4th ODI: ವಿಲ್ ಯಂಗ್ ಸ್ಫೋಟಕ ಶತಕ, ಭಾರತಕ್ಕೆ ಗೆಲ್ಲಲು 334 ರನ್ ಬೃಹತ್ ಗುರಿ ನೀಡಿದ ನ್ಯೂಜಿಲೆಂಡ್

ಮೌಂಟ್ ಮೌಂಗನುಯಿಯ ಬೇ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ ವಿಲ್ ಯಂಗ್ (125) ಸ್ಫೋಟಕ ಶತಕ, ಟಿಮ್ ಸೈಫರ್ಟ್ (58) ಅರ್ಧಶತಕಗಳ ನೆರವಿನಿಂದ..
India rally to restrict New Zealand to 333
ಭಾರತಕ್ಕೆ ಬೃಹತ್ ಗುರಿ ನೀಡಿದ ನ್ಯೂಜಿಲೆಂಡ್
Updated on: 

ಮೌಂಟ್ ಮೌಂಗನುಯಿ: ಭಾರತದ ವಿರುದ್ಧದ 4ನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ವಿಲ್ ಯಂಗ್ ಸ್ಫೋಟಕ ಶತಕದ ನೆರನಿಂದ 333 ರನ್ ಗಳ ಬೃಹತ್ ಮೊತ್ತ ಪೇರಿಸಿದೆ.

ಮೌಂಟ್ ಮೌಂಗನುಯಿಯ ಬೇ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ ವಿಲ್ ಯಂಗ್ (125) ಸ್ಫೋಟಕ ಶತಕ, ಟಿಮ್ ಸೈಫರ್ಟ್ (58) ಅರ್ಧಶತಕಗಳ ನೆರವಿನಿಂದ ನಿಗಧಿತ 50 ಓವರ್ ನಲ್ಲಿ 333 ರನ್ ಗಳಿಗೆ ಆಲೌಟ್ ಆಯಿತು.

ಆ ಮೂಲಕ ಭಾರತಕ್ಕೆ ಗೆಲ್ಲಲು 334 ರನ್ ಗಳ ಬೃಹತ್ ಗುರಿ ನೀಡಿದೆ.

ಭಾರತ ತಂಡದ ಪರ ಔಕಿಬ್ ನಬಿ, ಗುರ್ನೂರ್ ಬ್ರಾರ್ ಮತ್ತು ಅಕ್ಸರ್ ಪಟೇಲ್ ತಲಾ 2 ವಿಕೆಟ್ ಪಡೆದರೆ, ಅರ್ಶ್ ದೀಪ್ ಸಿಂಗ್ ಮತ್ತು ನಮನ್ ಧೀರ್ ತಲಾ ಒಂದು ವಿಕೆಟ್ ಪಡೆದರು.

India rally to restrict New Zealand to 333
ಡೈವಿಂಗ್ ಮೂಲಕ ಮತ್ತೊಂದು ಅದ್ಭುತ ಕ್ಯಾಚ್ ಹಿಡಿದ ರೋಹಿತ್ ಶರ್ಮಾ; ಟೀಕಾಕಾರರ ಬಾಯಿ ಮುಚ್ಚಿಸಿದ 'ಹಿಟ್‌ಮ್ಯಾನ್'!

ವಿಲ್ ಯಂಗ್ ಸ್ಫೋಟಕ ಶತಕ, ಟಿಮ್ ಸೈಫರ್ಟ್ ಉತ್ತಮ ಸಾಥ್

ನ್ಯೂಜಿಲೆಂಡ್ ಪರ ವಿಲ್ ಯಂಗ್, ಟಿಮ್ ಸೈಫರ್ಟ್ ಮತ್ತು ಫಿನ್ ಅಲೆನ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು.

ಪ್ರಮುಖವಾಗಿ ಆರಂಭಿಕ ಆಟಗಾರ ವಿಲ್ ಯಂಗ್ ಕೇವಲ 108 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 14 ಬೌಂಡರಿಗಳ ಸಹಿತ 125 ರನ್ ಚಚ್ಚಿದರೆ, ಅವರಿಗೆ ಉತ್ತಮ ಸಾಥ್ ನೀಡಿದ ಟಿಮ್ ಸೈಫರ್ಟ್ ಕೂಡ 48 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 6 ಬೌಂಡರಿಗಳ ನೆರವಿನಿಂದ 58 ರನ್ ಕಲೆಹಾಕಿದರು.

ಅಲ್ಲದೆ ಮಧ್ಯಮ ಕ್ರಮಾಂದಲ್ಲಿ ಫಿನ್ ಅಲೆನ್ ಕೂಡ ಕೇವಲ 30 ಎಸೆತಗಳಲ್ಲಿ 41 ರನ್ ಚಚ್ಚಿ ಕಿವೀಸ್ ಬೃಹತ್ ಮೊತ್ತಕ್ಕೆ ಕಾರಣರಾದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X