ವೈಡ್ ಪ್ಲಸ್ ಸಿಕ್ಸರ್; ಐತಿಹಾಸಿಕ ನೋಬಾಲ್ ಎಸೆದ ಬೌಲರ್, ಕೈಕೈ ಹಿಸುಕಿಕೊಂಡ ನಾಯಕ! ಅಂಪೈರ್ ತೀರ್ಪು ಅಚ್ಚರಿ-video

ಕೆನಡಾ ಸೂಪರ್‌ 60 ಟೂರ್ನಿಯ ಟೊರೊಂಟೊ ಸಿಕ್ಸರ್ಸ್‌ ಮತ್ತು ಮಿಸಿಸಾಗಾ ಮಾಸ್ಟರ್ಸ್‌ ನಡುವಿನ ಸೆಮಿಫೈನಲ್‌ನಲ್ಲಿ ನಡೆದ ಈ ಘಟನೆ ಕ್ರಿಕೆಟ್ ಇತಿಹಾಸದಲ್ಲೇ ಮೊದಲು ಎನ್ನಲಾಗಿದೆ.
Ali Khan bowls a bouncer, and the ball goes for a SIX
ವೈಡ್ ಪ್ಲಸ್ ಸಿಕ್ಸರ್-ಐತಿಹಾಸಿಕ ನೋಬಾಲ್ ಎಸೆದ ಬೌಲರ್
Updated on: 

ಹೈದರಾಬಾದ್‌: ಕ್ರಿಕೆಟ್‌ ಇತಿಹಾಸದ ವಿಚಿತ್ರ ಘಟನೆಗಳಿಗೆ ಮತ್ತೊಂದು ಘಟನೆ ಸೇರ್ಪಡೆಯಾಗಿದ್ದು, ಬೌಲರ್ ಓರ್ವ ಐತಿಹಾಸಿಕ ನೋಬಾಲ್ ಎಸೆದಿರುವ ಘಟನೆ ನಡೆದಿದೆ.

ಹೌದು.. ಕ್ರಿಕೆಟ್‌ ಇತಿಹಾಸದಲ್ಲಿ ಹಲವು ವಿಚಿತ್ರ ಘಟನೆಗಳು ನಡೆದಿವೆ. ಈ ಪಟ್ಟಿಗೆ ಮತ್ತೊಂದು ಸೇರ್ಪಡೆಯಾಗಿದ್ದು, ಕೆನಡಾ ಸೂಪರ್‌ 60 ಟೂರ್ನಿಯ ಟೊರೊಂಟೊ ಸಿಕ್ಸರ್ಸ್‌ ಮತ್ತು ಮಿಸಿಸಾಗಾ ಮಾಸ್ಟರ್ಸ್‌ ನಡುವಿನ ಸೆಮಿಫೈನಲ್‌ನಲ್ಲಿ ನಡೆದ ಈ ಘಟನೆ ಕ್ರಿಕೆಟ್ ಇತಿಹಾಸದಲ್ಲೇ ಮೊದಲು ಎನ್ನಲಾಗಿದೆ.

ಅಮೆರಿಕದ ವೇಗದ ಬೌಲರ್‌ ಅಲಿ ಖಾನ್ ಎಸೆದ ಬೌನ್ಸರ್‌ವೊಂದು ವಿಕೆಟ್‌ಕೀಪರ್‌ನ ತಲೆ ಮೇಲಿಂದಲೇ ಹಾರಿ ಬೌಂಡರಿ ಗೆರೆ ದಾಟಿದೆ.

ಅಚ್ಚರಿ ಎಂದರೆ, ಚೆಂಡು ಪಿಚ್‌ನಲ್ಲಿ ಒಮ್ಮೆ ಬೌನ್ಸ್‌ ಆದ ಬಳಿಕ ವಿಕೆಟ್‌ಕೀಪರ್‌ಗೆ ತಾಗಲಿಲ್ಲ, ಬ್ಯಾಟರ್‌ಗೂ ತಾಗಲಿಲ್ಲ, ಕ್ರೀಡಾಂಗಣದೊಳಗೆ ಎಲ್ಲಿಯೂ ಮತ್ತೆ ಬೀಳಲಿಲ್ಲ. ಬದಲಿಗೆ ಕೀಪರ್‌ ಮತ್ತು ಬ್ಯಾಟರ್‌ ಇಬ್ಬರ ತಲೆಯ ಮೇಲಿಂದ ಎತ್ತರಕ್ಕೆ ಚಿಮ್ಮಿ ನೇರವಾಗಿ ಬೌಂಡರಿ ಆಚೆ ಬಿದ್ದಿದೆ.

