ಪಾಕ್ ಪಂದ್ಯದಲ್ಲಿ ರಹಸ್ಯ ಆಟಗಾರರು? ಏಷ್ಯನ್ ಗೇಮ್ಸ್ ಫೈನಲ್‌ನಲ್ಲಿ ಟೀಂ ಇಂಡಿಯಾ ಪರ ಕಣಕ್ಕಿಳಿದ ಟಿಟಿವಿ ನಂಬೂರಿ, ವಿಶ್ವನಾಥ್ ಯಾರು?

ಜಪಾನ್‌ನಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ-ವೋಲ್ಟೇಜ್ ಪುರುಷರ ಟಿ20 ಕ್ರಿಕೆಟ್ ಫೈನಲ್ ಪಂದ್ಯದ ವೇಳೆ, ಟಿವಿ ಪರದೆಯ ಮೇಲಿನ ಸ್ಕೋರ್‌ಬೋರ್ಡ್ ನೋಡಿ ಕ್ರಿಕೆಟ್ ಅಭಿಮಾನಿಗಳು ಒಂದು ಕ್ಷಣ ನಿಜಕ್ಕೂ ಬೆಚ್ಚಿಬಿದ್ದಿದ್ದರು. ಆ ಕುರಿತ ವರದಿ ಇಲ್ಲಿದೆ:
Asian Games Final: Who Are TTV Namboori and S Vishwanadh? Mystery Behind India's Playing XI Names Revealed
ಏಷ್ಯನ್ ಗೇಮ್ಸ್ ಫೈನಲ್ ಸ್ಕೋರ್‌ಕಾರ್ಡ್‌ನಲ್ಲಿ ಅಪರಿಚಿತ ಹೆಸರುಗಳು!Online Desk
Updated on: 

ಐಚಿ-ನಗೋಯಾ (ಜಪಾನ್): ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಎಂದರೆ ಕ್ರಿಕೆಟ್ ಅಭಿಮಾನಿಗಳಿಗೆ ಎಲ್ಲಿಲ್ಲದ ರೋಮಾಂಚನ. ಆದರೆ ಏಷ್ಯನ್ ಗೇಮ್ಸ್‌ನ ಚಿನ್ನದ ಪದಕದ ಫೈನಲ್ ಹಣಾಹಣಿಯ ಮುನ್ನ ಭಾರತ ತಂಡದ ಪ್ಲೇಯಿಂಗ್ ಇಲೆವೆನ್ ಪಟ್ಟಿಯನ್ನು ನೋಡಿದ ಪ್ರತಿಯೊಬ್ಬರಿಗೂ ಒಂದು ಕ್ಷಣ ತಲೆ ತಿರುಗಿದ ಅನುಭವವಾಯಿತು. ಯಾಕಂದ್ರೆ, ಭಾರತ ತಂಡದ ಪರವಾಗಿ ಹೆಸರಾಂತ ಕ್ರಿಕೆಟ್ ಆಟಗಾರರ ಬದಲಿಗೆ ಎಸ್ ವಿಶ್ವನಾಥ್, ಟಿಟಿವಿ ನಂಬೂರಿ, ಮಣಿ ಸುಂದರ್ ಎಂಬ ಅಪರಿಚಿತ ಹೆಸರುಗಳು ಸ್ಕೋರ್‌ಕಾರ್ಡ್‌ನಲ್ಲಿ ಕಾಣಿಸಿಕೊಂಡ ಪರಿಣಾಮ ಕ್ರಿಕೆಟ್ ಪ್ರೇಮಿಗಳು ಒಂದು ಕ್ಷಣ ಬೆಚ್ಚಿಬಿದ್ದು, ಗೊಂದಲಕ್ಕೊಳಗಾಗಿದ್ದರು. ಅದರಲ್ಲೂ, ಭಾರತವೇನಾದ್ರೂ ತನ್ನ ಎರಡನೇ ದರ್ಜೆಯ ಹೊಸ ತಂಡವನ್ನು ಪಾಕಿಸ್ತಾನ ವಿರುದ್ದ ಪಂದ್ಯದಲ್ಲಿ ಕಣಕ್ಕಿಳಿಸಿದೆಯೇ ಅಥವಾ ಯಾವುದೋ ವಿಡಿಯೋ ಗೇಮ್‌ನ ಕಾಲ್ಪನಿಕ ಹೆಸರುಗಳೇ ಎಂಬ ಗೊಂದಲ ಎಲ್ಲರಲ್ಲೂ ಮೂಡಿತು. ಆದರೆ, ಅದರ ಅಸಲಿಯತ್ತೇ ಬೇರೆ ಇದೆ. ಆ ಕುರಿತ ವರದಿ ಇಲ್ಲಿದೆ:

ಸ್ಕೋರ್‌ಬೋರ್ಡ್‌ನಲ್ಲಿದ್ದ ಆ ರಹಸ್ಯ ಆಟಗಾರರು ಯಾರು?

