IPL 2026, qualifier 1: ಟಾಸ್ ಗೆದ್ದ GT ಬೌಲಿಂಗ್ ಆಯ್ಕೆ, ಕುತೂಹಲಕ್ಕೆ ಬ್ರೇಕ್, ವೆಂಕಟೇಶ್ ಅಯ್ಯರ್ ಗೆ ಸ್ಟಿಕ್ ಆದ RCB!

ಎರಡನೇ ಇನ್ನಿಂಗ್ಸ್‌ನಲ್ಲಿ ಸ್ವಲ್ಪ ಇಬ್ಬನಿ ಇರುತ್ತದೆ. ಆದ್ದರಿಂದ ಬೋರ್ಡ್‌ನಲ್ಲಿ ಒಟ್ಟು ಮೊತ್ತವನ್ನು ಹೊಂದಿರುವುದು ಮತ್ತು ದೊಡ್ಡ ಗೆಲುವು ಸಾಧಿಸುವುದು..
Gujarat Titans opt to bowl against RCB
ಟಾಸ್ ಗೆದ್ದ ಗುಜರಾತ್ ಬೌಲಿಂಗ್ ಆಯ್ಕೆ
Updated on

ಧರ್ಮಶಾಲಾ: ತೀವ್ರ ಕುತೂಹಲ ಕೆರಳಿಸಿರುವ ಐಪಿಎಲ್ ಟೂರ್ನಿಯ ಮೊದಲ ಕ್ವಾಲಿಫೈಯರ್ ಪಂದ್ಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಟಾಸ್ ಗೆದ್ದ ಗುಜರಾತ್ ಟೈಟನ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ತಂಡದ ನಾಯಕ ಶುಭ್ ಮನ್ ಗಿಲ್ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು.

ಈ ವೇಳೆ ಮಾತನಾಡಿದ ಗಿಲ್, 'ನಾವು ಮೊದಲು ಬೌಲಿಂಗ್ ಮಾಡುತ್ತೇವೆ. ಇದು ಒಳ್ಳೆಯ ಪಿಚ್ ನಂತ ಕಾಣುತ್ತದೆ. ಆದರೆ ಈ ಮೈದಾನದ ಪರಿಸ್ಥಿತಿ ನಾವು ಈಗಾಗಲೇ ನೋಡಿದ್ದೇವೆ. ವಿಶೇಷವಾಗಿ, ಎರಡನೇ ಇನ್ನಿಂಗ್ಸ್‌ನಲ್ಲಿ ಸ್ವಲ್ಪ ಇಬ್ಬನಿ ಇರುತ್ತದೆ. ಆದ್ದರಿಂದ ಬೋರ್ಡ್‌ನಲ್ಲಿ ಒಟ್ಟು ಮೊತ್ತವನ್ನು ಹೊಂದಿರುವುದು ಮತ್ತು ದೊಡ್ಡ ಗೆಲುವು ಸಾಧಿಸುವುದು ಮತ್ತು ನಂತರ ಅದನ್ನು ಬೆನ್ನಟ್ಟಲು ಪ್ರಯತ್ನಿಸುವುದು ಯಾವಾಗಲೂ ಒಳ್ಳೆಯದು' ಎಂದು ಹೇಳಿದರು.

ಅಂತೆಯೇ ನನ್ನ ಪ್ರಕಾರ ನಾವು ನಿಜವಾಗಿಯೂ ಉತ್ತಮ ಕ್ರಿಕೆಟ್ ಆಡುತ್ತಿದ್ದೇವೆ ಮತ್ತು ನಾವು ಅದನ್ನು ಮುಂದುವರಿಸುತ್ತೇವೆ. ನಾನು ಅಂಡರ್ 14 ಮತ್ತು ಅಂಡರ್ 16 ದಿನಗಳಲ್ಲಿ ಇಲ್ಲಿ ಬಹಳಷ್ಟು ಕ್ರಿಕೆಟ್ ಆಡಿದ್ದೇನೆ. ನಾನು ಇಲ್ಲಿ ಸಾಕಷ್ಟು ಸಮಯ ಕಳೆದಿದ್ದೇನೆ, ಆದ್ದರಿಂದ ಹೌದು, ಇದು ನಮ್ಮನ್ನು ಚೆನ್ನಾಗಿ ಬಳಸಿಕೊಳ್ಳುತ್ತದೆ ಎಂದು ಆಶಿಸುತ್ತೇವೆ ಎಂದರು.

