ಕೆಎಲ್ ರಾಹುಲ್ ಭರ್ಜರಿ ಬ್ಯಾಟಿಂಗ್; 118 ರನ್‌ಗಳ ಮುನ್ನಡೆ ಕಾಯ್ದುಕೊಂಡ ಭಾರತ; ಎರಡು ರನ್‌ಗಳಿಂದ ಶುಭಮನ್ ಗಿಲ್ ಶತಕ ಮಿಸ್!

ಮೂರನೇ ದಿನದಾಟದ ಅಂತ್ಯಕ್ಕೆ ರಿಷಭ್ ಪಂತ್ (ಔಟಾಗದೆ 55) ಅವರಿಗೆ ನೈಟ್‌ವಾಚ್‌ಮನ್ ಅನ್ಶುಲ್ ಕಾಂಬೋಜ್ ಸಾಥ್ ನೀಡುತ್ತಿದ್ದಾರೆ.
KL Rahul - Shubman Gill power India to commanding 118-run lead against NZ at stumps on Day 3
ಕೆಎಲ್ ರಾಹುಲ್ - ಶುಭಮನ್ ಗಿಲ್
Updated on: 

ವೆಲ್ಲಿಂಗ್ಟನ್: ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ಅಂತ್ಯಕ್ಕೆ ಭಾರತ ತಂಡ ನಾಲ್ಕು ವಿಕೆಟ್ ನಷ್ಟಕ್ಕೆ 486 ರನ್ ಗಳಿಸುವ ಮೂಲ ಭರ್ಜರಿ ಮುನ್ನಡೆ ಪಡೆದಿದೆ. ಆರಂಭಿಕ ಆಟಗಾರ ಕೆಎಲ್ ರಾಹುಲ್ ಅವರ ಅದ್ಭುತ 136 ರನ್‌ಗಳ ನೆರವಿನಿಂದ ಭಾರತ ಇದೀಗ 118 ರನ್‌ಗಳ ಮುನ್ನಡೆ ಕಾಯ್ದುಕೊಂಡಿದೆ.

ಜೇಕಬ್ ಡಫಿ ಅವರ ಬೌಲಿಂಗ್‌ನಲ್ಲಿ ಭಾರತ ತಂಡದ ನಾಯಕ ಶುಭಮನ್ ಗಿಲ್ (98) ಎರಡು ರನ್‌ಗಳಿಂದ ಶತಕದ ಅವಕಾಶದಿಂದ ವಂಚಿತರಾದರು.

ಮೂರನೇ ದಿನದಾಟದ ಅಂತ್ಯಕ್ಕೆ ರಿಷಭ್ ಪಂತ್ (ಔಟಾಗದೆ 55) ಅವರಿಗೆ ನೈಟ್‌ವಾಚ್‌ಮನ್ ಅನ್ಶುಲ್ ಕಾಂಬೋಜ್ ಸಾಥ್ ನೀಡುತ್ತಿದ್ದಾರೆ.

ಕೆಎಲ್ ರಾಹುಲ್ 13ನೇ ಟೆಸ್ಟ್ ಶತಕ ಸಿಡಿಸುವ ಮೂಲಕ ದಾಖಲೆ ಬರೆದಿದ್ದಾರೆ. ಸಮಯೋಚಿತ ಆಟವಾಡಿದ ಅವರ ಇನಿಂಗ್ಸ್‌ನಲ್ಲಿ ಒಂಬತ್ತು ಬೌಂಡರಿಗಳು ಮತ್ತು ಎರಡು ಸಿಕ್ಸರ್‌ಗಳು ಒಳಗೊಂಡಿದ್ದವು. ಗಿಲ್ ಅವರ ಇನಿಂಗ್ಸ್‌ನಲ್ಲಿ ಒಂಬತ್ತು ಬೌಂಡರಿಗಳು ಮತ್ತು ಎರಡು ಸಿಕ್ಸರ್‌ಗಳು ಸೇರಿದ್ದವು.

ರಾಹುಲ್ ಮತ್ತು ದೇವದತ್ ಪಡಿಕ್ಕಲ್ (175 ಎಸೆತಗಳಲ್ಲಿ 80) ಎರಡನೇ ವಿಕೆಟ್‌ಗೆ 165 ರನ್‌ಗಳನ್ನು ಸೇರಿಸಿದರು. ಆದರೆ ಕೈಲ್ ಜೇಮಿಸನ್ ಉತ್ತಮ ಜೊತೆಯಾಟವನ್ನು ಮುರಿದು ಪಡಿಕ್ಕಲ್ ಅವರ ವಿಕೆಟ್ ಪಡೆದರು.

KL Rahul - Shubman Gill power India to commanding 118-run lead against NZ at stumps on Day 3
ಎಲ್ಲಾ SENA ದೇಶಗಳಲ್ಲಿ ಶತಕ: ವೆಲ್ಲಿಂಗ್ಟನ್‌ನಲ್ಲಿ ಅಪರೂಪದ ದಾಖಲೆ ಬರೆದ ಕನ್ನಡಿಗ; ಸಚಿನ್, ಕೊಹ್ಲಿ ಸಾಲಿಗೆ ಕೆ.ಎಲ್. ರಾಹುಲ್ ಸೇರ್ಪಡೆ..!

ನಾಯಕ ಗಿಲ್ ಜೊತೆ 91 ರನ್‌ಗಳ ಜೊತೆಯಾಟವಾಡಿದ ರಾಹುಲ್ ನಾಥನ್ ಸ್ಮಿತ್ ಅವರಿಗೆ ವಿಕೆಟ್ ಒಪ್ಪಿಸಿದರು. ನಂತರ ಗಿಲ್ ಮತ್ತು ಪಂತ್ ಜೋಡಿ 100 ರನ್‌ಗಳ ಜೊತೆಯಾಟವಾಡಿತು.

ಶುಕ್ರವಾರ, ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲೆಂಡ್ ತಂಡ ತನ್ನ ಮೊದಲ ಇನಿಂಗ್ಸ್‌ನಲ್ಲಿ ಹೆನ್ರಿ ನಿಕೋಲ್ಸ್ ಅವರ ಅಜೇಯ 175 ರನ್‌ಗಳ ನೆರವಿನಿಂದ 368 ರನ್‌ಗಳಿಗೆ ಆಲೌಟ್ ಆಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X