'ನಕಲಿ ಬೌಲಿಂಗ್‌ನೊಂದಿಗೆ ಇಷ್ಟು ವರ್ಷ ಆಡಿದ್ದಾನೆ': ಟೀಂ ಇಂಡಿಯಾ ಉದಯೋನ್ಮು ವೇಗಿ ಕುರಿತು ಮಾಜಿ ಕ್ರಿಕೆಟಿಗ ಕಿಡಿ!

2025ರ ಆವೃತ್ತಿಯಲ್ಲಿ 13 ಪಂದ್ಯಗಳನ್ನಾಡಿದ್ದ ಅವರು 9.80 ಎಕಾನಮಿ ದರದಲ್ಲಿ 16 ವಿಕೆಟ್ ಪಡೆದಿದ್ದರು. ಆದರೆ, 2026ರ ಆವೃತ್ತಿಯಲ್ಲಿ ಕೇವಲ ಐದು ಪಂದ್ಯಗಳಲ್ಲಿ ಆಡಿದ್ದ ಅವರು ಒಂದೂ ವಿಕೆಟ್ ಪಡೆಯಲು ಸಾಧ್ಯವಾಗಿರಲಿಲ್ಲ.
Kris Srikkanth's Brutal Verdict On Pacer
ವೇಗಿ ಜಯದೇವ್ ಉನಾದ್ಕತ್
Updated on: 

ನವದೆಹಲಿ: ಐಪಿಎಲ್ ತಂಡಗಳ ಆಟಗಾರರ ವರ್ಗಾವಣೆ (ಟ್ರೇಡ್) ಕುರಿತ ಚರ್ಚೆ ಜೋರಾಗಿರುವ ಬೆನ್ನಲ್ಲೇ, ಟೀಂ ಇಂಡಿಯಾದ ಉದಯೋನ್ಮು ವೇಗಿ ಕುರಿತು ಮಾಜಿ ಕ್ರಿಕೆಟಿಗ ಕ್ರಿಸ್ ಶ್ರೀಕಾಂತ್ ಕೆಂಡಕಾರಿದ್ದಾರೆ.

ಐಪಿಎಲ್ 2027 ಟೂರ್ನಿಗೆ ದಿನಗಣನೆ ಆರಂಭವಾಗಿರುವಂತೆಯೇ ಸನ್‌ರೈಸರ್ಸ್ ಹೈದರಾಬಾದ್ ತಂಡದ ಹಿರಿಯ ವೇಗಿ ಜಯದೇವ್ ಉನಾದ್ಕಟ್ ವಿರುದ್ಧ ಭಾರತದ ಮಾಜಿ ನಾಯಕ ಕೃಷ್ಣಮಾಚಾರಿ ಶ್ರೀಕಾಂತ್ ತೀವ್ರ ಟೀಕೆ ಮಾಡಿದ್ದಾರೆ.

'ನಕಲಿ ಬೌಲಿಂಗ್‌ನೊಂದಿಗೆ ಇಷ್ಟು ವರ್ಷ ಆಡಿದ್ದಾನೆ' ಎಂದು ವ್ಯಂಗ್ಯವಾಡಿರುವ ಅವರು, ಉನಾದ್ಕಟ್ ಅವರನ್ನು ಇನ್ನೂ ತಂಡದಲ್ಲಿ ಉಳಿಸಿಕೊಂಡಿರುವುದೇ ಅಚ್ಚರಿ ಎಂದಿದ್ದಾರೆ.

ಹರ್ಷಲ್ ಪಟೇಲ್ ಅವರು ಸನ್‌ರೈಸರ್ಸ್ ಹೈದರಾಬಾದ್ ತಂಡದಿಂದ ಗುಜರಾತ್ ಟೈಟಾನ್ಸ್‌ಗೆ ವರ್ಗಾವಣೆಯಾಗುವ ಸಾಧ್ಯತೆಯಿದೆ ಎಂಬ ವರದಿಗಳ ಬೆನ್ನಲ್ಲೇ ಶ್ರೀಕಾಂತ್ ಈ ಹೇಳಿಕೆ ನೀಡಿದ್ದಾರೆ.

