ಡೈವಿಂಗ್ ಮೂಲಕ ಮತ್ತೊಂದು ಅದ್ಭುತ ಕ್ಯಾಚ್ ಹಿಡಿದ ರೋಹಿತ್ ಶರ್ಮಾ; ಟೀಕಾಕಾರರ ಬಾಯಿ ಮುಚ್ಚಿಸಿದ 'ಹಿಟ್‌ಮ್ಯಾನ್'!

ಇನಿಂಗ್ಸ್‌ನ ಎರಡನೇ ಓವರ್‌ನಲ್ಲಿ, 5 ರನ್‌ಗಳಿಸಿದ್ದಾಗ ಯಂಗ್‌ಗೆ ಎರಡು ಬಾರಿ ಜೀವದಾನ ಸಿಕ್ಕಿತು (ಒಮ್ಮೆ ರೋಹಿತ್ ಅವರಿಂದ ಮತ್ತು ಮತ್ತೊಮ್ಮೆ ವಿಕೆಟ್ ಕೀಪರ್ ಇಶಾನ್ ಕಿಶನ್ ಅವರಿಂದ). ಈ ಅವಕಾಶಗಳನ್ನು ಬಳಸಿಕೊಂಡ ಯಂಗ್, ನಂತರ ಶತಕ ಸಿಡಿಸಿದರು.
Rohit Sharma grabbed a stunning catch in 4th ODI vs New Zealand
ಡೈವ್ ಹೊಡೆದು ಕ್ಯಾಚ್ ಹಿಡಿದ ರೋಹಿತ್ ಶರ್ಮಾ
Updated on: 

ನ್ಯೂಜಿಲೆಂಡ್ ಬ್ಯಾಟರ್ ಫಿನ್ ಅಲೆನ್ ಅರ್ಧಶತಕ ಪೂರೈಸುವುದನ್ನು ತಡೆಯಲು, ರೋಹಿತ್ ಶರ್ಮಾ 'ಕವರ್ಸ್'ನಲ್ಲಿ ಡೈವ್ ಹೊಡೆಯುವ ಮೂಲಕ ಅದ್ಭುತ ಕ್ಯಾಚ್ ಹಿಡಿದು ಎಲ್ಲರ ಗಮನ ಸಳೆದರು. ಆರಂಭದಲ್ಲಿ ಸ್ಲಿಪ್ಸ್‌ನಲ್ಲಿ ವಿಲ್ ಯಂಗ್ ಅವರ ಸುಲಭ ಕ್ಯಾಚ್ ಕೈಬಿಟ್ಟಿದ್ದ ರೋಹಿತ್, ನಂತರ ಅಕ್ಷರ್ ಪಟೇಲ್ ಅವರ ಬೌಲಿಂಗ್‌ನಲ್ಲಿ ಫಿನ್ ಅಲೆನ್ (41 ರನ್) ಅವರನ್ನು ಔಟ್ ಮಾಡಲು ಅದ್ಭುತ ಕ್ಯಾಚ್ ಹಿಡಿದರು. ರೋಹಿತ್ ಅವರ ಈ ಅದ್ಭುತ ಪ್ರದರ್ಶನ ಕಂಡು, ಅಕ್ಷರ್ ಪಟೇಲ್ ಓಡಿಬಂದು, ರೋಹಿತ್ ಅವರನ್ನು ತಬ್ಬಿಕೊಂಡರು.

ಮತ್ತೊಂದು ತುದಿಯಲ್ಲಿದ್ದ ಫಿನ್ ಅಲೆನ್, ತೀವ್ರ ನಿರಾಶೆಯಿಂದ ತಲೆ ತಗ್ಗಿಸಿ, ಕೋಪದಿಂದ ತನ್ನ ಬ್ಯಾಟ್ ಅನ್ನು ಜೋರಾಗಿ ನೆಲಕ್ಕೆ ಗುದ್ದಿದರು. 50 ರನ್‌ಗಳ ಗಡಿಯನ್ನು ತಲುಪುವ ಮೊದಲೇ ಅವರು ಮೈದಾನದಿಂದ ನಿರ್ಗಮಿಸಬೇಕಾದ ಅನಿವಾರ್ಯತೆ ಎದುರಾಯಿತು.