Ali Khan bowls a bouncer, and the ball goes for a SIX
'ನಿವೃತ್ತಿಗೂ ಮುನ್ನ ಈ ದಾಖಲೆ ಬೇಕು': 92 ರನ್ ಗೆ ಔಟಾದ ರೋಹಿತ್ ಶರ್ಮಾಗೆ ಗವಾಸ್ಕರ್ ಟಾರ್ಗೆಟ್!

ಆಗಿದ್ದೇನು?

ಸೆಮಿಫೈನಲ್‌ ಪಂದ್ಯದಲ್ಲಿ ಅಲಿ ಖಾನ್‌ ಕೆರಿಬಿಯನ್‌ ದಿಗ್ಗಜ ಕೀರನ್‌ ಪೊಲಾರ್ಡ್‌ ಅವರಿಗೆ ಬೌಲಿಂಗ್‌ ಮಾಡುತ್ತಿದ್ದರು. ಅಲಿ ಖಾನ್‌ ಚೆಂಡನ್ನು ಶಾರ್ಟ್‌ ಆಗಿ ಎಸೆದಿದ್ದು, ಅದು ಬೌನ್ಸ್‌ ಆದ ಬಳಿಕ ನಿರೀಕ್ಷೆಗೂ ಮೀರಿ ಎತ್ತರಕ್ಕೆ ಚಿಮ್ಮಿದೆ.

ಸಾಮಾನ್ಯವಾಗಿ ವಿಕೆಟ್‌ಕೀಪರ್‌ ತಪ್ಪಿಸಿಕೊಂಡ ಬೌನ್ಸರ್‌ಗಳು ಕೀಪರ್‌ ಹಿಂದಕ್ಕೆ ಬಿದ್ದು ನಂತರ ಬೌಂಡರಿ ತಲುಪುತ್ತವೆ. ಆದರೆ ಈ ಬಾರಿ ಚೆಂಡು ವಿಕೆಟ್‌ಕೀಪರ್‌ ತಲೆಯ ಮೇಲೆಯೇ ಹಾರಿ ಬೌಂಡರಿ ದಾಟಿದೆ. ಈ ದೃಶ್ಯ ಕಂಡು ಮೈದಾನದಲ್ಲಿದ್ದ ಆಟಗಾರರು, ಅಂಪೈರ್ ಗಳು ಮತ್ತು ಪ್ರೇಕ್ಷಕರು ಅಚ್ಚರಿಗೆ ಒಳಗಾದರು.

ವೈಡ್‌ ಚೆಂಡು ಬೌಂಡರಿ ದಾಟಿದ್ದು ಹೇಗೆ?

ಈ ವಿಚಿತ್ರ ಘಟನೆಗೆ ಪ್ರಮುಖ ಕಾರಣ ಮೈದಾನದ ಸಣ್ಣ ಗಾತ್ರ ಎನ್ನಲಾಗಿದೆ. ಈ ಟೂರ್ನಿಯ ಪಂದ್ಯಗಳು ವ್ಯಾಂಕೋವರ್‌ನ ಬಿಸಿ ಪ್ಲೇಸ್‌ನಲ್ಲಿ ನಡೆಯುತ್ತಿದ್ದು, ವೃತ್ತಿಪರ ಕ್ರಿಕೆಟ್‌ ಪಂದ್ಯಗಳಿಗೆ ಹೋಲಿಸಿದರೆ ಇಲ್ಲಿನ ಆಟದ ಪ್ರದೇಶ ಚಿಕ್ಕದಾಗಿದೆ.

ಕೆಲವು ವರದಿಗಳ ಪ್ರಕಾರ, ಬೌಂಡರಿಗಳು ಕೇವಲ 45 ಮೀಟರ್‌ಗಳಷ್ಟು ದೂರದಲ್ಲಿವೆ. ಹೀಗಾಗಿ ಚೆಂಡು ಬೌಂಡರಿ ಗೆರೆ ತಲುಪಲು ಕಡಿಮೆ ದೂರ ಕ್ರಮಿಸಬೇಕಾಯಿತು. ಇದರಿಂದ ಸಾಮಾನ್ಯವಾಗಿ ವಿಕೆಟ್‌ಕೀಪರ್‌ ಹಿಂದೆ ಬಿದ್ದು ಬೌಂಡರಿ ತಲುಪಬೇಕಿದ್ದ ಚೆಂಡು, ಈ ಬಾರಿ ಕೀಪರ್‌ನ ತಲೆಯ ಮೇಲಿಂದಲೇ ಬೌಂಡರಿ ದಾಟುವಂತಾಯಿತು.