2025ರ ಐಪಿಎಲ್ ಹರಾಜಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಹರ್ಷಲ್ ಪಟೇಲ್ ಅವರನ್ನು 8 ಕೋಟಿ ರೂ. ನೀಡಿ ಖರೀದಿಸಿತ್ತು. 2025ರ ಆವೃತ್ತಿಯಲ್ಲಿ 13 ಪಂದ್ಯಗಳನ್ನಾಡಿದ್ದ ಅವರು 9.80 ಎಕಾನಮಿ ದರದಲ್ಲಿ 16 ವಿಕೆಟ್ ಪಡೆದಿದ್ದರು. ಆದರೆ, 2026ರ ಆವೃತ್ತಿಯಲ್ಲಿ ಕೇವಲ ಐದು ಪಂದ್ಯಗಳಲ್ಲಿ ಆಡಿದ್ದ ಅವರು ಒಂದೂ ವಿಕೆಟ್ ಪಡೆಯಲು ಸಾಧ್ಯವಾಗಿರಲಿಲ್ಲ.

ಇದೀಗ ಹರ್ಷಲ್ ಪಟೇಲ್ ಅವರನ್ನು 4 ಕೋಟಿ ರೂ. ಮೊತ್ತಕ್ಕೆ ಗುಜರಾತ್ ಟೈಟಾನ್ಸ್ ತಂಡಕ್ಕೆ ವರ್ಗಾಯಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಈ ಕುರಿತು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಶ್ರೀಕಾಂತ್, ಸನ್‌ರೈಸರ್ಸ್ ತಂಡದ ಬೌಲಿಂಗ್ ವಿಭಾಗದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Kris Srikkanth's Brutal Verdict On Pacer
ಇಷ್ಟೊಂದು ಗರ್ವ..! ಕೊಹ್ಲಿ ಮಾತಿಗೂ ಬೆಲೆ ಕೊಡಲಿಲ್ವಾ ಶ್ರೇಯಸ್ ಅಯ್ಯರ್? Video ವೈರಲ್, ಅಭಿಮಾನಿಗಳ ಆಕ್ರೋಶ

ತಂಡದಿಂದ ಕೈಬಿಡದಿರುವುದೇ ಅಚ್ಚರಿ

"ಜಯದೇವ್ ಉನಾದ್ಕಟ್ ಅವರನ್ನು ಇನ್ನೂ ತಂಡದಿಂದ ಕೈಬಿಟ್ಟಿಲ್ಲ ಎಂಬುದೇ ನನಗೆ ಆಶ್ಚರ್ಯ ತಂದಿದೆ. ಅವರ ನಕಲಿ ಬೌಲಿಂಗ್‌ನೊಂದಿಗೆ ಇಷ್ಟು ವರ್ಷ ಆಡಿದ್ದಾರೆ. ಅವರು ತಂಡದ ಅಂತಿಮ 11ರ ಬಳಗದಲ್ಲಿ ಹೇಗೆ ಸ್ಥಾನ ಪಡೆಯುತ್ತಾರೆ ಎಂಬುದೇ ಗೊತ್ತಿಲ್ಲ. ಆದರೆ, ಅವರನ್ನು ಹಳೆಯ ಕೆಲಸದ ಕುದುರೆ ಎಂದು ಕರೆದು ತಂಡದಲ್ಲಿ ಉಳಿಸಿಕೊಳ್ಳಬಹುದು" ಎಂದು ಶ್ರೀಕಾಂತ್ ವ್ಯಂಗ್ಯವಾಡಿದ್ದಾರೆ.

ಅಲ್ಲದೆ, ಹರ್ಷಲ್ ಪಟೇಲ್ ಗುಜರಾತ್ ಟೈಟಾನ್ಸ್ ತಂಡದ ಅಂತಿಮ 11ರ ಬಳಗದಲ್ಲಿ ಸ್ಥಾನ ಪಡೆಯುತ್ತಾರೆಯೇ ಎಂಬ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದ್ದಾರೆ. ಗಾಯದ ಸಮಸ್ಯೆಯಿಂದ ಯಾರಾದರೂ ಆಟಗಾರ ಹೊರಗುಳಿದರೆ ಬದಲಿ ಆಟಗಾರನಾಗಿ ಬಳಸಿಕೊಳ್ಳಲು ಅವರನ್ನು ತಂಡದಲ್ಲಿ ಉಳಿಸಿಕೊಳ್ಳಬಹುದು ಎಂದಿದ್ದಾರೆ.

