಚಿಕೊಂಡಿದ್ದ ವಿಡಿಯೋ ಸಾಕಷ್ಟು ಟ್ರೋಲಿಂಗ್‌ಗೆ ಕಾರಣವಾಯಿತು ಮತ್ತು ಶ್ರೇಷ್ಠಾ ಆ ವಿಡಿಯೋವನ್ನು ಅಳಿಸಿಹಾಕಿದರು.
unjab Kings captain Shreyas Iyer with sister Shresta
ಸಹೋದರಿ ಶ್ರೇಷ್ಠಾ ಜೊತೆಗೆ ಶ್ರೇಯಸ್ ಅಯ್ಯರ್
Updated on

ಪಂಜಾಬ್ ಕಿಂಗ್ಸ್ (PBKS) ನಾಯಕ ಶ್ರೇಯಸ್ ಅಯ್ಯರ್ ಅವರ ಸಹೋದರಿ, ವೃತ್ತಿಪರ ಡ್ಯಾನ್ಸರ್ ಮತ್ತು ನೃತ್ಯ ಸಂಯೋಜಕಿ, ಐಪಿಎಲ್ 2026ರ ಸಮಯದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಬಹಳಷ್ಟು ದ್ವೇಷಕ್ಕೆ ಗುರಿಯಾಗಿದ್ದಾರೆ. ತನ್ನ ಸಹೋದರನ ತಂಡ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (KKR) ನಡುವಿನ ಪಂದ್ಯ ಮಳೆಯಿಂದ ರದ್ದಾದ ನಂತರ ಅವರು ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದರು. ಅದರ ನಂತರವೇ ಇದೆಲ್ಲ ಪ್ರಾರಂಭವಾಯಿತು. ಪಂದ್ಯ ರದ್ದಾದ ಕಾರಣ ಕೆಕೆಆರ್‌ಗೆ ಒಂದು ಪಾಯಿಂಟ್ ಸಿಕ್ಕಿತು. ಐಪಿಎಲ್ 2026ರಲ್ಲಿ ಅದು ಅವರ ಮೊದಲ ಪಾಯಿಂಟ್. ಬಳಿಕ ಶ್ರೇಷ್ಠಾ, ಪಿಬಿಕೆಎಸ್ ಜೆರ್ಸಿಯನ್ನು ಧರಿಸಿ ತಮಾಷೆಯ ಪೋಸ್ಟ್ ಹಾಕಿದ್ದರು. ವಿಡಿಯೋದಲ್ಲಿ, 'ಸಾಡೆ ಪಂಜಾಬಿಯನ್ ದ ದಿಲ್ ವಡ್ಡ ಹುಂಡಾ ಏ. ಲೋ, ಡಿಟ್ಟ ಏಕ್ ಪಾಯಿಂಟ್. (ನಾವು ಪಂಜಾಬಿಗಳು ದೊಡ್ಡ ಹೃದಯದವರು. ಆದ್ದರಿಂದ, ನಾವು ನಿಮಗೆ ಒಂದು ಪಾಯಿಂಟ್ ನೀಡಿದ್ದೇವೆ)' ಎಂದು ಹೇಳಿದ್ದರು.

ಆ ವಿಡಿಯೋ ಸಾಕಷ್ಟು ಟ್ರೋಲಿಂಗ್‌ಗೆ ಕಾರಣವಾಯಿತು ಮತ್ತು ಶ್ರೇಷ್ಠಾ ಆ ವಿಡಿಯೋವನ್ನು ಅಳಿಸಿಹಾಕಿದರು. ಈಮಧ್ಯೆ, ಐಪಿಎಲ್ 2026ರ ಆರಂಭದಲ್ಲಿ ಮೊದಲ ಏಳು ಪಂದ್ಯಗಳನ್ನು ಗೆದ್ದ ಅಜೇಯರಾಗಿ ಉಳಿದಿದ್ದ ಪಂಜಾಬ್ ಕಿಂಗ್ಸ್, ನಂತರ ಸತತ ಆರು ಪಂದ್ಯಗಳನ್ನು ಸೋತು ಪ್ಲೇಆಫ್‌ಗೆ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ.