6 ರನ್‌ ಬದಲು 5 ರನ್‌.. ಅಂಪೈರ್ ಗಳ ಅಚ್ಚರಿ ತೀರ್ಪು

ಇನ್ನೂ ಅಚ್ಚರಿ ಎಂದರೆ ಈ ನೋಬಾಲ್ ಮತ್ತು ಚೆಂಡು ಬೌಂಡರಿ ಮೇಲೆ ಹಾರಿ ಬಿದ್ದಿದ್ದರಿಂದ ಸಿಕ್ಸರ್ ಎಂದು ಪರಿಗಣಿಸಿ ಬ್ಯಾಟಿಂಗ್ ತಂಡಕ್ಕೆ 7 ರನ್ ನೀಡಬೇಕಿತ್ತು. ಒಂದು ವೈಡ್‌ಗೆ 1 ರನ್‌ ಹಾಗೂ ಬೌಂಡರಿ ದಾಟಿದ್ದಕ್ಕೆ 6 ರನ್‌ ಎಂದು ಲೆಕ್ಕ ಹಾಕಬಹುದು.

ಆದರೆ MCC ನಿಯಮಗಳ ಪ್ರಕಾರ ಅದು ಸರಿಯಲ್ಲ. MCC ಕಾನೂನು 22ರ ಪ್ರಕಾರ, ವೈಡ್‌ ಎಸೆತಕ್ಕೆ ಒಂದು ರನ್‌ ಪೆನಾಲ್ಟಿ ಇರುತ್ತದೆ. ಚೆಂಡು ಬ್ಯಾಟ್‌ಗೆ ತಾಗದೆ ಬೌಂಡರಿ ದಾಟಿದರೆ, ಹೆಚ್ಚುವರಿಯಾಗಿ 4 ರನ್‌ಗಳ ಬೌಂಡರಿ ಅಲೌನ್ಸ್‌ ನೀಡಲಾಗುತ್ತದೆ. ಆದರೆ ಒಟ್ಟು ಬೌಂಡರಿ ಅಲೌನ್ಸ್‌ ಗರಿಷ್ಠ ನಾಲ್ಕು ರನ್‌ಗಳಷ್ಟೇ. ಹೀಗಾಗಿ ಈ ಎಸೆತದಲ್ಲಿ ವೈಡ್‌ಗೆ 1 ರನ್‌ + ಬೌಂಡರಿ ಅಲೌನ್ಸ್‌ 4 ರನ್‌ = ಒಟ್ಟು 5 ರನ್‌ ನೀಡಲಾಗಿದೆ.

ಬ್ಯಾಟ್‌ಗೆ ತಾಗದ ಚೆಂಡಿಗೆ 6 ರನ್‌ ಸಿಗುವುದಿಲ್ಲ

ಅಂತೆಯೇ MCC ಕಾನೂನು 19ರ ಪ್ರಕಾರ, ಬ್ಯಾಟರ್‌ ಹೊಡೆದ ಚೆಂಡು ಯಾವುದೇ ಬೌನ್ಸ್‌ ಇಲ್ಲದೆ ನೇರವಾಗಿ ಬೌಂಡರಿ ದಾಟಿದಾಗ ಮಾತ್ರ ಸಿಕ್ಸರ್‌ ನೀಡಲಾಗುತ್ತದೆ. ಬ್ಯಾಟ್‌ಗೆ ತಾಗದೇ ಚೆಂಡು ಬೌಂಡರಿ ದಾಟಿದ ಮಾತ್ರಕ್ಕೆ ಅದು ಸಿಕ್ಸರ್‌ ಆಗುವುದಿಲ್ಲ.

ಇಂತಹ ಸಂದರ್ಭದಲ್ಲಿ ಗರಿಷ್ಠ ನಾಲ್ಕು ರನ್‌ಗಳ ಬೌಂಡರಿ ಅಲೌನ್ಸ್‌ ಮಾತ್ರ ಅನ್ವಯಿಸುತ್ತದೆ. ಹೀಗಾಗಿ ನೋಡಲು ಸಿಕ್ಸರ್‌ನಂತೆ ಕಂಡರೂ, ನಿಯಮಗಳ ಪ್ರಕಾರ ಅಲಿ ಖಾನ್‌ ಅವರ ಆ ವಿಚಿತ್ರ ವೈಡ್‌ ಎಸೆತಕ್ಕೆ ಬ್ಯಾಟಿಂಗ್‌ ತಂಡಕ್ಕೆ ಸಿಕ್ಕಿದ್ದು 5 ರನ್‌ ಮಾತ್ರ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com