ಅಭಿಮಾನಿಗಳನ್ನು ಗೊಂದಲಕ್ಕೀಡುಮಾಡಿದ ಆ ಪ್ರಮುಖ ಆಟಗಾರರ ಅಸಲಿ ವಿವರ ಇಲ್ಲಿದೆ:

  • T.T.V. Namboori: ಇದು ಬೇರೆ ಯಾರೂ ಅಲ್ಲ, ಭಾರತದ ಭರವಸೆಯ ಯುವ ಬ್ಯಾಟರ್ ತಿಲಕ್ ವರ್ಮಾ. ಅವರ ಅಧಿಕೃತ ಪೂರ್ಣ ಹೆಸರು ನಂಬೂರಿ ಠಾಕೂರ್ ತಿಲಕ್ ವರ್ಮಾ.

  • S. Vishwanadh: ಇದು ಭಾರತದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್. ಇವರ ತಂದೆಯ ಹೆಸರು ವಿಶ್ವನಾಥ್ ಆಗಿದ್ದು, ಪಾಸ್‌ಪೋರ್ಟ್ ಹೆಸರಿನ ಆಧಾರದ ಮೇಲೆ ಹೀಗೆ ತೋರಿಸಲಾಗಿತ್ತು.

  • W.S. Mani Sundar: ಇದು ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್. ಅವರ ತಂದೆಯ ಹೆಸರು ಮಣಿ ಸುಂದರ್ ಆಗಿರುವುದರಿಂದ ಸ್ಕೋರ್‌ಬೋರ್ಡ್‌ನಲ್ಲಿ ಈ ಹೆಸರು ಕಾಣಿಸಿಕೊಂಡಿತ್ತು.

  • S.R. Dube: ಇದು ಆಕ್ರಮಣಕಾರಿ ಬ್ಯಾಟರ್ ಶಿವಂ ದುಬೆ.

ಹಾಗಾದ್ರೆ, ಈ ಗೊಂದಲಕ್ಕೆ ಅಸಲಿ ಕಾರಣವೇನು?

ಐಸಿಸಿ ಅಥವಾ ಸಾಮಾನ್ಯ ದ್ವಿಪಕ್ಷೀಯ ಸರಣಿಗಳಲ್ಲಿ ಆಟಗಾರರ ಜನಪ್ರಿಯ ಹೆಸರುಗಳನ್ನು (ಉದಾಹರಣೆಗೆ: ತಿಲಕ್ ವರ್ಮಾ, ಸಂಜು ಸ್ಯಾಮ್ಸನ್) ಜರ್ಸಿ ಮತ್ತು ಸ್ಕೋರ್‌ಬೋರ್ಡ್‌ನಲ್ಲಿ ಬಳಸಲಾಗುತ್ತದೆ. ಆದರೆ, ಷ್ಯನ್ ಗೇಮ್ಸ್, ಒಲಿಂಪಿಕ್ಸ್ ಅಥವಾ ಕಾಮನ್‌ವೆಲ್ತ್‌ನಂತಹ ಬಹು-ಕ್ರೀಡಾಕೂಟಗಳಲ್ಲಿ ಅಂತರರಾಷ್ಟ್ರೀಯ ನಿಯಮಾವಳಿಗಳ ಪ್ರಕಾರ ಆಯೋಜಕರು ಮತ್ತು ಪ್ರಸಾರಕರು ರಾಷ್ಟ್ರೀಯ ಒಲಿಂಪಿಕ್ ಸಮಿತಿ ನೀಡುವ ಅಥ್ಲೀಟ್‌ಗಳ ಅಧಿಕೃತ ಪಾಸ್‌ಪೋರ್ಟ್‌ನಲ್ಲಿ ನಮೂದಿಸಲಾಗಿರುವ ಅಧಿಕೃತ ಪೂರ್ಣ ಹೆಸರನ್ನು ಮಾತ್ರವೇ ಪ್ರದರ್ಶಿಸುವುದು ಕಡ್ಡಾಯವಾಗಿದೆ. ಅದರಲ್ಲೂ, ದಕ್ಷಿಣ ಭಾರತದ ಆಟಗಾರರ ಪಾಸ್‌ಪೋರ್ಟ್‌ಗಳಲ್ಲಿ ಅವರ ಮನೆತನದ ಹೆಸರು ಮತ್ತು ತಂದೆಯ ಹೆಸರುಗಳು ವಿಸ್ತಾರವಾಗಿ ಇರುವುದರಿಂದ, ಸ್ಕೋರ್‌ಬೋರ್ಡ್‌ನಲ್ಲಿ ಅವು ವಿಭಿನ್ನವಾಗಿ ಮೂಡಿಬಂದಿದ್ದವು. ಹೀಗಾಗಿ ಆ ಗೊಂದಲ ಉಂಟಾಗಿತ್ತು.