ಆಫ್-ಸ್ಟಂಪ್‌ನ ಹೊರಗೆ ಸಾಗುತ್ತಿದ್ದ ಗುಡ್ ಲೆಂತ್ (good-length) ಎಸೆತವನ್ನು ಕಂಡು ಅಲನ್ ಹಿಂದಿನ ಕಾಲಿನ ಮೇಲೆ ನಿಂತು ಚೆಂಡನ್ನು ಬಲವಾಗಿ ಹೊಡೆಯಲು ಪ್ರಯತ್ನಿಸಿದರು. ರೋಹಿತ್ ಚೆಂಡಿನ ಪಥವನ್ನು ಅತ್ಯಂತ ನಿಖರವಾಗಿ ಅಂದಾಜಿಸಿದರು. ಇದಕ್ಕೂ ಮುನ್ನ ಯಂಗ್ ನೀಡಿದ ಕ್ಯಾಚ್ ಅನ್ನು ಕೈಬಿಟ್ಟಿದ್ದರಿಂದ, ಫೀಲ್ಡಿಂಗ್‌ನಲ್ಲಿ ರೋಹಿತ್ ಅವರ ಚುರುಕುತನದ ಬಗ್ಗೆ ಚರ್ಚೆಗಳು ಹುಟ್ಟಿಕೊಂಡಿದ್ದವು. ಆದರೆ, ಈ ಅದ್ಭುತ ಪ್ರಯತ್ನದ ಮೂಲಕ ರೋಹಿತ್ ತಮ್ಮ ಟೀಕಾಕಾರರ ಬಾಯಿ ಮುಚ್ಚಿಸಿದರು. ರೋಹಿತ್ ಅವರಿಂದ ಇಂತಹ ಅದ್ಭುತ ಪ್ರದರ್ಶನವನ್ನು ಕಂಡ ಸಾಮಾಜಿಕ ಜಾಲತಾಣದ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನಿಂಗ್ಸ್‌ನ ಎರಡನೇ ಓವರ್‌ನಲ್ಲಿ, 5 ರನ್‌ಗಳಿಸಿದ್ದಾಗ ಯಂಗ್‌ಗೆ ಎರಡು ಬಾರಿ ಜೀವದಾನ ಸಿಕ್ಕಿತು (ಒಮ್ಮೆ ರೋಹಿತ್ ಅವರಿಂದ ಮತ್ತು ಮತ್ತೊಮ್ಮೆ ವಿಕೆಟ್ ಕೀಪರ್ ಇಶಾನ್ ಕಿಶನ್ ಅವರಿಂದ). ಈ ಅವಕಾಶಗಳನ್ನು ಬಳಸಿಕೊಂಡ ಯಂಗ್, ನಂತರ ಶತಕ ಸಿಡಿಸಿದರು. ನಾಲ್ಕನೇ ಏಕದಿನ ಪಂದ್ಯದ ಆರಂಭದಲ್ಲಿ ಭಾರತದ ಫೀಲ್ಡಿಂಗ್ ಕಳಪೆಯಾಗಿತ್ತು; ಇದರಿಂದಾಗಿ ವೇಗದ ಬೌಲರ್ ಔಕಿಬ್ ನಬಿ ಅವರಿಗೆ ಆರಂಭಿಕ ವಿಕೆಟ್‌ಗಳನ್ನು ಪಡೆಯಲು ಸಾಧ್ಯವಾಗಲಿಲ್ಲ. ಐದನೇ ಎಸೆತದಲ್ಲಿ ಬ್ಯಾಟ್‌ನ ಅಂಚಿಗೆ ತಗುಲಿದ ಚೆಂಡನ್ನು ಫಸ್ಟ್ ಸ್ಲಿಪ್‌ನಲ್ಲಿದ್ದ ರೋಹಿತ್ ಹಿಡಿಯಲು ವಿಫಲರಾದರು, ಅದರ ಮರು ಎಸೆತದಲ್ಲೇ ಇಶಾನ್ ಕ್ಯಾಚ್ ಕೈಚೆಲ್ಲಿದರು.

Rohit Sharma grabbed a stunning catch in 4th ODI vs New Zealand
India vs New Zealand, 4th ODI: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ನೀಡಿದ ಸಲಹೆಯನ್ನು ಬಹಿರಂಗಪಡಿಸಿದ ಔಕಿಬ್ ನಬಿ!

ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ರೋಹಿತ್‌ಗೆ ಇದುವರೆಗೂ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ; ಅವರು ಮೊದಲ ಎರಡು ಪಂದ್ಯಗಳಲ್ಲಿ ಕೇವಲ 23 ರನ್‌ಗಳನ್ನು ಮಾತ್ರ ಗಳಿಸಿದ್ದಾರೆ, ಇನ್ನು ಮೂರನೇ ಏಕದಿನ ಪಂದ್ಯವು ಒಂದೂ ಎಸೆತ ಕಾಣದೆ ಮಳೆಯಿಂದಾಗಿ ರದ್ದಾಯಿತು.

ಮುಂದಿನ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್‌ಗಾಗಿ ಭಾರತ ತಂಡದಲ್ಲಿ ತಮ್ಮ ಸ್ಥಾನದ ಬಗ್ಗೆ ಇನ್ನೂ ಅನಿಶ್ಚಿತತೆ ಉಳಿದುಕೊಂಡಿರುವ ಹಿನ್ನೆಲೆಯಲ್ಲಿ, ಎರಡನೇ ಆರಂಭಿಕ ಆಟಗಾರನ ಸ್ಥಾನಕ್ಕೆ ತಾವೇ ಸೂಕ್ತ ವ್ಯಕ್ತಿ ಎಂದು ಆಯ್ಕೆದಾರರಿಗೆ ಮನವರಿಕೆ ಮಾಡಿಕೊಡಲು 'ಹಿಟ್‌ಮ್ಯಾನ್' ಇನ್ನಷ್ಟು ಪ್ರಯತ್ನಿಸಬೇಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X