ಪಂಜಾಬ್ ಕಿಂಗ್ಸ್ ಸೋತ ನಂತರ, ಶ್ರೇಷ್ಠಾ ಟ್ರೋಲಿಂಗ್ ವಿಷಯದ ಕುರಿತು ಎರಡು ಭಾಗಗಳ ವಿಡಿಯೋವನ್ನು ಬಿಡುಗಡೆ ಮಾಡಿದರು.

'ಈ ರೀಲ್‌ನ ಉದ್ದೇಶ ಕೇವಲ ಒಂದು ಮೋಜಿನ ಹಾಸ್ಯವಾಗಿತ್ತು. ನಾನು ಯಾರನ್ನೂ ಟ್ರೋಲ್ ಮಾಡುತ್ತಿರಲಿಲ್ಲ; ಹಾಸ್ಯದ ಹಿಂದೆ ನನಗೆ ಯಾವುದೇ ಕೆಟ್ಟ ಉದ್ದೇಶವಿರಲಿಲ್ಲ. ನಾನು ಯಾರ ವಿರುದ್ಧವೂ ದ್ವೇಷವನ್ನು ಹರಡುತ್ತಿರಲಿಲ್ಲ. ನನ್ನ ಸಹೋದರ ಕ್ರಿಕೆಟಿಗನಾಗಿರುವುದರಿಂದ ನಾನು ಪ್ರತಿಯೊಬ್ಬ ಕ್ರಿಕೆಟಿಗನನ್ನು ಗೌರವಿಸುತ್ತೇನೆ. ನೀವು ನನ್ನ ಕೆಲಸದ ಸ್ಥಳ, ನನ್ನ ಸಹೋದ್ಯೋಗಿಗಳು, ನನ್ನ ವಿದ್ಯಾರ್ಥಿಗಳು ಮತ್ತು ನನ್ನ ಕುಟುಂಬವನ್ನು ನಿಂದಿಸುತ್ತಿದ್ದೀರಿ' ಎಂದಿದ್ದಾರೆ.

'ಅವರು ಗೆದ್ದರೂ ಸೋತರೂ ನಾನು ಯಾವಾಗಲೂ ಅವರನ್ನು ಸಂಭ್ರಮಿಸುತ್ತೇನೆ. ಯಾವುದೇ ಸಮಯದಲ್ಲಿ ಟ್ರೋಲ್‌ಗಳು ಕುಟುಂಬಗಳನ್ನು ಗುರಿಯಾಗಿಸಿಕೊಂಡರೂ ಅದು ಸರಿಯಲ್ಲ' ಎಂದು ಅವರು ಹೇಳಿದರು.

ಸತತ ಆರು ಸೋಲುಗಳಿಂದ ಕಂಗೆಟಿದ್ದ ಪಂಜಾಬ್ ಕಿಂಗ್ಸ್ ತಂಡವು ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಗೆಲುವಿನ ನಗೆ ಬೀರಿದ್ದು, ನಾಯಕ ಶ್ರೇಯಸ್ ಅಯ್ಯರ್ ಅವರ ಅಜೇಯ 101 ರನ್‌ಗಳ ನೆರವಿನಿಂದ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡಕ್ಕೆ ಏಳು ವಿಕೆಟ್‌ಗಳ ಸೋಲುಣಿಸಿತು. ಆದರೆ, ಆ ಗೆಲುವು ಸಾಕಾಗಲಿಲ್ಲ. ಏಕೆಂದರೆ ಅಯ್ಯರ್ ನೇತೃತ್ವದ ತಂಡ 14 ಪಂದ್ಯಗಳಿಂದ 15 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಐದನೇ ಸ್ಥಾನ ಪಡೆದು ಪ್ಲೇಆಫ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com