Gujarat Titans opt to bowl against RCB
IPL 2026: RCB vs GT ಕ್ವಾಲಿಫೈಯರ್ ಪಂದ್ಯಕ್ಕೆ ಮಳೆ ಆತಂಕ; ರಿಸರ್ವ್ ಡೇ ಕೂಡ ಇಲ್ಲ... ಪಂದ್ಯ ರದ್ದಾದರೆ ಯಾರು ಫೈನಲ್ ಗೆ?

ಗುಜರಾತ್ ತಂಡದಲ್ಲಿ ಒಂದು ಬದಲಾವಣೆ

ಇದೇ ವೇಳೆ ಅರ್ಷದ್ ಖಾನ್ ಬದಲಿಗೆ ಕುಲ್ವಂತ್ ಆಡುತ್ತಿದ್ದಾರೆ ಎಂದು ಶುಭ್ ಮನ್ ಗಿಲ್ ಹೇಳಿದರು.

ಕುತೂಹಲಕ್ಕೆ ಬ್ರೇಕ್, ವೆಂಕಟೇಶ್ ಅಯ್ಯರ್ ಗೆ ಸ್ಟಿಕ್ ಆದ RCB!

ಇತ್ತ ಆರ್ ಸಿಬಿ ಕೂಡ ತಂಡದಲ್ಲಿ ಯಾವುದೇ ರೀತಿಯ ಹೆಚ್ಚು ಬದಲಾವಣೆಗೆ ಮುಂದಾಗದೇ ಫಿಲ್ ಸಾಲ್ಟ್ ಫಿಟ್ ಆಗಿದ್ದರೂ ವೆಂಕಟೇಷ್ ಅಯ್ಯರ್ ರೊಂದಿಗೆ ಬ್ಯಾಟಿಂಗ್ ಆರಂಭಿಸಲು ನಿರ್ಧರಿಸಿದೆ. ಉಳಿದಂತೆ ರೊಮಾರಿಯೋ ಶೆಫರ್ಡ್, ಸುಯಾಶ್ ಶರ್ಮಾ, ಕನಿಷ್ಕ್ ಚೌಹ್ವಾಣ್, ಅಭಿನಂದನ್ ಸಿಂಗ್ ಮತ್ತು ಜೋರ್ಡನ್ ಕಾಕ್ಸ್ ಇಂಪ್ಯಾಕ್ಟ್ ಸಬ್ಸ್ ನಲ್ಲಿದ್ದಾರೆ.

ತಂಡಗಳು ಇಂತಿವೆ

ಗುಜರಾತ್ ಟೈಟನ್ಸ್ (ಪ್ಲೇಯಿಂಗ್ XI): ಸಾಯಿ ಸುದರ್ಶನ್, ಶುಭಮನ್ ಗಿಲ್ (ನಾಯಕ್), ಜೋಸ್ ಬಟ್ಲರ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ನಿಶಾಂತ್ ಸಿಂಧು, ಜೇಸನ್ ಹೋಲ್ಡರ್, ರಶೀದ್ ಖಾನ್, ಕುಲ್ವಂತ್ ಖೆಜ್ರೋಲಿಯಾ, ಕಗಿಸೊ ರಬಾಡ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಪ್ಲೇಯಿಂಗ್ XI): ವೆಂಕಟೇಶ್ ಅಯ್ಯರ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ್), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜಾಕೋಬ್ ಡಫಿ, ಜೋಶ್ ಹ್ಯಾಜಲ್‌ವುಡ್, ರಸಿಖ್ ಸಲಾಮ್ ದಾರ್

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com