Asian Games Final: Who Are TTV Namboori and S Vishwanadh? Mystery Behind India's Playing XI Names Revealed
ಏಷ್ಯನ್ ಗೇಮ್ಸ್ 2026 ಫೈನಲ್: ವೈಭವ್ ಸೂರ್ಯವಂಶಿ ಅಣಕಿಸಿದ ಪಾಕ್ ಸ್ಟಾರ್ ಆಟಗಾರ! ಏನು ಮಾಡಿದ್ರು ಗೊತ್ತಾ? Video

ಪಂದ್ಯದಲ್ಲಿ ಏನಾಯಿತು?

ಹೆಸರುಗಳು ಹೊಸದಾಗಿ ಕಂಡರೂ ಸಹ ಭಾರತೀಯ ಆಟಗಾರರ ಬ್ಯಾಟಿಂಗ್ ಅಬ್ಬರ ಮಾತ್ರ ಎಂದಿನಂತೆಯೇ ಇತ್ತು! ಈ ಮಹತ್ವದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ, ಆರಂಭಿಕ ಅಭಿಷೇಕ್ ಶರ್ಮಾ ಅವರ ಸ್ಫೋಟಕ 61 ರನ್ (28 ಎಸೆತ) ಮತ್ತು ಇದೇ ಟಿ.ಟಿ.ವಿ. ನಂಬೂರಿ (ತಿಲಕ್ ವರ್ಮಾ) ಅವರ ಬಿರುಸಿನ ಅಜೇಯ ಅರ್ಧಶತಕದ (51 ರನ್, 22 ಎಸೆತ, 4 ಸಿಕ್ಸರ್)* ನೆರವಿನಿಂದ ಪಾಕಿಸ್ತಾನಕ್ಕೆ 211/6 ರನ್‌ಗಳ ಬೃಹತ್ ಗುರಿ ನೀಡಿದೆ. ಕೊನೆಯ ಓವರ್‌ಗಳಲ್ಲಿ ಶಿವಂ ದುಬೆ 27 ರನ್ನೊಂದಿಗೆ  ಭಾರತ ತಂಡವು ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 211 ರನ್‌ಗಳ ಬೃಹತ್ ಮೊತ್ತ ದಾಖಲಿಸಿತು. ಈ ಬೃಹತ್ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ ತಂಡವು ಹಸನ್ ನವಾಜ್ ಅವರ ಭರ್ಜರಿ ಹೋರಾಟದ ಹೊರತಾಗಿಯೂ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 192 ರನ್ ಗಳಿಸಲಷ್ಟೇ ಶಕ್ತವಾಗಿ ಶರಣಾಯಿತು. ಅದರಂತೆ, ಐಚಿ-ನಗೋಯಾದ ಕೊರೊಗಿ ಸ್ಪೋರ್ಟ್ಸ್ ಪಾರ್ಕ್‌ನಲ್ಲಿ ನಡೆದ 2026ರ ಏಷ್ಯನ್ ಗೇಮ್ಸ್‌ನ ಈ ರೋಚಕ ಫೈನಲ್ ಪಂದ್ಯದಲ್ಲಿ ಭಾರತ ತಂಡವು ಪಾಕಿಸ್ತಾನವನ್ನು 19 ರನ್‌ಗಳಿಂದ ಸೋಲಿಸಿ ಐತಿಹಾಸಿಕ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com