ನಟರಾಜನ್ ಬಗ್ಗೆಯೂ ಟೀಕೆ

ಇದೇ ವೇಳೆ, ಟಿ. ನಟರಾಜನ್ ಅವರು ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಸೇರ್ಪಡೆಯಾಗುತ್ತಿರುವ ಬಗ್ಗೆಯೂ ಶ್ರೀಕಾಂತ್ ಮಾತನಾಡಿದ್ದಾರೆ. ಟ್ರೇಡ್ ಒಪ್ಪಂದದ ಭಾಗವಾಗಿ ಜೀಶನ್ ಅನ್ಸಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸೇರ್ಪಡೆಗೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

"ನಟರಾಜನ್ ಮತ್ತು ಉನಾದ್ಕಟ್ ನಡುವೆ ಹೆಚ್ಚಿನ ವ್ಯತ್ಯಾಸವಿಲ್ಲ. ನಟರಾಜನ್ ಐಪಿಎಲ್‌ನಿಂದ ಐಪಿಎಲ್‌ವರೆಗೆ ಮಾತ್ರ ಆಡುತ್ತಾರೆ. ಆದರೆ, ಅದರಿಂದ ಅವರು ಪಾರಾಗುತ್ತಿದ್ದಾರೆ. ಐಪಿಎಲ್‌ನಲ್ಲಿ ಮಾತ್ರ ಆಡಲು ಫಿಟ್ ಆಗಿರುವ ಆಟಗಾರರು ಉಳಿದ ಸಮಯದಲ್ಲಿ ತಮ್ಮ ಫಿಟ್‌ನೆಸ್ ಸುಧಾರಿಸಿಕೊಳ್ಳುತ್ತಿದ್ದೇವೆ ಎಂದು ಹೇಳುವುದು ಸಾಮಾನ್ಯ ಕ್ರಿಕೆಟಿಗರಿಗೆ ಒಳ್ಳೆಯ ಸಂದೇಶವಲ್ಲ" ಎಂದು ಶ್ರೀಕಾಂತ್ ಅಭಿಪ್ರಾಯಪಟ್ಟಿದ್ದಾರೆ.

ರಾಜಸ್ಥಾನ್ ರಾಯಲ್ಸ್‌ಗೆ ಶಮಿ?

ಇನ್ನೊಂದೆಡೆ, ಲಖನೌ ಸೂಪರ್ ಜೈಂಟ್ಸ್ ತಂಡದ ವೇಗಿ ಮೊಹಮ್ಮದ್ ಶಮಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ವರ್ಗಾವಣೆಯಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಇಂಗ್ಲೆಂಡ್‌ನ ಆಲ್‌ರೌಂಡರ್ ಸ್ಯಾಮ್ ಕರನ್ ಅವರನ್ನು ಒಳಗೊಂಡ ಆಟಗಾರರ ವಿನಿಮಯ ಒಪ್ಪಂದದ ಮೂಲಕ ಈ ವರ್ಗಾವಣೆ ನಡೆಯಬಹುದು ಎಂದು 'ಕ್ರಿಕ್‌ಇನ್ಫೋ' ವರದಿ ಮಾಡಿದೆ.

ಈ ಒಪ್ಪಂದ ಯಶಸ್ವಿಯಾದರೆ, ರಾಜಸ್ಥಾನ್ ರಾಯಲ್ಸ್ ತಂಡದ ಪ್ರಮುಖ ವೇಗಿ ಜೋಫ್ರಾ ಆರ್ಚರ್ ಜೊತೆ ಮೊಹಮ್ಮದ್ ಶಮಿ ಬೌಲಿಂಗ್ ಹಂಚಿಕೊಳ್ಳುವ ಸಾಧ್ಯತೆಯಿದೆ. 36 ವರ್ಷದ ಶಮಿ ಇತ್ತೀಚೆಗಷ್ಟೇ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಅವರ ಸೇರ್ಪಡೆಯಿಂದ ಲಖನೌ ತಂಡದ ಬೌಲಿಂಗ್ ವಿಭಾಗಕ್ಕೆ ಹೆಚ್ಚಿನ ಬಲ ಸಿಗಬಹುದು. 2026ರ ಐಪಿಎಲ್‌ನಲ್ಲಿ ಲಖನೌ ಸೂಪರ್ ಜೈಂಟ್ಸ್ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X