'ದಿಲ್ಲಿ, ಇದು ದಾದಾಗಿರಿಗೆ ಸಮಯ': ಮತ್ತೆ ಡೆಲ್ಲಿ ಕ್ಯಾಪಿಟಲ್ಸ್‌ಗೆ ಮರಳಿದ ಸೌರವ್ ಗಂಗೂಲಿ; ಹೆಡ್ ಕೋಚ್ ಆಗಿ ನೇಮಕ

ಕಳೆದ ವರ್ಷಗಳಲ್ಲಿ, 54 ವರ್ಷದ ಗಂಗೂಲಿ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಪುರುಷರ ಮತ್ತು ಮಹಿಳೆಯರ ತಂಡಗಳೆರಡಕ್ಕೂ 'ಕ್ರಿಕೆಟ್ ನಿರ್ದೇಶಕ'ರಾಗಿ ಸೇರಿದಂತೆ ಹಲವು ಹುದ್ದೆಗಳನ್ನು ನಿರ್ವಹಿಸಿದ್ದಾರೆ.
Sourav Ganguly
ಸೌರವ್ ಗಂಗೂಲಿ
Updated on: 

ನವದೆಹಲಿ: ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರನ್ನು ಮಂಗಳವಾರ, 2027ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸೀಸನ್‌ಗಾಗಿ 'ಡೆಲ್ಲಿ ಕ್ಯಾಪಿಟಲ್ಸ್' ತಂಡದ ಮುಖ್ಯ ತರಬೇತುದಾರರನ್ನಾಗಿ ನೇಮಕ ಮಾಡಲಾಗಿದೆ.

ಗಂಗೂಲಿ ಅವರು 2019ರಲ್ಲಿ ಸಲಹೆಗಾರರಾಗಿ ತಂಡವನ್ನು ಸೇರಿಕೊಂಡಾಗ ಡೆಲ್ಲಿ ಕ್ಯಾಪಿಟಲ್ಸ್‌ ಜೊತೆಗಿನ ಅವರ ಒಡನಾಟ ಆರಂಭವಾಗಿತ್ತು.

ಕಳೆದ ವರ್ಷಗಳಲ್ಲಿ, 54 ವರ್ಷದ ಗಂಗೂಲಿ ಅವರು ತಂಡದಲ್ಲಿ ಪುರುಷರ ಮತ್ತು ಮಹಿಳೆಯರ ತಂಡಗಳೆರಡಕ್ಕೂ 'ಕ್ರಿಕೆಟ್ ನಿರ್ದೇಶಕ'ರಾಗಿ ಸೇರಿದಂತೆ ಹಲವು ಹುದ್ದೆಗಳನ್ನು ನಿರ್ವಹಿಸಿದ್ದಾರೆ.

'ಐಪಿಎಲ್‌ನಲ್ಲಿ ಮುಖ್ಯ ಕೋಚ್ (Head Coach) ಜವಾಬ್ದಾರಿಯನ್ನು ವಹಿಸಿಕೊಳ್ಳಲು ನಾನು ಉತ್ಸುಕನಾಗಿದ್ದೇನೆ. 'ಡೆಲ್ಲಿ ಕ್ಯಾಪಿಟಲ್ಸ್' ನನ್ನ ಹೃದಯಕ್ಕೆ ಅತ್ಯಂತ ಹತ್ತಿರವಾದ ತಂಡವಾಗಿದ್ದು, ಇದರೊಂದಿಗೆ ನಾನು ದೀರ್ಘಕಾಲದಿಂದ ಬಲವಾದ ಬಾಂಧವ್ಯ ಹೊಂದಿದ್ದೇನೆ' ಎಂದು ಫ್ರಾಂಚೈಸಿ ಹಂಚಿಕೊಂಡಿರುವ ಹೇಳಿಕೆಯಲ್ಲಿ ಗಂಗೂಲಿ ತಿಳಿಸಿದ್ದಾರೆ.

'ನಾನು ತಂಡದ ಮಾಲೀಕರು, ಆಡಳಿತ ಮಂಡಳಿ, ಸಹಾಯಕ ಸಿಬ್ಬಂದಿ ಮತ್ತು ಆಟಗಾರರೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದೇನೆ; ಹೀಗಾಗಿ ಇದೊಂದು ಅತ್ಯಂತ ರೋಚಕ ಜವಾಬ್ದಾರಿಯಾಗಿದೆ. ನಮ್ಮಲ್ಲಿ ಪ್ರತಿಭಾವಂತ ಆಟಗಾರರ ಗುಂಪಿದೆ ಮತ್ತು ಇತ್ತೀಚಿನ ದಿನಗಳಲ್ಲಿ ನಾವು ಉತ್ತಮ ದರ್ಜೆಯ ಕ್ರಿಕೆಟ್ ಆಡಿದ್ದೇವೆ. ತಂಡದೊಂದಿಗೆ ಕೆಲಸ ಮಾಡಲು, ಮುಂದಿನ ಆವೃತ್ತಿಗಾಗಿ ಬಲಿಷ್ಠ ಮತ್ತು ನಿರ್ಭೀತ ತಂಡವನ್ನು ರೂಪಿಸಲು ನಾನು ಉತ್ಸುಕನಾಗಿದ್ದೇನೆ' ಎಂದು ಅವರು ಹೇಳಿದರು.

ಈ ವರ್ಷದ ಆರಂಭದಲ್ಲಿ ನಡೆದ ಐಪಿಎಲ್ 2026 ಆವೃತ್ತಿಯಲ್ಲಿ 'ಡೆಲ್ಲಿ ಕ್ಯಾಪಿಟಲ್ಸ್' ತಂಡವು ಅಂಕಪಟ್ಟಿಯಲ್ಲಿ ಆರನೇ ಸ್ಥಾನವನ್ನು ಪಡೆದಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com